
ಇಸ್ಲಮಾಬಾದ್(ನ.21): ವಾಯುವ್ಯ ಪಾಕಿಸ್ತಾನದ ಸ್ವಾತ್ ಜಿಲ್ಲೆಯ ಶಿಖರವೊಂದರಲ್ಲಿ ಪಾಕಿಸ್ತಾನ ಹಾಗೂ ಇಟಾಲಿಯನ್ ಪುತರಾತತ್ವ ತಜ್ಞರು 1300 ವರ್ಷ ಹಳೆಯ ಹಿಂದೂ ಮಂದಿರವನ್ನು ಪತ್ತೆ ಹಚ್ಚಿದ್ದಾರೆ. ಬರಿಕೋಟ್ ಘಂಡೈನಲ್ಲಿ ಉತ್ಖನನ ಮಾಡುವಾಗ ಈ ದೇವಾಲಯ ಕಂಡು ಬಂದಿದ್ದು, ಖೈಬರ್ ಪಖ್ತುನ್ಖ್ವಾ ಪುರಾತತ್ವ ವಿಭಾಗದ ಫಜಲ್ ಖಲಿಕ್ ಇದು ವಿಷ್ಣು ಮಂದಿರ ಎಂದು ಗುರುವಾರ ಘೋಷಿಸಿದ್ದಾರೆ.
ರಾಮ ಮಂದಿರ ನಿರ್ಮಾಣ ಕಾರ್ಯ: ಭೂಮಿ ಅಗೆದಾಗ ಸಿಕ್ತು ಮೂರ್ತಿ ಹಾಗೂ ಮಂದಿರದ ಅವಶೇಷ!
ದೇಗುಲದ ಗೋಪುರಗಳೂ ಪತ್ತೆ
1,300 ವರ್ಷ ಹಳೆಯ ಈ ಮಂದಿರವನ್ನು ಹಿಂದೂ ರಾಜರ ಆಕೆ ವೇಳೆ ನಿರ್ಮಿಸಲಾಗಿದೆ ಎನ್ನಲಾಗಿದ್ದು, ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಉತ್ಖನನದ ವೇಳೆ ಮಂದಿರದ ಬಳಿ ಛಾವಣಿ ಹಾಗೂ ಗೋಪುರಗಳೂ ಸಿಕ್ಕಿವೆ.
'ಬಾಬ್ರಿ ಮಸೀದಿ ಜಾಗದಲ್ಲಿ ದೇವಾಲಯ : ಉತ್ಖನನದ ವೇಳೆ ಪತ್ತೆ'
ಗಾಂಧಾರ ನಾಗರಿಕತೆಯ ಮೊದಲ ದೇವಾಲಯ
ತಜ್ಞರಿಗೆ ದೇಗುಲದ ಬಳಿ ನೀರಿನ ಕುಂಡವೂ ಲಭಿಸಿದೆ. ಇಲ್ಲಿಗೆ ಆಗಮಿಸುತ್ತಿದ್ದ ಭಕ್ತರು ದೇಗುಲ ಪ್ರವೇಶಿಸುವುದಕ್ಕೂ ಮುನ್ನ ಸ್ನಾನ ಮಾಡುತ್ತಿದ್ದರು ಎಂಬುವುದು ಸ್ಪಷ್ಟ. ಇನ್ನು ಈ ಪ್ರದೇಶದಲ್ಲಿ ಇದೇ ಮೊದಲ ಬಾರಿ ಹಿಂದೂ ಆಳ್ವಿಕೆ ಕಾಲದ ಗುರುತು ಲಭ್ಯವಾಗಿದೆ ಎಂದು ಖಲೀಕ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ