ತಾಲಿಬಾನ್ ಉಗ್ರರ ತೆಕ್ಕೆಗೆ ಕಾಬೂಲ್; 126 ಮಂದಿ ಕೊನೆಯ ವಿಮಾನ ಮೂಲಕ ದೆಹಲಿಗೆ ಪ್ರಯಾಣ!

By Suvarna NewsFirst Published Aug 15, 2021, 8:17 PM IST
Highlights
  • ಆಫ್ಘಾನಿಸ್ತಾನ ಸಂಪೂರ್ಣ ವಶಕ್ಕೆ ಪಡೆದ ತಾಲಿಬಾನ್ ಉಗ್ರರು
  • ಉಗ್ರರಿಗೆ ಶರಣಾದ ಆಫ್ಘಾನ್ ಅಧ್ಯಕ್ಷ, ಅಹಮ್ಮದ್ ಜಲಾಲಿಗೆ ಪಟ್ಟ
  • ಕಾಬೂಲ್ ವಶಪಡಿಸಿಕೊಂಡ ಬೆನ್ನಲ್ಲೇ ತಾಲಿಬಾನ್ ಉಗ್ರರ ಕೈಯಲ್ಲಿ ಆಫ್ಘಾನ್
     

ನವದೆಹಲಿ(ಆ.15): ಆಫ್ಘಾನಿಸ್ತಾನ ಇದೀಗ ಸಂಪೂರ್ಣ ತಾಲಿಬಾನ್ ಉಗ್ರರ ಕೈವಶವಾಗಿದೆ. ಆಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಉಗ್ರರಿಗೆ ಶರಣಾಗಿದ್ದಾರೆ. ಇದೀಗ ತಾಲಿಬಾನ್ ಉಗ್ರರು ಮದ್ಯಂತ್ರ ಅಧ್ಯಕ್ಷನಾಗಿ ಅಹಮ್ಮದ್ ಜಲಾಲಿಗೆ ಪಟ್ಟ ಕಟ್ಟಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ. ರಾಜಧಾನಿ ಕಾಬೂಲ್ ಕೂಡ ಉಗ್ರರ ಕೈವಶವಾಗಿದೆ. ಹೀಗಾಗಿ ಇದೀಗ ಕಾಬೂಲ್‌ನಿಂದ ಭಾರತೀಯರನ್ನು ಹೊತ್ತ ಕೊನೆಯ ವಿಮಾನ ಭಾರತಕ್ಕೆ ಪ್ರಯಾಣ ಬೆಳೆಸಿದೆ.

"

ಅಫ್ಘಾನಿಸ್ತಾನದ ಅಧಿಕಾರ ಬಿಟ್ಟುಕೊಟ್ಟ ಘನಿ, ಅಹ್ಮದ್ ಜಲಾಲಿ ನೂತನ ಮುಖ್ಯಸ್ಥ!

ಏರ್ ಇಂಡಿಯಾ(AI-244) ವಿಮಾನ ಕಾಬೂಲ್‌ನಿಂದ ಟೇಕ್ ಆಫ್ ಆಗಿದೆ. ಇದು ಕಾಬೂಲ್‌ನಿಂದ ಭಾರತಕ್ಕೆ ಆಗಮಿಸುತ್ತಿರುವ ಕೊನೆಯ ವಿಮಾನವಾಗಿದೆ. ಭಾರತೀಯರು ಸೇರಿದಂತೆ 129  ಚೆಕ್ ಇನ್ ಆಗಿದ್ದು, ಇಂದು ರಾತ್ರಿ ದೆಹಲಿಗೆ ಬಂದಿಳಿಯಲಿದ್ದಾರೆ. ವಾರದಲ್ಲಿ 3 ದಿನ ಕಾಬೂಲ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಈ ವಿಮಾನ ಇಂದಿನ ಪ್ರಯಾಣದ ಮೂಲಕ ಸ್ಥಗಿತಗೊಳ್ಳಲಿದೆ.

ಏರ್ ಇಂಡಿಯಾ(AI-244)ವಿಮಾನ ಇಂದು ಬೆಳೆಗ್ಗ ಕಾಬೂಲ್ ತಲುಪಿತ್ತು. ಏರ್ ಟ್ರಾಫಿಕ್ ಕಾರಣ ಕೊಂಚ ವಿಳಂಬವಾಗಿ ಲ್ಯಾಂಡ್ ಆಗಿತ್ತು. ಕಳೆದ 3 ವಾರಗಳಿಂದ ಕಾಬೂಲ್ ಹಾಗೂ ಆಫ್ಘಾನಿಸ್ತಾನದಲ್ಲಿದ್ದ ಭಾರತೀಯ ಅಧಿಕಾರಿಗಳು ಸೇರಿದಂತೆ ಹಲವು ಭಾರತೀಯರನ್ನು ಕರೆತರುವ ಪ್ರಯತ್ನ ಮಾಡಿತ್ತು. ಇದೀಗ 129 ಮಂದಿ ಭಾರತೀಯರನ್ನು ಹೊತ್ತು ದೆಹಲಿಯತ್ತ ಮುಖಮಾಡಿದೆ.

ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ಪ್ರವೆಶಿಸಿದ ತಾಲಿಬಾನಿಯರು!

ಕಾಬೂಲ್‌ನಿಂದ ದೆಹಲಿಗೆ ಭಾರತ ವಿಶೇಷ ಚಾರ್ಟೆಡ್ ವಿಮಾನ ನಿಯೋಜಿಸಲಾಗಿತ್ತು. ಆದರೆ ಕಾಬೂಲ್ ಸುತ್ತ ಮುತ್ತ ತಾಲಿಬಾನ್ ಉಗ್ರರ ಕಾರ್ಯಚರಣೆ ಹೆಚ್ಚಾಗಿದ್ದ ಕಾರಣ ಚಾರ್ಟೆಡ್ ಫ್ಲೈಟ್ ರದ್ದು ಮಾಡಲಾಗಿತ್ತು. ಆಗಸದ ತುಂಬ ಶೆಲ್, ಬಾಂಬ್, ಗುಂಡುಗಳೇ ಹಾರಾಡುತ್ತಿರುವ ಕಾರಣ ಫ್ಲೈಟ್ ಆಪರೇಶನ್ ಅತ್ಯಂತ ಸವಾಲಾಗಿದೆ.

ನಿಮ್ಮ ಸೇನೆ ಕಳಿಸಿದರೆ ಹುಷಾರ್‌: ಭಾರತಕ್ಕೆ ತಾಲಿಬಾನ್‌ ಎಚ್ಚರಿಕೆ!

ಕಾಬುಲ್ ಕೈವಶ ಮಾಡುತ್ತಿದ್ದಂತೆ ಅಮೆರಿಕ ತನ್ನ ರಾಯಭಾರ ಕಚೇರಿ ಅಧಿಕಾರಿಗಳನ್ನು ಹೆಲಿಕಾಪ್ಟರ್ ಮೂಲಕ ಸಾಗಿಸಿದೆ. ಇತ್ತ ತಾಲಿಬಾನ್ ಉಗ್ರರು ಶಾಂತಿಯುತವಾಗಿ ಅಧಿಕಾರ ಹಸ್ತಾಂತರವಾಗಲಿದೆ. ಈಗಾಗಲೇ ಸರ್ಕಾರಣ ಶರಣಾಗತಿ ಸೂಚಿಸಿದೆ. ಹೀಗಾಗಿ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ತಾಲಿಬಾನ್ ಉಗ್ರಸಂಘಟನೆ ಮಾಧ್ಯಮ ವಕ್ತಾರ ಹೇಳಿದ್ದಾರೆ.

click me!