ರಷ್ಯಾ ಉಕ್ರೇನ್ ನಡುವಿನ ಮಾರಕ ಯುದ್ಧವೂ ಬಹುತೇಕ ಉಕ್ರೇನ್ ನಾಗರಿಕರನ್ನು ಸಂಪೂರ್ಣ ಝರ್ಜರಿತರನ್ನಾಗಿ ಮಾಡಿದೆ. ಜೀವ ಉಳಿಸಿಕೊಳ್ಳುವ ಸಲುವಾಗಿ ಈಗಾಗಲೇ ಕೋಟ್ಯಾಂತರ ಜನ ದೇಶ ತೊರೆದಿದ್ದಾರೆ. ಈ ಮಧ್ಯೆ 11 ವರ್ಷದ ಬಾಲಕನೋರ್ವ ಹೀಗೆ ಯುದ್ಧ ಪೀಡಿತ ತಾಯ್ನಾಡಿನಿಂದ ಹೊರ ಬಂದು ಬೇರೊಂದು ಕಡೆ ಬದುಕು ಕಟ್ಟಿಕೊಳ್ಳುವ ಬರದಲ್ಲಿ ಬರೋಬರಿ 1400 ಸಾವಿರ ಕಿಲೋ ಮೀಟರ್ ಪ್ರಯಾಣ ಮಾಡಿದ್ದಾನೆ. ಆಗ್ನೇಯ ಉಕ್ರೇನ್‌ನಲ್ಲಿರುವ ಝಪೊರೊಝೈ ( Zaporozhye) ಎಂಬ ನಗರದಿಂದ 11 ವರ್ಷದ ಉಕ್ರೇನಿಯನ್ ಹುಡುಗ ತನ್ನ ಕೈಯಲ್ಲಿ ತಾಯಿ ಬರೆದ ಕೆಲವು ಅಕ್ಷರಗಳೊಂದಿಗೆ ಏಕಾಂಗಿಯಾಗಿ ಸ್ಲೋವಾಕಿಯಾವನ್ನು(Slovakia) ತಲುಪಿದ್ದಾನೆ.
ಉಕ್ರೇನ್‌ನ ಆಂತರಿಕ ವ್ಯವಹಾರಗಳ ಸಚಿವಾಲಯವು ಮಂಗಳವಾರ ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. 11 ವರ್ಷದ ಮಗು ಸ್ಲೋವಾಕಿಯಾಕ್ಕೆ ಜೊತೆಯಲ್ಲಿ ಯಾವುದೇ ವಯಸ್ಕರಿಲ್ಲದೆ ಏಕಾಂಗಿಯಾಗಿ ಪ್ರಯಾಣಿಸಿದೆ ಹಾಗೂ ಈಗ ಆತ ಆರಾಮವಾಗಿದ್ದಾನೆ ಎಂದು ತಿಳಿಸಿದೆ. ಈ ಪುಟ್ಟ ಬಾಲಕ ತಮ್ಮ ನಗು, ನಿರ್ಭಯತೆ ಮತ್ತು ನಿಜವಾದ ನಾಯಕನ ದೃಢಸಂಕಲ್ಪದಿಂದ ಎಲ್ಲರನ್ನೂ ಗೆದ್ದರು ಎಂದು ಇಲಾಖೆ ಹೇಳಿದೆ.
Ukraine Crisis ಉಕ್ರೇನ್ ಕೈವಶಕ್ಕೆ ರಷ್ಯಾದಿಂದ ಸಿರಿಯಾ ನಾಗರೀಕರ ಬಳಕೆ, ಅಮೆರಿಕ ಮಾಹಿತಿ!
ಬಾಲಕನ ಪೋಷಕರು ಅಲ್ಲೇ ಉಳಿಯಬೇಕಾಗಿದ್ದರಿಂದ ಬಾಲಕ ಒಂಟಿಯಾಗಿ ಪ್ರಯಾಣಿಸಿ ಉಕ್ರೇನ್ ಗಡಿಯನ್ನು ತಲುಪಿದ್ದಾನೆ. ಅಲ್ಲದೇ ಸ್ಲೋವಾಕಿಯಾದ ಸಚಿವಾಲಯವು ಕೂಡ ಬಾಲಕನ ಸುರಕ್ಷಿತ ಆಗಮನದ ಬಗ್ಗೆ ಪೋಸ್ಟ್ ಮಾಡಿದೆ. ಒಂದು ಪ್ಲಾಸ್ಟಿಕ್ ಚೀಲ, ಪಾಸ್‌ಪೋರ್ಟ್ (passport) ಮತ್ತು ಫೋನ್ ನಂಬರ್ ಕೈಯಲ್ಲಿ ಬರೆದುಕೊಂಡು ಆತ ಸ್ಲೋವಾಕಿಯಾಕ್ಕೆ ಬಂದಿದ್ದಾನೆ ಎಂದು ಅವರು ಹೇಳಿದರು.
ಅಲ್ಲಿನ ಸ್ವಯಂಸೇವಕರು ಅವನನ್ನು ನೋಡಿಕೊಂಡರು ಮತ್ತು ಅವರಿಗೆ ಆಹಾರ ಮತ್ತು ಪಾನೀಯಗಳನ್ನು ನೀಡಿದರು. ಆತನ ಕೈಯಲ್ಲಿ ಆತನ ತಾಯಿ ಬರೆದಿರುವ ಸಂಖ್ಯೆ ಹಾಗೂ ಅಕ್ಷರಗಳಿಗೆ ಧನ್ಯವಾದಗಳು, ನಾವು ಅವರ ಸಂಬಂಧಿಕರನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾಗಿದ್ದೇವೆ, ಅವರು ಆತನನ್ನು ಕರೆದುಕೊಂಡು ಹೋಗಲು ಬಂದಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
Russia Ukraine War: 7 ವರ್ಷದ ಮೊಮ್ಮಗಳು ಕಣ್ಣೆದುರೇ ನರಳಿ ಸಾಯೋದನ್ನು ನೋಡುತ್ತಲೇ ನಿಂತ ಅಜ್ಜ!
ವಿಶ್ವಸಂಸ್ಥೆಯ ನಿರಾಶ್ರಿತರ ವಿಭಾಗದ ಹೈ ಕಮೀಷನರ್ ಮಾರ್ಚ್ 6 ರಂದು ಮಾಡಿರುವ ಟ್ವಿಟ್‌ನಲ್ಲಿ ಉಕ್ರೇನ್‌ನಿಂದ 10 ದಿನಗಳ ಅಂತರದಲ್ಲಿ 1.5 ಮಿಲಿಯನ್ ಜನರು ಯುದ್ಧದಿಂದಾಗಿ ಪಲಾಯನ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಫೆಬ್ರವರಿ 24 ರಂದು ಯುದ್ಧ ಪ್ರಾರಂಭವಾದಾಗಿನಿಂದ ಪೋಲೆಂಡ್‌ಗೆ ಅತಿ ಹೆಚ್ಚು ಉಕ್ರೇನ್ ನಿರಾಶ್ರಿತರು ಪಲಾಯನಗೈದಿದ್ದಾರೆ. ಇದುವರೆಗೆ ಒಟ್ಟು 1,735,068 ನಾಗರಿಕರು, ಬಹುತೇಕ ಮಹಿಳೆಯರು ಮತ್ತು ಮಕ್ಕಳು ದೇಶ ತೊರೆದಿದ್ದು, ಮಧ್ಯ ಯುರೋಪ್ ಗಡಿ ದಾಟಿದ್ದಾರೆ. ಪುರುಷರು ಉಕ್ರೇನ್‌ನಲ್ಲೇ ದೇಶಕ್ಕಾಗಿ ಹೋರಾಡುವ ಸಲುವಾಗಿ ಉಕ್ರೇನ್‌ನಲ್ಲಿಯೇ ನೆಲೆ ನಿಂತಿದ್ದಾರೆ ವಿಶ್ವಸಂಸ್ಥೆಯ ಹೈ ಕಮೀಷನರ್ ಫಾರ್ ರೆಪ್ಯೂಜಿ (UNHCR) ಹೇಳಿದೆ.
ಉಕ್ರೇನ್ ಮೇಲೆ ರಷ್ಯಾ ಆಕ್ರಮಣದಿಂದಾಗಿ ಈಗಾಗಲೇ ನೂರಾರು ಜನ ಸಾವನ್ನಪ್ಪಿದ್ದಾರೆ. ಇದರಲ್ಲಿ ಮಹಿಳೆಯರು ಮಕ್ಕಳು ಸೇರಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧ ಆರಂಭವಾಗಿ 13ನೇ ದಿನವಾಗಿದೆ. ರಷ್ಯಾದ ಸೇನೆಯು ಉಕ್ರೇನ್‌ನ ವಸತಿ ಪ್ರದೇಶಗಳ ಮೇಲೆ ದಾಳಿ ಮಾಡಿದ ನಂತರ, ಇಡೀ ದೇಶವನ್ನು ಸ್ಥಳಾಂತರಿಸಲಾಗುತ್ತಿದೆ. 10 ದಿನಗಳಲ್ಲಿ ಸುಮಾರು 1.5 ಮಿಲಿಯನ್ ನಿರಾಶ್ರಿತರು ನೆರೆಯ ದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಯುಎನ್ ನಿರಾಶ್ರಿತರ ಹೈ ಕಮಿಷನರ್ ಫಿಲಿಪ್ಪೊ ಗ್ರಾಂಡಿ ಟ್ವೀಟ್ ಮಾಡಿದ್ದಾರೆ. ಇದು ಎರಡನೇ ಮಹಾಯುದ್ಧದ ನಂತರ ಯುರೋಪಿನಲ್ಲಿ ನಡೆದ ಅತಿ ದೊಡ್ಡ ವಲಸೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ