ಚರ್ಚ್ ಪಾದ್ರಿಗಳಿಂದ 5,000 ಹೆಣ್ಮಕ್ಕಳ ಮೇಲೆ ರೇಪ್​, ಪೋರ್ಚುಗಲ್‌ನಲ್ಲಿ ಮಾನವ ಕುಲವೇ ತಲೆತಗ್ಗಿಸು ಘಟನೆ!

By Shobha MCFirst Published Feb 14, 2023, 5:51 PM IST
Highlights

ಜಗತ್ತನ್ನೇ ಬೆರಗುಗಣ್ಣಿನಿಂದ ನೋಡುವ ಪುಟ್ಟ ಪುಟ್ಟ ಮಕ್ಕಳು. ಎಲ್ಲರಲ್ಲಿ ನಗುವನ್ನು ಮಾತ್ರ ಹುಡುಕುವ ಈ ಪುಟ್ಟ ಬಾಲಕಿಯರ ಮೇಲೆ ಧರ್ಮಗುರುಗಳು ನಡೆಸಿದ ಘನಘೋರ ಅನ್ಯಾಯಕ್ಕೆ ಯಾವಶಿಕ್ಷೆ ನೀಡಿದರೂ ಕಡಿಮೆ. ಕ್ಯಾಥೋಲಿಕ್ ಚರ್ಚ್ ಪಾದ್ರಿಗಳು ಬರೋಬ್ಬರಿ 5,000 ಮಕ್ಕಳ ಮೇಲೆ ನಡೆಸದ ಅತ್ಯಾಚಾರ ದುರಂತ ಘಟನೆ ಇಡೀ ಜಗತ್ತನ್ನೇ ತಲೆತಗ್ಗಿಸುವಂತೆ ಮಾಡಿದೆ. ತನಿಖಾ ಆಯೋಗ ವರದಿ ಹೇಳಿದ ಕಟು ಸತ್ಯಗಳು ಇಲ್ಲಿವೆ.

ಇದು ಇಡೀ ಜಗತ್ತನ್ನೇ ಬೆಚ್ಚಿಬೀಳಿಸುವಂಥ ಸುದ್ದಿ. ಭಾರತದಲ್ಲಿ ಇರುವೆ ಸತ್ತರೂ ಬೇರೆ ದೇಶಗಳಿಗೆ ಅದು ಬ್ರೇಕಿಂಗ್ ನ್ಯೂಸ್ ಆಗಿಬಿಡುತ್ತದೆ. ಆದರೆ, ಅದ್ಯಾಕೋ ಈ ದೇಶದಲ್ಲಾದ ಅನಾಹುತಕಾರಿ ಘಟನೆ ಬಗ್ಗೆ ಸುದ್ದಿಯೇ ಆಗಿಲ್ಲ, ಆಗುತ್ತಿಲ್ಲ. ಕಾರಣ, ಅದು ಕ್ರೈಸ್ತರ ಬಲಾಢ್ಯ ದೇಶ. ಕ್ರೈಸ್ತ ಪಾದ್ರಿಗಳಿಂದಲೇ ಆಗಿರುವ ಮರಾಮೋಸ. ಇಡೀ ಮಾನವ ಕುಲವೇ ನಾಚಿಕೆಯಿಂದ ತಲೆತಗ್ಗಿಸುವಂಥ ಘಟನೆ. ಹೌದು, ಪೋರ್ಚುಗಲ್‌ ನಲ್ಲಿ ಕ್ಯಾಥೋಲಿಕ್ ಚರ್ಚ್ ಪಾದ್ರಿಗಳಿಂದ  ಒಂದಲ್ಲ, ಎರಡಲ್ಲ, ಸಾವಿರವೂ ಅಲ್ಲ ಬರೋಬ್ಬರಿ 5,000 ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ. ಮುಗ್ಧ ಬಾಲಕಿಯನ್ನು ಹುರಿದು ಮುಕ್ಕಿದ್ದು ಬೇರಾರೂ ಅಲ್ಲ, ಕ್ರಿಸ್ತನ ಶಾಂತಿಮಂತ್ರ ಭೋಧಿಸುವ ಕ್ಯಾಥೋಲಿಕ್ ಚರ್ಚ್​ ಪಾದ್ರಿಗಳಿಂದ ಅಂದ್ರೆ ನೀವು ನಂಬಲೇ ಬೇಕು.

ಚರ್ಚ್​‌ಗೆ ಬರುತ್ತಿದ್ದ ಪುಟ್ಟ, ಪುಟ್ಟ ಮಕ್ಕಳನ್ನು ತಮ್ಮ ಕಾಮತೃಷೆಗೆ ಬಳಸಿಕೊಂಡ ಪಾದ್ರಿಗಳು, ಆ ಮಕ್ಕಳ ಬಾಲ್ಯಕ್ಕೆ ಎಂದೆಂದೂ ಮರೆಯಲಾರದಂತೆ ಕಪ್ಪುಚುಕ್ಕೆ ಇಟ್ಟುಬಿಟ್ಟಿದ್ದಾರೆ. ಅರಳಿ ನಳನಳಿಸಬೇಕಿದ್ದ ಪುಟ್ಟ ಮಕ್ಕಳು, ಪಾದ್ರಿಗಳ ಕಾಮತೃಷೆಗೆ ಸಿಕ್ಕಿ ನಲುಗಿ ಹೋಗಿದ್ದವು. ಶೋಷಣೆ ಏನೆಂದು ಅರಿಯದ ಹೃದಯಗಳೂ, ಪಾದ್ರಿಗಳ ದೌರ್ಜನ್ಯಕ್ಕೆ ಹೆದರಿ ಬೆದರಿ ಹೋಗಿದ್ದವು. ಪೋರ್ಚುಗಲ್‌ನಲ್ಲಿ ಈ ಪಾದ್ರಿಗಳ ಅಟ್ಟಹಾಸ ನಿನ್ನೆ ಮೊನ್ನೆಯದ್ದಲ್ಲ, 1950 ರಿಂದ ಈವರೆಗೂ  ಸುಮಾರು 5,000 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರ ನಡೆಸಿದ್ದಾರೆ. ಇಂಥ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದು ಪೋರ್ಚುಗೀಸ್ ಕ್ಯಾಥೋಲಿಕ್ ಚರ್ಚ್ ಒಕ್ಕೂಟ ನೇಮಿಸಿದ್ದ ಸ್ವತಂತ್ರ ತನಿಖಾ ಆಯೋಗ. 

ನಂಗೇಲಿ ಎಂಬ ನಿಗಿನಿಗಿ ಕೆಂಡ, ತೆರಿಗೆ ವಿರೋಧಿಸಿ ಸ್ತನವನ್ನೇ ಕತ್ತರಿಸಿ ಕಲೆಕ್ಟರ್ ಕೈಗಿಟ್ಟ ಧೀರೆ..!

ಕಳೆದ ಒಂದು ವರ್ಷದಲ್ಲಿ 500 ಸಂತ್ರಸ್ತೆಯರನ್ನು ಪತ್ತೆ ಹಚ್ಚಿದ ಆಯೋಗ,  ಅವರ ಹೇಳಿಕೆಗಳನ್ನು ದಾಖಲಿಸಿದೆ. ಆಯೋಗದ ತನಿಖೆ ಪ್ರಕಾರ ಕ್ಯಾಥೋಲಿಕ್ ಚರ್ಚ್ ಪಾದ್ರಿಗಳು ಪೋರ್ಚುಗಲ್‌ನಲ್ಲಿ  1950 ರಿಂದ ಇಲ್ಲಿಯವರೆಗೆ ಸುಮಾರು 5000 ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ, ಅತ್ಯಾಚಾರ ನಡೆಸಿರುವುದು ಬೆಳಕಿಗೆ ಬಂದಿದೆ. ಸಂತ್ರಸ್ತೆಯರ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಕ್ಯಾಥೋಲಿಕ್ ಚರ್ಚ್‌ಗಳ ಪ್ರಾಬಲ್ಯ ಹೊಂದಿರುವ ಪೋರ್ಚುಗಲ್‌ನಲ್ಲಿ ಅಷ್ಟು ಸುಲಭಕ್ಕೆ ಈ ವಿಷಯ ಹೊರಬರಲು ಸಾಧ್ಯವಾಗಿಲ್ಲ. ಅತ್ಯಾಚಾರ, ಲೈಂಕಿಕ ಕಿರುಕುಳಕ್ಕೆ ಒಳಗಾದವರಲ್ಲಿ ಮುಗ್ಧ ಹೆಣ್ಣುಮಕ್ಕಳ ಸಂಖ್ಯೆಯೇ ದೊಡ್ಡದು. ಗಂಡು ಮಕ್ಕಳನ್ನೂ ಬಿಟ್ಟಿಲ್ಲವಂತೆ ಪಾದ್ರಿಗಳು. ಬಹುತೇಕ ಸಂತ್ರಸ್ತರು ಚರ್ಚ್​ಗಳಲ್ಲೇ ಅತ್ಯಾಚಾರ, ದೌರ್ಜನ್ಯಕ್ಕೆ ಒಳಗಾಗಿದ್ದಾರೆ.

ಆರಂಭದಲ್ಲಿ ಸಂತ್ರಸ್ತರು ಹೇಳಿಕೆ ದಾಖಲಿಸಲು ಮುಂದೆ ಬಂದರಲಿಲ್ಲ. ಬಹುತೇಕ ಪ್ರಕರಣಗಳು ಪೊಲೀಸ್ ಠಾಣೆಯ ಮೆಟ್ಟಿಲೇರಿಯೇ ಇಲ್ಲವಂತೆ.ಕ್ಯಾಥೋಲಿಕ್ ಚರ್ಚ್‌ಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಕೇವಲ ಪೋರ್ಚುಗಲ್‌ಗೆ ಸಿಮೀತವಾಗಿಲ್ಲ. ಕ್ಯಾಥೋಲಿಕ್ ಚರ್ಚ್‌ಗಳ ಪ್ರಭಾವ ಜಾಸ್ತಿ ಇರುವ ಜಗತ್ತಿನ ಇನ್ನೂ ಅನೇಕ ರಾಷ್ಟ್ರಗಳಲ್ಲಿ ಹೆಚ್ಚಿದೆಯಂತೆ.ದೌರ್ಜನ್ಯ, ರೇಪ್​ಗೆ ಒಳಗಾದ ಬಹುತೇಕ ಸಂತ್ರಸ್ತರು ವಿಶ್ವದ ಬೇರೆ, ಬೇರೆ ದೇಶಗಳಲ್ಲಿ ನೆಲೆಯೂರಿದ್ದರೂ, ಪೋರ್ಚುಗಲ್​ನಲ್ಲಿ ಕ್ಯಾಥೋಲಿಕ್ ಚರ್ಚ್ ಪಾದ್ರಿಗಳಿಂದಾದ ಅತ್ಯಾಚಾರವನ್ನು ಮರೆತಿಲ್ಲ. ಹೀಗಾಗಿ, ಕ್ಯಾಥೋಲಿಕ್ ಚರ್ಚ್​ ಪಾದ್ರಿಗಳ ಅಮಾನುಷ ಕೃತ್ಯ ಹತ್ತಾರು ವರ್ಷಗಳ ಬಳಿಕ ಬಹಿರಂಗವಾಯ್ತು. 

ಮನೆ ಆಸ್ತಿ ಕಿತ್ಕೊಂಡು ಕ್ಯಾನ್ಸರ್ ಪೀಡಿತ ತಾಯಿಯನ್ನೇ ಹೊರಗಟ್ಟಿದ ಮಗ, ಬುದ್ಧಿಕಲಿಸಿದ ಕರ್ನಾಟಕದ ಡಿಸಿ!

ಮಕ್ಕಳ ಮಾನಸಿಕ ತಜ್ಞರೂ ಆಗಿರುವ  ಸ್ವತಂತ್ರ ತನಿಖಾ ಆಯೋಗದ ಅಧ್ಯಕ್ಷ ಪೆಡ್ರೊ ಸ್ಟ್ರೆಚ್ಟ್‌ , ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಭಯಾನಕ ಎಂದು ಬಣ್ಣಿಸಿದ್ದಾರೆ. ಅಷ್ಟೇ ಅಲ್ಲ, ಈ ಆಘಾತವನ್ನು ಪೋರ್ಚುಗಲ್ ಅನುಭವಿಸಲಿದೆ ಎಂದಿದ್ದಾರೆ. 30 ವರ್ಷಗಳ ಹಿಂದೆಯೇ ಕ್ಯಾಥೋಲಿಕ್ ಚರ್ಚ್​ಗಳಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಹೊರಬಂದಿತ್ತು. ಆದ್ರೆ, ಕ್ಯಾಥೋಲಿಕ್​ ಬಿಷಪ್​ ಮತ್ತು ಮುಖ್ಯಸ್ಥರು ವಿಶ್ವದ ಎದುರು ಸುಳ್ಳು ಹೇಳುತ್ತಲೇ, ಸತ್ಯ ಮರೆಮಾಚಿದ್ದರು. ವರದಿ ಬಳಿಕ ಪೋರ್ಚುಗಲ್​ ಬಿಷಪ್​ ಜೋಸ್​ ಒರ್ನೆಲ್ಸ್​​, ಸಂತಸ್ತರಲ್ಲಿ ಕ್ಷಮೆಯಾಚಿಸಿದ್ದಾರೆ. 

ಸಮಸ್ಯೆಯನ್ನು ಗುರುತಿಸಿ, ಪರಿಹರಿಸುವಲ್ಲಿ ಕ್ಯಾಥೋಲಿಕ್ ಚರ್ಚ್​ಗಳು ವಿಫಲವಾಗಿವೆ ಅನ್ನೋ ಸಮರ್ಥನೆ ನೀಡಿದ್ದಾರೆ. ತನಿಖಾ ಆಯೋಗ ನೀಡಿರುವ ಈ ಶಾಕಿಂಗ್ ವರದಿ,  ಜಗತ್ತಿನ ಎಲ್ಲ ಕ್ಯಾಥೋಲಿಕ್ ಚರ್ಚ್‌ಗಳ ಮುಖ್ಯ ಪಾದ್ರಿಯಾಗಿರುವ ಪೋಪ್ ಫ್ರಾನ್ಸಿಸ್​ಗೆ ಆಘಾತ ತಂದಿದೆಯಂತೆ. ಇಡೀ ವಿಶ್ವವೇ ಈಗ ಕ್ಯಾಥೋಲಿಕ್ ಚರ್ಚ್​ನತ್ತ ಅನುಮಾನದಿಂದ ನೋಡುವಂತಾಗಿದೆ. ಕ್ಷಮೆಯೇ ದೊಡ್ಡದಂತೆ ಬೋಧಿಸಿದ ಏಸುಕ್ರಿಸ್ತ, ಪುಟ್ಟ ಮಕ್ಕಳ ಮೇಲೆ ಪಾದ್ರಿಗಳು ಮಾಡಿದ ಹೇಯ ಕೃತ್ಯವನ್ನು ಕ್ಷಮಿಸುವನೇ ?

click me!