ಇರಾನ್ ಮೇಲೆ ದಾಳಿ ವಿರೋಧಿಸಿ ಅಮೆರಿಕಾದ ದೂತವಾಸದ ಮುಂದೆ ಪ್ರತಿಭಟನೆ ಮಾಡ್ತಿದ್ದವರ ಮೇಲೆ ಗುಂಡಿನ ದಾಳಿ: 10 ಬಲಿ

Published : Mar 01, 2026, 03:34 PM ISTUpdated : Mar 01, 2026, 03:39 PM IST
10 killed as Pakistan opens fire on protesters

ಸಾರಾಂಶ

ಇರಾನ್‌ನ ಉನ್ನತ ನಾಯಕರನ್ನು ಹತ್ಯೆಗೈದ ಇಸ್ರೇಲ್ ಅಮೆರಿಕದ ಜಂಟಿ ದಾಳಿಯನ್ನು ಖಂಡಿಸಿ ಪಾಕಿಸ್ತಾನದ ಕರಾಚಿಯಲ್ಲಿ ನಡೆದ ಪ್ರತಿಭಟನೆ ಹಿಂಸೆಗೆ ತಿರುಗಿದ್ದು, ಈ ವೇಳೆ ಪ್ರತಿಭಟನಾಕಾರರ ಮೇಲೆ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 10 ಮಂದಿ  ಸಾವನ್ನಪ್ಪಿದ್ದಾರೆ. 

ಪಾಕಿಸ್ತಾನದಲ್ಲಿ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿಗೆ 10 ಬಲಿ

ಇರಾನ್ ಮೇಲೆ ಇಸ್ರೇಲ್ ಅಮೆರಿಕಾ ಜಂಟಿಯಾಗಿ ನಡೆಸುತ್ತಿರುವ ದಾಳಿ ಖಂಡಿಸಿ ಪಾಕಿಸ್ತಾನದ ಕರಾಚಿಯಲ್ಲಿರುವ ಅಮೆರಿಕಾ ದೂತವಾಸ(ರಾಯಭಾರ ಕಚೇರಿ) ಮುಂದೆ ಕೆಲವರು ಪ್ರತಿಭಟನೆ ನಡೆಸಿದ್ದು, ಅಮೆರಿಕಾದ ರಾಯಭಾರ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರನ್ನು ಓಡಿಸಲು ಪಾಕಿಸ್ತಾನ ಭದ್ರತಾ ಪಡೆ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಟ 10 ಜನ ಸಾವನ್ನಪ್ಪಿ ಅನೇಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್‌ನಲ್ಲಿ ಅಲ್ಲಿನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಹಾಗೂ ಇರಾನ್‌ನ ಹಲವು ಉನ್ನತ ಮಟ್ಟದ ನಾಯಕರನ್ನು ಇಸ್ರೇಲ್ ಹಾಗೂ ಅಮೆರಿಕಾ ಭದ್ರತಾ ಪಡೆಗಳು ಜಂಟಿ ಕ್ಷಿಪಣಿ ದಾಳಿ ನಡೆಸಿ ಹತ್ಯೆ ಮಾಡಿದ್ದು, ಈ ಹತ್ಯೆಯನ್ನು ಖಂಡಿಸಿ ಪಾಕಿಸ್ತಾನದ ಕರಾಚಿಯಲ್ಲಿ ಅಮೆರಿಕಾದ ದೂತವಾಸದ ಮುಂದೆ ಕೆಲವರು ಪ್ರತಿಭಟನೆ ನಡೆಸಿ ಇರಾನ್‌ನಲ್ಲಿ ಅಸ್ಥಿರತೆ ಮೂಡಿಸಿದ್ದಾರೆ ಎಂದು ಘೋಷಣೆ ಕೂಗಿದ್ದಾರೆ. ಈ ವೇಳೆ ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 10 ಜನ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ಸಂಘಟಿತ ದಾಳಿಯಲ್ಲಿ ಖಮೇನಿ, ಶಮ್ಖಾನಿ ಮತ್ತು ಇರಾನ್ ಮಿಲಿಟರಿ ಅಧಿಕಾರಿ ಮೊಹಮ್ಮದ್ ಪಾಕ್‌ಪೌರ್ ಸಾವನ್ನಪ್ಪಿದ್ದಾರೆ.. ಇರಾನ್ ಸಶಸ್ತ್ರ ಪಡೆಗಳ ಹೆಚ್ಚುವರಿ ಕಮಾಂಡರ್‌ ಕೂಡ ಈ ದಾಳಿಗೆ ಬಲಿಯಾಗಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಇರಾನ್ ಮಧ್ಯಪ್ರಾಚ್ಯದಾದ್ಯಂತ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಬಹ್ರೈನ್, ದುಬೈನಲ್ಲಿರುವ ಅಮೆರಿಕಾದ ನೆಲೆಗಳ ಮೇಲೆ ಇರಾನ್ ಈಗಾಗಲೇ ಕ್ಷಿಪಣಿ ದಾಳಿ ನಡೆಸಿದೆ. ತಮ್ಮ ಉನ್ನತ ನಾಯಕರ ಮರಣದ ನಂತರ ಇರಾನ್ ಅಧಿಕಾರಿಗಳು ದಾಳಿ ಅತ್ಯಂತ ಬಲವಾದ ಪ್ರತಿಕ್ರಿಯೆಯಾಗಿದೆ ಎಂದು ಇರಾನ್‌ನ ಅಧಿಕಾರಿಗಳು ಹೇಳುತ್ತಿದ್ದಾರೆ.

ವರದಿಗಳ ಪ್ರಕಾರ, ಅಮೆರಿಕ ಇಸ್ರೇಲ್ ದಾಳಿಯಲ್ಲಿ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈಗ, ಇರಾನ್ ಈ ದಾಳಿಗಳಿಗೆ ಬಲವಾದ ಪ್ರತ್ಯುತ್ತರ ನೀಡುವುದಾಗಿ ಪ್ರತಿಜ್ಞೆ ಮಾಡಿದೆ. ಇದು ಈ ಪ್ರದೇಶದಲ್ಲಿನ ಅನೇಕ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಂಡಿದೆ. ಈ ಕ್ರಮವು ಹೆಚ್ಚಿನ ಗಲ್ಫ್ ರಾಷ್ಟ್ರಗಳನ್ನು ಕೆರಳಿಸಿದ್ದು, ಇರಾನ್‌ನ ಕೃತ್ಯವನ್ನು ಅವರು ಖಂಡಿಸಿದ್ದಾರೆ.

ಜಾಗತಿಕ ಇಂಧನ ಪೂರೈಕೆಯ ಸುಮಾರು ಶೇಕಡಾ 20 ರಷ್ಟು ಅವಲಂಬಿತವಾಗಿರುವ ಇರಾನ್ ಹಾರ್ಮುಜ್ ಜಲಸಂಧಿಯನ್ನು ಕೂಡ ಇರಾನ್ ನಿರ್ಬಂಧಿಸಿದೆ. ಇರಾನ್‌ನ ರೆವಲ್ಯೂಷನರಿ ಗಾರ್ಡ್‌ಗಳು ಹಲವಾರು ಹಡಗುಗಳಿಗೆ ಈ ಹಾರ್ಮುಜ್ ಜಲಸಂಧಿಯಲ್ಲಿ ನಿರ್ಬಂಧಿಸಲಾಗಿದೆ. ಇಲ್ಲಿ ಯಾವುದೇ ಹಡಗುಗಳಿಗೆ ಪಯಣಿಸಲು ಅನುಮತಿ ಇಲ್ಲ ಎಂದು ಸಂದೇಶ ಕಳುಹಿಸಿ ನಿರ್ಬಂಧ ಹೇರಿದೆ.

ಇದನ್ನೂ ಓದಿ: ನಾಗ್ಪುರದ ಸ್ಫೋಟಕ ಡಿಟೋನೇಟರ್ ತಯಾರಿಕಾ ಘಟಕದಲ್ಲಿ ಪ್ರಬಲ ಸ್ಫೋಟ: 17 ಸಾವು

ಭಾರತದಲ್ಲಿನ ಇರಾನ್ ರಾಯಭಾರಿ ಮೊಹಮ್ಮದ್ ಫತಾಲಿ ಇರಾನ್ ಮೇಲಿನ ಇಸ್ರೇಲ್ ಯುಎಸ್ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಇತ್ತೀಚಿನ 12 ದಿನಗಳ ಯುದ್ಧ ಸೇರಿದಂತೆ ಹಿಂದಿನ ಅನುಭವಗಳಿಂದ ಉಂಟಾದ ಆಕ್ಷೇಪಣೆಗಳ ಹೊರತಾಗಿಯೂ, ಇರಾನ್ ಶಾಂತಿಗೆ ನಮ್ಮ ಬದ್ಧತೆಯನ್ನು ಪ್ರದರ್ಶಿಸಲು ಮತ್ತು ಸಂಘರ್ಷಕ್ಕೆ ಯಾವುದೇ ನೆಪ ಇಲ್ಲದಂತೆ ಮಾಡಲು ಮಾತುಕತೆಗಳನ್ನು ಮುಂದುವರೆಸಿತ್ತು. ಆದರೆ ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್‌ನ ಆಡಳಿತದ ಇಂದಿನ ಸಂಘಟಿತ ದಾಳಿ ಅವರು ವಿಶ್ವಾಸಾರ್ಹರಲ್ಲ ಎಂಬುದನ್ನು ಮತ್ತೊಮ್ಮೆ ದೃಢಪಡಿಸುತ್ತದೆ. ಇದು ಅವರ ನಿಜವಾದ ಗುರಿಯನ್ನು ಬಹಿರಂಗಪಡಿಸುತ್ತದೆ. ಆ ಕಡೆಯ ನಿರಂತರ ಒತ್ತಡ, ಬೆದರಿಕೆಗಳು ಮತ್ತು ಕಾನೂನುಬಾಹಿರ ಹಿತಾಸಕ್ತಿಗಳನ್ನು ಅನುಸರಿಸಲು ನೇರ ಮಿಲಿಟರಿ ಆಕ್ರಮಣ ಎಂದು ಅವರು ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್ ಹತ್ಯೆಗೆ ಇರಾನ್ ಮಾಡಿತ್ತು ಸಂಚು, ಬಯಲಾಗುತ್ತಿದ್ದಂತೆ ಖಮೇನಿ ಕತೆ ಮುಗಿಸಿದ ಅಮೆರಿಕ ಇಸ್ರೇಲ್
ಯುದ್ಧದ ಭೀತಿ ಹಿನ್ನೆಲೆ: ಇಲ್ಲೆಲ್ಲ 10, 12 ನೇ ತರಗತಿ ಪರೀಕ್ಷೆ ಮುಂದೂಡಿಕೆ, ಅಧಿಕೃತ ಪ್ರಕಟಣೆ