ರೀಲ್ಸ್ ಮಾಡುವವರಿಗೆ ಯೂಟ್ಯೂಬ್‌ನಿಂದ ಗುಡ್ ನ್ಯೂಸ್, ಶಾರ್ಟ್ ವಿಡಿಯೋ ಕ್ರಿಯೇಶನ್‌ಗೆ AI ಫೀಚರ್!

By Chethan KumarFirst Published Sep 19, 2024, 12:37 PM IST
Highlights

ರೀಲ್ಸ್, ಶಾರ್ಟ್ಸ್ ವಿಡಿಯೋ ಮಾಡುವರಿಗೆ ಇದೀಗ ಯೂಟ್ಯೂಬ್ ಎಐ ಫೀಚರ್ ನೆರವು ನೀಡಿದೆ. ಇದೀಗ ಸುಲಭವಾಗಿ ವಿಡಿಯೋ ಕ್ರಿಯೇಟ್ ಮಾಡಲು ಸಾಧ್ಯವಿದೆ. 

ನವದೆಹಲಿ(ಸೆ.19) ಶಾರ್ಟ್ಸ್ ವಿಡಿಯೋ ಕ್ರಿಯೇಶನ್‌ಗೆ ಇದೀಗ ಯೂಟ್ಯೂಬ್ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಫೀಚರ್ ಲಾಂಚ್ ಮಾಡುತ್ತಿದೆ. ಇದೀಗ ಶಾರ್ಟ್, ರೀಲ್ಸ್ ವಿಡಿಯೋ ಕ್ರಿಯೇಟ್, ವಿಡಿಯೋ ಮಾಡಲು ಐಡಿಯಾ, ಕಂಟೆಂಟ್ ಸೇರಿದಂತೆ ಎಐ ಫೀಚರ್ ನೆರವು ನೀಡಲಿದೆ. ಇದಕ್ಕಾಗಿ ಯೂಟ್ಯೂಬ್ ಇದೀಗ ಗೂಗಲ್‌ನ ಡೀಪ್‌ಮೈಂಡ್ ಎಐ ಟೂಲ್ ಬಳಕೆ ಮಾಡುತ್ತಿದೆ. ಇದರಿಂದ ಶಾರ್ಟ್ಸ್ ವಿಡಿಯೋ ಕ್ರಿಯೇಟ್ ಇದೀಗ ಮತ್ತಷ್ಟು ಸುಲಭವಾಗಿದೆ. ಈ ವರ್ಷದ ಆರಂಭದಲ್ಲಿ ಗೂಗಲ್ ವಿಡಿಯೋಗಳನ್ನು ಜನರೇಟ್ ಮಾಡಲು Veo( ಡೀಪ್‌ಮೈಂಡ್ ಎಐ ಟೂಲ್) ಪರಿಚಯಿಸಿತ್ತು. ಇದೀಗ ಯೂಟ್ಯೂಬ್ ಈ ಪ್ರಬಲ ಟೂಲ್ ಶಾರ್ಟ್ಸ್ ವಿಡಿಯೋ ಕ್ರಿಯೇಶನ್‌ಗೆ ಬಳಕೆ ಮಾಡುತ್ತಿದೆ.

ಈ ಹೊಸ ಎಐ ಟೂಲ್ ಫೀಚರ್‌ನಿಂದ ಕೆಂಟೆಂಟ್ ಕ್ರಿಯೇಟ್ ಮಾಡುವವರಿಗೆ 6 ಸೆಕೆಂಡ್‌ಗಳ ಸ್ಟಾಂಡ್‌ಲೋನ್ ವಿಡಿಯೋ ಕ್ಲಿಪ್ಸ್ ಜನರೇಟ್ ಮಾಡಲು ಅನುಮತಿಸುತ್ತದೆ. ಉದಾಹರಣೆಗೆ ಶಾರ್ಟ್ ವಿಡಿಯೋ ಮಾಡುವವರಿಗೆ ತಮ್ಮ ವಿಡಿಯೋದಲ್ಲಿ ಯಾವುದಾದರು ಒಂದು ಭಾಗದಲ್ಲಿ ವಿಡಿಯೋ ಕೊರತೆ ಎದುರಾದರೆ, ಅಥವಾ ಒಂದು ಭಾಗವನ್ನು ಶೂಟ್ ಮಾಡಿದ್ದರೆ, ಅಥವಾ ಈ ವಿಡಿಯೋವನ್ನು ಶೂಟ್ ಮಾಡಲು ಸಾಧ್ಯವಾಗದಂತ ಪರಿಸ್ಥಿತಿ ಇದ್ದರೆ, ಇಂತಹ ಸಂದರ್ಭದಲ್ಲಿ ಇಲ್ಲಿ ಯೂಟ್ಯೂಬ್ Veo ಎಐ ಟೂಲ್ ಮೂಲಕ ವಿಡಿಯೋ ಜನರೇಟ್ ಮಾಡಿ ಕ್ರಿಯೇಟರ್ ತಮ್ಮ ವಿಡಿಯೋದಲ್ಲಿ ಸೇರಿಸಲು ಸಾಧ್ಯವಿದೆ.

Latest Videos

ಮನೆಯಲ್ಲಿ 7 ಗಂಟೆ ನಡೆದಾಡಿ ದಿನಕ್ಕೆ 28,000 ರೂ ಸಂಪಾದಿಸಿ, ಟೆಸ್ಲಾ ಉದ್ಯೋಗ ಆಫರ್‌!

ಆದರೆ ಎಐ ಟೂಲ್ ಮೂಲಕ ಕ್ರಿಯೇಟ್ ಮಾಡಿರುವ ವಿಡಿಯೋ ತುಣುಕಿನ ಮೇಲೆ ವಾಟರ್‌ಮಾರ್ಕ್ ಇರಲಿದೆ. ಇದು ಎಐ ಜನರೇಟೆಡ್ ವಿಡಿಯೋ ಅನ್ನೋದನ್ನು ವೀಕ್ಷಕರಿಗೆ ಯೂಟ್ಯೂಬ್ ಸ್ಪಷ್ಟಪಡಿಸಲಿದೆ. ಎಐ ಟೂಲ್‌ನಲ್ಲಿರುವ ಡ್ರೀಮ್ ಸ್ಕೀನ್ ಫೀಚರ್ ಮೂಲಕ ವಿಡಿಯೋ ಮಾಡುವವರು ಬ್ಯಾಕ್‌ಗ್ರೌಂಡ್ ಕ್ರಿಯೇಟ್ ಮಾಡಲು ಸಾಧ್ಯವಿದೆ.

ಯೂಟ್ಯೂಬ್ ಸ್ಟುಡಿಯೋ ಇದರ ಜೊತೆಗೆ ಮತ್ತೊಂದು ವಿಶೇಷ ಫೀಚರ್ಸ್ ನೀಡಲಿದೆ. ಈ ಫೀಚರ್ಸ್ ಅಡಿ ವಿಡಿಯೋ ಕ್ರಿಯೇಟರ್ಸ್ ಎಐ ಟೂಲ್ ಮೂಲಕ ಯಾವ ವಿಷಯ, ವಿಚಾರ ಕುರಿತು ಹೇಗೆ ವಿಡಿಯೋಗಳನ್ನು ಕ್ರಿಯೇಟ್ ಮಾಡಬೇಕು ಅನ್ನೋ ಸಲಹೆಯನ್ನೂ ಎಐ ವಿಡಿಯೋ ಕೂಡ ಪಡೆಯಲು ಸಾಧ್ಯವಿದೆ. ಕೇವಲ ಕಂಟೆಟ್ ಮಾತ್ರವಲ್ಲ, ವಿಡಿಯೋ ಐಡಿಯಾ, ಟೈಟಲ್, ಥಂಬ್‌ಲೈನ್ಸ್, ವಿಡಿಯೋ ಔಟ್‌ಲೈನ್ ಸೇರಿದಂತೆ ಹಲಲವು ರೀತಿಯಲ್ಲಿ ಎಐ ಫೀಚರ್ ನೆರವು ನೀಡಲಿದೆ.

ಶೀಘ್ರದಲ್ಲೇ ಯೂಟ್ಯೂಬ್ ಎಐ ಮತ್ತೊಂದು ಟ್ಯಾಬ್ ಸೇರಿಸಲಿದೆ. ಇದು ವಿಡಿಯೋಗೆ ಬಂದಿರುವ ಪೂರಕ ಹಾಗೂ ಅತ್ಯುತ್ತಮ ಕಮೆಂಟ್ ಲಿಸ್ಟ್ ಮಾಡಿ ನೀಡಲಿದೆ.  ಇದರ ಜೊತೆ ಆಟೋ ಡಬ್ಬಿಂಗ್ ಎಐ ಟೂಲ್ ಕೂಡ ಪರಿಚಯಿಸಲಿದೆ. ಇದರಿಂದ ವಿಡಿಯೋ ಕ್ರಿಯೇಟ್ ಮಾಡುವವರು ಯಾವುದೇ ಭಾಷೆಯಲ್ಲಿ ವಿಡಿಯೋ ಮಾಡಿ, ಇನ್ನುಳಿದ ಭಾಷೆಗಳಿಗೂ ಎಐ ಮೂಲಕ ಡಬ್ಬಿಂಗ್ ಮಾಡಲು ಸಾಧ್ಯವಿದೆ. ಇದರಿಂದ ಹಲವು ಭಾಷೆಗಳಲ್ಲಿ ಒಂದು ವಿಡಿಯೋ ಪಸರಿಸಲಿದೆ.

ಯೂಟ್ಯೂಬ್ ಎಐ ಟೂಲ್ ಇದೀಗ ಹೊಸ ಸಂಚಲನ ಸೃಷ್ಟಿಸಲಿದೆ. ಯೂಟ್ಯೂಬ್ ವಿಡಿಯೋ ಕ್ರಿಯೇಶನ್ ಇದೀಗ ಅತ್ಯಂತ ಪ್ರಮುಖ ವಿಷಯವಾಗಿದೆ. ಬಹುತೇಕರು ಯೂಟ್ಯೂಬ್ ಮೂಲಕ ಉತ್ತಮ ಸಂಪಾದನೆ ಮಾಡುತ್ತಿದ್ದಾರೆ. ಇದರಿಂದ ಎಐ ಟೂಲ್ ಇದೀಗ ಹೊಸ ಅಧ್ಯಾಯ ಬರೆಯಲಿದೆ ಅನ್ನೋದು ತಜ್ಞರ ಮಾತು. 

AI ಅಲ್ಲ, ಅದಕ್ಕೂ ಮೀರಿದ ತಂತ್ರಜ್ಞಾನ ಬಂದರೂ.., ಈ 10 ಕ್ಷೇತ್ರಗಳ ಮಾನವರ ಕೆಲಸ ಕಿತ್ತುಕೊಳ್ಳಲಾಗಲ್ಲ!
 

click me!