BSNL ಗ್ರಾಹಕರಿಗೆ ಬಂಪರ್, ದಿನಕ್ಕೆ 6 ರೂಪಾಯಿಗೆ 1.5 ಜಿಬಿ ಡೇಟಾ, ಅನ್‌ಲಿಮಿಟೆಡ್ ಕಾಲ್,100 SMS!

By Chethan Kumar  |  First Published Sep 13, 2024, 4:56 PM IST

BSNL ಈಗಾಗಲೇ 4ಜಿ ಸೇವೆ ನೀಡುತ್ತಿದೆ. ಇದರ ಜೊತೆಗೆ ಗ್ರಾಹಕರಿಗೆ ಹೊಸ ಪ್ಲಾನ್ ನೀಡಿದೆ. 82 ದಿನದ ವ್ಯಾಲಿಟಿಡಿ ಪ್ಲಾನ್ ಇದಾಗಿದ್ದು, ಇತರ ಎಲ್ಲಾ ಟಿಲಿಕಾಂಗಿಂತ ಅತ್ಯಂತ ಕಡಿಮೆ ದರದಲ್ಲಿ ಡೇಟಾ, ಅನ್‌ಲಿಮಿಟೆಡ್ ಕಾಲ್ ಸೇರಿದಂತೆ ಹಲವು ಸೌಲಭ್ಯ ನೀಡಿದೆ
 


ಬೆಂಗಳೂರು(ಸೆ.13) ಟೆಲಿಕಾಂ ಕ್ಷೇತ್ರದಲ್ಲಿನ ಪೈಪೋಟಿ ಹೆಚ್ಚಾಗಿದೆ. ಗ್ರಾಹಕರಿಗೆ ಸ್ವಲ್ಪ ಹೊರೆಯಾದರೂ ಪೋರ್ಟ್ ಮಾಡಿ ಬಿಡುತ್ತಾರೆ. ಹೀಗಾಗಿ ಗ್ರಾಹಕರನ್ನು ಉಳಿಸಿಕೊಳ್ಳಲು, ಹೊಸ ಗ್ರಾಹಕರನ್ನು ಸೆಳೆಯಲು ಸ್ಪರ್ಧೆ ಜೋರಾಗಿದೆ. ಇದರ ನಡುವೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಈಗಾಗಲೇ 4ಜಿ ಸೇವೆ ಆರಂಭಿಸಿದೆ. ಇದೀಗ 5ಜಿ ಸೇವೆ ಟೆಸ್ಟಿಂಗ್ ಆರಂಭಗೊಂಡಿದೆ. ಇದರ ಜೊತೆಗೆ ಪೈಪೋಟಿಗೆ ಬಿದ್ದು ಅತ್ಯುತ್ತಮ ಪ್ಲಾನ್ ನೀಡುತ್ತಿದೆ. ಇದೀಗ ಬಿಎಸ್ಎನ್‌ಎಲ್ 82 ದಿನದ ಅತೀ ಕಡಿಮೆ ಬೆಲೆಯ ಪ್ಲಾನ್ ಘೋಷಿಸಿದೆ. ಪ್ರತಿ ದಿನ 1.5 ಜಿಬಿ ಡೇಟಾ, ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕರೆ, ಪ್ರತಿ ದಿನ 100 ಎಸ್ಎಂಎಸ್ ಸೇರಿದಂತೆ ಹಲವು ಸೌಲಭ್ಯ ನೀಡುತ್ತಿದೆ.

82 ದಿನದ ವ್ಯಾಲಿಟಿಡಿಯ ಹೊಸ ಪ್ಲಾನ್ ಬೆಲೆ 485 ರೂಪಾಯಿ. ಬೆಲೆ ದುಬಾರಿ ಎಂದು ಎನಿಸಿದರೂ ಲೆಕ್ಕ ಹಾಕಿದರೆ ಸದ್ಯ ಇರುವ ಪ್ಲಾನ್‌ಗಳ ಪೈಕಿ ಇದು ಕಡಿಮೆ ಬೆಲೆಯ ಪ್ಲಾನ್ ಆಗಿದೆ. ಕಾರಣ ಸರಿಸುಮಾರು 3ತಿಂಗಳ ಪ್ಲಾನ್ ಇದು.  82 ದಿನಗಳನ್ನು ಲೆಕ್ಕಹಾಕಿದರೆ ಪ್ರತಿ ದಿನ 5.91 ರೂಪಾಯಿ ಪ್ಲಾನ್ ಇದಾಗಿದೆ. ಹೀಗಾಗಿ ಇಷ್ಟು ಕಡಿಮೆ ಬೆಲೆಗೆ ಡೇಟಾ, ಕಾಲ್, ಎಸ್ಎಂಎಸ್ ಸೌಲಭ್ಯ ಇತರ ಟೆಲಿಕಾಂಗಳಲ್ಲಿಕಷ್ಟ ಸಾಧ್ಯ.

Tap to resize

Latest Videos

undefined

ಅನ್‌ಲಿಮಿಟೆಡ್ ಕಾಲ್, 600 ಜಿಬಿ ಡೇಟಾ: ಬಿಎಸ್ಎನ್‌ಎಲ್ 1 ವರ್ಷದ ಪ್ಲಾನ್ ಜಾರಿ!

ಈ ಪ್ಲಾನ್ ಆಯ್ಕೆ ಮಾಡಿಕೊಂಡರೆ ರೋಮಿಂಗ್ ಫ್ರಿ. ಬಿಎಸ್‌ಎನ್ಎಲ್ ಗ್ರಾಹಕರು ಅಧಿಕೃತ ಸೆಲ್ಫ್ ಕೇರ್ ಆ್ಯಪ್ ಮೂಲಕ ಈ ಪ್ಲಾನ್ ರೀಚಾರ್ಜ್ ಮಾಡಿಕೊಳ್ಳಲು ಅವಕಾಶವಿದೆ. ಒಮ್ಮೆ ರೀಚಾರ್ಜ್ ಮಾಡಿದರೆ 82 ದಿನದರೆಗೆ ಯಾವುದೇ ತಲೆಬಿಸಿ ಇಲ್ಲ. ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಬಿಎಸ್‌ಎನ್ಎಲ್ ಮೊಬೈಲ್ ನಂಬರ್ ಮೂಲಕ ರಿಜಿಸ್ಚ್ರೇಶನ್ ಮಾಡಿಕೊಳ್ಳಬೇಕು. ಒಟಿಪಿ ನಮೂದಿಸಿ ಹೊಸ ಪ್ಲಾನ್ ಆಯ್ಕೆ ಮಾಡಿಕೊಂಡರೆ 82 ದಿನ ಟೆನ್ಶನ್ ಫ್ರಿ.

ಬಿಎಸ್‌ಎನ್ಎಲ್ ಇದೀಗ ಇತರ ಟೆಲಿಕಾಂ ಕ್ಷೇತ್ರಗಳಿಗೆ ಪೈಪೋಟಿ ನೀಡಿ ಲಾಭದಾಯಕ ಸಂಸ್ಥೆಯನ್ನಾಗಿ ಮಾಡಲು ಹೊಸ ವಿಧಾನ ಅನುಸರಿಸುತ್ತಿದೆ. ಇದೀಗ  ಬಿಎಸ್‌ಎನ್ಎಲ್ 5ಜಿ ನೆಟ್‌ವರ್ಕ್ ಪರೀಕ್ಷೆ ನಡೆಸುತ್ತಿದೆ. ಇತ್ತೀಚೆಗೆ ಟೆಲಿಕಾಂ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ  5ಜಿ ನೆಟ್‌ವರ್ಕ್ ಪರೀಕ್ಷೆ ಮಾಡಿದ್ದರು. ಬಿಎಸ್‌ಎನ್ಎಲ್ 5ಜಿ ನೆಟ್‌ವರ್ಕ್ ಮೂಲಕ ವಿಡಿಯೋ ಕಾಲ್ ಮಾಡಿ ಪರೀಕ್ಷಿಸಿದ್ದರು. ಶೀಘ್ರದಲ್ಲೇ ಬಿಎಸ್‌ಎನ್ಎಲ್ 5ಜಿ ಸೇವೆಯನ್ನು ಸಾರ್ವಜನಿಕರಿಗೆ ಮುಕ್ತ ಮಾಡಲಿದೆ. ಇದರಿಂದ ಇತರ ಟೆಲಿಕಾಂ ಸರ್ವೀಸ್ ಕಂಪನಿಗಳಿಗೆ ನಡುಕು ಶುರುವಾಗಿದೆ. 

ದೇಶದ ಮೂಲೆ ಮೂಲೆಯಲ್ಲಿ ಬಿಎಸ್‌ಎನ್ಎಲ್ ಟವರ್ ಹಾಗೂ ನೆಟ್‌ವರ್ಕ್ ಕನೆಕ್ಷನ್ ಇದೆ. ಆದರೆ ಕಡಿಮೆ ಫ್ರೇಕ್ವೆನ್ಸಿ ಬಳಸಲಾಗಿತ್ತು. ಇದೀಗ ಫ್ರೆಕ್ವೆನ್ಸಿ ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಹೀಗಾಗಿ ದೇಶದ ಮೂಲೆ ಮೂಲೆಯಲ್ಲಿ ಬಿಎಸ್‌ಎನ್ಎಲ್ 5ಜಿ ಸೇವೆ ಲಭ್ಯವಾಗಲಿದೆ. 5ಜಿ ಸೇವೆ ಆರಂಭಗೊಳ್ಳುತ್ತಿದ್ದಂತೆ ಬಿಎಸ್‌ಎನ್ಎಲ್ ಹೊಸ ಪ್ಲಾನ್ ಘೋಷಿಸಲಿದೆ. ಇತ್ತೀಚೆಗೆ ಹಲವರು ಇತರ ನೆಟ್‌ವರ್ಕ್‌ಗಳಿಂದ ಬಿಎಸ್‌ಎನ್ಎಲ್‌ಗೆ ಪೋರ್ಟ್ ಮಾಡಿಕೊಂಡಿದ್ದರು. ದುಬಾರಿ ರೀಚಾರ್ಜ್ ಪ್ಲಾನ್, ಕಾಲ್ ಡ್ರಾಪ್ ಸೇರಿದಂತೆ ಇತರ ಸಮಸ್ಯೆಗಳಿಂದ ರೋಸಿ ಹೋದ ಗ್ರಾಹಕರು ಬಿಎಸ್‌ಎನ್ಎಲ್‌ನತ್ತ ಆಗಮಿಸುತ್ತಿದ್ದಾರೆ.

120 ರೂಪಾಯಿಗಿಂತಲೂ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಕೊಟ್ಟ ಬಿಎಸ್‌ಎನ್‌ಎಲ್
 

click me!