ದೀಪಾವಳಿ ಹಬ್ಬಕ್ಕೆ ರಿಲಯನ್ಸ್ ಜಿಯೋದಿಂದ ಡಬಲ್ ಧಮಾಕಾ , ಇದು ಸಂಪೂರ್ಣ ಉಚಿತ ಆಫರ್

By Chethan Kumar  |  First Published Sep 18, 2024, 4:36 PM IST

ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಇದೀಗ ರಿಲಯನ್ಸ್ ಜಿಯೋ ಗ್ರಾಹಕರಿ ಭರ್ಜರಿ ಆಫರ್ ಘೋಷಿಸಿದೆ. ಬರೋಬ್ಬರಿ 1 ವರ್ಷ ಜಿಯೋಏರ್ ಫೈಬರ್ ಉಚಿತವಾಗಿ ಪಡೆಯುವ ಸುವರ್ಣವಕಾಶ ಇಲ್ಲಿದೆ.
 


ಮುಂಬೈ(ಸೆ.18) ದೀಪಾವಳಿ ಹಬ್ಬದ ತಯಾರಿಗಳು ಆರಂಭಗೊಳ್ಳುತ್ತಿದೆ. ಮನೆ ಹಾಗೂ ಮನಗಳಲ್ಲಿ ದೀಪ ಬೆಳಗಲು ಜನ ಸಜ್ಜಾಗಿದ್ದಾರೆ. ಈ ಹಬ್ಬದ ಸಂಭ್ರಮ ಹೆಚ್ಚಿಸಲು ರಿಲಯನ್ಸ್ ಜಿಯೋ ಇದೀಗ ಡಬಲ್ ಧಮಾಕಾ ಆಫರ್ ಘೋಷಿಸಿದೆ. ಈ ಆಫರ್ ಮೂಲಕ ಗ್ರಾಹಕರಿಗೆ ಒಂದು ವರ್ಷ ಉಚಿತವಾಗಿ ಜಿಯೋಏರ್ ಫೈಬರ್ ಸೇವೆ ಸಿಗಲಿದೆ. ದೇಶಾದ್ಯಂತದ ಎಲ್ಲಾ ರಿಲಯನ್ಸ್ ಡಿಜಿಟಲ್‌ನಲಲಿ ಈ ಆಫರ್ ಲಭ್ಯವಿದೆ. ಇದು ಲಿಮಿಟೆಡ್ ಪೀರಿಯೆಡ್ ಆಫರ್. ಹೀಗಾಗಿ ಸೆಪ್ಟೆಂಬರ್ 18 ರಿಂದ ನವೆಂಬರ್ 3ರ ವರೆಗೆ ಈ ಆಫರ್ ಜಾರಿಯಲ್ಲಿದೆ.

ಉಚಿತ ಜಿಯೋಫೈಬರ್ ಸೇವೆ ಪಡೆಯಲ ಗ್ರಾಹಕರು ಹೆಚ್ಚಿನ ಸರ್ಕಸ್ ಮಾಡಬೇಕಿಲ್ಲ. ಯಾವೆಲ್ಲ ಗ್ರಾಹಕರು ಇಪ್ಪತ್ತು ಸಾವಿರ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ರಿಲಯನ್ಸ್ ಡಿಜಿಟಲ್ ಅಥವಾ ಮೈಜಿಯೋದಲ್ಲಿ ವೆಚ್ಚ ಮಾಡುತ್ತಾರೋ ಅವರು ಈ ಆಫರ್ ಪಡೆಯಲು ಅರ್ಹರಾಗಿದ್ದಾರೆ. ಒಂದು ವರ್ಷದ ಉಚಿತ ಆಫರ್‌‌ನಿಂದ ಮನೆಯಲ್ಲಿ ಅಂತ್ಯಂತ ವೇಗದ ಇಂಟರ್ನೆಟ್ ಸಂಪರ್ಕ ಸಿಗಲಿದೆ. ಅಡೆ ತಡೆ ಇಲ್ಲದ ಸ್ಪೀಡ್ ನೆಟ್‌ವರ್ಕ್ ಈ ಕೊಡುಗೆಯಲ್ಲಿ ಪಡೆಯಬಹುದು.  ಈ ಕೊಡುಗೆಯು ಜಿಯೋಫೈಬರ್ ಹಾಗೂ ಜಿಯೋಏರ್ ಫೈಬರ್ ನ ಹೊಸ ಗ್ರಾಹಕರು ಮತ್ತು ಈಗಾಗಲೇ ಗ್ರಾಹಕರಾದವರಿಗೆ ದೊರೆಯುತ್ತದೆ. ಈ ಕೊಡುಗೆಯು ಜಿಯೋದ ವಿಶ್ವಾಸಾರ್ಹ ಗ್ರಾಹಕರಿಗೆಲ್ಲ ದೊರೆಯಬೇಕು ಎಂಬುದು ಕಂಪನಿ ಉದ್ದೇಶವಾಗಿದೆ.

Tap to resize

Latest Videos

undefined

ಜಿಯೋ ಗ್ರಾಹಕರಿಗೆ 8ನೇ ವಾರ್ಷಿಕೋತ್ಸವದ ಬಂಪರ್, ರಿಚಾರ್ಜ್ ಮೇಲೆ ಕೂಪನ್ ಸೇರಿ 700 ರೂ ಆಫರ್!

ಉಚಿತ ಜಿಯೋಏರ್‌ಫೈಬರ್ ಕೊಡುಗೆ ಪಡೆಯಲು ಬೇಕಾದ ಮಾನದಂಡಗಳೇನು?
ಹೊಸ ಗ್ರಾಹಕರಾಗಿದ್ದಲ್ಲಿ ಇಪ್ಪತ್ತು ಸಾವಿರ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ರಿಲಯನ್ಸ್ ಡಿಜಿಟಲ್ ಅಥವಾ ಮೈಜಿಯೋದಲ್ಲಿ ವೆಚ್ಚ ಮಾಡಬೇಕು. ಅಥವಾ ಜಿಯೋಏರ್ ಫೈಬರ್ ಸಂಪರ್ಕವನ್ನು ಪಡೆದುಕೊಳ್ಳುವಾಗ 2,222 ರೂಪಾಯಿಗೆ ಮೂರು ತಿಂಗಳ ದೀಪಾವಳಿ ಪ್ಲಾನ್ ಗೆ ಚಂದಾದಾರರಾಗಬೇಕು. ಇನ್ನು ಈಗಾಗಲೇ ಗ್ರಾಹಕರಾಗಿರುವವರು 2,222 ರೂಪಾಯಿಗೆ ಮುಂಗಡವಾಗಿ ಮೂರು ತಿಂಗಳ ದೀಪಾವಳಿ ಪ್ಲಾನ್ ಗೆ ರೀಚಾರ್ಜ್ ಮಾಡಿಸಬೇಕಾಗುತ್ತದೆ.

ಅರ್ಹ ಗ್ರಾಹಕರು ಹನ್ನೆರಡು ಕೂಪನ್ ಗಳನ್ನು ಪಡೆಯುತ್ತಾರೆ. ಅವರು 2024ರ ನವೆಂಬರ್ ನಿಂದ 2025ರ ಅಕ್ಟೋಬರ್ ತನಕ ಪ್ರತಿ ತಿಂಗಳು ರಿಡೀಮ್ ಮಾಡಿಕೊಳ್ಳಬಹುದು. ಆ ಕೂಪನ್ ಮೌಲ್ಯವು ಆಯಾ ಗ್ರಾಹಕರು ಸಕ್ರಿಯ ಜೊಯೋಏರ್ ಫೈಬರ್ ಪ್ಲಾನ್ ಗೆ ಸಮನಾಗಿರುತ್ತದೆ. ಅದನ್ನು  30 ದಿನದೊಳಗೆ ರಿಲಯನ್ಸ್ ಡಿಜಿಟಲ್, ಮೈ ಜಿಯೋ ಸ್ಟೋರ್ ಜಿಯೋಪಾಯಿಂಟ್, ಜಿಯೋಮಾರ್ಟ್ ಎಕ್ಸ್ ಕ್ಲೂಸಿವ್ ಮಳಿಗೆಯಲ್ಲಿ ತಮ್ಮ ಮುಂದಿನ ಎಲೆಕ್ಟ್ರಾನಿಕ್ಸ್ ಖರೀದಿ ಹದಿನೈದು ಸಾವಿರ ರೂಪಾಯಿ ಮೇಲ್ಪಟ್ಟು ಮಾಡಿದಾಗ ರಿಡೀಮ್ ಮಾಡಬಹುದು ಈ ಆಫರ್ ಇರುವುದು ನವೆಂಬರ್ ಮೂರನೇ ದಿನಾಂಕದವರೆಗೆ ಮಾತ್ರ. 

ಕೇವಲ 1 ರೂ ನಿಂದ Vi ಆಟಕ್ಕೆ ಬ್ರೇಕ್ ಹಾಕಿದ ಜಿಯೋ: ಕೈ-ಕೈ ಹಿಸುಕಿಕೊಂಡ ಏರ್‌ಟೆಲ್‌ ಗ್ರಾಹಕರು!

click me!