ಬಂದೇಬಿಡ್ತು ವರ್ಷದ ಮೊದಲ ರೆಡ್‌ಮಿ ಫೋನ್; ಮತ್ತೆ ಮತ್ತೆ ಬೆಲೆ ಚೆಕ್‌ ಮಾಡೋದು ಪಕ್ಕಾ!

By Suvarna News  |  First Published Feb 11, 2020, 2:01 PM IST

ರೆಡ್‌ಮಿಯಿಂದ ಅತೀ ಅಗ್ಗದ ಸ್ಮಾರ್ಟ್‌ಫೋನ್; 2020ರ ಮೊದಲ ಫೋನ್ ಬಿಡುಗಡೆಮಾಡಿದ ಶ್ಯೋಮಿ; ಫೆ.18ರಿಂದ ಖರೀದಿಗೆ ಲಭ್ಯ; ಇಲ್ಲಿದೆ ಫೀಚರ್ಸ್, ಬೆಲೆ ವಿವರ...
 


ಜನಪ್ರಿಯ ಮೊಬೈಲ್ ಕಂಪನಿ  ರೆಡ್‌ಮಿಯು 2020ರ ಮೊದಲ ಸ್ಮಾರ್ಟ್‌ಫೋನನ್ನು ಬಿಡುಗಡೆಮಾಡಿದೆ. ಚೀನಾದ ಸ್ಮಾರ್ಟ್‌ಫೋನ್ ದಿಗ್ಗಜ ಶ್ಯೋಮಿಯ ಉಪಸಂಸ್ಥೆಯಾಗಿರುವ ರೆಡ್‌ಮಿಯು ಈಗ 8A ಡ್ಯುಯಲ್ ಎಂಬ ಮಾಡೆಲನ್ನು ಭಾರತದ ಮಾರುಕಟ್ಟೆಗೆ ಬಿಟ್ಟಿದೆ.

2GB, 32GB ವೇರಿಯಂಟ್‌ನ ಈ ಫೋನ್ ಬೆಲೆ 6,499 ರೂ. ಮಾತ್ರ! ಫೆ. 18ರಿಂದ ಈ ಫೋನ್, ಕಂಪನಿ ವೆಬ್‌ಸೈಟ್ ಮತ್ತು  ಅಮೇಜಾನ್‌ನಲ್ಲಿ ಖರೀದಿಗೆ ಲಭ್ಯವಿರಲಿದೆ.

Tap to resize

Latest Videos

ಇದನ್ನೂ ಓದಿ | ಪ್ರೀಪೆಯ್ಡ್ ಮೊಬೈಲ್ ರೀಚಾರ್ಜ್ ಚಿಂತೆ ಬಿಡಿ; ಗೂಗಲ್ ತಂದಿದೆ ಹೊಸ ಫೀಚರ್!...

6.2 ಇಂಚಿನ HD LCD ಡಿಸ್ಪ್ಲೇ, ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ರೆಡ್‌ಮಿ 8A ಡ್ಯುಯಲ್  ಫೋನಿನ ವಿಶೇಷತೆ. ಫೋನಿನ ಮೆಲಿರುವ p2iನ್ಯಾನೋ ಕೋಟಿಂಗ್ ನೀರಿನಿಂದ ರಕ್ಷಣೆ ಒದಗಿಸುತ್ತದೆ ಎಂದು ಕಂಪನಿಯು ಹೇಳಿದೆ.

ಹಿಂಬದಿಯಲ್ಲಿ 13 ಮೆಗಾ ಪಿಕ್ಸೆಲ್ ಮತ್ತು 2 ಮೆಗಾ ಪಿಕ್ಸೆಲ್‌ನ 2 ಕ್ಯಾಮೆರಾಗಳಿದ್ದು, ಗೂಗಲ್‌ ಲೆನ್ಸ್‌ನ್ನು ಹೊಂದಿದೆ. 8 ಮೆಗಾ ಪಿಕ್ಸೆಲ್‌ನ ಸೆಲ್ಫಿ ಕ್ಯಾಮೆರಾ ಇದೆ.

ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 439 ಪ್ರೊಸೆಸರನ್ನು ಇದು ಹೊಂದಿದ್ದು,  ಸ್ಟೋರೆಜನ್ನು 512GBವರೆಗೆ ವಿಸ್ತರಿಸಬಹುದು. ಸ್ಕೈವೈಟ್, ಸೀಬ್ಲೂ ಮತ್ತು ಮಿಡ್‌ನೈಟ್ ಗ್ರೇ ಕಲರ್‌ನಲ್ಲಿ ಈ ಫೋನ್ ಲಭ್ಯವಿದೆ.  

ಇದನ್ನೂ ಓದಿ | ವಾಹನ ಕ್ಷೇತ್ರದಲ್ಲಿ ಜಿಯೋ ಕ್ರಾಂತಿ; ಭವಿಷ್ಯ ಬದಲಿಸುವತ್ತ ಹೆಜ್ಜೆ!

5000mAh ಬ್ಯಾಟರಿ, 18W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಕೂಡಾ ಇರುವುದು ಪ್ಲಸ್‌ ಪಾಯಿಂಟ್. 

ಕಳೆದ ಸಪ್ಟೆಂಬರ್‌ನಲ್ಲಿ ರೆಡ್‌ಮಿ 8A ಫೋನ್‌ನ್ನು ಶ್ಯೋಮಿಯು ಬಿಡುಗಡೆ ಮಾಡಿತ್ತು. 
 

ಫೆಬ್ರವರಿ 11ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!