4 ಕ್ಯಾಮೆರಾ, 64 ಮೆಗಾಪಿಕ್ಸೆಲ್, 6000mAh ಬ್ಯಾಟರಿ! ಸ್ಯಾಮ್ಸಂಗ್‌ ಅಗ್ಗದ ಮೊಬೈಲ್

By Suvarna News  |  First Published Feb 11, 2020, 12:39 PM IST

ಫಿಂಗರ್‌ಪ್ರಿಂಟ್ ಸೆನ್ಸರ್, sAMOLED ಡಿಸ್ಪ್ಲೇ; ಫೆ.25ರಂದು ಬಿಡುಗಡೆ; 6GB RAM ಮತ್ತು 128GB, ಮತ್ತಷ್ಟು ಡೀಟೆಲ್ಸ್ ಇಲ್ಲಿದೆ...


ಬೆಂಗಳೂರು (ಫೆ.11): ಸ್ಮಾರ್ಟ್‌ಫೋನ್ ದೈತ್ಯ ಸ್ಯಾಮ್ಸಂಗ್ ಈಗ ಬಜೆಟ್‌ ಫೋನ್‌ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

ಇದೇ ಫೆ.25ರಂದು ಹೊಸ ಮಾಡೆಲ್ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ31 ಬಿಡುಗಡೆಯಾಗಲಿದ್ದು, ಮೊಬೈಲ್ ಪ್ರಿಯರ ನಿದ್ದೆಗಡೆಸಿದೆ.

Tap to resize

Latest Videos

undefined

ಹೊಸ ಫೋನ್ ಬಗ್ಗೆ ಮೈಕ್ರೋಸೈಟ್‌ನಲ್ಲಿ ಸ್ಯಾಮ್ಸಂಗ್ ಪ್ರಮುಖ ಮಾಹಿತಿಯನ್ನು ಪ್ರಕಟಿಸಿದೆ.

ಇದನ್ನೂ ಓದಿ | ಪ್ರೀಪೆಯ್ಡ್ ಮೊಬೈಲ್ ರೀಚಾರ್ಜ್ ಚಿಂತೆ ಬಿಡಿ; ಗೂಗಲ್ ತಂದಿದೆ ಹೊಸ ಫೀಚರ್!...

4 ಕ್ಯಾಮೆರಾ ಸೆಟಪ್ ಇರೋ ಗ್ಯಾಲಕ್ಸಿ ಎಂ31 ಫೋನ್  64 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಫಿಂಗರ್‌ಪ್ರಿಂಟ್ ಸೆನ್ಸರ್, sAMOLED ಡಿಸ್ಪ್ಲೇ,  6000mAh ಬ್ಯಾಟರಿ ಇನ್ನಿತರ ಪ್ರಮುಖ ಆಕರ್ಷಣೆ.

ಎಕ್ಸಿನೋಸ್ 9611 10nm ಚಿಪ್‌ಸೆಟ್, 6GB RAM ಮತ್ತು 128GB ಸ್ಟೋರೆಜ್‌ನ್ನು ಈ ಫೋನ್ ಹೊಂದಿದೆ.  ಬೆಲೆಯ ಬಗ್ಗೆ ಮಾಹಿತಿಯನ್ನು ಕಂಪನಿಯು ಬಿಟ್ಟುಕೊಟ್ಟಿಲ್ಲ.  ಗ್ಯಾಲಕ್ಸಿ ಎಂ31 ಫೋನ್ ಗ್ಯಾಲಕ್ಸಿ ಎಂ30 ಮುಂದುವರಿದ ಭಾಗವಾಗಿರುವುದರಿಂದ, ಕೈಗೆಟಕುವ ಬೆಲೆಯಲ್ಲಿ ಸಿಗಲಿದೆ ಎಂದು ಹೇಳಲಾಗುತ್ತಿದೆ.

click me!