ಫೇಸ್‌ಬುಕ್‌ನ ಟ್ವಿಟರ್ ಖಾತೆಯೂ ಹ್ಯಾಕ್!

By Suvarna News  |  First Published Feb 9, 2020, 10:55 AM IST

ಫೇಸ್‌ಬುಕ್‌ ಟ್ವಿಟರ್‌ ಖಾತೆಗೇ ಕನ್ನ!| ಫೇಸ್‌ಬುಕ್‌ನ ಟ್ಟಿಟರ್‌ ಖಾತೆಗಳು ಹ್ಯಾಕ್‌ ಆಗಿದ್ದರ ಬಗ್ಗೆ ಮಾಹಿತಿ ನೀಡಿದ ಟ್ವಿಟರ್


ಸ್ಯಾನ್‌ ಫ್ರಾನ್ಸಿಸ್ಕೋ[ಫೆ.09]: ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್‌ ಹಾಗೂ ಅದರ ಮೆಸೇಜಿಂಗ್‌ ಆ್ಯಪ್‌ ಮೆಸೆಂಜರ್‌ನ ಟ್ವಿಟ್ಟರ್‌ ಖಾತೆಯನ್ನು ದುಷ್ಕರ್ಮಿಗಳು ಶುಕ್ರವಾರ ಹ್ಯಾಕ್‌ ಮಾಡಿದ್ದಾರೆ. ಇದನ್ನು ಖುದ್ದು ಟ್ವಿಟ್ಟರ್‌ ಖಾತ್ರಿಪಡಿಸಿದೆ.

ಫೇಸ್‌ಬುಕ್‌ನ ಟ್ಟಿಟರ್‌ ಖಾತೆಗಳು ಹ್ಯಾಕ್‌ ಆಗಿದ್ದರ ಬಗ್ಗೆ ಮಾಹಿತಿ ಬಂದಾಗಲೇ ನಾನು ಕಾರ್ಯನಿರತರಾಗಿದ್ದು, ಈ ಬಗ್ಗೆ ಫೇಸ್‌ಬುಕ್‌ನೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಟ್ವಿಟ್ಟರ್‌ ವಕ್ತಾರ ಹೇಳಿದ್ದಾರೆ.

Tap to resize

Latest Videos

ಹ್ಯಾಕ್‌ ಆಗಿದ್ದು ನಿಜ ಎಂದು ಫೇಸ್‌ಬುಕ್‌ ಕೂಡ ಹೇಳಿದ್ದು, ನಮ್ಮ ಸಾಮಾಜಿಕ ಜಾಲತಾಣ ಖಾತೆಗಳು ಹ್ಯಾಕ್‌ ಆಗಿದ್ದು, ಈಗ ಸರಿಪಡಿಸಲಾಗಿದೆ ಎಂದು ಫೇಸ್‌ಬುಕ್‌ ವಕ್ತಾರ ಜೋ ಒಸ್ಬೋರ್ನ್‌ ಹೇಳಿದ್ದಾರೆ.

click me!