ಭಾರತೀಯ ಓದುಗರ ಬಳಿ ವಾರದ ಕಾಫಿ ದುಡ್ಡು ಕೇಳುತ್ತಿದೆ ವಿಕಿಪೀಡಿಯಾ…!

By Suvarna News  |  First Published Aug 3, 2020, 5:20 PM IST

ನಿಮ್ಮ ಒಂದು ವಾರದ ಕಾಫಿ ಕುಡಿಯುವ ಹಣವು ನಮ್ಮ ಒಂದು ವರ್ಷದ ನಿರ್ವಹಣೆ ಸಾಕು. ಒಂದು ವೇಳೆ ನಾವು ಕಮರ್ಷಿಯಲ್ ಹಾದಿಯನ್ನು ಹಿಡಿದರೆ ಇಡೀ ವಿಶ್ವಕ್ಕೇ ದೊಡ್ಡ ನಷ್ಟ ಎಂಬ ವಿಕಿಪೀಡಿಯಾ ಸಂದೇಶವು ಈಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸುದ್ದಿಯಾಗುತ್ತಿದೆ. ಅಂದಹಾಗೆ ವಿಕಿಪೀಡಿಯಾ ಸಾರ್ವಜನಿಕರ ಬಳಿ ದೇಣಿಗೆ ಕೇಳುವ ಪರಿಪಾಠ ಇದೇ ಮೊದಲೇನಲ್ಲ, ಈ ಹಿಂದೆಯೂ ಸಾಕಷ್ಟು ಬಾರಿ ಕೇಳಿತ್ತು. ಈಗಲೂ ಸಹ ಕಡ್ಡಾಯವಾಗಿ ಹಣ ಪಾವತಿ ಮಾಡಿ ಎಂದು ಕೇಳದೆ, ಎಲ್ಲ ಭಾರತೀಯ ಓದುಗರೂ ಹಣ ಸಂದಾಯ ಮಾಡಿ, ಸುಗಮ ನಿರ್ವಹಣೆಗೆ ಅನುಕೂಲ ಮಾಡಿಕೊಡಿ ಎಂದಷ್ಟೇ ಕೇಳಿಕೊಂಡಿದೆ. ಹಾಗಾದರೆ, ಏನೇನು ಕೇಳಿದೆ ಎಂಬುದರ ಬಗ್ಗೆ ಇಲ್ಲಿದೆ ಡೀಟೇಲ್ಸ್…


ನಾವೂ ಉಳಿಯುತ್ತೇವೆ, ನೀವು ಉಳಿಯಿರಿ… ಎಂಬ ತತ್ವಕ್ಕೆ ಮೊರೆಹೋಗಿರುವ ಬಹುಭಾಷಾ ಆನ್‌ಲೈನ್ ಎನ್‌ಸೈಕ್ಲೋಪೀಡಿಯಾ ಆಗಿರುವ ವಿಕಿಪೀಡಿಯಾ ಈಗ ಮತ್ತೊಮ್ಮೆ ಓದುಗರ ಬಳಿ ಹಣ ಕೇಳಿದೆ…! ಅದೂ ನೀವು ಕುಡಿಯುವ ಒಂದು ವಾರದ ಕಾಫಿ ಕರ್ಚಾಗಿರುವ 150 ರೂಪಾಯಿ ಮಾತ್ರ ಎಂದೂ ಹೇಳಿಕೊಂಡಿದೆ.
 
ಹೌದು. ಕಳೆದ ಫೆಬ್ರವರಿಯಿಂದ ಆಗಾಗ ಇಂಥದ್ದೊಂದು ಸಂದೇಶ ವಿಕಿಪೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದೆ. ಭರಪೂರ ಮಾಹಿತಿಗಳ ಕಣಜಕ್ಕೆ ಈಗ ಆರ್ಥಿಕ ಸಂಕಷ್ಟ ಬಂದೊದಗಿದ್ದು, ತನ್ನ ನೌಕರರಿಗೆ ವೇತನ ಕೊಡಲು ಈ ಹಣವನ್ನು ಬಳಸಿಕೊಳ್ಳುವುದಾಗಿಯೂ ಹೇಳಿಕೊಂಡಿದೆ. 

Latest Videos

ಈಗೇನು ಬರೆದುಕೊಂಡಿದೆ..?

ಇದನ್ನು ಓದಿ: ವಾಟ್ಸಪ್‌ಗೆ ಬಂತು ಮೆಸ್ಸೆಂಜರ್ ರೂಮ್; ಅದನ್ನು ಹೀಗೆ ಬಳಸಿ…! 

ನಮ್ಮೆಲ್ಲ ಭಾರತೀಯ ಓದುಗರೇ, ವಿಕಿಪೀಡಿಯಾಕ್ಕೆ ನೀವು ಕೇವಲ 150 ರೂಪಾಯಿ ದೇಣಿಗೆ ನೀಡಿದರೆ ನಾವು ವರ್ಷಗಳವರೆಗೆ ನಿರ್ವಹಣೆ ಮಾಡಿಕೊಳ್ಳಲು ಸಾಧ್ಯ. ವಿಕಿಪೀಡಿಯಾವು ಬಹಳ ಮಾಹಿತಿಯುಕ್ತ ಹಾಗೂ ಉಪಯುಕ್ತ ಎಂಬ ನಿಟ್ಟಿನಲ್ಲಿ ಬಹುತೇಕ ಮಂದಿ ಹಣ ನೀಡಿದ್ದಾರೆ. ಈ ವರ್ಷ ವಿಕಿಪೀಡಿಯಾದಲ್ಲಿ 150 ರೂಪಾಯಿ ಮೌಲ್ಯದ ಮಾಹಿತಿ ಕೊಟ್ಟಿದೆ, ಕೊಡುತ್ತಿದೆ ಎಂದು ಭಾವಿಸಿದಲ್ಲಿ 1 ನಿಮಿಷ ಇದಕ್ಕಾಗಿ ವ್ಯಯಿಸಿ ದೇಣಿಗೆ ನೀಡಿ ಎಂದು ಕೇಳಿಕೊಂಡಿದೆ. 

ಭಾರತೀಯ ಓದುಗರ ಬಳಿ 150 ರೂಪಾಯಿಯಿಂದ 5,000 ರೂಪಾಯಿವರೆಗೆ ದೇಣಿಗೆ ನೀಡುವಂತೆ ವಿಕಿಪೀಡಿಯಾ ಕೋರಿಕೊಂಡಿದೆ. ಹೀಗಾಗಿ ಬಳಕೆದಾರರು, 150 ರೂ., 300 ರೂ., 500 ರೂ., 1000 ರೂ., 3,000 ರೂ. ಹಾಗೂ 5000 ರೂ.ವನ್ನು ಚಂದಾ ರೀತಿಯಲ್ಲಿ ನೀಡಬಹುದಾಗಿದೆ. ಈ ಮೊತ್ತವನ್ನು ವೀಸಾ, ಮಾಸ್ಟರ್ ಕಾರ್ಡ್ ಅಥವಾ ರುಪೇ ಕ್ರೆಡಿಟ್ ಇಲ್ಲವೇ ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮುಖಾಂತರ ಪಾವತಿ ಮಾಡುವ ಅವಕಾಶವನ್ನು ಕಲ್ಪಿಸಿದೆ. 

ಕಳೆದ ಫೆಬ್ರವರಿಯಿಂದಲೇ ವಿಕಿಪೀಡಿಯಾ ನಿರ್ವಹಣೆಗೆ ದೇಣಿಗೆ ನೀಡುವಂತೆ ಕೇಳಿಕೊಳ್ಳಲಾಗುತ್ತಿದ್ದು, ಲಾಭ ರಹಿತ ಸಂಸ್ಥೆಯಾಗಿರುವ ನಾವು ದೈನಂದಿನ ನಿರ್ವಹಣೆಗೋಸ್ಕರ ದೇಣಿಗೆಯನ್ನು ಕೇಳುತ್ತಿದ್ದೇವೆ. ಕಾರಣ, ವಿಕಿಪೀಡಿಯಾದ ಸ್ವತಂತ್ರ ನಿರ್ವಹಣೆಗೋಸ್ಕರವಷ್ಟೇ. ಒಂದು ವೇಳೆ ನಾವು ಇದು ಕಮರ್ಷಿಯಲ್ ದೃಷ್ಟಿಯಿಂದ ನೋಡಿದರೆ ಇಡೀ ವಿಶ್ವಕ್ಕೇ ದೊಡ್ಡ ನಷ್ಟ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿಕೊಳ್ಳುವ ಮೂಲಕ ತಾವಿನ್ನೂ ಆ ಬಗ್ಗೆ ಚಿಂತನೆ ನಡೆಸಿಲ್ಲ ಎಂಬ ಸುಳಿವನ್ನೂ ಕೊಟ್ಟಿದೆ. ಜೊತಗೆ ಈಗ ನಾವು ಕೇಳುತ್ತಿರುವ ಮೊತ್ತವು ನೀವು ಕುಡಿಯುವ ಒಂದು ವಾರದ ಕಾಫಿಯ ಖರ್ಚು. ಆದರೆ, ಹೀಗೆ ನಮ್ಮೆಲ್ಲ ಓದುಗರು 150 ರೂಪಾಯಿಯನ್ನು ಕೊಟ್ಟರೆ ನಮಗೆ ಒಂದು ವರ್ಷ ಕಾಲ ನಿರಾತಂಕವಾಗಿ ನಿರ್ವಹಣೆ ಮಾಡಲು ಅನುಕೂಲವಾಗುತ್ತದೆ ಎಂದೂ ಹೇಳಿಕೊಂಡಿತ್ತು. ಈಗ ಸ್ವಲ್ಪ ಬದಲಾವಣೆಯೊಂದಿಗೆ ಮತ್ತದೇ ಸಂದೇಶವು ವಿಕಿಪೀಡಿಯಾ ವಾಲ್‌ನಲ್ಲಿ ಕಾಣಿಸಿಕೊಳ್ಳತೊಡಗಿದೆ. 

ಇದನ್ನು ಓದಿ: #WorkfromHome ಮಾಡುವಾಗ ಸೈಬರ್ ಕ್ರೈಂ ಬಗ್ಗೆ ಇರಲಿ ಎಚ್ಚರ! 

ಹಾಲಿ ವಿಕಿಪೀಡಿಯಾವು 309 ಭಾಷೆಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬರುತ್ತಿದ್ದು, ಭಾರತೀಯ ಭಾಷೆಗಳೂ ಇದರಲ್ಲಿದೆ. ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಹಾಗೂ ಕನ್ನಡದಲ್ಲೂ ಲಭ್ಯವಿದೆ. ಇಲ್ಲಿ ಇನ್ನೊಂದು ಪ್ರಮುಖ ಸಂಗತಿಯೆಂದರೆ, ನಾವೂ ಸಹ ವಿಷಯಗಳನ್ನು ತಿದ್ದಬಹುದು ಇಲ್ಲವೇ ಸೇರಿಸಬಹುದಾಗಿದೆ. ವಿಕಿಪೀಡಿಯಾವು ಒಂದು ರೀತಿ ತೆರೆದ ವಿಶ್ವಕೋಶವಾಗಿದೆ. ಇಲ್ಲಿ ಸರಿಯಾದ ಮಾಹಿತಿಯನ್ನು ಪಡೆಯಲು ಹಾಗೂ ಹಂಚಿಕೊಳ್ಳಲು ಎಲ್ಲರಿಗೂ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ. 

 ಚಂದಾ ಸಂಗ್ರಹಕ್ಕೆ ಮುಂದಾಗಿರುವ ಟ್ವಿಟ್ಟರ್!
ಸೋಷಿಯಲ್ ಮೀಡಿಯಾದ ದೈತ್ಯ ಕಂಪನಿಗಳಲ್ಲೊಂದಾದ ಮೈಕ್ರೋ ಬ್ಲಾಗರ್ ಟ್ವಿಟ್ಟರ್ ಸಹ ಈಗ ಚಂದಾ ಸಂಗ್ರಹಕ್ಕೆ ಅಂದರೆ ಸಬ್ಸ್‌ಕ್ರಿಪ್ಷನ್‌ಗೆ ಮುಂದಾಗಿದೆ. ಅಂದರೆ, ಇದಿನ್ನೂ ಪ್ರಾಥಮಿಕ ಹಂತದಲ್ಲಿ ಮಾತ್ರವಿದ್ದು, ಈ ಬಗ್ಗೆ ಸಮಿತಿಯೊಂದನ್ನು ರಚನೆ ಮಾಡಿದೆ. ಸಂಪೂರ್ಣ ಬಳಕೆಗೆ ಚಂದಾ ಹಣವನ್ನು ನಿಗದಿ ಮಾಡಿದೆಯೋ? ಇಲ್ಲವೇ ಕೆಲವು ಎಕ್ಸ್‌ಕ್ಲೂಸಿವ್ ಫೀಚರ್‌ಗಳಿಗಷ್ಟೇ ಶುಲ್ಕ ನಿಗದಿ ಮಾಡುತ್ತದೆಯೋ ಎಂಬಿತ್ಯಾದಿ ಅಂಶಗಳ ಬಗ್ಗೆ ಇನ್ನೂ ಮಾಹಿತಿ ಬಿಟ್ಟುಕೊಟ್ಟಿಲ್ಲ. ಹೀಗಾಗಿ ಈ ವರ್ಷಾಂತ್ಯದಲ್ಲಿ ಚಂದಾ ನಿಗದಿ ಮಾಡುವ ಮುನ್ಸೂಚನೆಯನ್ನು ಟ್ವಿಟ್ಟರ್ ಸಿಇಒ ನೀಡಿದ್ದಾರೆ. 

ಇದನ್ನು ಓದಿ: ಗೂಗಲ್ ಮೀಟ್ ವೇಳೆ ಬ್ಯಾಕ್ ಗ್ರೌಂಡ್ ಶಬ್ದ ವನ್ನು ಮ್ಯೂಟ್ ಮಾಡೋದು ಹೇಗೆ? 

ಆದರೆ, ವಿಕಿಪೀಡಿಯಾ ಮಾತ್ರ ಇನ್ನೂ ಹಂತಕ್ಕೆ ಹೋಗದೆ ದೇಣಿಗೆ ರೂಪವಾಗಿ ಮಾತ್ರ ಹಣವನ್ನು ಕೇಳಿದೆ. ಹಾಗಂತ ವಿಕಿಪೀಡಿಯಾ ಕೇಳುತ್ತಿರುವುದು ಇದೇ ಮೊದಲಲ್ಲ. ಆಗಾಗ ದೇಣಿಗೆ ಕೇಳುತ್ತಲೇ ಬಂದಿದೆ. ಈ ಸಂಸ್ಥೆಗೆ ಜನಸಾಮಾನ್ಯರು ಮಾತ್ರವಲ್ಲದೆ, ಅನೇಕ ಕಾರ್ಪೋರೇಟ್ ಕಂಪನಿಗಳು, ಸಿರಿವಂತರೂ ಸಹ ದೇಣಿಗೆಯನ್ನು ನೀಡುತ್ತಲೇ ಬಂದಿದ್ದಾರೆ. ಹೀಗೆ ಸಂಗ್ರಹವಾದ ಹಣದ ಲೆಕ್ಕವನ್ನು ಪಾರದರ್ಶಕವಾಗಿಡುವುದಲ್ಲದೆ, ಲೆಕ್ಕದ ಬಗ್ಗೆ ಕಂಪನಿ ಮಾಹಿತಿಯನ್ನೂ ನೀಡುತ್ತದೆ. ಆದರೆ, ಯಾವಾಗ ಸಂಸ್ಥೆ ಬಳಿ ವರ್ಷಕ್ಕೆ ನಿಗದಿಪಡಿಸಿಕೊಂಡ ಖರ್ಚು-ವೆಚ್ಚದ ಮೊತ್ತದಲ್ಲಿ ಕಡಿಮೆಯಾಗಿದೆ ಎಂಬ ವಿಷಯ ಕಂಡರೆ ಆಗ ಮಾತ್ರ ಸಾರ್ವಜನಿಕವಾಗಿ ದೇಣಿಗೆ ನೀಡುವಂತೆ ಮನವಿ ಮಾಡಿಕೊಳ್ಳುತ್ತದೆ. 

click me!