ಕನ್ನಡಿಗ ಸೃಷ್ಟಿಸಿದ ಕುತೂಹಲಕರ ಆ್ಯಪ್‌ ಕೂ; ಅಪ್ರಮೇಯ ರಾಧಾಕೃಷ್ಣ ಅವರ ಬ್ರಿಲಿಯಂಟ್‌ ಐಡಿಯಾ!

By Kannadaprabha News  |  First Published Aug 1, 2020, 4:14 PM IST

ಕೂ ಇದು ಕನ್ನಡಿಗರು ಕನ್ನಡಿಗರಿಗಾಗಿ ತಯಾರಿಸಿರೋ ಆ್ಯಪ್‌. ಇದರಲ್ಲಿ ಕನ್ನಡಿಗರು ತಮ್ಮ ಅಭಿಪ್ರಾಯ, ಫೋಟೋ, ವೀಡಿಯೋ, ಆಡಿಯೋಗಳನ್ನೆಲ್ಲ ದಾಖಲಿಸಬಹುದು. ಟ್ವಿಟ್ಟರ್‌ಗೆ ಸಂವಾದಿಯಾಗಿ ರೂಪಿಸಿರೋ ಈ ಆ್ಯಪ್‌ ಅನ್ನು ಈಗಾಗಲೇ ಜಗತ್ತಿನಾದ್ಯಂತ 5 ಲಕ್ಷ ಕನ್ನಡಿಗರು ಬಳಸಲಾರಂಭಿಸಿದ್ದಾರೆ. 


 ಪ್ರಿಯಾ ಕೆರ್ವಾಶೆ

ಕೂ ಬೇರೆ ಸೋಷಲ್‌ ಮೀಡಿಯಾಗಳಿಗೂ ಇರುವ ಮುಖ್ಯ ವ್ಯತ್ಯಾಸ ಅಂದರೆ ಇದರಲ್ಲಿ ಸಂಪೂರ್ಣ ಕನ್ನಡಮಯ ಪರಿಸರ ಇರುತ್ತೆ, ಜಗತ್ತಿನಾದ್ಯಂತದ ಕನ್ನಡಿಗರು ಒಂದೇ ಪ್ಲಾಟ್‌ಫಾಮ್‌ರ್‍ ಮೂಲಕ ಕನೆಕ್ಟ್ ಆಗಬಹುದು. ಈ ಕನ್ನಡದ ಪ್ಲಾಟ್‌ಫಾಮ್‌ರ್‍ ಅನ್ನು 1 ಕೋಟಿ ಜನರಿಗೆ ತಲುಪಿಸುವ ಗುರಿ ಇದರ ಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಅವರದು.

Tap to resize

Latest Videos

#WorkfromHome ಮಾಡುವಾಗ ಸೈಬರ್ ಕ್ರೈಂ ಬಗ್ಗೆ ಇರಲಿ ಎಚ್ಚರ!

ಬೆಂಗಳೂರಿನ ಕುಮಾರನ್ಸ್‌ ಸ್ಕೂಲ್‌ನಲ್ಲಿ ಓದಿ ಬಳಿಕ ಹೈದ್ರಾಬಾದ್‌ನ ಐಐಎಎಂನಲ್ಲಿ ಎಂಬಿಎ ಪದವಿ ಪಡೆದ ಅಪ್ರಮೇಯ ಅಪ್ಪಟ ಕನ್ನಡಿಗರು. ತಮ್ಮ ಭಾಷೆಯಲ್ಲೇ ಆ್ಯಪ್‌ ಕ್ರಿಯೇಟ್‌ ಮಾಡಿ, ಜಗತ್ತಿನಾದ್ಯಂತ ಇರುವ ಕನ್ನಡಿಗರನ್ನು ಈ ಆ್ಯಪ್‌ನಡಿ ತರಬೇಕು ಅನ್ನೋದು ಇವರ ಕನಸು. ಇವರ ಜೊತೆಗೆ ಮಾಯಾಂಕ್‌ ಎಂಬುವವರೂ ಕೂ ಆ್ಯಪ್‌ನ ಕೋ ಫೌಂಡರ್‌ ಆಗಿದ್ದಾರೆ.

 

is now in the top 10 news apps of India 🙂. Super love from users 😍😍. pic.twitter.com/HGWAij4xrn

— Aprameya R (@aprameya)

ಕೂ ಆ್ಯಪ್‌ ಬಳಸಲು ಅಪ್ರಮೇಯ ಕೊಡುವ ಕಾರಣಗಳು

1. ಯಾವ ಗೊಂದಲವಿಲ್ಲದೇ ನಿಮ್ಮ ಮನದ ಭಾವನೆಯನ್ನು ನಿಮ್ಮ ಮಾತೃಭಾಷೆಯ ಮೂಲಕವೇ ಕೂನಲ್ಲಿ ವ್ಯಕ್ತಪಡಿಸಬಹುದು.

2. ಕನ್ನಡಿಗ ಸೆಲೆಬ್ರಿಟಿಗಳಾದ ಜಾವಗಲ್‌ ಶ್ರೀನಾಥ್‌, ಅನಿಲ್‌ ಕುಂಬ್ಳೆ, ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ, ಆಧ್ಯಾತ್ಮ ಚಿಂತಕ ಜಗ್ಗಿ ವಾಸುದೇವ ಮತ್ತಿತರು ಈ ಆ್ಯಪ್‌ ಬಳಸುತ್ತಿದ್ದಾರೆ. ಉಳಿದವರೂ ಅವರ ಚಿಂತನೆಗಳನ್ನು ಇಲ್ಲಿ ಮುಕ್ತವಾಗಿ ತಿಳಿಯುವ ಜೊತೆಗೆ ಅವರ ಜೊತೆಗೂ ಕನೆಕ್ಟ್ ಆಗಬಹುದು.

3. ಟ್ವಿಟ್ಟರ್‌ನಲ್ಲಿ ಎರಡು ನಿಮಿಷದವರೆಗೆ ವೀಡಿಯೋ ಅಪ್‌ಲೋಡ್‌ ಮಾಡಬಹುದು. ಆದರೆ ಇದರಲ್ಲಿ 10 ನಿಮಿಷಗಳ ಕಾಲ ತಡೆರಹಿತ ವೀಡಿಯೋ ಅಪ್‌ಲೋಡ್‌ ಮಾಡಬಹುದು.

5. ಇಲ್ಲಿ ಸಂಪೂರ್ಣ ಕನ್ನಡದ್ದೇ ವಾತಾವರಣ ಇರುವ ಕಾರಣ ಇದು ಕನ್ನಡದ್ದೇ ಜಗತ್ತು, ಇಲ್ಲಿ ಕನ್ನಡಿಗರದ್ದೇ ಕಾರುಬಾರು. ತಾಂತ್ರಿಕವಾಗಿಯೂ ಇದರಲ್ಲಿ ಕನೆಕ್ಟ್ ಆಗಲು ಸಮಸ್ಯೆಯಾಗಲ್ಲ.

ಗೂಗಲ್ ಮೀಟ್ ವೇಳೆ ಬ್ಯಾಕ್ ಗ್ರೌಂಡ್ ಶಬ್ದ ವನ್ನು ಮ್ಯೂಟ್ ಮಾಡೋದು ಹೇಗೆ? 

ಆಂಡ್ರಾಯ್ಡ್‌ನಲ್ಲಿ ಲಭ್ಯ

ಈ ಆ್ಯಪ್‌ ಅನ್ನು ಗೂಗಲ್‌ ಪ್ಲೇ ಸ್ಟೋರ್‌ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಕನ್ನಡದ ಕೀಲಿಮಣೆಯಲ್ಲಿ ಟೈಪ್‌ ಮಾಡಬಹುದು. ಅಥವಾ ಇಂಗ್ಲೀಷ್‌ ಕೀಬೋರ್ಡ್‌ ಬಳಸಿ ಟೈಪಿಸಿದರೆ ಅದಕ್ಕೆ ಪರ್ಯಾಯವಾದ ಕನ್ನಡದ ಅಕ್ಷರಗಳನ್ನು ಈ ಆ್ಯಪ್‌ ಸೂಚಿಸುತ್ತದೆ. ಉಳಿದ ಸೋಷಲ್‌ ಮೀಡಿಯಾಗಳಂತೆ ಇದರಲ್ಲಿ ಅಭಿಪ್ರಾಯ, ವೀಡಿಯೋ, ಫೋಟೋ ಅಪ್‌ಲೋಡ್‌ ಮಾಡಲು ಕೆಟಗರಿಗಳಿವೆ.

ನಮ್ಮ ಸುವರ್ಣ ನ್ಯೂಸ್ ಸಹ ಆ ಆ್ಯಪ್‌ನಲ್ಲಿ ಅಕೌಂಟ್ ಹೊಂದಿದ್ದು, ಫಾಲೋ ಮಾಡಲು ಇಲ್ಲಿ ಕ್ಲಿಕ್ಕಿಸಿ....
https://www.kooapp.com/profile/suvarnanews

 

click me!