ವಾಟ್ಸಪ್‌ಗೆ ಬಂತು ಮೆಸ್ಸೆಂಜರ್ ರೂಮ್; ಅದನ್ನು ಹೀಗೆ ಬಳಸಿ…!

By Suvarna News  |  First Published Aug 1, 2020, 3:47 PM IST

ಕೊರೋನಾ ಸೋಂಕು ವಿಶ್ವವನ್ನು ವ್ಯಾಪಿಸಿದಂದಿನಿಂದ ತಂತ್ರಜ್ಞಾನದಲ್ಲಿ ಹಲವು ಬದಲಾವಣೆಗಳನ್ನು ಕಾಣತೊಡಗಿದ್ದೇವೆ. ಕೆಲವು ವಿಶೇಷ ಸಂದರ್ಭಗಳಲ್ಲಿದ್ದ ವಿಡಿಯೋ ಕಾಲಿಂಗ್ ಸೌಲಭ್ಯವು ಈಗ ಕೆಲಸಕ್ಕೆ ಅನಿವಾರ್ಯವಾಗಿದೆ. ವರ್ಕ್ ಫ್ರಂ ಹೋಂ, ಆನ್‌ಲೈನ್ ಶಿಕ್ಷಣ ಹೀಗೆ ಅನಿವಾರ್ಯತೆ ದೂಡಿದೆ. ಇದರಿಂದ ಹೊಸ ಹೊಸ ವಿಡಿಯೋ ಆ್ಯಪ್‌ಗಳೂ ಹುಟ್ಟಿಕೊಳ್ಳತೊಡಗಿದವು. ಮತ್ತೆ ಕೆಲವು ಆ್ಯಪ್ ಗಳು ತಮ್ಮ ಸೇವೆಯನ್ನು ವಿಸ್ತರಿಸಿ ವಿಡಿಯೋ ಕಾಲಿಂಗ್ ಸೌಲಭ್ಯವನ್ನು ನೀಡಿದವು. ಈಗ ಫೇಸ್‌ಬುಕ್ನಲ್ಲಿ ಇದಕ್ಕೋಸ್ಕರವೇ ಮೆಸ್ಸೆಂಜರ್ ರೂಂ ಫೀಚರ್ ಅನ್ನು ಇತ್ತೀಚೆಗೆ ಬಳಕೆಗೆ ಬಿಡಲಾಗಿತ್ತು. ಈಗ ಅದೇ ಫೀಚರ್ ಅನ್ನು ತನ್ನ ಸಹ ಕಂಪನಿಯಾಗಿರುವ ವಾಟ್ಸಪ್ ನಲ್ಲಿ ಪ್ರಾಯೋಗಿಕವಾಗಿ ಪರಿಚಯಿಸಿದೆ. ಅದರ ಬಳಕೆ ಹೇಗೆ? ಏನು? ಎತ್ತ? ಎಂಬ ಬಗ್ಗೆ ನೋಡೋಣ…


ಸೋಷಿಯಲ್ ಮೀಡಿಯಾಕ್ಕೆ ಈಗ ಭಯಂಕರ ಶಕ್ತಿ ಬಂದಿದೆ. ಪ್ರತಿಯೊಬ್ಬರೂ ಅದರ ಬಳಕೆದಾರರೇ ಆಗಿದ್ದಾರೆ. ಯಾರ ಬಳಿ ಇಲ್ಲ ಹೇಳಿ ಸಾಮಾಜಿಕ ಜಾಲತಾಣಗಳ ಅಕೌಂಟ್‌ಗಳು? ಹೀಗಾಗಿ ಈ ವೇದಿಕೆಗಳನ್ನು ತುಂಬಾ ಚೆನ್ನಾಗಿ ಬಳಸಿಕೊಳ್ಳುವ ಮೂಲಕ ತಮಗೆ ಬೇಕಾದಂತೆ ದುಡಿಸಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬೇರೆ ಬೇರೆ ವರ್ಗದ ಜನರನ್ನು ಸೆಳೆಯುವ ಆ್ಯಪ್‌ಗಳನ್ನು ಒಂದೇ ಕಂಪನಿ ಕೊಂಡರೆ ಏನೆಲ್ಲಾ ಪ್ರಯೋಗಗಳನ್ನು ಮಾಡಬಹುದು ಎಂಬುದಕ್ಕೆ ಟೆಕ್ ದೈತ್ಯ ಕಂಪನಿ ಫೇಸ್‌ಬುಕ್ ಮಾಡಿತೋರಿಸಿದೆ.

ಹೌದು. ಫೇಸ್‌ಬುಕ್ ಖಾತೆಯಲ್ಲಿ ಈಗ ಇನ್‌ಸ್ಟಾಗ್ರಾಂ, ವಾಟ್ಸಪ್‌ಗಳಿವೆ. ಹೀಗೆ ವಿವಿಧ ಕ್ಷೇತ್ರದ ಆ್ಯಪ್‌ಗಳು ಒಂದೇ ಮಾಲೀಕತ್ವದಡಿ ಬಂದಾಗ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳಲು ಸಾಧ್ಯವಾಗುತ್ತದೆ. ಮತ್ತೆ ಕೆಲವು ನೂತನ ಫೀಚರ್‌ಗಳು ಕಾಮನ್ ಎಂಬ ರೀತಿಯಲ್ಲಿ ಈ ಎಲ್ಲವುಗಳಲ್ಲೂ ಪಡೆಯಲು ಸಾಧ್ಯವಾಗುತ್ತದೆ. ತೀರಾ ಇತ್ತೀಚೆಗಷ್ಟೇ ಫೇಸ್‌ಬುಕ್ ಪರಿಚಯಪಡಿಸಿದ್ದ ಫೇಸ್‌ಬುಕ್ ಮೆಸ್ಸೆಂಜರ್ ರೂಂಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ಇದನ್ನು ಓದಿ: ಗೂಗಲ್ ಮೀಟ್ ವೇಳೆ ಬ್ಯಾಕ್ ಗ್ರೌಂಡ್ ಶಬ್ದ ವನ್ನು ಮ್ಯೂಟ್ ಮಾಡೋದು ಹೇಗೆ?

ವಿಡಿಯೋ ಕಾಲಿಂಗ್‌ಗೋಸ್ಕರ ಇರುವ ಫೇಸ್‌ಬುಕ್ ಮೆಸ್ಸೆಂಜರ್ ರೂಂಗೆ ಬಳಕೆದಾರರು ಒಗ್ಗಿಕೊಂಡಿದ್ದಲ್ಲದೆ, ಈಗಾಗಲೇ ಬಳಸುತ್ತಲೂ ಇದ್ದಾರೆ. ಈಗ ಇದರ ಪ್ರತಿಕ್ರಿಯೆ ನೋಡಿಕೊಂಡಿರುವ ಫೇಸ್‌ಬುಕ್, ಇದೇ ಫೀಚರ್ ಅನ್ನು ವಾಟ್ಸಪ್ ವೆಬ್‌ನಲ್ಲೂ ಪರಿಚಯಿಸಿದೆ. ಹೌದು. ಸದ್ಯಕ್ಕೆ ಈ ಫೀಚರ್ ಅನ್ನು ವಾಟ್ಸಪ್ ವೆಬ್‌ನಲ್ಲಿ ಮಾತ್ರ ಕಾಣಬಹುದಾಗಿದ್ದು, ಮೊಬೈಲ್ ಆ್ಯಪ್‌ನಲ್ಲಿ ಅಪ್ಡೇಟ್ ಮಾಡಲಾಗಿಲ್ಲ. ಆದರೆ, ವಾಟ್ಸಪ್ ಆ್ಯಪ್‌ನಲ್ಲಿಯೂ ಸೇವೆ ನೀಡಲು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಕಂಪನಿ ಹೇಳಿಕೊಂಡಿದೆ. 



ವಾಟ್ಸಪ್‌ನಲ್ಲಿ ಪ್ರಾಯೋಗಿಕವಾಗಿ ರೂಂ ಸೌಲಭ್ಯ ನೀಡಲಾಗಿದೆ ಎಂದು ಫೇಸ್‌ಬುಕ್ ಸಹ ದೃಢಪಡಿಸಿದೆ. ಅಲ್ಲದೆ, ಇನ್‌ಸ್ಟಾಗ್ರಾಂನಲ್ಲೂ ಸೌಲಭ್ಯ ನೀಡುವ ಚಿಂತನೆಯಲ್ಲಿದೆ ಎಂದಿದೆ. ಈಗ ವಾಟ್ಸಪ್‌ನಲ್ಲಿ ಹೇಗೆ ಮೆಸ್ಸೆಂಜರ್ ರೂಂ ಅನ್ನು ಕ್ರಿಯೇಟ್ ಮಾಡಬೇಕು ಎಂಬ ಬಗ್ಗೆ ತಿಳಿದುಕೊಳ್ಳೋಣ. 

ವಾಟ್ಸಪ್‌ನಲ್ಲಿ ಮೆಸ್ಸೆಂಜರ್ ರೂಂ ಕ್ರಿಯೇಟ್ ಹೇಗೆ?
ಇಲ್ಲಿ ಮುಖ್ಯವಾಗಿ ವಾಟ್ಸಪ್ ವೆಬ್ ನ ಲೇಟೆಸ್ಟ್ ವರ್ಷನ್ ಆಗಿರುವ 2.2031.4. ಅನ್ನು ಅಪ್ಡೇಟ್ ಮಾಡಬೇಕು. ಇಲ್ಲಿ ವಾಟ್ಸಪ್ ವೆಬ್ ಮೂಲಕ ರೂಂ ಕ್ರಿಯೇಟ್ ಮಾಡಲು 2 ಮಾರ್ಗಗಳು ಇವೆ. ಮೊದಲನೆಯದಾಗಿ ವಾಟ್ಸಪ್ ವೆಬ್ ಮೇಲೆ ಕಾಣುವ ಮೂರು ಡಾಟ್ (ಚುಕ್ಕಿ) ಗಳ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಕಾಣುವ ಕ್ರಿಯೇಟ್ ರೂಂ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಹೀಗೆ ಕ್ಲಿಕ್ ಮಾಡಿದಾಗ ಮೊದಲು ಫೇಸ್‌ಬುಕ್ ಮೆಸ್ಸೆಂಜರ್ ರೂಂನ ಇಂಟ್ರೋಡಕ್ಷನ್ ಪೇಜ್ ಕಾಣುತ್ತದೆ. ಅಲ್ಲಿ ಮೆಸ್ಸೆಂಜರ್ ಆಯ್ಕೆಗೆ ಇರುವ ಕಂಟಿನ್ಯೂ ಆಪ್ಷನ್ ಅನ್ನು ಒತ್ತಬೇಕು. 

ಇದನ್ನು ಓದಿ: ಬಳಸದಿದ್ದರೆ ವಾಟ್ಸಪ್ ಕೆಲವು ದಿನಗಳ ನಂತರ ಡಿ-ಆ್ಯಕ್ಟಿವೇಟ್ ಆಗುತ್ತೆ ಗೊತ್ತಾ?

ಆ ಬಳಿಕ ಇನ್ನೊಂದು ಪುಟ ತೆರೆದುಕೊಳ್ಳಲಿದ್ದು, “ಕಂಟಿನ್ಯೂ ವಿತ್ ಫೇಸ್‌ಬುಕ್ ಅಕೌಂಟ್’’ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ಇನ್ನೊಂದು ಆಯ್ಕೆಯನ್ನು ನೀಡುತ್ತಿದ್ದು, ಒಂದು ವೇಳೆ ನೀವು ಇನ್ನೊಂದು ಹೊಸ ಅಕೌಂಟ್ ಅನ್ನು ಸೃಷ್ಟಿ ಮಾಡಬೇಕೆಂದಿದ್ದರೂ ಅವಕಾಶವನ್ನು ಕಲ್ಪಿಸಲಾಗಿದೆ.

ಈ ಮೂರು ಡಾಟ್ ಆಯ್ಕೆ ಹೊರತಾಗಿಯೂ ವಾಟ್ಸಪ್ ವೈಯುಕ್ತಿಕ ಚಾಟ್ ಆಪ್ಷನ್ ನಲ್ಲಿಯೂ ಸಹ ರೂಂ ಆಪ್ಷನ್ ಅನ್ನು ನೀಡಿದೆ. ಇಲ್ಲಿ ಅಟ್ಯಾಚ್ಮೆಂಟ್ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ, ಕೊನೆಯಲ್ಲಿ ರೂಂ ಆಯ್ಕೆ ಕಾಣಸಿಗುತ್ತದೆ. ಉಳಿದಂತೆ ಪ್ರಕ್ರಿಯೆಗಳು ಮೇಲೆ ವಿವರಿಸಿದಂತೆಯೇ ಇರುತ್ತದೆ. 

ಇದನ್ನು ಓದಿ: #WorkfromHome ಮಾಡುವಾಗ ಸೈಬರ್ ಕ್ರೈಂ ಬಗ್ಗೆ ಇರಲಿ ಎಚ್ಚರ!

ಮೆಸ್ಸೆಂಜರ್ ರೂಂ ಬಗ್ಗೆ ಕೆಲ ಮಾಹಿತಿ

• ಮೆಸ್ಸೆಂಜರ್ ರೂಂನಲ್ಲಿ 50 ಮಂದಿ ಒಟ್ಟಿಗೆ ವಿಡಿಯೋ ಕಾಲಿಂಗ್‌ನಲ್ಲಿ ಭಾಗವಹಿಸಬಹುದು.

• ಮೆಸ್ಸೆಂಜರ್ ರೂಂ ಅನ್ನು ಶೆಡ್ಯೂಲ್ ಮಾಡಬಹುದು. ಜೊತೆಗೆ ಲಿಂಕ್ ಮೂಲಕ ರೂಂನಲ್ಲಿ ಭಾಗಿಯಲು ಅವಕಾಶ ನೀಡಬಹುದು. 

• ಇಲ್ಲಿ ರೂಂ ವಿಡಿಯೋ ಕಾಲಿಂಗ್ ವೀಕ್ಷಣೆ ಅವಕಾಶವನ್ನು ಹೋಸ್ಟ್ ಆದವರು ಫೇಸ್‌ಬುಕ್ ಸ್ನೇಹಿತರಿಗೆ ಇಲ್ಲವೇ ಕೆಲವೇ ಕೆಲವು ಮಂದಿಗೆ ನೀಡುವ ಆಯ್ಕೆಯನ್ನು ಹೊಂದಿರುತ್ತಾರೆ. 

Tap to resize

Latest Videos

click me!