ನ.1ರಿಂದ ಈ ಫೋನಲ್ಲಿ What's App ಇರೋಲ್ಲ, ಲಿಸ್ಟಲ್ಲಿ ನೀವು ಬಳಸುತ್ತಿರುವ ಫೋನ್ ಇದೆಯಾ?

By Suvarna NewsFirst Published Oct 27, 2021, 12:22 PM IST
Highlights

ಫೇಸ್‌ಬುಕ್ (Facebook) ಒಡೆತನದ ವಾಟ್ಸಾಪ್ (What's App) ನವೆಂಬರ್ 1ರಿಂದ ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲಸ ಮಾಡುವುದಿಲ್ಲ. ಹಳೆಯ ಆಪರೇಟಿಂಗ್ ಸಾಫ್ಟ್‌ವೇರ್ ಹೊಂದಿರುವ ಆಪಲ್, ಸ್ಯಾಮ್ಸಂಗ್ ಸೇರಿ ಕೆಲವು ಕಂಪನಿಗಳ ಫೋನುಗಳನ್ನು ಬಳಸುತ್ತಿರುವ ಬಳಕೆದಾರರಿಗೆ ಇದರಿಂದ ತೊಂದರೆಯಾಗಲಿದೆ. ಈ ಪಟ್ಟಿಯಲ್ಲಿ ನೀವು ಬಳಸುತ್ತಿರುವ ಫೋನ್ ಇದೆಯಾ ಚೆಕ್ ಮಾಡಿಕೊಳ್ಳಿ.

ತುರ್ತು ಸಂದೇಶ ರವಾನೆಯ ಸಂಹನದಲ್ಲಿ ಕ್ರಾಂತಿಯನ್ನು ಸೃಷ್ಟಿಸಿರುವ ವಾಟ್ಸಾಪ್ (Whatsapp) ಹಲವು ಅಪ್‌ಡೇಟ್‌ಗಳನ್ನು ಮಾಡುವ ಗ್ರಾಹಕರ ಬಳಕೆಯ ಅನುಭವವನ್ನು ಹೆಚ್ಚಿಸುತ್ತದೆ. ಹಾಗೆಯೇ, ಹಳೆಯ ಆಪರೇಟಿಂಗ್ ಸಾಫ್ಟ್‌ವೇರ್‌ಗಳಲ್ಲಿ ವಾಟ್ಸಾಪ್ ಕಾರ್ಯವನ್ನು ನಿಲ್ಲಿಸುತ್ತದೆ. ಅದೇ ರೀತಿ, ನವೆಂಬರ್ 1ರಿಂದ ಆಪಲ್ (Apple), ಸ್ಯಾಮ್ಸಂಗ್ (Samsung) ಸೇರಿದಂತೆ ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಕೆಲಸ ಮಾಡುವುದಿಲ್ಲ. 

ಉಚಿತ ವಾಟ್ಸಾಪ್ ಬ್ಯಾಕ್‌ಅಪ್ ಶೀಘ್ರವೇ ಅಂತ್ಯ? ಸ್ಪೇಸ್ ಬೇಕಿದ್ದರೆ ದುಡ್ಡು ಕೊಡ್ಬೇಕಾ? 

ಸೋಷಿಯಲ್ ಮೀಡಿಯಾ ದೈತ್ಯ ಕಂಪನಿ ಫೇಸ್‌ಬುಕ್ (Facebook) ಒಡೆತನದ ವಾಟ್ಸಾಪ್ ನವೆಂಬರ್ 1ರಿಂದ ಆಂಡ್ರಾಯ್ಡ್ ಒಎಸ್.4.1 ಮತ್ತು ಅದಕ್ಕಿಂತ ಮೇಲ್ಪಟ್ಟ ಹಾಗೂ ಐಒಎಸ್ 10ಕ್ಕಿಂತ ಮೇಲ್ಪಟ್ಟ ಒಎಸ್ ಆವೃತ್ತಿಗಳನ್ನು ಹೊಂದಿರದ ಫೋನುಗಳಲ್ಲಿ ವಾಟ್ಸಾಪ್ ಕಾರ್ಯ ನಿರ್ವಹಣೆ ಮಾಡುವುದಿಲ್ಲ ಎಂಬುದನ್ನು ಖಚಿತಪಡಿಸಿದೆ ಎಂದು ಕೆಲವು ಸುದ್ದಿತಾಣಗಳು ವರದಿ ಮಾಡಿವೆ. ಹಾಗಾಗಿ, ಹಳೆಯ ಫೋನು ಬಳುಸತ್ತಿರುವವರು ಈಗ ಸ್ವಲ್ಪ ವರೀ ಮಾಡಬೇಕಾಗುತ್ತದೆ. ಯಾಕೆಂದರೆ, ಅವರ ಸ್ಮಾರ್ಟ್‌ಫೋನು(Smartphone)ಗಳಲ್ಲಿ ನವೆಂಬರ್ 1ರಿಂದ ವಾಟ್ಸಾಪ್ ಕೆಲಸ ಮಾಡುವುದಿಲ್ಲ. ಒಂದೊಮ್ಮೆ ಅಂಥ ಬಳಕೆದಾರರಿಗೆ ವಾಟ್ಸಾಪ್ ಅಗತ್ಯವಿಲ್ಲ ಎಂದಾದರೆ, ಏನೋ ಕಾಳಜಿ ಮಾಡಬೇಕಾದ ಅಗತ್ಯವಿಲ್ಲ. 

ಇನ್ನುವಾಟ್ಸಾಪ್ ಸಪೋರ್ಟ್‌ಗೆ ಸಂಬಂಧಿಸಿದಂತೆ ಜಿಯೋ ಫೋನು ಬಳಕೆದಾರರು ಆತಂಕಪಡಬೇಕಾದ ಅಗತ್ಯವಿಲ್ಲ. KaiOS 2.5.1 ಒಎಸ್ ಹೊಸದಾಗಿದ್ದು, ಇದರ ಮೇಲೆ ರನ್ ಆಗುತ್ತಿರುವ ಫೋನುಗಳಿಗೆ ವಾಟ್ಸಾಪ್ ಸಪೋರ್ಟ್ ಮಾಡಲಿದೆ. ಹಾಗಾಗಿ, ಜಿಯೋ ಫೋನ್ ಹಾಗೂ ಜಿಯೋ ಫೋನ್ 2 ಬಳಕೆದಾರರು ಆತಂಕಪಡಬೇಕಿಲ್ಲ. ಈ ಎರಡೂ ಫೋನುಗಳಿಗೆ ವಾಟ್ಸಾಪ್ ತನ್ನ ಸಪೋರ್ಟ್ ಮುಂದುವರಿಸಲಿದೆ. ಈ ಕಳಗೆ ನೀಡಲಾದ ಫೋನುಗಳಲ್ಲಿ ನವೆಂಬರ್ 1ರಿಂದ ವಾಟ್ಸಾಪ್ ತನ್ನ ಕಾರ್ಯವನ್ನು ಸ್ಥಗಿತಗೊಳಿಸಲಿದೆ.

ಆಪಲ್(Apple):  ಆಪಲ್ ಐಫೋನ್ ಎಸ್ಇ(Apple iPhone SE), ಐಫೋನ್ 6 ಎಸ್ (iPhone 6S), ಐಫೋನ್ 6ಎಸ್ ಪ್ಲಸ್ (iPhone 6S Plus).

ಫೇಸ್‌ಬುಕ್ ಈಗ ಭವಿಷ್ಯವನ್ನೂ ಊಹಿಸಬಲ್ಲುದು

ಸ್ಯಾಮ್ಸಂಗ್ (Samsung): ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ರೆಂಡ್ ಲೈಟ್(Samsung Galaxy Trend lite), ಗ್ಯಾಲಕ್ಸಿ ಟ್ರೆಂಡ್ ಐಐ (Galaxy Trend II), ಗ್ಯಾಲಕ್ಸಿ ಎಸ್ಐಐ (Galaxy SII), ಗ್ಯಾಲಕ್ಸಿ ಎಸ್ 3 ಮಿನಿ (Galaxy S 3 Mini), ಗ್ಯಾಲಕ್ಸಿ ಎಕ್ಸ್ ಕವರ್ 2 (Galaxy X Cover 3), ಗ್ಯಾಲಕ್ಸಿ ಕೋರ್ (Galaxy Core), ಗ್ಯಾಲಕ್ಸಿ ಏಸ್ 2 (ಗ್ಯಾಲಕ್ಸಿ ಏಸ್ 2).

ಎಲ್‌ಜಿ (LG) ಫೋನುಗಳು: ಎಲ್ ಲುಸಿಡ್ 2,ಆಪ್ಟಿಮಸ್ ಎಫ್7, ಆಫ್ಟಿಮಸ್ ಎಫ್ 5, ಆಪ್ಟಿಮಸ್ ಎಲ್ 3 ಐಐ ಡ್ಯುಯಲ್, ಆಪ್ಟಿಮಸ್ ಎಫ್5, ಆಪ್ಟಿಮಸ್ ಎಲ್ 5, ಆಪ್ಟಿಮಸ್ ಎಲ್ 5 ಐಐ, ಆಪ್ಟಿಮಸ್ ಎಲ್ 5 ಡುಯಲ್, ಆಪ್ಟಿಮಸ್ ಎಲ್ 3 ಐಐ, ಆಪ್ಟಿಮಸ್ ಎಲ್ 7, ಆಪ್ಟಿಮಸ್ ಎಲ್ 7 ಐಐ ಡುಯಲ್, ಆಪ್ಟಿಮಸ್ ಎಲ್ ಐಐ, ಆಪ್ಟಿಮಸ್ ಎಫ್ 6, ಎನಾಕ್ಟ್(Enact), ಆಪ್ಟಿಮಸ್ ಎಲ್ 4 ಐಐ ಡುಯಲ್, ಆಪ್ಟಿಮಸ್ ಎಫ್ 3, ಆಪ್ಟಿಮಸ್ ಎಲ್ 4 ಐಐ, ಆಪ್ಟಿಮಸ್ ಎಲ್ 2 ಐಐ, ಆಪ್ಟಿಮಸ್ ನಿಟ್ರೋ ಎಚ್‌ಡಿ ಆಂಡ್ 4 ಎಕ್ಸ್ ಎಚ್‌ಡಿ, ಆಪ್ಟಿಮಸ್ ಎಫ್‌ 3 ಕ್ಯೂ (Optimus F3Q).

ಜೆಡ್‌ಟಿಇ(ZTE): ಜೆಡ್‌ಟಿಇ ಗ್ರ್ಯಾಂಡ್ ಎಸ್ ಫ್ಲೆಕ್ಸ್, ಜೆಡ್‌ಟಿಇ ವಿ956, ಗ್ರ್ಯಾಂಡ್ ಎಕ್ಸ್ ಕ್ವಾಡ್ ವಿ997, ಗ್ರ್ಯಾಂಡ್ ಮೆಮೊ ಹಾಗೂ  ಹುವೈ(Huawei) ಫೋನುಗಳು: ಹುವೈ ಅಸೆಂಡ್ G740, ಅಸೆಂಡ್ ಮೇಡ್, ಅಸೆಂಡ್ ಡಿ ಕ್ವಾಡ್ ಎಕ್ಸ್ ಎಲ್, ಅಸೆಂಡ್ ಡಿ1 ಕ್ವಾಡ್ ಎಕ್ಸ್ ಎಲ್, ಅಸೆಂಡ್ ಪಿ1 ಎಸ್ ಮ್ತತು ಅಸೆಂಡ್ ಡಿ 2.

ಟ್ವಿಟರ್‌ನ ಸ್ಪೇಸ್ ಎಲ್ಲರೂ ಬಳಸಬಹುದು, ಫಾಲೋವರ್ಸ್ ಮಿತಿ ಇಲ್ಲ!

ಆಪಲ್, ಸ್ಯಾಮ್ಸಂಗ್, ಎಲ್‌ಜಿ, ಜೆಡ್‌ಟಿಇ ಹಾಗೂ ಹುವೈನ ಕೆಲವು ಹಳೆಯ ಫೋನುಗಳಲ್ಲಿ ನವೆಂಬರ್ 1ರಿಂದ ವಾಟ್ಸಾಪ್ ಕಾರ್ಯಾಚರಣೆ ನಿಲ್ಲಿಸಲಿದೆ. ಇಲ್ಲಿ ನೀಡಲಾಗಿರುವ ಫೋನುಗಳು ಪೈಕಿ ನೀವು ಬಳುಸುತ್ತಿರುವ ಫೋನು ಇದೆಯಾ ಚೆಕ್ ಮಾಡಿಕೊಳ್ಳಿ. 

click me!