ಡಿ.31ರಿಂದ 49 ಸ್ಮಾರ್ಟ್‌ಫೋನ್‌ನಲ್ಲಿ ವ್ಯಾಟ್ಸ್ಆ್ಯಪ್ ಕೆಲಸ ಮಾಡಲ್ಲ!

By Suvarna News  |  First Published Dec 27, 2022, 6:26 PM IST

ಹೊಸ ವರ್ಷಕ್ಕೆ ಕೆಲ ದಿನ ಮಾತ್ರವೇ ಬಾಕಿ. ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ಇದರ ನಡುವೆ ಕೆಲ ಮಹತ್ವದ ವಿಚಾರಗಳ ಕುರಿತು ಗಮನಹರಿಸಲೇಬೇಕು. ಹೊಸ ವರ್ಷದಿಂದ ಕೆಲ ಫೋನ್ ಅಪ್‌ಡೇಟೆಡ್ ವ್ಯಾಟ್ಸ್‌ಆ್ಯಪ್‌ಗೆ ಸಪೂರ್ಟ್ ಮಾಡಲ್ಲ. ಈ ಫೋನ್‌ಗಳಲ್ಲಿ ವ್ಯಾಟ್ಸ್ಆಪ್ ವರ್ಕ್ ಆಗಲ್ಲ. ಒಟ್ಟು 49 ಫೋನ್‌ಗಳಲ್ಲಿ ಡಿಸೆಂಬರ್ 31 ರಿಂದ ವ್ಯಾಟ್ಸ್ಆ್ಯಪ್ ಸ್ಥಗಿತಗೊಳ್ಳಲಿದೆ. ವಿವರ ಇಲ್ಲಿದೆ.


ನವದೆಹಲಿ(ಡಿ.27): ಹೊಸ ವರ್ಷ ಸಂಭ್ರಮ ಮನೆ ಮಾಡಿದೆ. ಪ್ರತಿ ವರ್ಷದಿಂದ ಈ ವರ್ಷವೂ ಮೇಸೇಜಿಂಗ್ ಪ್ಲಾಟ್‌ಫಾರ್ಮ್ ವ್ಯಾಟ್ಸ್ಆ್ಯಪ್ ಅಪ್‌ಡೇಟ್ ಆಗುತ್ತಿದೆ. ಇದರ ಪರಿಣಾಮ ಕೆಲ ಫೋನ್‌ಗಳಲ್ಲಿ ವ್ಯಾಟ್ಸ್‌ಆ್ಯಪ್ ಸ್ಥಗಿತಗೊಳ್ಳಲಿದೆ. ಕಾರಣ ಈ ಫೋನ್‌ಗಳು ಅಪ್‌ಡೇಟೆಡ್ ವ್ಯಾಟ್ಸ್ಆ್ಯಪ್‌ಗೆ ಬೆಂಬಲ ನೀಡುವುದಿಲ್ಲ. ಇದರ ಪರಿಣಾಮ ವ್ಯಾಟ್ಸ್ಆ್ಯಪ್ ಕೆಲಸ ಮಾಡುವುದಿಲ್ಲ. ಈ ಫೋನ್‌ಗ‌ಳ ಆಪರೇಟಿಂಗ್ ಸಿಸ್ಟಮ್ ಅಪ್‌ಡೇಟ್ ಮಾಡಿದರೆ ಸಮಸ್ಯೆ ದೂರವಾಗುವ ಸಾಧ್ಯತೆ ಇದೆ. ಆದರೆ ಬಹುತೇಕ ಫೋನ್‌ಗಳಲ್ಲಿ ಅಪ್‌ಡೇಟೆಡ್ ಆಪರೇಟಿಂಗ್ ಸಿಸ್ಟಮ್‌ಗೆ ಫೋನ್ ಸಪೋರ್ಟ್ ಮಾಡುವ ಸಾಧ್ಯತೆ ಕಡಿಮೆ. ಹೀಗಾಗಿ ವ್ಯಾಟ್ಸ್ಆ್ಯಪ್ ಕೆಲಸ ಮಾಡುವುದು ಕಷ್ಟ ಸಾಧ್ಯ.  ಡಿಸೆಂಬರ್ 31 ರಿಂದ 49 ಫೋನ್‌ಗಳಲ್ಲಿ ವ್ಯಾಟ್ಸ್ಆ್ಯಪ್ ಕೆಲಸ ಮಾಡುವುದಿಲ್ಲ.

ಆ್ಯಪಲ್, ಸ್ಯಾಮ್‌ಸಂಗ್ ಸೇರಿದಂತೆ ಹಲವು ಬ್ರ್ಯಾಂಡ್ ಫೋನ್‌ಗಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳಲಿದೆ. ವಿಶ್ವಾದ್ಯಂತ ಈ ಸಮಸ್ಯೆ ಕಾಣಿಸಿಕೊಳ್ಳಲಿದೆ. ಇದು ಗ್ರಾಹಕರಿಗೆ ಮತ್ತೆ ಕಿರಿಕಿರಿ ತರುವ ಸಾಧ್ಯತೆಗಳೇ ಹೆಚ್ಚು. ಡಿಸೆಂಬರ್ 31ರಿಂದ ವ್ಯಾಟ್ಸ್ಆ್ಯಪ್ ಕೆಲಸ ನಿಲ್ಲಿಸುವ ಫೋನ್ ಮಾಹಿತಿ ಇಲ್ಲಿದೆ.

Tap to resize

Latest Videos

undefined

ಬರೀ ಚಾಟ್ ಮಾಡಿ ಟೈಮ್ ವೇಸ್ಟ್ ಮಾಡ್ಬೇಡಿ, ವಾಟ್ಸ್ ಆ್ಯಪ್‌ನಿಂದ ಗಳಿಸಬಹುದು ಹಣ

ವ್ಯಾಟ್ಸ್ಆ್ಯಪ್ ಸ್ಥಗಿತಗೊಳ್ಳಲಿರುವ ಫೋನ್ ವಿವರ:
ಆ್ಯಪಲ್ ಐಫೋನ್ 5, ಆ್ಯಪಲ್ ಐಫೋನ್ , ಸ್ಯಾಮ್‌ಸಂಗ್ ಗ್ಯಾಲೆಕ್ಸ್ Ace 2, ಸ್ಯಾಮ್‌ಸಂಗ್ ಗ್ಯಾಲೆಕ್ಸ್ ಕೋರ್, ಸ್ಯಾಮ್‌ಸಂಗ್ ಗ್ಯಾಲೆಕ್ಸ್ S2, ಸ್ಯಾಮ್‌ಸಂಗ್ ಗ್ಯಾಲೆಕ್ಸಿ S3 mini, ಸ್ಯಾಮ್‌ಸಂಗ್ ಗ್ಯಾಲೆಕ್ಸ್ ಟ್ರೆಂಡ್ II, ಸ್ಯಾಮ್‌ಸಂಗ್ ಗ್ಯಾಲೆಕ್ಸ್ ಟ್ರೆಂಡ್ Lite, ಸ್ಯಾಮ್‌ಸಂಗ್ ಗ್ಯಾಲೆಕ್ಸಿ Xcover 2, ಸೋನಿ Xperia Arc S, ಸೋನಿ Xperia miro, ಸೋನಿ Xperia ನಿಯೋ L, ಆರ್ಕೋಸ್ 53 ಪ್ಲಾಟಿನಂ, ಗ್ರ್ಯಾಂಡ್ ಎಸ್ ಫ್ಲೆಕ್ಸ್ ZTE, ಗ್ರ್ಯಾಂಡ್ X ಕ್ವಾಡ್ V987 ZTE, HTC ಡೆಸೈರ್ 500, ಹುವೈ ಅಕ್ಸೆಂಡ್ ಡಿ, ಹುವೈ ಎಕ್ಸೆಂಡ್ ಡಿ1,  ಹುವೈ ಎಕ್ಸೆಂಡ್ ಡಿ2, ಹುವೈ ಎಕ್ಸೆಂಡ್ G740, ಹುವೈ ಎಕ್ಸೆಂಡ್ ಮೇಟ್, ಹುವೈ ಎಕ್ಸೆಂಡ್ ಪಿ1, ಕ್ವಾಡ್ XL,  ಲೆನೋವಾ A820, LG ಎನಾಕ್ಟ್, LG ಲ್ಯೂಸಿಡ್ 2, LG ಆಪ್ಟಿಮಸ್ 4X HD,  LG ಆಪ್ಟಿಮಸ್ F3, LG ಆಪ್ಟಿಮಸ್ F3Q, LG ಆಪ್ಟಿಮಸ್ F5, LG ಆಪ್ಟಿಮಸ್ F6, LG ಆಪ್ಟಿಮಸ್ F7, LG ಆಪ್ಟಿಮಸ್ L2 II, LG ಆಪ್ಟಿಮಸ್ L3 II, LG ಆಪ್ಟಿಮಸ್ L3 II ಡ್ಯುಯೆಲ್, LG  ಆಪ್ಟಿಮಸ್ L4 II, LG ಆಪ್ಟಿಮಸ್ L4 II Dual, LG ಆಪ್ಟಿಮಸ್ L5, LG ಆಪ್ಟಿಮಸ್ L5 Dual, LG ಆಪ್ಟಿಮಸ್ L5 II, LG ಆಪ್ಟಿಮಸ್ L7, LG ಆಪ್ಟಿಮಸ್ L7 II, LG ಆಪ್ಟಿಮಸ್ L7 II Dual, LG ಆಪ್ಟಿಮಸ್ ನಿಟ್ರೋ HD, ಮೆಮೋ ZTE V956, ವಿಕೋ ಸಿಂಕ್ ಫೈವ್ ಫೋನ್, ವಿಕೋ ಡಾರ್ಕ್‌ನೈಟ್  ZT.

WhatsAppನಲ್ಲಿಇನ್ಮುಂದೆ ಸಿಕ್ಕ ಸಿಕ್ಕ ಸ್ಟೇಟಸ್‌ ಅಪ್ಡೇಟ್‌ ಮಾಡೋ ಹಾಗಿಲ್ಲ..!

 

click me!