ಸಲ್ಮಾನ್‌ ಖಾನ್‌, ಸುಂದರ್‌ ಪಿಚೈ ಸೇರಿ 40 ಕೋಟಿ ಟ್ವಿಟ್ಟರ್‌ ಗ್ರಾಹಕರ ಮಾಹಿತಿ ಸೋರಿಕೆ..!

By Kannadaprabha NewsFirst Published Dec 26, 2022, 11:12 AM IST
Highlights

ಇ-ಮೇಲ್‌, ಯೂಸ​ರ್‌​ನೇಮ್‌, ಫಾಲೋ​ವರ್ಸ್‌ ಸಂಖ್ಯೆ, ಟ್ವಿಟ್ಟರ್‌ ಖಾತೆ ರಚಿ​ಸಿದ ದಿನಾಂಕ, ಬಳ​ಕೆ​ದಾ​ರರ ಮೊಬೈಲ್‌ ಸಂಖ್ಯೆ​ಯನ್ನು ಹ್ಯಾಕರ್‌ ಬಿಡು​ಗ​ಡೆ​ಗೊ​ಳಿ​ಸಿದ್ದು, ಇದು ಜನ​ಪ್ರಿಯ ವ್ಯಕ್ತಿ​ಗ​ಳಿಗೆ ಸೇರಿದ ಮಾಹಿ​ತಿ​ಯಾ​ಗಿದೆ.

ನವ​ದೆ​ಹ​ಲಿ: 40 ಕೋಟಿ ಟ್ವಿಟ್ಟರ್‌ (Twitter) ಬಳ​ಕೆ​ದಾ​ರರ ವೈಯ​ಕ್ತಿಕ ಮಾಹಿ​ತಿಯು (Personal Information) ಡಾರ್ಕ್​ವೆ​ಬ್‌​ನಲ್ಲಿ (Dark Web) ಸೋರಿ​ಕೆ​ಯಾ​ಗಿದ್ದು, ಅದನ್ನು ಮಾರಾ​ಟ​ಕ್ಕಿ​ಡ​ಲಾ​ಗಿದೆ. ಇದು ಟ್ವಟ್ಟರ್‌ನ ಹೊಸ ಒಡೆಯ ಎಲಾನ್‌ ಮಸ್ಕ್‌ನನ್ನು (Elon Musk) ಮತ್ತಷ್ಟು ಸಂಕ​ಷ್ಟಕ್ಕೆ ಸಿಲು​ಕಿ​ಸಿದೆ. ಹ್ಯಾಕರ್‌ (Hacker) ಈ ಮಾಹಿ​ತಿಯ ಮಾದ​ರಿ​ಯನ್ನು ಹ್ಯಾಕರ್‌ ಸೈಟ್ಸ್‌​ನಲ್ಲಿ ಬಿಡು​ಗಡೆ ಮಾಡಿದ್ದು, ಮಾಹಿತಿ ಸೋರಿ​ಕೆ​ಯಾ​ಗಿದ್ದು ನಿಜ ಎಂದು ಸ್ಪಷ್ಟ​ಪ​ಡಿ​ಸಿ​ದ್ದಾ​ನೆ. ಇ-ಮೇಲ್‌ (E - Mail) , ಯೂಸ​ರ್‌​ನೇಮ್‌ (User Name), ಫಾಲೋ​ವರ್ಸ್‌ ಸಂಖ್ಯೆ, ಟ್ವಿಟ್ಟರ್‌ ಖಾತೆ ರಚಿ​ಸಿದ ದಿನಾಂಕ, ಬಳ​ಕೆ​ದಾ​ರರ ಮೊಬೈಲ್‌ ಸಂಖ್ಯೆ​ಯನ್ನು ಹ್ಯಾಕರ್‌ ಬಿಡು​ಗ​ಡೆ​ಗೊ​ಳಿ​ಸಿದ್ದು, ಇದು ಜನ​ಪ್ರಿಯ ವ್ಯಕ್ತಿ​ಗ​ಳಿಗೆ ಸೇರಿದ ಮಾಹಿ​ತಿ​ಯಾ​ಗಿದೆ. ಬಾಲಿ​ವುಡ್‌ ನಟ ಸಲ್ಮಾನ್‌ ಖಾನ್‌, ಗೂಗಲ್‌ ಸಿಇಒ ಸುಂದರ್‌ ಪಿಚೈ ಹಾಗೂ ಭಾರ​ತದ ಮಾಹಿತಿ ಮತ್ತು ಪ್ರಸಾರ ಸಚಿ​ವಾ​ಲ​ಯದ ಮಾಹಿತಿ ಕೂಡಾ ಸೋರಿ​ಕೆ​ಯಾ​ಗಿದ್ದು ಆತಂಕ ಸೃಷ್ಟಿ​ಸಿದೆ. ಇಸ್ರೇ​ಲಿನ ಸೈಬ​ರ್‌​ಕ್ರೈಂ ಗುಪ್ತ​ಚರ ಕಂಪ​ನಿಯ ಸಹ ಸಂಸ್ಥಾ​ಪಕ ಹಡ್ಸನ್‌ ರಾಕ್‌, ಈ ಎಲ್ಲ ಮಾಹಿತಿ ಎಪಿಐ (ಅ​ಪ್ಲಿ​ಕೇ​ಶನ್‌ ಪ್ರೋಗ್ರಾ​ಮಿಂಗ್‌ ಇಂಟ​ರ್‌​ಫೇ​ಸ್‌​) (Application Programming Interface) ದೋಷ​ದಿಂದಾಗಿ ಸೋರಿ​ಕೆ​ಯಾ​ಗಿ​ರ​ಬ​ಹುದು ಎಂದು ಅಭಿ​ಪ್ರಾಯ ಪಟ್ಟಿ​ದ್ದಾರೆ.

ಸುಲಿಗೆ ಹಣಕ್ಕೆ ಬೇಡಿಕೆ
‘ಟ್ವಿಟ್ಟರ್‌ ಅಥವಾ ಎಲಾನ್‌ ಮಸ್ಕ್‌ ನೀವಿ​ದನ್ನು ಓದು​ತ್ತಿ​ದ್ದರೆ ನೀವು ಈಗಾ​ಗಲೇ 54 ಲಕ್ಷ ಬಳ​ಕೆ​ದಾ​ರರ ಮಾಹಿತಿ ಸೋರಿ​ಕೆ​ಯಾ​ಗಿ​ದ್ದಕ್ಕೆ ಜಿಡಿ​ಪಿ​ಆರ್‌ ದಂಡದ ಭೀತಿ ಎದು​ರಿ​ಸು​ತ್ತಿ​ದ್ದೀರಿ. ಇನ್ನು 40 ಕೋಟಿ ಬಳ​ಕೆ​ದಾ​ರರ ಮಾಹಿತಿ ಸೋರಿಕೆ ಬಗ್ಗೆ ಆಲೋ​ಚಿ​ಸಿ’ ಎಂದು ಹ್ಯಾಕರ್‌ ಬೆದ​ರಿಕೆ ಒಡ್ಡಿ​ದ್ದಾ​ನೆ. ‘ಅಲ್ಲದೇ ಫೇಸ್‌​ಬುಕ್‌ ಮಾಹಿತಿ ಸೋರಿಕೆ ಕಾರ​ಣ​ದಿಂದಾಗಿ 22 ಸಾವಿರ ಕೋಟಿ ರೂ. ಜಿಡಿ​ಪಿ​ಆರ್‌ ದಂಡ​ವನ್ನು ಪಾವ​ತಿ​ಸಿ​ದಂತೆ ನೀವು ಪಾವ​ತಿ​ಸಲು ಬಯ​ಸದೇ ಇದ್ದರೆ ಈ ಮಾಹಿ​ತಿ​ಯನ್ನು ನನ್ನಿಂದ ಖರೀ​ದಿಸಿ. ಬಳಿಕ ನಾನು ಈ ಮಾಹಿ​ತಿ​ಯನ್ನು ತೆಗೆದು ಹಾಕು​ತ್ತೇನೆ. ಇನ್ಯಾ​ರಿಗೂ ಮಾರಾಟ ಮಾಡು​ವು​ದಿ​ಲ್ಲ​’ ಎಂದು ಹೇಳಿ​ದ್ದಾನೆ. ಈ ಮಾಹಿತಿ ಸೋರಿ​ಕೆ​ಯಾ​ದಲ್ಲಿ ಹಲ​ವಾರು ಖ್ಯಾತ ವ್ಯಕ್ತಿ​ಗಳು ಹಾಗೂ ರಾಜ​ಕಾ​ರ​ಣಿ​ಗಳು ಫಿಶಿಂಗ್‌, ಕ್ರಿಪ್ಟೋ ಸ್ಕಾಮ್‌, ಸಿಮ್‌ ಸ್ವ್ಯಾಪ್ಪಿಂಗ್‌, ಡಾಕ್ಸಿಂಗ್‌ ಮೊದ​ಲಾದ ಚಟು​ವ​ಟಿ​ಕೆ​ಗ​ಳಿಗೆ ಬಲಿ​ಯಾ​ಗುವ ಸಾಧ್ಯ​ತೆ​ಯಿದ್ದು, ಜನರು ನಿಮ್ಮ ಕಂಪ​ನಿಯ ಮೇಲೆ ವಿಶ್ವಾಸ ಕಳೆ​ದು​ಕೊ​ಳ್ಳ​ಲಿ​ದ್ದಾರೆ. ಇದ​ರಿಂದ ನಿಮ್ಮ ಕಂಪ​ನಿಯ ಪ್ರಗತಿ ಕುಂಠಿ​ತ​ವಾ​ಗ​ಲಿದೆ ಎಂದು ಎಚ್ಚ​ರಿಕೆ ನೀಡಿ​ದ್ದಾ​ನೆ.

ಇದನ್ನು ಓದಿ: ಏಮ್ಸ್‌ ಬಳಿಕ ಕೋವಿಡ್‌ ಲಸಿಕೆಯ ‘ಕೋವಿನ್‌’ ವೆಬ್‌ ಮಾಹಿತಿ ಹ್ಯಾಕ್‌..!

ಆಂತರಿಕ ದೋಷದಿಂದ ಡೇಟಾ ಕಳ್ಳತನ..!
ಈ ಹಿಂದೆ 5.4 ಕೋಟಿಗೂ ಹೆಚ್ಚು ಟ್ವಿಟ್ಟರ್‌ ಬಳಕೆದಾರರ ಡೇಟಾ ಕಳ್ಳತನ ವರದಿಯಾಗಿತ್ತು. ಆಂತರಿಕ ದೋಷದ ಮೂಲಕ ಈ ಡೇಟಾವನ್ನು ಕದಿಯಲಾಗಿದೆ. ಈ ಹಿನ್ನೆಲೆ, ಐರ್ಲೆಂಡ್‌ನ ಡೇಟಾ ಪ್ರೊಟೆಕ್ಷನ್ ಕಮಿಷನ್ (ಡಿಪಿಸಿ) ಈ ವಿಷಯವನ್ನು ಇತ್ತೀಚೆಗೆ ತನಿಖೆ ಮಾಡಲು ಘೋಷಿಸಿದೆ.
 
ಈ ಮಧ್ಯೆ, ಟ್ವಿಟ್ಟರ್‌ನ ಗೌಪ್ಯತೆ ಮತ್ತು ಡೇಟಾ ಸುರಕ್ಷತೆಯ ವಿಧಾನದ ಮೇಲೆ ಅಮೆರಿಕದ ಫೆಡರಲ್ ಟ್ರೇಡ್ ಕಮಿಷನ್(Federal Trade Commission) (ಎಫ್‌ಟಿಸಿ) ತನಿಖೆಯ ವ್ಯಾಪ್ತಿಯನ್ನು ಹೆಚ್ಚಿಸಲಾಗುತ್ತಿದೆ. ಎಲೋನ್ ಮಸ್ಕ್ ಟ್ವಿಟ್ಟರ್‌ ಅನ್ನು ಸ್ವಾಧೀನಪಡಿಸಿಕೊಂಡ ನಂತರ, ಟ್ವಿಟ್ಟರ್‌ ಅಮೆರಿಕ ನಿಯಂತ್ರಕದೊಂದಿಗೆ ಒಪ್ಪಂದವನ್ನು ಅನುಸರಿಸಲು ವಿಫಲವಾಗಬಹುದು ಎಂಬ ಆತಂಕವು ಬೆಳೆಯುತ್ತಿದೆ, ಇದರಲ್ಲಿ ಕಂಪನಿಯು ತನ್ನ ಗೌಪ್ಯತೆ-ಸಂಬಂಧಿತ ವ್ಯವಸ್ಥೆಗಳನ್ನು ಸುಧಾರಿಸಲು ಒಪ್ಪಿಕೊಂಡಿತು.

ಇದನ್ನೂ ಓದಿ: Cyber Hacking: ಏಮ್ಸ್ ಸರ್ವರ್‌ ಹ್ಯಾಕಲ್ಲಿ ಚೀನಿ ಹ್ಯಾಕರ್ ಕೈವಾಡ..? 

ಜಾಹೀರಾತಿಗಾಗಿ ಫೋನ್ ಸಂಖ್ಯೆಗಳ ಬಳಕೆ
ಪ್ರಮುಖವಾಗಿ, ಎಫ್‌ಟಿಸಿ ವಕೀಲರು ಕಳೆದ ತಿಂಗಳು ಇಬ್ಬರು ಮಾಜಿ ಟ್ವಿಟ್ಟರ್‌ ಕಾರ್ಯನಿರ್ವಾಹಕರನ್ನು ನಿಯಮಗಳ ಅನುಸರಣೆಯ ಬಗ್ಗೆ ಪ್ರಶ್ನಿಸಿದ್ದಾರೆ. ಈ ಹಿಂದೆ, ಟ್ವಿಟ್ಟರ್‌ ಬಳಕೆದಾರರ ಫೋನ್ ಸಂಖ್ಯೆಗಳಂತಹ ವೈಯಕ್ತಿಕ ಮಾಹಿತಿಯನ್ನು ಜಾಹೀರಾತಿಗಾಗಿ ಬಳಸುತ್ತಿದೆ ಎಂದು ಆರೋಪಿಸಲಾಗಿತ್ತು. ಅಲ್ಲದೆ, ಈ ಮಾಹಿತಿಯನ್ನು ಭದ್ರತಾ ಕಾರಣಗಳಿಗಾಗಿ ಬಳಸಲಾಗಿದೆ ಎಂದು ಬಳಕೆದಾರರಿಗೆ ತಿಳಿಸಲಾಗುತ್ತಿತ್ತು ಎಂದೂ ತಿಳಿದುಬಂದಿದೆ.

click me!