WhatsAppನಲ್ಲಿಇನ್ಮುಂದೆ ಸಿಕ್ಕ ಸಿಕ್ಕ ಸ್ಟೇಟಸ್‌ ಅಪ್ಡೇಟ್‌ ಮಾಡೋ ಹಾಗಿಲ್ಲ..!

By BK Ashwin  |  First Published Dec 25, 2022, 3:59 PM IST

ಹೊಸ ವೈಶಿಷ್ಟ್ಯವು ಸ್ಟೇಟಸ್‌ ವಿಭಾಗದಲ್ಲಿ ಹೊಸ ಮೆನುವಿನೊಳಗೆ ಸ್ಟೇಟಸ್‌ ಅಪ್ಡೇಟ್‌ ಅನ್ನು ವರದಿ ಮಾಡಲು ಬಳಕೆದಾರರಿಗೆ ಅನುಮತಿಸುತ್ತದೆ ಎಂದು WABetaInfo ವರದಿ ಮಾಡಿದೆ.


ಮೆಟಾ-ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ (Messaging Platform) ವಾಟ್ಸಾಪ್‌ (WhatsApp) ಹೊಸ ಫೀಚರ್‌ ಅಪ್ಡೇಟ್‌ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದು ಬಳಕೆದಾರರಿಗೆ ಡೆಸ್ಕ್‌ಟಾಪ್ ಬೀಟಾದಲ್ಲಿ (DeskTop Beta) ಸ್ಟೇಟಸ್‌ ಅಪ್ಡೇಟ್‌ಗಳನ್ನು (Status Update) ರಿಪೋರ್ಟ್‌ (Report) ಮಾಡುವ ಸಾಮರ್ಥ್ಯವನ್ನು ಒದಗಿಸುತ್ತದೆ. ಹೊಸ ವೈಶಿಷ್ಟ್ಯವು (New Feature) ಸ್ಟೇಟಸ್‌ ವಿಭಾಗದಲ್ಲಿ ಹೊಸ ಮೆನುವಿನೊಳಗೆ ಸ್ಟೇಟಸ್‌ ಅಪ್ಡೇಟ್‌ ಅನ್ನು ವರದಿ ಮಾಡಲು ಬಳಕೆದಾರರಿಗೆ ಅನುಮತಿಸುತ್ತದೆ ಎಂದು WABetaInfo ವರದಿ ಮಾಡಿದೆ.

ಸೇವಾ ನಿಯಮಗಳನ್ನು ಉಲ್ಲಂಘಿಸಬಹುದಾದ ಯಾವುದೇ ಅನುಮಾನಾಸ್ಪದ ಸ್ಟೇಟಸ್‌ ಅಪ್ಡೇಟ್‌ ಅನ್ನು ಬಳಕೆದಾರರು ನೋಡಿದರೆ, ಹೊಸ ಆಯ್ಕೆಯೊಂದಿಗೆ ಅದನ್ನು ಮಾಡರೇಶನ್ ತಂಡಕ್ಕೆ ರಿಪೋರ್ಟ್‌ ಮಾಡಲು ಅವರಿಗೆ ಸಾಧ್ಯವಾಗುತ್ತದೆ. ಇನ್ನು, ವರದಿ ಮಾಡುವ ಸಂದೇಶಗಳಂತೆಯೇ, ಸ್ಟೇಟಸ್‌ ಅಪ್‌ಡೇಟ್ ಅನ್ನು ಮಾಡರೇಶನ್ ಕಾರಣಗಳಿಗಾಗಿ ಕಂಪನಿಗೆ ಫಾರ್ವರ್ಡ್ ಮಾಡಲಾಗುತ್ತದೆ. ಬಳಿಕ ಅವರು ಈ ಸ್ಟೇಟಸ್‌ ನಿಯಮ ಉಲ್ಲಂಘನೆಯಾಗಿದೆಯೇ ಎಂದು ನೋಡುತ್ತದೆ.

Latest Videos

undefined

ಆದರೂ, ಈ ವೈಶಿಷ್ಟ್ಯವು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ನಿಯಮ ಹೊಂದಿದೆ. ಈ ಹಿನ್ನೆಲೆ WhatsApp ಮತ್ತು Meta ಕೂಡ, ಬಳಕೆದಾರರ ಸಂದೇಶಗಳ ವಿಷಯವನ್ನು ನೋಡಲು ಮತ್ತು ಅವರ ಖಾಸಗಿ ಕರೆಗಳನ್ನು ಕೇಳಲು ಸಾಧ್ಯವಿಲ್ಲ. ಆದರೆ ಪ್ಲಾಟ್‌ಫಾರ್ಮ್ ಮತ್ತು ಬಳಕೆದಾರರನ್ನು ಸುರಕ್ಷಿತವಾಗಿರಿಸಲು ಕಂಪನಿಯು ವರದಿ ಆಯ್ಕೆಯನ್ನು ತರುವುದು ಮುಖ್ಯವಾಗಿದೆ. ಇನ್ನು, ಸ್ಟೇಟಸ್‌ ಅಪ್ಡೇಟ್‌ಗಳನ್ನು ರಿಪೋರ್ಟ್‌ ಮಾಡುವ ಸಾಮರ್ಥ್ಯವು ಅಭಿವೃದ್ಧಿ ಹಂತದಲ್ಲಿದೆ ಮತ್ತು WhatsApp ಡೆಸ್ಕ್‌ಟಾಪ್ ಬೀಟಾದ ಭವಿಷ್ಯದ ಅಪ್‌ಡೇಟ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ವರದಿ ತಿಳಿಸಿದೆ. 

ನವೆಂಬರ್‌ನಲ್ಲಿ 37 ಲಕ್ಷ ಖಾತೆಗಳನ್ನು ಬ್ಯಾನ್‌ ಮಾಡಿದ ವಾಟ್ಸಾಪ್‌
ಇನ್ನೊಂದೆಡೆ, ಹೊಸ ಐಟಿ ನಿಯಮಗಳು 2021 ಕ್ಕೆ ಅನುಸಾರವಾಗಿ ನವೆಂಬರ್‌ನಲ್ಲಿ ಭಾರತದಲ್ಲಿ 37 ಲಕ್ಷಕ್ಕೂ ಹೆಚ್ಚು 'ಕೆಟ್ಟ' ಖಾತೆಗಳನ್ನು ವಾಟ್ಸಾಪ್‌ ಇತ್ತೀಚೆಗೆ ನಿಷೇಧಿಸಿದೆ, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೇಲೆ ಹೆಚ್ಚಿನ ಜವಾಬ್ದಾರಿಗಳನ್ನು ನೀಡಲು ತಿದ್ದುಪಡಿ ಮಾಡಲಾಗುತ್ತಿದೆ. ನವೆಂಬರ್ 1 ಮತ್ತು ನವೆಂಬರ್ 31 ರ ನಡುವೆ  37,16,000 ವಾಟ್ಸಾಪ್‌ ಖಾತೆಗಳನ್ನು ನಿಷೇಧಿಸಲಾಗಿದೆ ಮತ್ತು ಬಳಕೆದಾರರು ರಿಪೋರ್ಟ್‌ ಮಾಡುವ ಮೊದಲು 9,90,000 ಖಾತೆಗಳಲ್ಲಿ ಪೂರ್ವಭಾವಿಯಾಗಿ ನಿಷೇಧಿಸಲಾಗಿತ್ತು ಎಂದು ಕಂಪನಿ ತಿಳಿಸಿದೆ. ದೇಶದಲ್ಲಿ 400 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ನವೆಂಬರ್‌ನಲ್ಲಿ ದೇಶದಲ್ಲಿ 946 ದೂರು ವರದಿಗಳನ್ನು ಸ್ವೀಕರಿಸಿದ್ದು, ಮತ್ತು ಈ ಪೈಕಿ 74 ದೂರುಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. 

"ಐಟಿ ನಿಯಮಗಳು 2021 ರ ಅನುಸಾರವಾಗಿ, ನಾವು ನವೆಂಬರ್ 2022 ರ ನಮ್ಮ ವರದಿಯನ್ನು ಪ್ರಕಟಿಸಿದ್ದೇವೆ. ಇತ್ತೀಚಿನ ಮಾಸಿಕ ವರದಿಯ ಪ್ರಕಾರ, ವಾಟ್ಸಾಪ್‌ ನವೆಂಬರ್ ತಿಂಗಳಲ್ಲಿ 3.7 ಮಿಲಿಯನ್ ಖಾತೆಗಳನ್ನು ನಿಷೇಧಿಸಿದೆ" ಎಂದು ವಾಟ್ಸಾಪ್‌ ವಕ್ತಾರರು ಮಾಹಿತಿ ನೀಡಿದ್ದಾರೆ. ನವೀಕರಿಸಿದ ಐಟಿ ನಿಯಮಗಳು 2021 ರ ಅಡಿಯಲ್ಲಿ,  5 ಮಿಲಿಯನ್‌ಗಿಂತಲೂ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ಪ್ರಮುಖ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಮಾಸಿಕ ಅನುಸರಣೆ ವರದಿಗಳನ್ನು ಪ್ರಕಟಿಸಬೇಕು.

click me!