ವಿಶ್ವದ ಪ್ರಖ್ಯಾತ ಮೆಸೇಜಿಂಗ್ ಅಪ್ಲಿಕೇಶನ್ ವ್ಯಾಟ್ಸ್‌ಆಪ್ ಕಳೆದದ ಕೆಲವು ತಿಂಗಳುಗಳಿಂದ ಹೊಸ ಹೊಸ ಫೀಚರ್‌ಗಳನ್ನು ಭದ್ರತಾ ಕಾರಣಗಳಿಂದಾಗಿ ಪರಿಚಯಿಸುತ್ತಿದೆ. ಚಾಟ್ ಲಾಕ್, ವಾಯ್ಸ್ ಸ್ಟೇಟಸ್ ಬಳಿಕ ಈಗ ಮತ್ತೆರಡು ಹೊಸ ಫೀಚರ್‌ಗಳನ್ನು ವ್ಯಾಟ್ಸ್‌ಆಪ್ ಸೇರ್ಪಡೆ ಮಾಡುತ್ತಿದೆ.
ನವದೆಹಲಿ (ಮೇ. 30): ಆನ್‌ಲೈನ್ ವಂಚನೆಗಳು ಹೆಚ್ಚಾಗುತ್ತಿರುವ ಸಮಯದಲ್ಲಿ ವಿಶ್ವದ ಪ್ರಖ್ಯಾತ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್‌ಆಪ್, ಹೊಸ ಫೀಚರ್‌ಗಳನ್ನು ಸೇರ್ಪಡೆ ಮಾಡುತ್ತಿದೆ. ಶೀಘ್ರದಲ್ಲಿಯೇ ಮತ್ತೆರಡು ಹೊಸ ಫೀಚರ್‌ಗಳು ವ್ಯಾಟ್ಸ್‌ಆಪ್‌ಗೆ ಸೇರ್ಪಡೆಯಾಗಲಿದೆ. ಇನ್ನು ಮುಂದೆ ವ್ಯಾಟ್ಸ್‌ಆಪ್‌ನಲ್ಲಿ ಫೋನ್‌ನಂಬರ್‌ಅನ್ನು ಈವು ಹೈಡ್ ಮಾಡಬಹುದು. ಫೋನ್ ನಂಬರ್ ಬದಲು ನಿಮ್ಮ ಯೂಸರ್‌ನೇಮ್ ಕಾಂಟಾಕ್ಟ್ ಲಿಸ್ಟ್‌ನಲ್ಲಿ ಪ್ರಕಟವಾಗಲಿದೆ. ಅದರೊಂದಿಗೆ ವಿಡಿಯೋ ಕಾಲ್ ವೇಳೆ ಸ್ಕ್ರೀನ್ ಶೇರ್ ಮಾಡುವ ಫೀಚರ್‌ಅನ್ನು ಸೇರ್ಪಡೆ ಮಾಡಲಿದೆ. ಮೆಸೇಜಿಂಗ್ ಅಪ್ಲಿಕೇಶನ್ ಇತ್ತೀಚೆಗೆ ಚಾಟ್ ಲಾಕ್ ಮಾಡುವ, ಮೆಸೇಜ್‌ಗಳನ್ನು ಕಳುಹಿಸಿದ ಬಳಿಕವೂ ಎಡಿವ್ ಮಾಡುವ, ಹಲವು ಫೋನ್‌ಗಳಲ್ಲಿ ಒಂದೇ ವ್ಯಾಟ್ಸ್‌ಆಪ್ ಖಾತೆಯನ್ನು ಬಳಸುವ ಆಯ್ಕೆಗಳನ್ನು ಒಳಗೊಂಡ ಮೂರು ಹೊಸ ಫೀಚರ್‌ಗಳನ್ನು ಸೇರ್ಪಡೆ ಮಾಡಿತ್ತು. ಈಗ ಮತ್ತೆರಡು ಹೊಸ ಫೀಚರ್‌ಗಳನ್ನು ವ್ಯಾಟ್ಸ್‌ಆಪ್ ಸೇರ್ಪಡೆ ಮಾಡಿದೆ. ಅವುಗಳ ವಿವರ ಇಲ್ಲಿದೆ.
ಫೋನ್ ನಂಬರ್ ಈಗ ಹೈಡ್ ಮಾಡಬಹುದು: ವಾಬೆಟಾಇನ್ಫೋ ಹಂಚಿರುವ ಸ್ಕ್ರೀನ್‌ಶಾಟ್‌ಗಳ ಪ್ರಕಾರ, ವ್ಯಾಟ್ಸ್‌ಆಪ್ ಮತ್ತೊಂದು ಹೊಸ ಫೀಚರ್‌ಅನ್ನು ಸೇರ್ಪಡೆ ಮಾಡುತ್ತಿದೆ. ನಿಮ್ಮ ವಾಟ್ಸ್ಆಪ್ ಖಾತೆಗೆ ಯೂಸರ್‌ನೇಮ್‌ಅನ್ನು ಸೇರ್ಪಡೆ ಮಾಡುವ ಫೀಚರ್‌ಅನ್ನು ಜನರಿಗೆ ನೀಡಲು ಸಿದ್ಧವಾಗಿದೆ. ಇದರಿಂದಾಗಿ, ನೀವು ಯಾರಿಂದಲಾದರೂ ವ್ಯಾಟ್ಸ್‌ಆಪ್ ಮೆಸೇಜ್ ಸ್ವೀಕರಿಸಬೇಕಾದಲ್ಲಿ ನಂಬರ್ ನೀಡುವ ಅಗತ್ಯವೇ ಇರೋದಿಲ್ಲ. ಅದಲ್ಲದೆ, ನಿಮ್ಮ ಫೋನ್ ನಂಬರ್‌ಅನ್ನು ನೀವು ಹೈಡ್ ಮಾಡುವ ಅವಕಾಶ ಇರಲಿದೆ. ಯೂಸರ್‌ನೇಮ್ ನೀಡಿದರೆ ಸಾಕು ಆ ಮೂಲಕವೇ ಮೆಸೇಜ್‌ಗಳನ್ನು ಕಳಿಸಬಹುದಾಗಿದೆ. ಈ ವೈಶಿಷ್ಟ್ಯದ ಪರಿಚಯದೊಂದಿಗೆ, ವ್ಯಾಟ್ಸ್‌ಆಪ್ ತಮ್ಮ ಫೋನ್ ಸಂಖ್ಯೆಯನ್ನು ಬಹಿರಂಗಪಡಿಸದೆಯೇ ಅಪ್ಲಿಕೇಶನ್‌ನಲ್ಲಿ ಬಳಕೆದಾರ ಹೆಸರನ್ನು ನಮೂದಿಸುವ ಮೂಲಕ ಇತರ ಜನರನ್ನು ತಲುಪಲು ಅವಕಾಶ ನೀಡುತ್ತದೆ.
ಇದರೊಂದಿಗೆ, ಬಳಕೆದಾರರು ತಮ್ಮ ಖಾತೆಗಳಿಗೆ ಭದ್ರತೆಯ ಹೆಚ್ಚುವರಿ ಲೇಯರ್‌ಅನ್ನು ಸೇರಿಸಲು ಸಾಧ್ಯವಾಗುತ್ತದೆ. ಈ ಫೀಚರ್ ವ್ಯಾಟ್ಸ್‌ಆಪ್ ಸೆಟ್ಟಿಂಗ್‌ಗಳು > ಪ್ರೊಫೈಲ್‌ನಲ್ಲಿ ಮೀಸಲಾದ ವಿಭಾಗವನ್ನು ಹೊಂದಿರುತ್ತದೆ. ಪ್ರಸ್ತುತ, ವ್ಯಾಟ್ಸ್‌ಆಪ್ ಬಳಕೆದಾರ ಹೆಸರನ್ನು ಸೇರಿಸುವ ಹೊಸ ವೈಶಿಷ್ಟ್ಯವು ಅಭಿವೃದ್ಧಿ ಹಂತದಲ್ಲಿದೆ ಮತ್ತು ಭವಿಷ್ಯದ ಅಪ್‌ಡೇಟ್‌ನಲ್ಲಿ ಹೆಚ್ಚಿನ ಬೀಟಾ ವರ್ಷನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಎಲ್ಲವೂ ಸುಗಮವಾಗಿ ಕಾರ್ಯನಿರ್ವಹಿಸಿದಲ್ಲಿ, ಎಲ್ಲಾ ವರ್ಷನ್‌ನ ಅಪ್ಲಿಕೇಶನ್‌ಗೆ ಇದನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಶೇರ್ ಸ್ಕ್ರೀನ್ ಫೀಚರ್: ಇನ್ನು ವಿಡಿಯೋ ಕಾಲ್ ವೇಳೆ ನಿಮ್ಮ ಸ್ಕ್ರೀನ್‌ಅನ್ನು ಶೇರ್ ಮಾಡಿಕೊಳ್ಳುವ ಫೀಚರ್‌ಅನ್ನು ವ್ಯಾಟ್ಸ್‌ಆಪ್ ನೀಡಲಿದೆ. ಮೆಸೇಜ್ ಹಾಗೂ ಕರೆಗಳಿಗಾಗಿ ಕೋಟ್ಯಂತರ ಜನರು ವ್ಯಾಟ್ಸ್‌ಆಪ್‌ಅನ್ನು ಬಳಕೆ ಮಾಡುತ್ತಿದ್ದಾರೆ. ವಿಡಿಯೋ ಕಾಲ್‌ನಲ್ಲಿ ಸ್ಕ್ರೀನ್ ಶೇರಿಂಗ್ ಅವಕಾಶ ಬಂದ ಬಳಿಕ, ಗೂಗಲ್ ಮೀಟ್‌ನ ಅಗತ್ಯ ಕಡಿಮೆಯಾಗುವ ಸಾಧ್ಯತೆ ಇದೆ. ಪ್ರಸ್ತುತ ವಾಟ್ಸ್‌ಆಪ್‌ನಲ್ಲಿ 32 ವ್ಯಕ್ತಿಗಳೊಂದಿಗೆ ಏಕಕಾಲದಲ್ಲಿ ವಿಡಿಯೋ ಕಾಲ್ ಮಾಡಬಹುದು. ಪ್ರಸ್ತುತ ಆಂಡ್ರಾಯ್ಡ್ ಬೇಟಾ ಟೆಸ್ಟರ್‌ಗಳಿಗೆ ಇದನ್ನು ನೀಡಲಾಗಿದ್ದು, ಶೀಘ್ರದಲ್ಲಿಯೇ ಉಳಿದವರಿಗೂ ಲಭ್ಯವಾಗುವ ಸಾಧ್ಯತೆ ಇದೆ.
ವ್ಯಾಟ್ಸ್ಆ್ಯಪ್ ವಾಯ್ಸ್ ಸ್ಟೇಟಸ್, ಹೊಸ ಫೀಚರ್ ಈಗ ಎಲ್ಲಾ ಬಳಕೆದಾರರಿಗೆ ಲಭ್ಯ!
ವ್ಯಾಟ್ಸ್‌ಆಪ್ ತನ್ನ ಚಾಟ್‌ಲಾಕ್ ಫೀಚರ್‌ಅನ್ನು ಎಲ್ಲರಿಗೂ ಅನಾವರಣ ಮಾಡಿದೆ. ಜನರು ತಮ್ಮ ಸೂಪರ್ ಪರ್ಸನಲ್ ಚಾಟ್‌ಗಳಿಗೆ ಲಾಕ್ ಅನ್ನು ಸೇರಿಸಲು ಸಾಧ್ಯವಾಗುತ್ತದೆ, ಇದರಿಂದ ನೀವು ನಿಮ್ಮ ಫೋನ್ ಅನ್ನು ಬೇರೆಯವರಿಗೆ ನೀಡಿದರೂ, ಅವರು ಚಾಟ್‌ಗಳನ್ನು ನೋಡಲು ಸಾಧ್ಯವಾಗೋದಿಲ್ಲ. ಅದಲ್ಲದೆ, ಬೇರೆಯವರ ಕೈಯಲ್ಲಿ ನಿಮ್ಮ ಮೊಬೈಲ್ ಇದ್ದಾಗ, ಚಾಟ್‌ಲಾಕ್ ಆಗಿರುವ ವ್ಯಕ್ತಿಯ ಮೆಸೇಜ್‌ಗಳು ನೋಟಿಫಿಕೇಶನ್‌ನಲ್ಲಿಯೂ ಕಾಣೋದಿಲ್ಲ.
undefined
ಚಾಟಿಂಗ್ ರಹಸ್ಯವಾಗಿಡಲು ವಾಟ್ಸ್‌ಆ್ಯಟ್‌ನಲ್ಲಿ ಬಂದಿದೆ ಚಾಟ್ ಲಾಕ್ ಫೀಚರ್: ಬಳಕೆ ಮಾಡುವುದು ಹೀಗೆ..
ಅದರೊಂದಿಗೆ ಎಡಿಟ್ ಬಟನ್ ಆಪ್ಷನ್‌ಅನ್ನೂ ವ್ಯಾಟ್ಸ್‌ಆಪ್‌ನಲ್ಲಿ ಎಲ್ಲರಿಗೂ ನೀಡಲಾಗಿದೆ. ಮೆಸೇಜ್ ಕಳಿಸಿದ 15 ನಿಮಿಷಗಳ ಒಳಗಾಗಿ ನೀವು ಕಳಿಸಿದ ಸಂದೇಶವನ್ನು ಎಷ್ಟು ಬಾರಿ ಬೇಕಾದರೂ ಎಡಿಟ್ ಮಾಡಬಹುದಾಗಿದೆ. ಹಾಗಾಗಿ ಮೆಸೇಜ್‌ಗಳಲ್ಲಿ ಏನೇ ತಪ್ಪಾದರೂ, ಪೂರ್ತಿ ಮೆಸೇಜ್‌ಅನ್ನು ಡಿಲೀಟ್ ಮಾಡುವ ಅಗತ್ಯ ಇರೋದಿಲ್ಲ.