ಕೇವಲ 17 ರೂಪಾಯಿಗೆ ರಾತ್ರಿಯಿಡಿ ಅನ್‌ಲಿಮಿಟೆಡ್ ಡೇಟಾ ಪ್ಯಾಕ್, ವಿಐ ಗ್ರಾಹಕರಿಗೆ ಬಂಪರ್ ಆಫರ್!

Published : Jun 05, 2023, 08:23 PM ISTUpdated : Jun 05, 2023, 08:24 PM IST
ಕೇವಲ 17 ರೂಪಾಯಿಗೆ ರಾತ್ರಿಯಿಡಿ ಅನ್‌ಲಿಮಿಟೆಡ್ ಡೇಟಾ ಪ್ಯಾಕ್, ವಿಐ ಗ್ರಾಹಕರಿಗೆ ಬಂಪರ್ ಆಫರ್!

ಸಾರಾಂಶ

ವಿಐ ಗ್ರಾಹಕರಿಗೆ ಬಂಪರ್ ಆಫರ್ ನೀಡಲಾಗಿದೆ. ಡೇಟಾ ಖಾಲಿಯಾಗಿದೆ ಅನ್ನೋ ಸಮಸ್ಯೆ ಪರಿಹರಿಸಲು ರಾತ್ರಿಯಿಡಿ ಅನ್‌ಲಿಮಿಟೆಡ್ ಡೇಟಾ ಪ್ಯಾಕ್ ಘೋಷಿಸಿದೆ. ಕೇವಲ 17 ರೂ ಹಾಗೂ 57 ರೂಪಾಯಿಗೆ ಈ ಆಫರ್ ಲಭ್ಯವಿದೆ. 

ನವದೆಹಲಿ(ಜೂ.05): ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರಿಗೆ ಡೇಟಾದಲ್ಲಿ ಈಗಾಗಲೇ ಹಲವು ಆಫರ್ ನೀಡಿದೆ. ಇದೀಗ ವಿಐ ಗ್ರಾಹಕರಿಗೆ ಹೊಸ ಆಫರ್ ಪರಿಚಯಿಸಿದೆ. ಹಠಾತ್ತಾಗಿ ಡೇಟಾ ಖಾಲಿಯಾಗುವ ಸಮಸ್ಯೆ ಪರಿಹರಿಸಲು,  ಸಮಾಜದ ಎಲ್ಲಾ ವರ್ಗದ ಜನರಿಗೆ ಡೇಟಾ  ಸುಲಭವಾಗಿ ಹಾಗೂ ಕೈಗೆಟುಕುವ ದರದಲ್ಲಿ ಡೇಟಾ ಲಭ್ಯವಾಗುಂತೆ ಮಾಡಲಾಗಿದೆ.  ವಿಐ (Vi), ಎರಡು ಹೊಸ  ಅನಿಯಮಿತ ರಾತ್ರಿ ಡೇಟಾ ಪ್ಯಾಕ್ ಘೋಷಿಸಿದೆ.'ವಿಐ ಛೋಟಾ ಹೀರೊ ಪ್ಯಾಕ್ಸ್  ಲಾಂಚ್ ಮಾಡಿದೆ.

ಎರಡು ಹೊಸ ಪ್ಯಾಕ್ಗಳಾದ ₹ 17 ಮತ್ತು ₹ 57 ನೆರವಿನಿಂದ ಮಧ್ಯರಾತ್ರಿಯಿಂದ ಬೆಳಿಗ್ಗೆ 6:00 ರವರೆಗೆ ‘ವಿಐ’ ಬಳಕೆದಾರರಿಗೆ ರಾತ್ರಿಯಿಡೀ ಮಿತಿರಹಿತ ಡೇಟಾ ಬಳಸಲು  ಅವಕಾಶ ನೀಡಿದೆ. ಸದ್ಯದ ಡಿಜಿಟಲ್ ಜಗತ್ತಿನಲ್ಲಿ, ಪ್ರತಿಯೊಬ್ಬರ ದಿನನಿತ್ಯದ ಕಾರ್ಯಚಟುವಟಿಕೆಗಳಾದ  ಕಚೇರಿ ಕೆಲಸ ಇರಲಿ ಅಥವಾ ಮನರಂಜನೆ ಆಸ್ವಾದಿಸುವುದು ಇರಲಿ ಮೊಬೈಲ್ ಇಂಟರ್ನೆಟ್ ತುಂಬ  ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಹೈಬ್ರಿಡ್ ಸ್ವರೂಪದ ಕೆಲಸದ ಸಂಸ್ಕೃತಿ, ಅಗಾಧ ಪ್ರಮಾಣದ ವಿಷಯದ ಹರಿವು, ಸಾಮಾಜಿಕ ಹರಟೆಗಳು ಮತ್ತು ವಿವಿಧ ಉದ್ದೇಶ / ಮಾಹಿತಿಗಾಗಿ ಅಂತರ್ಜಾಲ ಜಾಲಾಡುವಿಕೆ, ತನ್ಮಯಗೊಳಿಸುವ ಗೇಮಿಂಗ್ ಅನುಭವ ಮತ್ತಿತರ  ಉದ್ದೇಶಗಳಿಗೆ ಪ್ರಿಪೇಯ್ಡ್ ಗ್ರಾಹಕರು ಡೇಟಾ ಕೋಟಾ ಖಾಲಿಯಾಗುವ ಬಗ್ಗೆ ಚಿಂತಿಸುತ್ತಾರೆ. ಅದೇ ಸಮಯದಲ್ಲಿ, ಮೊಬೈಲ್ ಪಿರ್ಯಾಮಿಡ್ ಬಳಕೆದಾರರ ಕೆಳಭಾಗದಲ್ಲಿ ಇರುವವರು ತಮ್ಮ  ಅಗತ್ಯಗಳು ಮತ್ತು ಅವಶ್ಯಕತೆಗಳಿಗಾಗಿ ಡೇಟಾ ಬಳಸುವುದಕ್ಕೆ ಇನ್ನೂ ಹೆಣಗಾಡುತ್ತಿದ್ದಾರೆ.

ಪ್ರಿಪೇಯ್ಡ್ ಗ್ರಾಹಕರು ಮಧ್ಯರಾತ್ರಿಯಿಂದ ಬೆಳಿಗ್ಗೆ 6:00 ಗಂಟೆಯವರೆಗೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಒಂದು ದಿನಕ್ಕೆ ₹ 17  ಮತ್ತು  7 ದಿನಗಳವರೆಗೆ ₹ 57 ಬೆಲೆಯ ಡೇಟಾ ಪ್ಯಾಕ್ನಲ್ಲಿ ಅನಿಯಮಿತವಾಗಿ ಡೇಟಾ ಬಳಸಬಹುದು. ಈ ಅನನ್ಯ ಕೊಡುಗೆಯ ಮೂಲಕ ಮೊಬೈಲ್ ಬಳಕೆದಾರರ ಪಿರ್ಯಾಮಿಡ್ನ ಕೆಳಭಾಗದಲ್ಲಿ ಇರುವ ಗ್ರಾಹಕರು  ಅನಿಯಮಿತ ಡೇಟಾ ಸೌಲಭ್ಯವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲು ಅವಕಾಶ  ಒದಗಿಸುವ ಮೂಲಕ ಪ್ರಿಪೇಯ್ಡ್ ಗ್ರಾಹಕರ ಪಾಲಿಗೆ ಆದ್ಯತೆಯ ದೂರಸಂಪರ್ಕ ಸೇವಾಸಂಸ್ಥೆಯಾಗುವುದು ‘ವಿಐ’ದ ಉದ್ದೇಶವಾಗಿದೆ.

 

ಅನ್‌ಲಿಮಿಟೆಡ್ ಕಾಲ್ ಜೊತೆ ಸನ್‌ NXT, ಸೋನಿ ಲಿವ್ ಸಬ್‌ಸ್ಕ್ರಿಪ್ಶನ್ ಉಚಿತ, ವಿ ಹೊಸ ಆಫರ್!

ಬ್ರಾಡ್ಬ್ಯಾಂಡ್ ಸೇವೆಗಳನ್ನು ಪಡೆಯಲು ಸಾಧ್ಯವಿಲ್ಲದ ಆದರೆ ರಾತ್ರಿ ಹೊತ್ತಿನಲ್ಲಿ ಸಿನಿಮಾ, ವಿಡಿಯೊ ವೀಕ್ಷಣೆ, ಸಂಗೀತ ಆಲಿಸುವಿಕೆ, ಗೇಮ್ಗಳನ್ನು ಆಡಲು, ವಿವಿಧ ಉದ್ದೇಶಗಳಿಗೆ ಅಂತರ್ಜಾಲ ಜಾಲಾಡುವಿಕೆ, ಹರಟೆ ಹೊಡೆಯಲು, ಕೆಲಸ ಮಾಡಲು ಅಥವಾ ಅಧ್ಯಯನ ಉದ್ದೇಶಕ್ಕೆ ಗರಿಷ್ಠ ವೇಗದ ಡೇಟಾ ಅಗತ್ಯ ಇರುವ ಕಾಲೇಜ್ ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳು ಮತ್ತು ಈಗಷ್ಟೇ ಕೆಲಸಕ್ಕೆ ಸೇರಿರುವ ಉದ್ಯೋಗಿಗಳಂತಹ ಬಳಕೆದಾರರ ಅನುಕೂಲಕ್ಕೆಂದೇ  ಈ ಪ್ಯಾಕ್ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ‘ವಿಐ’ ಗ್ರಾಹಕರು ವಿಐ ಗೇಮ್ಗಳನ್ನು ಆಡಲು, ವಿಐ ಮೂವೀಸ್ ಆ್ಯಂಡ್ ಟಿವಿನಲ್ಲಿ ಇತ್ತೀಚಿನ ಚಲನಚಿತ್ರಗಳು / ವಿಡಿಯೊಗಳನ್ನು ವೀಕ್ಷಿಸಿ  ಆನಂದಿಸಲು ಅಥವಾ ವಿಐ ಅಪ್ಲಿಕೇಷನ್ನಿನ (ಆ್ಯಪ್ನಲ್ಲಿ ) ವಿಐ ಮ್ಯೂಸಿಕ್ನಲ್ಲಿ ತಮ್ಮ ನೆಚ್ಚಿನ ಸಂಗೀತ, ಹಾಡು  ಕೇಳುವುದಕ್ಕೂ ಈ ಪ್ಯಾಕ್ಗಳನ್ನು ಬಳಸಬಹುದು.

ಕರ್ನಾಟಕದ ವಿ ಬಳಕೆದಾರರಿಗೆ ಬಂಪರ್ ಕೊಡುಗೆ, ಉಚಿತ ವಾಯ್ಸ್ ಓವರ್ ವೈಫೈ ಕಾಲ್ ಸೌಲಭ್ಯ!

ಭಾರತೀಯರು ವರ್ತಮಾನದ ಹಾಗೂ ಭವಿಷ್ಯದ ಬದುಕನ್ನು ಕಟ್ಟಿಕೊಳ್ಳಲು ಬೇಕಾದ ಅಗತ್ಯಗಳನ್ನು ಈಡೇರಿಸಿಕೊಳ್ಳಲು ಹಾಗೂ ಅವರ ಎದುರಿಗೆ ಕೊನೆಯಿಲ್ಲದ ಸಾಧ್ಯತೆಗಳು ತೆರೆದುಕೊಳ್ಳುವುದಕ್ಕೆ ನೆರವಾಗುವುದು ‘ವಿಐ’ನ ಗುರಿಯಾಗಿದೆ. ಈ ವಿಭಿನ್ನ ಕೊಡುಗೆಯು ಮೊಬೈಲ್ ಪ್ರೀಪೇಡ್ನ ಆದ್ಯತೆಯ ಬಳಕೆದಾರರನ್ನು ಗುರಿಯಾಗಿರಿಸಿಕೊಂಡಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌
Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್