ವ್ಯಾಟ್ಸಾಪ್ ಗ್ರೂಪ್‌ಗೆ ಹೊಸ ರೂಲ್ಸ್; ಆಡ್ಮಿನ್ ಆಗಲು ಇಲ್ಲಿ ಶುಲ್ಕ ಜೊತೆ ಅಂಚೆ ಇಲಾಖೆ ಅನುಮತಿ ಬೇಕು!

By Chethan Kumar  |  First Published Nov 9, 2024, 3:18 PM IST

ವ್ಯಾಟ್ಸ್ಆ್ಯಪ್ ಗ್ರೂಪ್ ಹೊಸ ನಿಯಮವೊಂದು ಭಾರಿ ಸದ್ದು ಮಾಡುತ್ತಿದೆ. ವ್ಯಾಟ್ಸ್ಆ್ಯಪ್ ಗ್ರೂಪ್ ಕ್ರಿಯೆಟ್ ಮಾಡಲು ಹಾಗೂ ಆಡ್ಮಿನ್ ಆಗಬೇಕಾದರೆ ಶುಲ್ಕ ಪಾವತಿಸಬೇಕು, ಇಷ್ಟೇ ಅಲ್ಲ ಅಂಚೆ ಇಲಾಖೆ ಅನುಮತಿಯೂ ಬೇಕು. 
 


ಹರಾರೆ(ನ.09) ವ್ಯಾಟ್ಸ್ಆ್ಯಪ್ ಹಲವು ಫೀಚರ್ಸ್ ಈಗಾಗಲೇ ಜಾರಿ ಮಾಡಿದೆ. ಕೆಲ ನಿಯಮಗಳನ್ನು ಬದಲಿಸಿದೆ. ಈ ಪೈಕಿ ಹೊಸ ವಿಚಾರ ಏನಂದರೆ ವ್ಯಾಟ್ಸ್ಆ್ಯಪ್ ಗ್ರೂಪ್ ಕ್ರಿಯೇಟ್ ಮಾಡಲು, ಆಡ್ಮಿನ್ ಆಗಲು ಶುಲ್ಕ ಪಾವತಿಸಬೇಕು. ಇಷ್ಟೇ ಅಲ್ಲ ಅಂಚೆ ಇಲಾಖೆಯ ಅನುಮತಿಯನ್ನೂ ಪಡೆಯಬೇಕು. ಹೌದು, ಇದು ತಮಾಷೆಯಲ್ಲ, ಆದರೆ ಈ ನಿಯಮ ಜಿಂಬಾಬ್ವೆಯಲ್ಲಿ ಜಾರಿಗೆ ತರಲಾಗಿದೆ. ಅಷ್ಟಕ್ಕೂ ಜಿಂಬಾಬ್ವೆಯಲ್ಲಿ ವ್ಯಾಟ್ಸ್ಆ್ಯಪ್ ಗ್ರೂಪ್‌ಗೆ ಈ ನಿಯಮ ಜಾರಿ ಮಾಡಲು ಕೆಲ ಕಾರಣಗಳು ಇದೆ. ಆದರೆ ಇದೀಗ ಜಿಂಬಾಬ್ವೆ ವಿಶ್ವದಲ್ಲೆ ಬಾರಿ ಸಂಚಲನ ಸೃಷ್ಟಿಸಿದೆ.

ಜಿಂಜಾಬ್ವೆ ಅಂಚೆ ಹಾಗೂ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಇಲಾಖೆ(POTRAZ) ಹೊಸ ನಿಯಮ ಜಾರಿ ಮಾಡಿದೆ. ಈ ನಿಯಮದ ಪ್ರಕಾರ ಸದ್ಯ ಇರುವ ವ್ಯಾಟ್ಸ್ಆ್ಯಪ್ ಗ್ರೂಪ್ ಅಡ್ಮಿನ್ ಹಾಗೂ ಹೊಸದಾಗಿ ವ್ಯಾಟ್ಸಾಪ್ ಗ್ರೂಪ್ ಗ್ರೂಪ್ ಕ್ರಿಯೆಟ್ ಮಾಡಲು ಬಯಸುವವರು POTRAZನಲ್ಲಿ ಅನುಮತಿ ಪಡೆಯಬೇಕು. ಜೊತೆಗೆ ಇದಕ್ಕೆ ಶುಲ್ಕ ಪಾವತಿಸಬೇಕು. ಗ್ರೂಪ್ ಸದಸ್ಯರು, ಉದ್ದೇಶ ಸೇರಿದಂತೆ ಹಲವು ಕಾರಣಗಳ ಆಧಾರದಲ್ಲಿ ಶುಲ್ಕ ನಿರ್ಧಾರವಾಗಲಿದೆ. ದೊಡ್ಡ ಬ್ಯೂಸಿನೆಸ್ ಗ್ರೂಪ್, ಆಫೀಸ್ ಗ್ರೂಪ್ ಸೇರಿದಂತೆ ವ್ಯವಹಾರ ಸಂಬಂಧಿತ ಗ್ರೂಪ್ ಆಗಿದ್ದರೆ ಹೆಚ್ಚಿನ ಶುಲ್ಕ ಪಾವತಿಸಬೇಕು, ಫ್ಯಾಮಿಲಿ ಗ್ರೂಪ್, ಫ್ರೆಂಡ್ಸ್ ಗ್ರೂಪ್ ಸೇರಿದಂತೆ ಇತರ ಗ್ರೂಪ್‌ಗಳಾಗಿದ್ದರೆ ಕನಿಷ್ಠ 50 ಅಮೆರಿಕನ್ ಡಾಲರ್ ಶುಲ್ಕದ ರೂಪದಲ್ಲಿ ಪಾವತಿಸಬೇಕು.

Tap to resize

Latest Videos

ವ್ಯಾಟ್ಸ್ಆ್ಯಪ್ ಮೂಲಕ 4 ವಿಚಾರ ಹಂಚಿಕೊಳ್ಳಬೇಡಿ, ದೂರು ದಾಖಲಾಗುವುದು ಖಚಿತ!

ಹೊಸ ನಿಯಮ ಜಿಂಬಾಬ್ವೆ ಡೇಟಾ ಪ್ರೊಟೆಕ್ಷನ್ ಕಾಯ್ದೆ(DPA) ಅಡಿಯಲ್ಲಿ ತರಲಾಗಿದೆ. ಹಲವರು ಜಿಂಬಾಬ್ವೆ ನಿಯಮ ಕೇಳಿ ನಕ್ಕಿದ್ದಾರೆ. ತಮಾಷೆ ಮಾಡಿದ್ದಾರೆ. ಹಲವರು ಟ್ರೋಲ್ ಮಾಡುತ್ತಿದ್ದಾರೆ. ಆದರೆ ಜಿಂಬಾಬ್ವೆ ಸರ್ಕಾರ ಈ ನಿರ್ಧಾರದ ಹಿಂದಿರುವುದು ಸುಳ್ಳು ಸುದ್ದಿ, ತಪ್ಪು ಮಾಹಿತಿ, ನಕಲಿ ಫೋಟೋ, ವಿಡಿಯೋಗಳ ಮೇಲೆ ನಿಯಂತ್ರಣ ಹೇರಲು ಈ ನಿಯಮ ತಂದಿದೆ. ಪ್ರಮುಖವಾಗಿ ಗಲಭೆ, ದಂಗೆ, ಸೇರಿದಂತೆ ಇತರ ಘಟನೆಗಳಿಗೆ ವ್ಯಾಟ್ಸ್ಆ್ಯಪ್ ಗ್ರೂಪ್ ಮೂಲಕ ಹರಿದಾಡುವ ಸಂದೇಶಗಳು, ತಪ್ಪು ಮಾಹಿತಿಗಳು ಹೆಚ್ಚಾಗಿ ಕಾರಣವಾಗುತ್ತಿದೆ.  ಹೀಗಾಗಿ ಈ ರೀತಿಯ ತಪ್ಪು ಮಾಹಿತಿ, ಸುಳ್ಳು ಸುದ್ದಿ ಸೇರಿದಂಕೆ ಫೇಕ್ ರಿಪೋರ್ಟ್ಸ್‌ಗಳಿಗೆ ಕಡಿವಾಣ ಹಾಕಲು ಜಿಂಬಾಬ್ವೆ ಹೊಸ ನಿಯಮ ಜಾರಿಗೆ ತರಲಾಗಿದೆ.

ಅಂಚೆ ಹಾಗೂ ದೂರ ಸಂಪರ್ಕ ಇಲಾಖೆಯಲ್ಲಿ ವ್ಯಾಟ್ಸ್ಆ್ಯಪ್ ಆಡ್ಮಿನ್‌ಗಳೂ ತಮ್ಮ ವೈಯುಕ್ತಿಕ ಮಾಹಿತಿ, ಜಿಂಬಾಬ್ವೆ ಗುರುತಿನ ಚೀಟಿ ಅಥವಾ ಸಮನಾದ ಇತರ ದಾಖಲೆ ಪತ್ರ ನೀಡಬೇಕು. ಇಷ್ಟೇ ಅಲ್ಲ ಅಡ್ಮಿನ್ ತಾವು ಸೃಷ್ಟಿಸಿದ ಗ್ರೂಪ್ ಯಾವುದೇ ರೀತಿ ದೇಶ ವಿರೋಧಿ, ದೇಶದ ಭದ್ರತೆಗೆ, ಆಂತರಿಕ ಭದ್ರತೆ, ಗಲಭೆ, ನಿಂದನೆ, ಖಾಸಗಿತನ, ಗೌಪ್ಯತೆಗೆ ಧಕ್ಕೆ ತರಲು ಪ್ರಯತ್ನಿಸುವುದಿಲ್ಲ ಎಂದು ಸಹಿ ಹಾಕಬೇಕು. ಜೊತೆಗೆ ಗ್ರೂಪ್‌ಗೆ ಅನುಸಾರ ವಿಧಿಸುವ ಶುಲ್ಕ ಪಾವತಿಸಬೇಕು.

ಜಿಂಬಾಬ್ವೆ ಹೊಸ ನಿಯಮಕ್ಕೆ ಪರ ವಿರೋಧಗಳು ಕೇಳಿಬಂದಿದೆ. ಕಚೇರಿ, ಉದ್ಯಮ, ಕೈಗಾರಿಕೆ ಸೇರಿದಂತೆ ಇತರ ವ್ಯವಾಹಾರಿಕ ಹಾಗೂ ಶಿಕ್ಷಣ ಸಂಸ್ಥೆಗಳ ಸಂಬಂಧ ಕ್ರಿಯೇಟ್ ಮಾಡಿರುವ ಗ್ರೂಪ್, ಎನ್‌ಜಿಒ, ನೆರವು ನೀಡುವ ಉದ್ದೇಶದಿಂದ ರಚಿಸಿರುವ ಗ್ರೂಪ್‌ಗಳು ಶುಲ್ಕ ಪಾವತಿಸಿ ಗ್ರೂಪ್ ನಡೆಸುವುದು ಕಷ್ಟ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ. ಮತ್ತೆ ಕೆಲವರು ಈ ರೀತಿಯ ನಿಯಮ ಅವಶ್ಯಕವಾಗಿದೆ ಎಂದಿದ್ದಾರೆ. ತಪ್ಪು ಮಾಹಿತಿ, ಸುಳ್ಳು ಮಾಹಿತಿ ಹರಡುವಿಕೆ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಲು ಈ ರೀತಿಯ ಕಠಿಣ ನಿಮಯ ಬೇಕು ಎಂದಿದ್ದಾರೆ. 

ವ್ಯಾಟ್ಸ್ಆ್ಯಪ್ ಬಳಕೆದಾರರಿಗೆ ಹೊಸ ಫೀಚರ್, ಫೋಟೋ ಕಳುಹಿಸುವಾಗ ಎಚ್ಚರ!
 

click me!