ನಿಮ್ಮ ಫೋನ್ ಈ ಸಿಗ್ನಲ್ ನೀಡಿದರೆ ಯಾರೋ ಸ್ಕ್ರೀನ್ ರೆಕಾರ್ಡಿಂಗ್ ಮಾಡುತ್ತಿದ್ದಾರೆ ಎಂದರ್ಥ!

By Chethan Kumar  |  First Published Nov 6, 2024, 4:14 PM IST

ಹ್ಯಾಕರ್ಸ್ ನಿಮ್ಮ ಫೋನ್ ಹ್ಯಾಕ್ ಮಾಡಿದ್ದರೆ ಅದರಲ್ಲೂ ಪ್ರಮುಖವಾಗಿ ರಹಸ್ಯವಾಗಿ ಸ್ಕ್ರೀನ್ ರೆಕಾರ್ಡ್ ಮಾಡುತ್ತಿದ್ದರೆ ಫೋನ್ ಕೆಲ ಸಿಗ್ನಲ್ ನೀಡಲಿದೆ. ಈ ಸಿಗ್ನಲ್ ಬಂದ ತಕ್ಷಣವೆ ಎಚ್ಚೆತ್ತುಕೊಳ್ಳುವುದು ಅತೀ ಮುಖ್ಯ.


ವೈಯುಕ್ತಿ ಮಾಹಿತಿ ಸೋರಿಕೆಯಾಗುವುದು, ಹ್ಯಾಕರ್ಸ್ ಕೋಡಿಂಗ್ ಮೂಲಕ ಹ್ಯಾಕ್ ಮಾಡಿ ಮಾಹಿತಿ ಕದಿಯುವುದು ಡಿಜಿಟಲ್ ಜಗತ್ತಿನಲ್ಲಿ ಹೆಚ್ಚಾಗುತ್ತಿದೆ. ಇತ್ತೀಚೆಗೆ ಲಿಂಕ್, ಆ್ಯಪ್ ಮೂಲಕ ಹ್ಯಾಕರ್ಸ್ ಫೋನ್‌ಗಳಿಗೆ ಕನ್ನ ಹಾಕುತ್ತಿದ್ದಾರೆ. ಇಷ್ಟೇ ಅಲ್ಲ ರಹಸ್ಯವಾಗಿ ಸ್ಕ್ರೀನ್ ರೆಕಾರ್ಡ್ ಮಾಡಿ ಬಳಿಕ ಬ್ಲಾಕ್‌ಮೇಲ್, ವೈಯುಕ್ತಿಕ ಮಾಹಿತಿ ಪಡೆದು ವಂಚನೆ ಮಾಡುವುದು ಹೆಚ್ಚಾಗುತ್ತಿದೆ. ನಿಮ್ಮ ಫೋನ್ ಯಾರಾದರೂ ಹ್ಯಾಕ್ ಮಾಡಿ ಸ್ಕ್ರೀನ್ ರೆಕಾರ್ಡಿಂಗ್ ಮಾಡುತ್ತಿದ್ದರೆ ಫೋನ್ ಕೆಲ ಸಿಗ್ನಲ್ ನೀಡಲಿದೆ. ಈ ರೀತಿಯ ಸಿಗ್ನಲ್ ಬಂದರೆ ತಕ್ಷಣವೆ ಎಚ್ಚೆತ್ತುಕೊಳ್ಳಬೇಕು.

ಬಹುತೇಕರ ಎಲ್ಲಾ ವೈಯುಕ್ತಿಕ ಮಾಹಿತಿ ಸ್ಮಾರ್ಟ್‌ಫೋನ್‌ನಲ್ಲಿದೆ. ಬ್ಯಾಂಕಿಂಗ್ ವಿವರ, ಖಾತೆ, ಇಮೇಲ್, ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲಾ ಖಾಸಗಿ ಮಾಹಿತಿಗಳು ಸ್ಮಾರ್ಟ್‌ಫೋನ್‌ನಲ್ಲಿರುತ್ತದೆ. ಹೀಗಾಗಿ ಹ್ಯಾಕರ್ಸ್ ಸ್ಮಾರ್ಟ್‌ಫೋನ್ ಮೇಲೆ ಹದ್ದಿನ ಕಣ್ಣಿಟ್ಟಿರುತ್ತಾರೆ. ಸಣ್ಣ ಸುಳಿವುಸ ಮಾಹಿತಿ ಸಿಕ್ಕರೆ ಸಾಕು, ಟಾರ್ಗೆಟ್ ಮಾಡಿದ ವ್ಯಕ್ತಿಗಳ ಫೋನ್ ಹ್ಯಾಕ್ ಮಾಡಿ ಮಾಹಿತಿ ಕದಿಯುತ್ತಾರೆ. ಸ್ಕ್ರೀನ್ ರೆಕಾರ್ಡ್ ಮಾಡಿ ಬ್ಲಾಕ್‌ಮೇಲ್ ಮಾಡುತ್ತಾರೆ. ಹ್ಯಾಕರ್ಸ್ ಸ್ಪೈವೇರ್ ಸಾಫ್ಟ್‌ವೇರ್(spyware software) ಬಳಸಿ ದೂರದಿಂದಲೇ ಅಥವಾ ವಿದೇಶಗಳಿಂದ ಸ್ಕ್ರೀನ್ ರೆಕಾರ್ಡಿಂಗ್ ಮಾಡುತ್ತಾರೆ. ಹೀಗೆ ಹ್ಯಾಕರ್ಸ್ ಸ್ಕ್ರೀನ್ ರೆಕಾರ್ಡಿಂಗ್ ಮಾಡುತ್ತಿದ್ದರೆ ನಿಮ್ಮ ಫೋನ್ ಕೆಲ ಸಿಗ್ನಲ್ ನೀಡಲಿದೆ. 

Latest Videos

ರಾಮ ಮಂದಿರ ಸೇರಿ ದೇಶದ 264 ವೆಬ್‌ಸೈಟ್ ಹ್ಯಾಕ್‌ಗೆ ಯತ್ನ, ಪಾಕ್-ಚೀನಾ ಹ್ಯಾಕರ್ಸ್ ಕುತಂತ್ರ!

ಗ್ರೀನ್ ಕಲರ್ ನೋಟಿಫಿಕೇಶನ್ ಲೈಟ್
ನಿಮ್ಮ ಸ್ಮಾರ್ಟ್‌ಫೋನ್ ರಹಸ್ಯವಾಗಿ ಯಾರಾದರೂ ಸ್ಕ್ರೀನ್ ರೆಕಾರ್ಡಿಂಗ್ ಮಾಡುತ್ತಿದ್ದರೆ, ಮೈಕ್ ಹಾಗೂ ಕ್ಯಾಮೆರಾ ಆನ್ ಆಗಿರುತ್ತದೆ.ಇವೆರಡು ಆನ್ ಆಗಿದ್ದರೆ ಗ್ರೀನ್ ಕಲರ್ ನೋಟಿಫಿಕೇಶನ್ ಲೈಟ್ ಕಾಣಲಿದೆ. 

ಫೋನ್ ಮೈಕ್ ಸಿಗ್ನಲ್
ಸ್ಮಾರ್ಟ್‌ಫೋನ್ ಸ್ಕ್ರೀನ್‌ನಲ್ಲಿ ನೀವು ಆನ್ ಮಾಡದೆ ಅಥವಾ ಬಳಕೆ ಮಾಡದೆ ಇದ್ದರೂ ಫೋನ್ ಮೈಕ್ ಆನ್ ಸಿಗ್ನಲ್ ನೀಡಿದ್ದರೂ ರಹಸ್ಯವಾಗಿ ರೆಕಾರ್ಡಿಂಗ್ ಆಗುತ್ತಿದೆ ಎಂದರ್ಥ.

ಕ್ಯಾಮೆರಾ ಐಕಾನ್ ಬಳಿ ಬ್ರಾಕೆಟ್
ಲಿಂಕ್ ಮೂಲಕ ಅಥವಾ ಸುರಕ್ಷಿತವಲ್ಲದ ಆ್ಯಪ್ ಮೂಲಕ ಹ್ಯಾಕರ್ಸ್ ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಕ್ ಮಾಡಿ ಸ್ಕ್ರೀನ್ ರೆಕಾರ್ಡಿಂಗ್ ಮಾಡುತ್ತಿದ್ದರೆ, ಕ್ಯಾಮರಾ ಐಕಾನ್ ಬಳಿ ಬ್ರಾಕೆಟ್ ಸಿಂಬಲ್ ತೋರಿಸಲಿದೆ. 

ಸ್ಕ್ರೀನ್ ರೆಕಾರ್ಡಿಂಗ್ ಆಗುತ್ತಿದ್ದರೆ ಏನು ಮಾಡಬೇಕು?
ರಹಸ್ಯವಾಗಿ ಯಾರಾದರೂ ನಿಮ್ಮ ಸ್ಮಾರ್ಟ್‌ಫೋನ್ ಸ್ಕ್ರೀನ್ ರೆಕಾರ್ಡ್ ಮಾಡುತ್ತಿದ್ದರೆ ಫೋನ್ ನೀಡುವ ಸಿಗ್ನಲ್ ಕುರಿತು ನಿರ್ಲಕ್ಷಿಸಿಬೇಡಿ. ಗೊತ್ತಿಲ್ಲದೆ, ಸುರಕ್ಷಿತವಲ್ಲ, ಫಾರ್ವರ್ಡ್ ಲಿಂಕ್ ಕ್ಲಿಕ್ ಮಾಡಬೇಡಿ ಅಥವಾ ಓಪನ್ ಮಾಡಬೇಡಿ. ತಕ್ಷಣವೇ ಫೋನ್ ಸೆಟ್ಟಿಂಗ್ಸ್‌ಗೆ ತೆರಳಿ, ಯಾವುದಾದರು ಆ್ಯಪ್‌ಗೆ ರೆಕಾರ್ಡಿಂಗ್ ಅನುಮತಿ ನೀಡಿದ್ದೀರಾ ಎಂದು ಪರಿಶೀಲಿಸಿ. ಇತರ ಯಾವುದೇ ರೆಕಾರ್ಡಿಂಗ್ ಆಯ್ಕೆಯನ್ನು ಕ್ಲಿಕ್ ಮಾಡಿದ್ದೀರಾ ಎಂದು ಪರಿಶೀಲಿಸಿ. ಹ್ಯಾಕರ್ಸ್ ಮಾಡಿದ್ದರೆ ಎಲ್ಲವನ್ನೂ ಆಫ್ ಮಾಡಿ. ಅನಗತ್ಯ ಆ್ಯಪ್‌ಗಳು ಡೌನ್ಲೋಡ್ ಆಗಿದೆಯಾ ಅನ್ನೋದು ಪರಿಶೀಲಿಸಿಕೊಳ್ಳಿ. ನಿಮ್ಮ ಸ್ಮಾರ್ಟ್‌ಫೋನ್ ಸ್ಕ್ರೀನ್ ಮೇಲ್ಬಾಗದಲ್ಲಿನ ಪ್ರತಿಯೊಂದು ಸಿಗ್ನಲ್ ನಿರ್ಲಕ್ಷಿಸಬೇಡಿ. ನಿಮಗೆ ಅರಿವಿಲ್ಲದಂತೆ ಅಥವಾ ನೀವು ಮಾಡದೆ ಯಾವುದೇ ಸಿಗ್ನಲ್ ನೀಡುತ್ತಿದ್ದರೂ ಎಚ್ಚೆತ್ತುಕೊಳ್ಳಿ.

ಅನಗತ್ಯ ಆ್ಯಪ್‌ಗಳನ್ನು ಡೌನ್ಲೋಡ್ ಮಾಡಬೇಡಿ. ಅಧಿಕೃತವಲ್ಲದ, ಸುರಕ್ಷತೆ ಮಾನದಂಡಗಳಿಲ್ಲದ ಲಿಂಕ್ ಕ್ಲಿಕ್ ಅಥವಾ ಆ್ಯಪ್ ಡೌನ್ಲೋಡ್ ಮಾಡುವುದು ಅಪಾಯಕ್ಕೆ ಅಹ್ವಾನ ನೀಡಿದಂತೆ. ಈ ರೀತಿಯ ಆ್ಯಪ್ ಅಥವಾ ಲಿಂಕ್ ಮೂಲಕ ಹ್ಯಾಕರ್ಸ್ ಸುಲಭವಾಗಿ ಫೋನ್ ಹ್ಯಾಕ್ ಮಾಡಲು ಸಾಧ್ಯವಿದೆ. ಹೀಗಾಗಿ ನಿಮ್ಮ ಫೋನ್‌ನಲ್ಲಿ ಯಾವ ಆ್ಯಪ್‌ಗಳಿವೆ ಅನ್ನೋದು ಗೊತ್ತಿರಲಿ. ನೀವು ಬಳಸುತ್ತಿರುವ ಆ್ಯಪ್ ಗೂಗಲ್ ಪ್ಲೇ ಸ್ಟೋರ್ ರ್ಯಾಂಕ್ ಮಾಡಿದೆಯಾ ಅನ್ನೋದು ಪರಿಶೀಲಿಸುವುದು ಉತ್ತಮ. 

Viral Instagram Trend ನಿಮ್ಮ ವೈಯಕ್ತಿಕ ಡೇಟಾ ಹ್ಯಾಕರ್‌ ಕೈ ಸೇರಬಹುದು ಜೋಕೆ!
 

click me!