ಹೊಸ ನಿಯಮ ಒಪ್ಪದೇ ಇದ್ರೂ ಫೆ.8ಕ್ಕೆ ವಾಟ್ಸಾಪ್‌ ನಿಷ್ಕ್ರಿಯವಿಲ್ಲ!

By Suvarna NewsFirst Published Jan 17, 2021, 7:45 AM IST
Highlights

ಹೊಸ ನಿಯಮ ಒಪ್ಪದೇ ಇದ್ರೂ ಫೆ.8ಕ್ಕೆ ವಾಟ್ಸಾಪ್‌ ನಿಷ್ಕ್ರಿಯವಿಲ್ಲ| ಬಳಕೆದಾರರ ಆಕ್ರೋಶಕ್ಕೆ ಮಣಿದ ವಾಟ್ಸಾಪ್‌| ಹೊಸ ನೀತಿ ಜಾರಿ 3 ತಿಂಗಳು ಮುಂದೂಡಿಕೆ

ನವದೆಹಲಿ(ಜ.17): ಬಳಕೆದಾರರ ಮಾಹಿತಿಯನ್ನು ಮಾತೃ ಸಂಸ್ಥೆ ಫೇಸ್‌ಬುಕ್‌ನೊಂದಿಗೆ ಹಂಚಿಕೊಳ್ಳುವ ನಿರ್ಧಾರವನ್ನು ವಾಟ್ಸಾಪ್‌ ಸಂಸ್ಥೆ 3 ತಿಂಗಳು ಮುಂದೂಡಿದೆ. ಹೀಗಾಗಿ ಹೊಸ ನೀತಿ ಒಪ್ಪದೇ ಹೋದಲ್ಲಿ ಫೆ.8ರಿಂದ ವಾಟ್ಸಾಪ್‌ ಆ್ಯಪ್‌ ನಿಷ್ಕಿ್ರಯವಾಗದು ಎಂದು ಕಂಪನಿ ಸ್ಪಷ್ಟಪಡಿಸಿದೆ.

ಬಳಕೆದಾರರ ಖಾಸಗಿ ಮಾಹಿತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳುವ ಈ ನೀತಿಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹಲವು ಜಾಗತಿಕ ಉದ್ಯಮಿಗಳೇ ಈ ನೀತಿಯನ್ನು ಬಹಿರಂಗವಾಗಿ ಪ್ರಶ್ನಿಸಿದ್ದರು. ಅಲ್ಲದೆ ವಾಟ್ಸಾಪ್‌ ರದ್ದು ಮಾಡಿ ಸಿಗ್ನಲ್‌, ಟೆಲಿಗ್ರಾಂನಂಥ ಆ್ಯಪ್‌ ಬಳಕೆಗೆ ಕರೆ ಕೊಟ್ಟಿದ್ದರು. ಅದರ ಬೆನ್ನಲ್ಲೇ ವಾಟ್ಸಾಪ್‌ ತನ್ನ ಹೊಸ ನೀತಿ ಜಾರಿಯನ್ನು 3 ತಿಂಗಳು ಮುಂದೂಡಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕಂಪನಿ, ನಮ್ಮ ಹೊಸ ನೀತಿಯ ಬಗ್ಗೆ ಜನಸಾಮಾನ್ಯರಲ್ಲಿ ಸಾಕಷ್ಟುಗೊಂದಲ ಮೂಡಿದೆ. ವಾಟ್ಸಾಪ್‌ನಲ್ಲಿ ಗ್ರಾಹಕರ ಖಾಸಗಿತನ ಮತ್ತು ಭದ್ರತೆ ಬಗ್ಗೆ ನಾವು ಇನ್ನಷ್ಟುಅರಿವು ಮೂಡಿಸಬೇಕಿದೆ. ಮುಂದಿನ ದಿನಗಳಲ್ಲಿ ಗೊಂದಲ ನಿವಾರಿಸಲು ನಾವು ಸಾಕಷ್ಟುಕ್ರಮ ಕೈಗೊಳ್ಳಲಿದ್ದೇವೆ. ಹೀಗಾಗಿಯೇ ನಾವು ಹೊಸ ಬಿಸಿನೆಸ್‌ ಆ್ಯಪ್ಷನ್‌ ಅನ್ನು ಮೇ 15ರಿಂದ ಜಾರಿಗೊಳಿಸಲು ನಿರ್ಧರಿಸಿದ್ದೇವೆ. ಹೀಗಾಗಿ ಅಲ್ಲಿಯವರೆಗೂ ಹಿಂದಿನ ನೀತಿಯೇ ಮುಂದುವರೆಯಲಿದೆ. ವಾಟ್ಸಾಪ್‌ ಖಾತೆ ರದ್ದಾಗದು ಎಂದು ತಿಳಿಸಿದೆ.

click me!