ವಾಟ್ಸಾಪ್‌ನ ಹೊಸ ಫೀಚರ್‌, ಬಳಕೆದಾರರಿಗೆ ನೆಮ್ಮದಿ!

By Suvarna NewsFirst Published Jan 16, 2021, 2:59 PM IST
Highlights

ವಿಶ್ವದ ಅತ್ಯಂತ ಜನಪ್ರಿಯ ಸೋಷಿಯಲ್‌ ಮೀಡಿಯಾ ತಾಣ ವಾಟ್ಸಾಪ್| ಶೀಘ್ರವೇ ತನ್ನ ಬಳಕೆದಾರರಿಗೆ ಹೊಸ ಫೀಚರ್ ನೀಡಲಿದೆ ವಾಟ್ಸಾಪ್| ಹೊಸ ಸೌಲಭ್ಯ ಕಲ್ಪಿಸಲು ಮುಂದಾದ ವಾಟ್ಸಾಪ್

ನವದೆಹಲಿ(ಜ.16): ವಿಶ್ವದ ಅತ್ಯಂತ ಜನಪ್ರಿಯ ಸೋಷಿಯಲ್‌ ಮೀಡಿಯಾ ತಾಣಗಳ ಪೈಕಿ ಒಂದಾದ ವಾಟ್ಸಾಪ್‌, ಶೀಘ್ರವೇ ತನ್ನ ಬಳಕೆದಾರರಿಗೆ ‘ರೀಡ್‌ ಲೇಟರ್‌’ (ಆಮೇಲೆ ಓದಿ) ಎಂಬ ಹೊಸ ಸೌಲಭ್ಯ ಕಲ್ಪಿಸಲು ಮುಂದಾಗಿದೆ.

ಪ್ರಸಕ್ತ ಬಳಕೆದಾರರು ತಾವು ತಕ್ಷಣವೇ ಓದಲು ಬಯಸದ ಚಾಟ್‌ಗಳನ್ನು ಆರ್ಚಿವ್‌್ಡ ಚಾಟ್ಸ್‌ನಲ್ಲಿ ಸಂಗ್ರಹಿಸಬಹುದಿತ್ತು. ಆದರೆ ಹೊಸ ಸಂದೇಶಗಳು ಬಂದಾಗಲೆಲ್ಲಾ ಅದು ಮೊಬೈಲ್‌ನಲ್ಲಿ ಪಾಪಪ್‌ ಆಗುತ್ತಲೇ ಇತ್ತು. ಹೀಗಾಗಿ ಆರ್ಚಿವ್‌್ಡ ಚಾಟ್ಸ್‌ನ ಮೂಲ ಉದ್ದೇಶ ಸಾಕಾರಗೊಂಡಿರಲಿಲ್ಲ. ಹೀಗಾಗಿ ಇದೀಗ ‘ರೀಡ್‌ ಲೇಟರ್‌’ ಎಂಬ ಹೊಸ ವ್ಯವಸ್ಥೆಯೊಂದನ್ನು ವಾಟ್ಸಾಪ್‌ ತನ್ನ ಬಳಕೆದಾರರಿಗೆ ಕಲ್ಪಿಸಿಕೊಡಲು ಮುಂದಾಗಿದೆ.

ಒಮ್ಮೆ ಬಳಕೆದಾರರು ಈ ಆಪ್ಷನ್‌ ಅನ್ನು ಆಯ್ಕೆ ಮಾಡಿಕೊಂಡರೆ, ಮುಂದೆ ಅದರಿಂದ ಹೊರಗೆ ಬರುವವರೆಗೂ, ಮೊಬೈಲ್‌ಗೆ ಬರುವ ಸಂದೇಶಗಳೆಲ್ಲವೂ ‘ರೀಡ್‌ ಲೇಟರ್‌’ ವಿಭಾಗದಲ್ಲಿ ಸೇವ್‌ ಆಗಿರುತ್ತದೆ. ಬಳಿಕ ಗ್ರಾಹಕರು ತಮಗೆ ಸಾಧ್ಯವಾದ ಸಮಯದಲ್ಲಿ ಅವುಗಳನ್ನು ಓದಿಕೊಳ್ಳಬಹುದು.

click me!