ಸ್ಮಾರ್ಟ್ ಮಾಸ್ಕ್ ಗೊತ್ತಾ ನಿಮಗೆ? ಗೊತ್ತಿಲ್ಲ ಎಂದರೆ ಓದಿ...

Suvarna News   | Asianet News
Published : Jan 14, 2021, 04:18 PM IST
ಸ್ಮಾರ್ಟ್ ಮಾಸ್ಕ್ ಗೊತ್ತಾ ನಿಮಗೆ? ಗೊತ್ತಿಲ್ಲ ಎಂದರೆ ಓದಿ...

ಸಾರಾಂಶ

ಮಾಸ್ಕ್‌ನಲ್ಲಿ ಎಂಥ ಸ್ಮಾರ್ಟ್‌ನೆಸ್ ಇರಲು ಸಾಧ್ಯ ಅಲ್ಲವೇ? ಅದೊಂದು ವೈರಸ್‌ಗಳನ್ನು ನಿಯಂತ್ರಿಸಲು ಮಾಡಿರುವ ಸಿಂಪಲ್ ಸಾಧನ ಎಂದು ಹೇಳಬಹುದು. ಆದರೆ, ರೇಜರ್ ಕಂಪನಿ ಮಾತ್ರ ತಾನು ಸಿದ್ಧಪಡಿಸಿದ ಪ್ರಾಜೆಕ್ಟ್ ಹ್ಯಾಜೆಲ್ ಎಂಬ ಮಾಸ್ಕ್ ಅನ್ನು ಜಗತ್ತಿನ ಅತ್ಯಂತ ಸ್ಮಾರ್ಟ್ ಮಾಸ್ಕ್ ಎಂದು ಹೇಳಿಕೊಂಡಿದೆ.  

ಇಡೀ ಜಗತ್ತೇ ಸ್ಮಾರ್ಟ್‌ ಯುಗದಲ್ಲಿದೆ. ಕೈಯಲ್ಲಿರುವ ವಾಚ್, ಸ್ಮಾರ್ಟ್‌ಫೋನ್‌ನಿಂದ ಹಿಡಿದು ಬೆಳಗ್ಗೆ ಎದ್ದು ಹಲ್ಲುಜ್ಜುವ ಬ್ರಶ್‌ವರೆಗೂ ಎಲ್ಲವೂ  ಸ್ಮಾರ್ಟ್. ಹೀಗಿರಬೇಕಾದರೆ, ಕೋವಿಡ್ ಸೋಂಕು ರಕ್ಷಣೆಗೆ ಧರಿಸಿಕೊಳ್ಳುವ ಮಾಸ್ಕ್ ಯಾಕೆ ಸ್ಮಾರ್ಟ್‌ ಆಗಬಾರದು? ಖಂಡಿತ ಯಾಕಿಲ್ಲ, ರೇಜರ್ ಕಂಪನಿ ಇಂಥದೊಂದು ಸ್ಮಾರ್ಟ್ ಮಾಸ್ಕ್ ತಯಾರಿಸಿದೆ. ಹಾಗಾಗಿ, ಇದು ಜಗತ್ತಿನ ಸ್ಮಾರ್ಟೆಸ್ಟ್ ಮಾಸ್ಕ್ ಎಂದು ಹೇಳಬಹುದು.

ಕೋವಿಡ್ ಸಾಂಕ್ರಾಮಿಕವಾಗಿ ಇಡೀ ಜಗತ್ತನ್ನು ಆವರಿಸಿಕೊಂಡಾಗ ಸೋಂಕಿನಿಂದ ಪಾರಾಗಲು ವೈದ್ಯಲೋಕ ಸೂಚಿಸಿದ್ದೇ ಮಾಸ್ಕ್ ಅನ್ನು. ಕೋವಿಡ್ ಸಾಂಕ್ರಾಮಿಕ ವಿರುದ್ಧ ವೈಜ್ಞಾನಿಕವಾದ ಮತ್ತು ಸ್ಮಾರ್ಟ್ ಆದ ಮಾಸ್ಕ್ ತಯಾರಿಸುವ ಪ್ರಯತ್ನದಲ್ಲಿ ರೇಜರ್ ಯಶಸ್ವಿಯಾಗಿದೆ. ಪ್ರಮಾಣೀಕೃತ ವೈದ್ಯಕೀಯ ಮಾಸ್ಕ್‌ಗಳನ್ನು ತಯಾರಿಸಲು ಅದರ ಉತ್ಪಾದನಾ ಸೌಲಭ್ಯಗಳನ್ನು ಪರಿವರ್ತಿಸುತ್ತದೆ. ಪ್ರಾಜೆಕ್ಟ್ ಹ್ಯಾಜೆಲ್ ಈ ಉಪಕ್ರಮದ ಸ್ವಾಭಾವಿಕ ವಿಕಾಸವಾಗಿದ್ದು, ಇದು ಮಾಸ್ಕ್‌ಗಳ ರಕ್ಷಣಾತ್ಮಕ ಸ್ವರೂಪವನ್ನು ಮಾತ್ರವಲ್ಲದೆ ಬಿಸಾಡಬಹುದಾದ ವಸ್ತುಗಳ ಪರಿಸರೀಯ ಸಮಸ್ಯೆಗಳನ್ನು ಸಹ ಪರಿಹರಿಸುತ್ತದೆ. ಅದೇ ಸಮಯದಲ್ಲಿ ಬಹು-ಬಳಕೆಯ ಮಲ್ಟಿ ಲೇಯರ್‌ ಮಾಸ್ಕ್ ನಿಮ್ಮನ್ನು ವೈರಾಣುಗಳಿಂದ ದೂರವಿಡಲು ಕೂಡ ಪ್ರಯತ್ನಿಸುತ್ತದೆ.

ಬಿಸ್ಸೆನ್ನೆಲ್‌ನ 599 ರೂ. ಪ್ಲ್ಯಾನ್‌ನಲ್ಲಿ ನಿತ್ಯ 5 ಜಿಬಿ ಡೇಟಾ!

ರೇಜರ್ ಪ್ರಾಜೆಕ್ಟ್ ಹ್ಯಾಜೆಲ್, ಎನ್95 ಮೆಡಿಕಲ್ ದರ್ಜೆಯ ಉಸಿರಾಟ ವ್ಯವಸ್ಥೆಯು ತೆಗೆದು ಹಾಕುವ ಮತ್ತು ರಿಚಾರ್ಜ್‌ ಮಾಡಲು ಸಕ್ರಿಯ ವೆಂಟಿಲೆಟರ್‌ಗಳನ್ನು ಒಳಗೊಂಡಿದೆ ಮತ್ತು ಸೂಕ್ತವಾದ ಉಸಿರಾಟಕ್ಕಾಗಿ ಗಾಳಿಯ ಹರಿವನ್ನು ನಿಯಂತ್ರಿಸುವ ಕೆಲಸವನ್ನು ಈ  ಸ್ಮಾರ್ಟ್‌ಪಾಡ್‌ಗಳು ಮಾಡುತ್ತವೆ.

ಮಾಸ್ಕ್‌ನಲ್ಲಿ ಅಳವಡಿಸಲಾಗಿರುವ ಹೈ ಬ್ಯಾಕ್ಟಿರಿಯಾ ಫಿಲ್ಟರ್ಷನ್ ಎಫಿಶಿಯನ್ಸಿ(ಬಿಎಫ್ಐ) ಸ್ಮಾರ್ಟ್ ಫಿಲ್ಟರ್ ಕನಿಷ್ಠ ಶೇ.95ರಷ್ಟು ವಾಯುಮೂಲದ ವೈರಾಣುಗಳನ್ನು ಸೋಸುತ್ತದೆ ಮತ್ತು ಹೆಚ್ಚಿನ ದ್ರವ ಪ್ರತಿರೋಧ ವ್ಯವಸ್ಥೆಯನ್ನು ಹೊಂದಿದೆ, ಜೊತೆಗೆ, ಸಾಮಾಜಿಕ ಸಂಪರ್ಕ, ಸಂವಹನವನ್ನು ಕಾಯ್ದುಕೊಳ್ಳಲು ನೆರವಾಗುವಂಥ ಪಾರದರ್ಶಕವಾದ ವಿನ್ಯಾಸವನ್ನು ಮಾಡಲಾಗಿದೆ. ಈ ಸ್ಮಾರ್ಟ್ ಮಾಸ್ಕ್ ಧರಿಸಿವದವರನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರ ಮುಗಳ್ನಗು ಮತ್ತು ನಗುವನ್ನು ಗುರುತಿಸಬಹುದು. ತುಟಿ ಚಲನೆಯನ್ನು ಕೂಡ ಗುರುತಿಸಬಹುದು ಅಷ್ಟು ಇದು ಪಾದರ್ಶಕವಾಗಿದೆ. ಜೊತೆಗೆ ಆಂತರಿಕ ದೀಪಗಳು ಕತ್ತಲೆಯಲ್ಲಿ ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುತ್ತವೆ, ಬೆಳಕಿನ ಪರಿಸ್ಥಿತಿಗಳನ್ನು ಲೆಕ್ಕಿಸದೆ ಧರಿಸಿದವರು ತಮ್ಮನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲು ಅನುವು ಮಾಡಿಕೊಡುತ್ತದೆ ಈ ಸ್ಮಾರ್ಟ್ ಮಾಸ್ಕು.

ಈ ಹೊಸ ಮಾದರಿಯ ಸ್ಮಾರ್ಟ್ ಮಾಸ್ಕ್ ನಿಮ್ಮ ಧ್ವನಿಯನ್ನು ಆವರಿಸಿಕೊಳ್ಳಬಹುದು. ವಾಯ್ಸ್ಆಂಪ್ ಟೆಕ್ನಾಲಿಜಿಯು ಇನ್ ಬಿಲ್ಟ್ ಆಗಿರುವ ಮೈಕ್ರೋಫೋನ್ ಅನ್ನು ಬಳಸಿಕೊಂಡು, ಸಂಹವನದ ಸ್ಪಷ್ಟತೆಗಾಗಿ ಬಳಕೆದಾರರ ಮಾತುಗಳನ್ನು ಸೌಂಡ್ ಅನ್ನು ಇನ್ನಷ್ಟು ಹೆಚ್ಚಿಸಿ ಎದುರಿನ ಕೇಳುಗಿರುವ ಸ್ಪಷ್ಟವಾಗಿ ಕೇಳುವಂತೆ ಮಾಡುತ್ತದೆ. ಜೊತೆಗೆ ರಕ್ಷಣೆ ಮತ್ತು ಸೋಷಿಯಲ್ ಡಿಸ್ಟನ್ಸ್‌ನಂಥ ಉಪ್ರಕ್ರಮಗಳ ಇದರಿಂದ ಸಾಧ್ಯವಾಗುತ್ತದೆ.

New Sensation: ವಾಟ್ಸಾಪ್ ಹಿಂದಿಕ್ಕುವ ಸಿಗ್ನಲ್

ಸಿಲಿಕಾನ್ ಲೈನ್ಡ್ ಈ ಸ್ಮಾರ್ಟ್ ಮಾಸ್ಕ್ ನಿಮಗೆ ಅನುಕೂಲಕರ ವಾತಾವರಣ ಮತ್ತು ಗಾಳಿಯನ್ನು ತಂಪಾಗಿಸುತ್ತದೆ ಮತ್ತು ಅದನ್ನು ನಿಯಂತ್ರಿಸುತ್ತದೆ ಮತ್ತು ತಾಜಾ ಗಾಳಿಯನ್ನು ಒಳಕ್ಕೆ ಬಿಟ್ಟು ಇಂಗಾಲವನ್ನು ಹೊರಕ್ಕೆ ಕಳುಹಿಸುವ ವ್ಯವಸ್ಥೆಯನ್ನು ಮಾಸ್ಕ್ ಮಾಡುತ್ತದೆ.

ಈ ಮಾಸ್ಕ್ ಅನ್ನು ಮರುಬಳಸಿದ ಪ್ಲ್ಯಾಸ್ಟಿಕ್‌ನಿಂದ ಮಾಡಲಾಗಿದ್ದು ವಾಟರ್‌ಪ್ರೂಫ್ ಮತ್ತು ಗೀರು ಬೀಳುವುದನ್ನು ನಿಯಂತ್ರಿಸುತ್ತದೆ. ಇದರಲ್ಲಿರುವ ಫಿಲ್ಟರ್ ಮತ್ತು ವೆಂಟಿಲೆಟರ್‌ಗಳನ್ನು ಬದಲಿಸಬಹುದಾಗಿದೆ.

ಪ್ರಾಜೆಕ್ಟ್ ಹ್ಯಾಜೆಲ್ ಮಾಸ್ಕ್ ಸದ್ಯಕ್ಕೆ ಒಂದು ಮಾದರಿಯಾಗಿದ್ದು, ಈವರೆಗೆ ಸಿದ್ಧಪಡಿಸಲಾದ ಜಗತ್ತಿನ ಅತ್ಯಂತ ಸ್ಮಾರ್ಟ್ ಮಾಸ್ಕ್ ಎಂದು ರೇಜರ್ ಹೇಳಿಕೊಂಡಿದೆ. ಈ ಮಾಸ್ಕ್ ಸುರಕ್ಷತೆ, ಸಾಮಾಜಿಕ, ಸುಸ್ಥಿರ, ಆರಾಮದಾಯಕ ಹಾಗೂ ವೈಯಕ್ತಿಕ ಎಂಬ ಐದು ಅಂಶಗಳ ಮೇಲೆ ಕೇಂದ್ರಿತಗೊಂಡಿದೆ. ಇದು ವೈರಲೆಸ್ ಚಾರ್ಜಿಂಗ್ ಆಪ್ಷನೊಂದಿಗೆ ಬರುತ್ತದೆ. ಬ್ಯಾಟರಿ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ತಿಳಿಸಿಕೊಡಲು ಕೆಂಪು ಮತ್ತು ಹಸಿರು ಬಣ್ಣಗಳನ್ನು ಹೊಂದಿದೆ.

ಮಾಸ್ಕ್ ಎನ್ನುವುದು ಕೇವಲ ಮೂರ್ನಾಲ್ಕು ಲೇಯರ್  ಬಟ್ಟೆಯ ಸಾಧನವಲ್ಲ ಎಂಬುದನ್ನು ಈ ರೇಜರ್‌ನ ಪ್ರಾಜೆಕ್ಟ್ ಹ್ಯಾಜೆಲ್ ತೋರಿಸಿ ಕೊಟ್ಟಿದೆ.

ನೋಕಿಯಾ 7.3 ಸ್ಮಾರ್ಟ್‌ಫೋನ್‌ನಲ್ಲಿ ಪವರ್‌‌ಫುಲ್ ಬ್ಯಾಟರಿ

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್
ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?