ಈ ಫೋಟೋಗಳನ್ನು ಹಂಚಿಕೊಂಡ ಸಾಮಾಜಿಕ ಜಾಲತಾಣ ಬಳಕೆದಾರರು ಇದು ನಿಜವೆಂದು ತಿಳಿದು ಶೇರ್ ಮಾಡಿದರು. ಆದರೆ, ಇದು ಡಿಜಿಟಲ್ ಆಗಿ ಮಾರ್ಪಡಿಸಲಾಗಿದೆ.
ನವದೆಹಲಿ (ಜನವರಿ 23, 2024): ಸೋಮವಾರ ನಡೆದ ಭವ್ಯ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭದಲ್ಲಿ ಅಯೋಧ್ಯೆಯಲ್ಲಿ ಸಾವಿರಾರು ಜನರು ಬೀದಿಗಳಲ್ಲಿ ನೃತ್ಯ ಮಾಡಿದರು, ಕೇಸರಿ ಧ್ವಜಗಳು ರಾರಾಜಿಸುತ್ತಿದ್ದವು ಮತ್ತು ಜೈ ಶ್ರೀರಾಮ್ ಮುಂತಾದ ಘೋಷಣೆಗಳನ್ನು ಕೂಗಿದರು. ಹಾಗೆ, ಸಹಸ್ರ ಸಹಸ್ರ ಮಂದಿ ಆನ್‌ಲೈನ್‌ನಲ್ಲಿ ಸಮಾರಂಭವನ್ನು ನೇರಪ್ರಸಾರ ವೀಕ್ಷಿಸಿದರು.
ಈ ಸಂತಸದ ಜತೆಗೆ, ಹಲವಾರು ನಕಲಿ ಮತ್ತು ಡಿಜಿಟಲ್ ಆಗಿ ಮಾರ್ಪಡಿಸಿರೋ (Digitally Altered) ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗ್ತಿದ್ದು, ಸಾಕಷ್ಟು ಜನರ ಗಮನ ಸೆಳೆದಿದೆ. ಅವುಗಳಲ್ಲಿ ಒಂದು ದುಬೈನ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಭಗವಾನ್ ರಾಮನ ಫೋಟೋಗಳನ್ನು ಪ್ರೊಜೆಕ್ಟರ್‌ನಲ್ಲಿ ಪ್ರದರ್ಶಿಸಲಾಗಿದೆ. ಎಂಬುದು. ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಎರಡು ಮಿಲಿಯನ್‌ಗೂಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ ಮತ್ತು ಆನ್‌ಲೈನ್‌ನಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.
undefined
ಮುಗುಳ್ನಕ್ಕೂ ತಲೆಯಲ್ಲಾಡಿಸುವ ರಾಮಲಲ್ಲಾ: ಮೈ ರೋಮಾಂಚನಗೊಳಿಸುತ್ತಿದೆ ಎಐ ಸೃಷ್ಟಿಸಿದ ವೀಡಿಯೋ
ಈ ಫೋಟೋ ಹೊಳೆಯುತ್ತಿರುವ ಬುರ್ಜ್ ಖಲೀಫಾವನ್ನು ತೋರಿಸುತ್ತದೆ ಮತ್ತು ಭಗವಾನ್ ರಾಮ ಋಷಿಯಂತೆ ಧರಿಸಿರುವ ಫೋಟೋ ಹಾಗೂ ಇತರೆ ಫೋಟೋಗಳನ್ನು ತೋರಿಸುತ್ತದೆ (ರಾಮನ ವನವಾಸದ ವರ್ಷಗಳನ್ನು ಚಿತ್ರಿಸುತ್ತದೆ) ಜೊತೆಗೆ 'ಜೈ ಶ್ರೀ ರಾಮ್' ಎಂದು ಬರೆಯಲಾಗಿದೆ.
ಈ ಫೋಟೋಗಳನ್ನು ಹಂಚಿಕೊಂಡ ಸಾಮಾಜಿಕ ಜಾಲತಾಣ ಬಳಕೆದಾರರು ಇದು ನಿಜವೆಂದು ತಿಳಿದು ಶೇರ್ ಮಾಡಿದರು. ಆದರೆ, ಕೆಲವರು ಈ ಫೋಟೋ ನಿಜವೇ ಎಂದೂ ಪ್ರಶ್ನಿಸಿದ್ದರು. ಅಲ್ಲದೆ, ಇದು ಫೋಟೋಶಾಪ್ ಅಲ್ಲ, ಆದರೆ, ಇದನ್ನು ಡಿಜಿಟಲ್ ಆಗಿ ಮಾರ್ಪಡಿಸಲಾಗಿದೆ. ಜೈ ಶ್ರೀ ರಾಮ್ ಎಂದು ಕೆಲ ಬಳಕೆದಾರರು ಹೇಳಿದ್ದರು.
ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಇದನ್ನು ಹುಡುಕಿದರೆ ಈ ಫೋಟೋ ಅಸಲಿಯಲ್ಲ ಎಂದು ತಿಳಿದುಬರುತ್ತದೆ. ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದಿಂದ ಯಾವುದೇ ಸಂದರ್ಭವನ್ನು ಆಚರಿಸಿದಾಗ, ಚಿತ್ರಗಳನ್ನು ಅದರ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಹಂಚಿಕೊಳ್ಳಲಾಗುತ್ತದೆ. ಆದರೆ ಅಂತಹ ಯಾವುದೇ ಪೋಸ್ಟ್ ಅನ್ನು ಅದರ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಹಂಚಿಕೊಂಡಿಲ್ಲ.
ಇದೇ ರೀತಿಯ ಘಟನೆಯು ಏಪ್ರಿಲ್ 2023 ರಲ್ಲೂ ನಡೆದಿತ್ತು, ಆದರೆ ಅದು ಕೂಡ ನಕಲಿ ಎಂದು ತಿಳಿದುಬಂದಿತ್ತು. ಈ ಮಧ್ಯೆ, ಹೊಸ ರಾಮ್ ಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸಿದ ಒಂದು ದಿನದ ನಂತರ ಅಯೋಧ್ಯೆಯ ರಾಮ ಮಂದಿರದ ಬಾಗಿಲು ಮಂಗಳವಾರ ಸಾರ್ವಜನಿಕರಿಗೆ ತೆರೆಯಿತು. ಸೋಮವಾರ ತಡರಾತ್ರಿಯಿಂದಲೇ ಸ್ಥಳೀಯರು ಹಾಗೂ ಇತರೆ ರಾಜ್ಯಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ಮುಖ್ಯದ್ವಾರದ ಹೊರಗೆ ಜಮಾಯಿಸಿ ಆವರಣ ಪ್ರವೇಶಿಸಲು ಕಾಯುತ್ತಿದ್ದರು. ದೇವಸ್ಥಾನದ ಬಾಗಿಲು ತೆರೆಯುವ ಮುನ್ನ ಕೊರೆಯುವ ಚಳಿಯಲ್ಲಿ ಗಂಟೆಗಟ್ಟಲೆ ಕಾಯಬೇಕಾಯಿತು.
ಭೂಮಿಯ ಮೇಲಿನ ಅತ್ಯಂತ ಅದೃಷ್ಟಶಾಲಿ ವ್ಯಕ್ತಿ ನಾನು: ಅರುಣ್ ಯೋಗಿರಾಜ್