
ನವದೆಹಲಿ(ಜ.16): ದೇಶದ ಪ್ರಮುಖ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ಅಸ್ತಿತ್ವದಲ್ಲಿರುವ ಮತ್ತು ಹೊಸ ಗ್ರಾಹಕರಿಗೆ ಗಣರಾಜ್ಯೋತ್ಸವದ ಆಫರ್ ಘೋಷಿಸಿದೆ. 3 ಸಾವಿರ ರೂಪಾಯಿ ಗೆಲ್ಲುವ ಕೂಪರ್ , ಅಜಿಯೋ, ಟಿರಾ, ಸ್ವಿಗ್ಗಿ ಸೇರಿದಂತೆ ಹಲವು ಆಫರ್ ಘೋಷಿಸಿದೆ. ಜಿಯೋ ಆಫರ್‌ನಲ್ಲಿ ಗ್ರಾಹಕರು 2999 ರೂಪಾಯಿಗೆ ರೀಚಾರ್ಜ್ ಮಾಡಿದರೆ 3,000 ರೂಪಾಯಿಗಿಂತಲೂ ಹೆಚ್ಚಿನ ಮೌಲ್ಯದ ಕೂಪನ್‌ಗಳನ್ನು ಪಡೆಯುತ್ತಾರೆ. ಈ ಕೂಪನ್‌ಗಳನ್ನು ಶಾಪಿಂಗ್, ಪ್ರಯಾಣ ಮತ್ತು ಆಹಾರದ ಬಿಲ್‌ಗಳನ್ನು ಪಾವತಿಸಲು ಬಳಸಬಹುದು. ಗ್ರಾಹಕರು ಜಿಯೋ ಯೋಜನೆಯನ್ನು ರೀಚಾರ್ಜ್ ಮಾಡಿದ ಮೇಲೆ ಅವರು ಸ್ವೀಕರಿಸುವ ಕೂಪನ್‌ಗಳು ತಕ್ಷಣವೇ ಮೈಜಿಯೋ ಅಪ್ಲಿಕೇಷನ್‌ನಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಅಂದ ಹಾಗೆ ಈ ಆಫರ್ ಅನ್ನು ಜನವರಿ 31ರ ವರೆಗೆ ಮಾತ್ರ ಪಡೆಯಬಹುದು.
ಗ್ರಾಹಕರು ರಿಲಯನ್ಸ್‌ನ ಅಜಿಯೋ (AJIO) ಅಪ್ಲಿಕೇಷನ್‌ನಿಂದ ಕನಿಷ್ಠ 2499 ರೂಪಾಯಿ ಮೌಲ್ಯದ ಖರೀದಿಯನ್ನು ಮಾಡಿದರೆ ಅದರ ಮೇಲೆ 500 ರೂಪಾಯಿಯ ರಿಯಾಯಿತಿಯನ್ನು ಪಡೆಯುತ್ತಾರೆ. ಅಲ್ಲದೆ, ಗ್ರಾಹಕರು ‘ಟಿರಾ’ದಿಂದ ಸೌಂದರ್ಯ ಉತ್ಪನ್ನಗಳನ್ನು ಖರೀದಿಸಲು ಶೇ 30ರಷ್ಟು ರಿಯಾಯಿತಿಯನ್ನು ಪಡೆಯುತ್ತಾರೆ. ಇದು ಗರಿಷ್ಠ 1000 ರೂಪಾಯಿ ದೊರೆಯುತ್ತದೆ. ರಿಲಯನ್ಸ್ ಡಿಜಿಟಲ್‌ನಿಂದ ಕನಿಷ್ಠ 5000 ರೂಪಾಯಿಗಳ ಖರೀದಿಗೆ ಶೇ 10ರಷ್ಟು ರಿಯಾಯಿತಿ ಲಭ್ಯವಿರುತ್ತದೆ, ರಿಲಯನ್ಸ್ ಡಿಜಿಟಲ್‌ನಲ್ಲಿ ಗರಿಷ್ಠ ರಿಯಾಯಿತಿ ಮಿತಿ 10,000 ರೂಪಾಯಿಗಳಿಗೆ ಸೀಮಿತವಾಗಿದೆ.
ಜಿಯೋದಿಂದ ಹೊಸ ರೀಚಾರ್ಜ್ ಪ್ಲಾನ್; ಅತೀ ಕಡಿಮೆ ಬೆಲೆಗೆ ಅನ್‌ಲಿಮಿಡೆಟ್ ಕಾಲ್, ದಿನಕ್ಕೆ 3GB ಡೇಟಾ!
ಇನ್ನು ಪ್ರಯಾಣ ಬಗ್ಗೆ ತಿಳಿಯುವುದಾದರೆ, ಇಕ್ಸಿಗೋ (ixigo) ಮೂಲಕ ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸಿದರೆ ರೂ. 1500ರ ವರೆಗೆ ರಿಯಾಯಿತಿ ಪಡೆಯಬಹುದು. ಒಬ್ಬ ಪ್ರಯಾಣಿಕರಿಗೆ 500 ರೂ., ಇಬ್ಬರು ಪ್ರಯಾಣಿಕರಿಗೆ 1000 ರೂ. ಮತ್ತು ಮೂವರು ಪ್ರಯಾಣಿಕರಿಗೆ 1500 ರೂ.ಗಳ ರಿಯಾಯಿತಿಯನ್ನು ನಿಗದಿಪಡಿಸಲಾಗಿದೆ. ಸ್ವಿಗ್ಗಿ (Swiggy) ಅಪ್ಲಿಕೇಷನ್ ಮೂಲಕ ಆಹಾರವನ್ನು ಬುಕ್ ಮಾಡುವ ಮೂಲಕ ಆಹಾರಪ್ರಿಯರು 125 ರೂಪಾಯಿಗಳವರೆಗೆ ರಿಯಾಯಿತಿಯನ್ನು ಪಡೆಯಬಹುದು. ಆದರೆ ಆರ್ಡರ್ ಕನಿಷ್ಠ 299 ರೂ.ಗೆ ಮಾಡಬೇಕಾಗುತ್ತದೆ.
ಹೆಚ್ಚಿನ ಕೂಪನ್‌ಗಳನ್ನು ಗೆಲ್ಲಲು ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯಿಂದ ಎಷ್ಟು ಬೇಕೋ ಅಷ್ಟು ರೀಚಾರ್ಜ್‌ಗಳನ್ನು ಮಾಡಬಹುದು. ಈ ಆಫರ್ ಅಡಿಯಲ್ಲಿ ಗೆದ್ದ ಕೂಪನ್‌ಗಳನ್ನು ಮತ್ತೊಂದು ಜಿಯೋ ಸಂಖ್ಯೆಗೆ ವರ್ಗಾಯಿಸಲು ಆಗುವುದಿಲ್ಲ. ಆದರೆ ಕೂಪನ್‌ಗಳನ್ನು ಸ್ನೇಹಿತರು/ಕುಟುಂಬದ ಸದಸ್ಯರ ಜತೆಗೆ ಹಂಚಿಕೊಳ್ಳಬಹುದು.
ಶೀಘ್ರದಲ್ಲೇ ಮ್ಯೂಚುವಲ್ ಫಂಡ್ ಕ್ಷೇತ್ರ ಪ್ರವೇಶಿಸಲು ಮುಖೇಶ್ ಅಂಬಾನಿ ಸಿದ್ಧತೆ;ಬ್ಲಾಕ್ ರಾಕ್ ಜೊತೆಗೆ ಒಪ್ಪಂದ
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.