
ದೆಹಲಿ (ನ.07) ಭಾರತೀಯ ಒಟಿಟಿ (OTT) ಮನರಂಜನಾ ಕ್ಷೇತ್ರದಲ್ಲಿ ಪ್ರಾದೇಶಿಕ ಭಾಷೆಯ ಸಿನಿಮಾಗಳು ಹಾಗೂ ವೆಬ್ ಸೀರೀಸ್‌ಗಳಿಗೆ ದಿನೇದಿನೆ ಬೇಡಿಕೆ ಹೆಚ್ಚಿಸಿಕೊಳ್ಳಿುತ್ತಿದೆ. ಇದರ ಬೆನ್ನಲ್ಲೇ ವಿ ಟೆಲಿಕಾಂ ಸಂಸ್ಥೆ (Vi) ವಿ ಮೂವೀಸ್ ಅಂಡ್ ಟಿವಿ (Vi Movies & TV) ಮೂಲಕ ಪ್ರಾದೇಶಿಕ ಮನರಂಜನಾ ಕೊಡುಗೆ ವಿಸ್ತರಿಸಿದೆ. ಪ್ರಾದೇಶಿಕ ಒಟಿಟಿ ಪ್ರಿಯರಿಗಾಗಿ ಭಾರತದ ಅತ್ಯಂತ ಅಗ್ಗದ ಹಾಗೂ ಕೈಗೆಟುಕುವ ದರದ ಆಡ್-ಆನ್ ಪ್ಯಾಕ್ ಕೇವಲ 35ರೂಪಾಯಿಗೆ ಪರಿಚಯಿಸಿಸಿದೆ. ಈ ಮೂಲಕ ದೀಪಾವಳಿ ಸಿಹಿ ನೀಡಿದೆ.
ಹೊಸ ಆಫರ್ ಪ್ರೀಮಿಯಂ ದರ್ಜೆಯ ಪ್ರಾದೇಶಿಕ ಮನರಂಜನೆಯನ್ನು ಪ್ರತಿಯೊಬ್ಬರಿಗೂ ಸುಲಭವಾಗಿ ತಲುಪಿಸುವ ಉದ್ದೇಶವನ್ನು ಹೊಂದಿದೆ. ಈ ಯೋಜನೆಯ ಮೂಲಕ ಅರ್ಹ ವಿ ಪ್ರೀಪೇಯ್ಡ್ (Vi Prepaid) ಗ್ರಾಹಕರು 9 ಭಾಷೆಗಳನ್ನು ಒಳಗೊಂಡ 6 ಪ್ರಮುಖ ಒಟಿಟಿ ಪ್ಲಾಟ್‌ಫಾರ್ಮ್‌ಗಳ ಪಟ್ಟಿಯಿಂದ ತಮಗೆ ಇಷ್ಟವಾದ ಯಾವುದೇ 2 ಒಟಿಟಿಗಳನ್ನು ಆಯ್ಕೆ ಮಾಡಿಕೊಳ್ಳುವ ಮುಕ್ತ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ.
ಮೊಬೈಲ್ ಬಳಕೆದಾರರಿಗೆ ಮಾತ್ರ ಅನ್ವಯವಾಗುವ ಈ ₹35ರ ಆಡ್-ಆನ್ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಟಿಡಿ ಹೊಂದಿದೆ. ಇದರೊಂದಿಗೆ ಆಯ್ಕೆ ಮಾಡಿದ 2 ಪ್ರಾದೇಶಿಕ ಒಟಿಟಿಗಳ ವೀಕ್ಷಣೆಯ ಜೊತೆಗೆ 7 ದಿನಗಳ ವ್ಯಾಲಿಡಿಟಿ ಹೊಂದಿರುವ 1GB ಉಚಿತ ಡೇಟಾ ಸೌಲಭ್ಯವೂ ಲಭ್ಯವಾಗಲಿದೆ. ಸಕ್ರಿಯ ಸೇವಾ ಮಾನ್ಯತೆ (Active Service Validity) ಹೊಂದಿರುವ ಅರ್ಹ ವಿ ಪ್ರೀಪೇಯ್ಡ್ ಗ್ರಾಹಕರಿಗೆ ಮಾತ್ರ ಈ ಕೊಡುಗೆ ಸಿಗಲಿದೆ.
ಗ್ರಾಹಕರು ತಮ್ಮ 'ವಿ ಆ್ಯಪ್' (Vi App) ಅಥವಾ ಯಾವುದೇ ಥರ್ಡ್-ಪಾರ್ಟಿ ರೀಚಾರ್ಜ್ ಆ್ಯಪ್‌ಗಳ (Google Pay, PhonePe ಇತ್ಯಾದಿ) ಮೂಲಕ ₹35ರ ಪ್ಯಾಕ್ ರೀಚಾರ್ಜ್ ಮಾಡಿಕೊಳ್ಳಬಹುದು. ರೀಚಾರ್ಜ್ ಯಶಸ್ವಿಯಾದ ನಂತರ 'ವಿ ಮೂವೀಸ್ ಅಂಡ್ ಟಿವಿ' (Vi Movies & TV) ಆ್ಯಪ್‌ಗೆ ತಮ್ಮ ವಿ ಮೊಬೈಲ್ ಸಂಖ್ಯೆಯನ್ನು ಬಳಸಿ ಲಾಗಿನ್ ಆಗಬೇಕು. ಅಲ್ಲಿ ಲಭ್ಯವಿರುವ 6 ಒಟಿಟಿಗಳಲ್ಲಿ ತಮಗೆ ಇಷ್ಟವಾದ 2 ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಆಯ್ಕೆ ಮಾಡುವ ಮೂಲಕ ಈ ಯೋಜನೆಯನ್ನು ತಕ್ಷಣವೇ ಸಕ್ರಿಯಗೊಳಿಸಿಕೊಳ್ಳಬಹುದು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.