ಎಲಾನ್ ಮಸ್ಕ್, ಸ್ಯಾಮ್ ಆಲ್ಟಮನ್, ಆರ್ಯಭಟ, ಮೊಗ್ಯಾಂಬೋ ಸೇರಿದಂತೆ ಯಾರದ್ದು ಬೇಕು ಹೇಳಿ, ಅವರೆಲ್ಲಾ ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್‌ನ್ನು ಚಾಟ್‌ಜಿಪಿಟಿ ಸೃಷ್ಟಿಸಿದೆ. ಘಿಬ್ಲಿ ಆರ್ಟ್ ರೀತಿ ಇದೀಗ ನಕಲಿ ಕಾರ್ಡ್ ವೈರಲ್ ಆಗುತ್ತಿದೆ.
ನವದೆಹಲಿ(ಏ.04) ಚಾಟ್‌ಜಿಪಿಟಿ ಇತ್ತೀಚೆಗೆ ಹೊರತಂದ ಘಿಬ್ಲಿ ಫೀಚರ್ ಭಾರಿ ವೈರಲ್ ಆಗಿದೆ. ಎಲ್ಲರೂ ತಮ್ಮ ತಮ್ಮ ಘಿಬ್ಲಿ ಇಮೇಜ್ ಸೃಷ್ಟಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಫೀಚರ್ ಒಂದನ್ನು ಎಲ್ಲರೂ ಬಳಸಿಕೊಂಡರು ಅಷ್ಟೇ. ಆದರೆ ಇದೀಗ ಇದೇ ಚಾಟ್‌ಜಿಪಿಟಿಯನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಇದೀಗ ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ಸೃಷ್ಟಿಸಿದ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ಎಲಾನ್ ಮಸ್ಕ್, ಆರ್ಯಭಟ, ಮೊಗ್ಯಾಂಬೋ, ಸ್ಯಾಮ್ ಆಲ್ಟ್‌ಮನ್ ಸೇರಿದಂತೆ ಹಲರ ನಕಲಿ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಇದೀಗ ವೈರಲ್ ಆಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್
ಘಿಬ್ಲಿ ಬಳಿಕ ಇದೀಗ ಸೋಶಿಯಲ್ ಮೀಡಿಯಾದಲ್ಲಿ ನಕಲಿ ಕಾರ್ಡ್ ವೈರಲ್ ಆಗುತ್ತಿದೆ. ಹಲವರು ವಿಶ್ವದ ದಿಗ್ಗಜರು, ಉದ್ಯಮಿಗಳು, ಕ್ರೀಡಾಪಟುಗಳ ನಕಲಿ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಸೃಷ್ಟಿಸಿ ಪೋಸ್ಟ್ ಮಾಡಲಾಗುತ್ತಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತಮಾಷೆಗಾಗಿ ನಕಲಿ ಕಾರ್ಡ್ ಪೋಸ್ಟ್ ಮಾಡಲಾಗುತ್ತಿದೆ. ಫುಟ್ಬಾಲ್ ಪಟು ಕ್ರಿಸ್ಟಿಯಾನೋ ರೋನಾಲ್ಡೋ ಸೇರಿದಂತೆ ಹಲವರನ ನಕಲಿ ಆಧಾರ್ ಕಾರ್ಡ್ ಪೋಸ್ಟ್ ಆಗಿದೆ.
ಘಿಬ್ಲಿ ಕಲಾ ಚಿತ್ರ ಬಿಡಿಸಬೇಕಾ? ChatGPT 4o ಮೂಲಕ ಅದ್ಭುತ AI ಇಮೇಜ್ ರಚಿಸಿ
ಅಸಲಿಯಂತೆ ನಕಲಿ
ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಉತ್ತಮ ನಿಜ. ಆದರೆ ದುರುಪಯೋಗ ಸಾಧ್ಯತೆ ಹೆಚ್ಚು ಮಾತು ಮತ್ತೆ ಮತ್ತೆ ಸಾಬೀತಾಗುತ್ತಿದೆ. GPT-4o ಇದೀಗ ಆತಂಕ ಹೆಚ್ಚಿಸುತ್ತಿದೆ. ಘಿಬ್ಲಿ ಇಮೇಜ್ ಬೆನ್ನಲ್ಲೇ ಇದೀಗ ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ಮಾಡಿ ಪೋಸ್ಟ್ ಮಾಡಲಾಗುತ್ತಿದೆ. ಇದೇ ChatGPT 4o ಬಳಸಿಕೊಂಡು ಯಾರು ಬೇಕಾದರೂ ತಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್ ಸೃಷ್ಟಿಸುವಂತೆ ಮಾಡಿದೆ. ಇದು ಒಂದು ನಿಮಿಷದ ಕೆಲಸ. ಮೇಲ್ನೋಟಕ್ಕೆ ಒಂದು ಚೂರು ವ್ಯತ್ಯಾಸ ಕಾಣುವುದಿಲ್ಲ. ಕೇವಲ ಕಚೇರಿ ಡೇಟಾಗಳಲ್ಲಿ ದಾಖಲೆ ಇರುವುದಿಲ್ಲ ಅಷ್ಟೆ.
ChatGPT is generating fake Aadhaar and PAN cards instantly, which is a serious security risk.
This is why AI should be regulated to a certain extent. pic.twitter.com/4bsKWEkJGr
ನಕಲಿ ಕಾರ್ಡ್‌ನಿಂದ ಆತಂಕ
ದೀಗ ಚಾಟ್‌ಜಿಪಿಟಿ ಮೂಲಕ ನಕಲಿ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಅಥವಾ ಗುರುತಿನ ಚೀಟಿಯನ್ನು ಸುಲಭವಾಗಿ ಮಾಡಿಕೊಂಡು ಭಾರತದೊಳಗೆ ಅಕ್ರಮವಾಗಿ ನುಸುಳಿಸಿದರೆ ಪರಿಣಾಮ ಏನು? ಭಾರತದ ಅಧಾರ್ ಕಾರ್ಡ್ ಈ ಚಾಟ್‌ಜಿಪಿ ಫೀಚರ್‌ನಿಂದ ದುರಪಯೋಗವಾಗುವ ಸಾಧ್ಯತೆ ಹೆಚ್ಚು. ಈ ಆತಂಕ ಇದೀಗ ಮನೆ ಮಾಡಿದೆ. ಚಾಟ್‌ಜಿಪಿಟಿ ಹೊಸ ಫೀಚರ್ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿದೆ. ಭಾರತಕ್ಕೆ ಇದು ಅತ್ಯಂತ ಸವಾಲಾಗಿ ಪರಿಣಮಿಸುತ್ತದೆ.
ಮೋದಿ, ಸಚಿನ್, ಕಾಮತ್;ಎಲ್ಲರೂ ಘಿಬ್ಲಿ ಇಮೇಜ್ ಹಿಂದೆ ಓಡಿದ ಕಾರಣ ಮೊದಲ ಬಾರಿ ChatGPT ಡೌನ್