ವ್ಯಾಟ್ಸಾಪ್ ಸ್ಟೇಟಸ್ ಹಾಕಿದ ಬಳಿಕ ಯಾರು ನೋಡಿದ್ದಾರೆ? ಎಷ್ಟು ಲೈಕ್ಸ್ ಬಂದಿದೆ, ಯಾರು ಪ್ರತಿಕ್ರಿಯಿಸಿದ್ದಾರೆ ಎಂದು ನೋಡೋದರಲ್ಲೇ ಆನಂದ ಇದೆ. ಇದೀಗ ನಿಮ್ಮ ವ್ಯಾಟ್ಸಾಪ್ ಸ್ಟೇಟಸ್ ಯಾರು ನೋಡಬೇಕು ಅನ್ನೋದನ್ನು ನೀವೇ ಆಯ್ಕೆ ಮಾಡುವ ಫೀಚರ್ ಇದೆ.
ನವದೆಹಲಿ(ಏ.02) ವ್ಯಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸ ಹೊಸ ಫೀಚರ್ಸ್ ನೀಡುತ್ತಿದೆ. ವ್ಯಾಟ್ಸಾಪ್ ಫೀಚರ್ಸ್ ಪೈಕಿ ಸ್ಟೇಟಸ್ ಅತೀ ಜನಪ್ರಿಯ. ಹಲವರು ಪ್ರತಿ ದಿನ ಸ್ಟೇಟಸ್ ಹಾಕಿಕೊಳ್ಳುತ್ತಾರೆ. ಕೆಲವು ಬಾರಿ ತಮ್ಮ ಪ್ರೀತಿ ಪಾತ್ರ ನೋಡಲಿ ಎಂದೇ ಸ್ಟೇಟಸ್ ಹಾಕಿಕೊಳ್ಳುತ್ತಾರೆ. ಪರೋಕ್ಷ ಸಂದೇಶಗಳನ್ನು ರವಾನಿಸುತ್ತಾರೆ. ಇದೀಗ ವ್ಯಾಟ್ಸಾಪ್ ಮತ್ತಷ್ಟು ಫೀಚರ್ ಈ ಸ್ಟೇಟಸ್‌ನಲ್ಲಿ ನೀಡುತ್ತಿದೆ. ಬಳಕೆದಾರರ ಪ್ರೈವೈಸಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ವ್ಯಾಟ್ಸಾಪ್ ಇದೀಗ ಸ್ಟೇಟಸ್ ಯಾರು ನೋಡಬೇಕು ಅನ್ನೋು ಫೀಚರ್ ಹೊರತಂದಿದೆ. ಈ ಫೀಚರ್ ಮೂಲಕ ಬಳಕೆದಾರರು ತಮ್ಮ ವ್ಯಾಟ್ಸಾಪ್ ಸ್ಟೇಟಸ್‌ನ್ನು ಯಾರೆಲ್ಲಾ ನೋಡಬೇಕು, ಯಾರು ನೋಡಬಾರದು ಅನ್ನೋದನ್ನು ನಿಯಂತ್ರಿಸಲು ಸಾಧ್ಯವಿದೆ.
ವ್ಯಾಟ್ಸಾಪ್ ಸ್ಟೇಟಸ್ ಪ್ರೈವಸಿ
ವ್ಯಾಟ್ಸಾಪ್ ಸ್ಟೇಟಸ್‌ನಲ್ಲಿ ಹಲವು ಬಾರಿ ಪ್ರೈವಸಿ ಅಗತ್ಯವಿದೆ. ಹಲವು ಬಳಕೆದಾರರು ವ್ಯಾಟ್ಸಾಪ್‌ಗೆ ಈ ಬೇಡಿಕೆ ಮುಂದಿಟ್ಟಿದ್ದರು. ಈ ಕುರಿತು ಹಲವು ಟ್ರೋಲ್, ಮೀಮ್ಸ್ ಕೂಡ ಹರಿದಾಡಿತ್ತು. ಕಾರಣ ಕಚೇರಿಯಲ್ಲಿ ಸುಳ್ಳು ಹೇಳಿ ಅಥವಾ ಬೇರೆ ಕಾರಣ ನೀಡಿ ಟ್ರಿಪ್, ವೆಕೇಶನ್ ಹೋಗಿ ಬಳಿಕ ವ್ಯಾಟ್ಸಾಪ್ ಸ್ಟೇಟಸ್ ಮೂಲಕ ಜಗಜ್ಜಾಹೀರಾದ ಘಟನೆಗಳು ಸಾಕಷ್ಟು ನಡೆದಿದೆ. ಆದರೆ ವ್ಯಾಟ್ಸಾಪ್ ಸ್ಟೇಟಸ್ ಪ್ರೈವೈಸಿ ಮಾಡಿಕೊಂಡರೆ ಈ ಸಮಸ್ಯೆ ಎದುರಾಗುವುದಿಲ್ಲ. ಕಾರಣ ನಿಮ್ಮ ವ್ಯಾಟ್ಸಾಪ್ ಸ್ಟೇಟಸ್‌ನ್ನು ಪ್ರೀತಿ ಪಾತ್ರರು ಮಾತ್ರ ನೋಡಬೇಕು ಎಂದಾದರೆ ಸೆಟ್ಟಿಂಗ್‌ನಲ್ಲಿ ಬದಲಾಯಿಸಿಕೊಂಡರೆ ಮುಗೀತು. ಈ ವೇಳೆ ಸ್ಟೇಟಸ್ ಏನೇ ಹಾಕಿದರೂ ಕಚೇರಿಯ ಸಹೋದ್ಯೋಗಿಗಳಿಗೆ, ಮ್ಯಾನೇಜರ್ ಸೇರಿದಂತೆ ಇತರರಿಗೆ ಕಾಣುವುದಿಲ್ಲ.
Whatsapp ಬಳಸ್ತಿರೋ 97% ಜನರಿಗೆ ಈ ಎಂಟು ಫೀಚರ್ಸ್ ಇರೋದು ಗೊತ್ತೇ ಇಲ್ಲ! ಗೊತ್ತಾದ್ರೆ ಬೆರಗಾಗ್ತೀರಾ!
ಪ್ರೈವಸಿ ಸೆಟ್ಟಿಂಗ್ ಆ್ಯಕ್ಟೀವೇಟ್ ಮಾಡುವುದು ಹೇಗೆ?
ನಿಮ್ಮ ವ್ಯಾಟ್ಸಾಪ್ ಸ್ಟೇಟಸ್ ಯಾರು ನೋಡಬೇಕು ಅನ್ನೋದನ್ನು ನೀವು ನಿರ್ಧರಿಸುವುದು ಸುಲಭ. ವ್ಯಾಟ್ಸಾಪ್ ಸೆಟ್ಟಿಂಗ್ಸ್ ಮೂಲಕ ಪ್ರವೈಸಿ ಆಯ್ಕೆಯನ್ನು ಟ್ಯಾಪ್ ಮಾಡಬೇಕು. ಇಲ್ಲಿ ಲಾಸ್ಟ್ ಸೀನ್ ಹಾಗೂ ಆನ್‌ಲೈನ್ ಆಯ್ಕೆಯನ್ನ ಟ್ಯಾಪ್ ಮಾಡಿಕೊಳ್ಳಬೇಕು. ಇಲ್ಲಿ ಮೂರು ಆಯ್ಕೆಗಳು ಲಭ್ಯವಿದೆ. ಒಂದು ಎಲ್ಲರು ಸ್ಟೇಟಸ್ ನೋಡುವ ಆಯ್ಕೆ( ಎವ್ರಿಒನ್), ಇನ್ನು ಎರಡನೇ ಆಯ್ಕೆ ಮೈ ಕಾಂಟಾಕ್ಟ್. ಈ ಆಯ್ಕೆಯಲ್ಲಿ ನಿಮ್ಮ ಫೋನ್‌ನಲ್ಲಿರುವ ಕಾಂಟಾಕ್ಟ್ ಲಿಸ್ಟ್‌ನ ಎಲ್ಲರಿಗೂ ಸ್ಟೇಟಸ್ ಕಾಣಲಿದೆ. ಇನ್ನು ಮೂರನೇ ಆಯ್ಕೆ ಮೈ ಕಾಂಟಾಕ್ಟ್ ಎಕ್ಸ್ಸೆಪ್ಟ್. ಈ ಆಯ್ಕೆಯಲ್ಲಿ ನಿಮ್ಮ ಕಾಂಟಾಕ್ಟ್ ಲಿಸ್ಟ್‌ನಲ್ಲಿರುವ ಯಾರು ನೋಡಬೇಕು ಅನ್ನೋದು ಆಯ್ಕೆ ಮಾಡಿಕೊಳ್ಳಬಹುದು.
ಮೂರನೇ ಆಯ್ಕೆ ಟ್ಯಾಪ್ ಮಾಡಿದರೆ, ಹಲವು ಆಯ್ಕೆ ಲಭ್ಯವಾಗಲಿದೆ. ನಿಮ್ಮ ಕಾಂಟಾಕ್ಟ್ ಲಿಸ್ಟ್, ಸೇವ್ ಮಾಡಿಕೊಳ್ಳುವಾಗ ಆಫೀಸ್, ಮನೆ ಎಂದು ವಿಭಾಗ ಮಾಡಿ ನಂಬರ್ ಸೇವ್ ಮಾಡಿದ್ದರೆ ಮತ್ತಷ್ಟು ಸುಲಭವಾಗಲಿದೆ. ಕಚೇರಿ ಎಂದು ಕ್ಲಿಕ್ ಮಾಡಿದರೆ ಕಚೇರಿ ಕಾಂಟಾಕ್ಟ್ ಲಿಸ್ಟ್‌ಗೆ ಮಾತ್ರ ವ್ಯಾಟ್ಸಾಪ್ ಸ್ಟೇಟಸ್ ಕಾಣಲಿದೆ. ಇನ್ನು ಪರ್ಸನಲ್ ಅಥವಾ ಇತರ ಕಾಂಟಾಕ್ಟ್ ಲಿಸ್ಟ್ ಆಯ್ಕೆ ಮಾಡಿಕೊಂಡರೆ ಕಚೇರಿ ಕಾಂಟಾಕ್ಟ್ ಬಿಟ್ಟು ಇನ್ನುಳಿದರಿಗೆ ಕಾಣಲಿದೆ. ಅಥವಾ ಇಂತಿಷ್ಟೇ ಮಂದಿಗೆ ಅನ್ನೋ ನಿರ್ಧಾರ ಮಾಡಿದ್ದರೆ, ಅದು ಕೂಡ ಸಾಧ್ಯವಿದೆ.
ವ್ಯಾಟ್ಸಾಪ್ ಈ ಪ್ರವೈಸಿ ಆಯ್ಕೆಯಿಂದ ಇದೀಗ ಬಳಕೆದಾರರಿಗೆ ನೆರವಾಗಲಿದೆ. ತಮ್ಮ ಖಾಸಗಿ ಸಮಯವನ್ನು ಸ್ಟೇಟಸ್ ಹಾಕಿ ಎಂಜಾಯ್ ಮಾಡಬಹುದು. ಯಾವುದೇ ಅಡ್ಡಿ ಆತಂಕವಿಲ್ಲದೆ ಸ್ಟೇಟಸ್ ಬಳಕೆ ಮಾಡಬಹುದು.
ವ್ಯಾಟ್ಸಾಪ್ ಈಗಾಗಲೇ ಹಲವು ಪ್ರೈವೈಸಿ ಅವಕಾಶ ನೀಡಿದೆ. ನಿಮ್ಮ ಫೋನ್‌ನಲ್ಲಿ ಕೆಲ ಚಾಟ್‌ಗಳನ್ನು ಪ್ರೈವೈಸಿ ಮಾಡಿಕೊಳ್ಳಬಹುದು. ಈ ಮೂಲಕ ನಿಮ್ಮ ವ್ಯಾಟ್ಸಾಪ್ ಖಾತೆ ತೆರೆದು ನೋಡಿದರೂ ಪ್ರೈವೈಸಿ ಮಾಡಿದ ಚಾಟ್‌ಗಳು ಯಾರಿಗೂ ಕಾಣುವುದಿಲ್ಲ. ಈ ರೀತಿ ಹಲವು ಫೀಚರ್ಸ್ ವ್ಯಾಟ್ಸಾಪ್ ನೀಡಿದೆ. ಈ ಮೂಲಕ ಬಳಕೆದಾರರ ಸುರಕ್ಷತೆ ಹಾಗೂ ಗೌಪ್ಯತೆಯನ್ನು ಕಾಪಾಡಿಕೊಂಡಿದೆ.
WhatsApp ಮ್ಯೂಸಿಕ್ ಶೇರ್ ಮಾಡೋ ಫೀಚರ್ ಆರಂಭ - ಹೇಗೆ ಕೆಲಸ ಮಾಡುತ್ತದೆ?