ಎಲ್ಲರೂ ತಮ್ಮದೂ ಒಂದು ಇರ್ಲಿ ಎಂದು ಘಿಬ್ಲಿ ಇಮೇಜ್ ಪೋಸ್ಟ್ ಮಾಡಿದ್ದಾರೆ. ಪರಿಣಾಮ ಇದೇ ಮೊದಲ ಬಾರಿಗೆ ಚಾಟ್‌ಜಿಪಿಟಿ ಡೌನ್ ಆಗಿದೆ. ಖುದ್ದು ಒಪನ್ ಎಐ ಸಿಇಒ ಮನವಿ ಮಾಡಿದರೂ ಇದೀಗ ಜನ ಘಿಬ್ಲಿ ಟ್ರೆಂಡ್‌ನಿಂದ ಹಿಂದೆ ಸರಿದಿಲ್ಲ.
ನವೆದೆಹಲಿ(ಮಾ.31) ಸೋಶಿಯಲ್ ಮೀಡಿಯಾ ಸೇರಿದಂತೆ ಡಿಜಿಟ್ ಪ್ಲಾಟ್‌ಫಾರ್ಮ್ ಎಲ್ಲೇ ನೋಡಿದರೂ ಎಲ್ಲರದ್ದು ಘಿಬ್ಲಿ ಇಮೇಜ್. ಸಚಿನ್ ತೆಂಡೂಲ್ಕರ್, ಪ್ರಧಾನಿ ಮೋದಿ, ನಿಖಿಲ್ ಕಾಮತ್ ಸೇರಿದಂತೆ ಹಲವರ ಘಿಬ್ಲಿ ಇಮೇಜ್ ವೈರಲ್ ಆಗಿದೆ. ಇನ್ನು ಎಲ್ಲರೂ ತಮ್ಮದೂ ಒಂದು ಇರಲಿ ಎಂದು ಘಿಬ್ಲಿ ಎಐ ಇಮೇಜ್ ಪೋಸ್ಟ್ ಮಾಡಿದ್ದಾರೆ. ಮಿತಿ ಮೀರಿದ ಘಿಬ್ಲಿ ಎಐ ಆರ್ಟ್ ಟ್ರೆಂಡ್‌ನಿಂದ ಇದೇ ಮೊದಲ ಬಾರಿಗೆ ಚಾಟ್‌ಜಿಪಿಟಿ ಸರ್ವರ್ ಡೌನ್ ಆಗಿದೆ. ಇದರಿಂದ ಬಳಕೆದಾರರು ಪರದಾಡಿದ್ದಾರೆ. ಇತ್ತ ಒಪನ್ ಎಔ ಸಿಇಒ ಸ್ಯಾಮ್ ಆಲ್ಟಮನ್ ಜನರಲ್ಲಿ ಮನವಿ ಮಾಡಿದರೂ ಇದೀಗ ಘಿಬ್ಲಿ ಎಐ ಟ್ರೆಂಡ್‌ನಿಂದ ಹಿಂದೆ ಸರಿಯುತ್ತಿಲ್ಲ.
ಹರಿಯಿತು ಘಿಬ್ಲಿ ಎಐ ಹೊಳೆ
ಒಪನ್ ಎಐ ಚಾಟ್‌ಜಿಪಿಟಿ ಇತ್ತೀಚೆಗೆ ಘಿಬ್ಲಿ ಆರ್ಟ್ ಎಐ ಇಮೇಜ್ ಫೀಚರ್ ಬಿಡುಗಡೆ ಮಾಡಿತ್ತು. GPT-4o ವರ್ಶನ್ ಕಳೆದ ಹಲವು ದಶಕಗಳಿಂದ ಜಪಾನ್‌ನ ಒಲ್ಡ್ ಸ್ಟುಡಿಯೋ ಹೊರತಂದ ಘಿಬ್ಲಿ ಆರ್ಟ್ ಇಮೇಜ್‌ಗೆ ಎಐ ಸ್ಪರ್ಶ ನೀಡಿತ್ತು. ಈ ಮೂಲಕ ಜನರು ಸುಲಭವಾಗಿ GPT-4o ಮೂಲಕ ಘಿಬ್ಲಿ ಆರ್ಟ್ ಎಐ ಇಮೇಜ್ ಸೃಷ್ಟಿಸಲು ಸಾಧ್ಯವಾಗುವಂತೆ ಮಾಡಿತ್ತು. ಈ ವರ್ಶನ್ ಬಿಡುಗಡೆಯಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಘಿಬ್ಲಿ ಹೊಳೆ ಹರಿದಿತ್ತು. ಅಷ್ಟರ ಮಟ್ಟಿಗೆ ಇದು ವೈರಲ್ ಆಗಿತ್ತು. ಇದರ ಪರಿಣಾಮ ಚಾಟ್‌ಜಿಪಿಟಿ ಡೌನ್ ಆಗಿದೆ. ಜರನು ಘಿಬ್ಲಿ ಟ್ರೆಂಡ್ ಹಿಂದೆ ಬಿದ್ದ ಕಾರಣ ಜಾಟ್‌ಜಿಪಿಟಿ ಜನರಿಗೆ ಸೇವೆ ನೀಡುವಲ್ಲಿ ತಾಂತ್ರಿಕ ಅಡಚಣೆ ಎದುರಿಸಿತ್ತು.
ಘಿಬ್ಲಿ ಕಲಾ ಚಿತ್ರ ಬಿಡಿಸಬೇಕಾ? ChatGPT 4o ಮೂಲಕ ಅದ್ಭುತ AI ಇಮೇಜ್ ರಚಿಸಿ
ನಮ್ಮ ತಂಡಕ್ಕೆ ಮಲಗಲು ಬಿಡಿ
ಭಾನುವಾರ ಹಲವು ಬಳಕೆದಾರರು ಚಾಟ್‌ಜಿಪಿಟಿ ಬಳಸಲು ಸಾಧ್ಯವಾಗದೆ ಹೈರಾಣಾಗಿದ್ದರು. ಈ ಕುರಿತು ಒಪನ್ ಎಐ ಎಂಜಿನೀಯರ್ಸ್ ಕಾರ್ಯಪ್ರವೃತ್ತರಾಗಿ ತಾಂತ್ರಿಕ ಸಮಸ್ಯೆ ಸರಿಪಡಿಸಿದ್ದಾರೆ. ಸದ್ಯ ಚಾಟ್‌ಜಿಪಿಟಿ ಬಳಕೆಗೆ ಮುಕ್ತವಾಗಿದೆ ಎಂದು ಒಪನ್ ಎಐ ಸ್ಪಷ್ಟಪಡಿಸಿದೆ. ಇದಕ್ಕೂ ಮೊದಲು ಒಪನ್ ಎಐ ಸಿಇಒ ಸ್ಯಾಮ್ ಆಲ್ಟ್‌ಮನ್ ಜನರಲ್ಲಿ ವಿಶೇಷ ಮನವಿಯೊಂದನ್ನು ಮಾಡಿದ್ದರು. ಘಿಬ್ಲಿ ಆರ್ಟ್ ಎಐ ಇಮೇಜ್‌ನಿಂದ ಹೆಚ್ಚಿನ ಜನರು ಎಐ ಮೇಲೆ ಮುಗಿಬಿದ್ದಿದ್ದಾರೆ. ಇದರಿಂದ ಸರ್ವರ್ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ. ನಮ್ಮ ತಾಂತ್ರಿಕ ತಂಡ ಹೆಚ್ಚು ಶ್ರಮವಹಿಸಿ ಕೆಲಸ ಮಾಡುತ್ತಿದೆ. ನಮ್ಮ ತಂಡಕ್ಕೆ ಮಲಗಲು ಬಿಡಿ. ಹೆಚ್ಚುವರಿ ಕೆಲಸದಿಂದ ಸುಸ್ತಾಗಿದ್ದಾರೆ ಎಂದು ಸ್ಯಾಮ್ ಆಲ್ಟಮನ್ ಮನವಿ ಮಾಡಿದ್ದರು. ಸ್ಯಾಮ್ ಆಲ್ಟ್‌ಮನ್ ಮನವಿ ಮಾಡಿದ ಕೆಲವೇ ಹೊತ್ತಲ್ಲಿ ಚಾಟ್‌ಜಿಪಿಟಿ ಸರ್ವರ್ ಕೆಲಸ ನಿಲ್ಲಿಸಿದೆ. ಬಳಿಕ ತಾಂತ್ರಿಕ ತಂಡ ಮುತುವರ್ಜಿ ವಹಿಸಿ ಈ ಸಮಸ್ಯೆ ಬಗೆಹರಿಸಿದೆ.
ತೆಂಡೂಲ್ಕರ್, ಮೋದಿ ಸೇರಿ ಹಲವರ ಇಮೇಜ್ ವೈರಲ್
AI ಜನರೇಟೆಡ್ ಘಿಬ್ಲಿ-ಶೈಲಿಯ ಫೋಟೋಗಳ ಜನಪ್ರಿಯತೆಯನ್ನು ಈ ಟ್ರೆಂಡ್ ಸಾಮಾನ್ಯ ಬಳಕೆದಾರರಿಗೆ ಮಾತ್ರ ಸೀಮಿತವಾಗಿಲ್ಲ, ಆದರೆ ಪ್ರಸಿದ್ಧ ವ್ಯಕ್ತಿಗಳು ಮತ್ತು ಕಂಪನಿಗಳು ಸಹ ಇದರಲ್ಲಿ ಭಾಗವಹಿಸಿವೆ. ಭಾರತದಲ್ಲಿ, ಪ್ರಧಾನಿ ನರೇಂದ್ರ ಮೋದಿ (PM Narendra Modi) ತಮ್ಮ ಘಿಬ್ಲಿ-ಶೈಲಿಯ ಚಿತ್ರವನ್ನು ಹಂಚಿಕೊಂಡಾಗ ಈ ಟ್ರೆಂಡ್ ಮತ್ತಷ್ಟು ಹೆಚ್ಚಾಯಿತು. MyGov ವೆಬ್‌ಸೈಟ್‌ನಿಂದ ಬಿಡುಗಡೆಯಾದ ಈ ಚಿತ್ರಗಳಲ್ಲಿ, ಮೋದಿ ಅವರನ್ನು ಅನಿಮೇಟೆಡ್ ಶೈಲಿಯಲ್ಲಿ ತೋರಿಸಲಾಗಿದೆ. ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ (Sachin Tendulkar) ಸಹ ಈ ಟ್ರೆಂಡ್‌ನಲ್ಲಿ ಭಾಗವಹಿಸಿದರು. 2011 ರ ವಿಶ್ವಕಪ್ (2011 ICC World Cup) ಗೆಲುವಿನ ಎರಡು ಘಿಬ್ಲಿ-ಶೈಲಿಯ AI ಚಿತ್ರಗಳನ್ನು ಹಂಚಿಕೊಂಡರು. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fadnavis) ಸಹ ಈ ಟ್ರೆಂಡ್‌ನಲ್ಲಿ ತಮ್ಮ ಹಾಜರಾತಿಯನ್ನು ದಾಖಲಿಸಿದ್ದಾರೆ. ಇನ್ನು ಉದ್ಯಮಿ ನಿಖಿಲ್ ಕಾಮತ್ ಸೇರಿದಂತೆ ಹಲವರ ಘಿಬ್ಲಿ ಶೈಲಿ ಇಮೇಜ್ ವೈರಲ್ ಆಗಿದೆ.
ಈಗ ಟ್ರೆಂಡ್‌ನಲ್ಲಿರೋ ಘಿಬ್ಲಿ ಶೈಲಿಯ AI ಫೋಟೋ ಕ್ರಿಯೇಟ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ..