UPI123Pay: ಫೀಚರ್‌ ಫೋನಲ್ಲಿ ಇಂಟರ್‌ನೆಟ್ ಇಲ್ಲದೆಯೇ ಹಣ ಪಾವತಿ ಮಾಡುವುದು ಹೇಗೆ?

By Suvarna News  |  First Published Mar 14, 2022, 12:22 PM IST

ದೇಶದಲ್ಲಿ 40 ಕೋಟಿಗೂ ಹೆಚ್ಚು ಫೀಚರ್ ಫೋನ್ ಮೊಬೈಲ್ ಚಂದಾದಾರರಿದ್ದು UPI123pay ಅಂತಹ ಬಳಕೆದಾರರಿಗೆ ಯುಪಿಐ ಬಳಸಲು ಅನುವು ಮಾಡಿಕೊಡುತ್ತದೆ. 


Tech Desk: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಕೀಪ್ಯಾಟಡ್‌ ಅಥವಾ ಫೀಚರ್‌ ಫೋನ್‌ಗಳಿಗಾಗಿ ಯುಪಿಐ 123ಪೇ ಎಂಬ    ಯುನಿಫೈಡ್‌ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಸೇವೆಯನ್ನು ಪ್ರಾರಂಭಿಸಿದೆ. ಪ್ರಸ್ತುತ, ಸ್ಮಾರ್ಟ್ ಫೋನ್‌ಗಳಲ್ಲಿ ಯುಪಿಐ ಬಳಿಕೆಗೆ  ಲಭ್ಯವಿದೆ. ದೇಶದಲ್ಲಿ 40 ಕೋಟಿಗೂ ಹೆಚ್ಚು ಫೀಚರ್ ಫೋನ್ ಮೊಬೈಲ್ ಚಂದಾದಾರರಿದ್ದು UPI123pay ಅಂತಹ ಬಳಕೆದಾರರಿಗೆ ಯುಪಿಐ ಬಳಸಲು ಅನುವು ಮಾಡಿಕೊಡುತ್ತದೆ.  ನಮ್ಮ ಫೋನ್‌ನಲ್ಲಿ UPI123 ಸೇವೆಯನ್ನು ಬಳಸಲು ಯುಪಿಐ ಐಡಿಯನ್ನು ರಚಿಸುವುದು ಮುಖ್ಯವಾಗಿದೆ.

ಫೋನ್‌ನಲ್ಲಿ ಯುಪಿಐ ಐಡಿಯನ್ನು ರಚಿಸಲು, *99# ಅನ್ನು ಡಯಲ್ ಮಾಡಿ, ನಿಮ್ಮ ಬ್ಯಾಂಕ್ ಹೆಸರನ್ನು ಆಯ್ಕೆಮಾಡಿ ಮತ್ತು ನಿಮ್ಮ ಡೆಬಿಟ್ ಕಾರ್ಡ್‌ನ ಕೊನೆಯ ಆರು ಅಂಕೆಗಳನ್ನು ಮತ್ತು ನಿಮ್ಮ ಕಾರ್ಡ್ ಎಕ್ಸಪೈರಿ ಸಂಖ್ಯೆಯನ್ನು ನಮೂದಿಸಿ. ಇದನ್ನು ಮಾಡಿದ ನಂತರ, ನಿಮ್ಮ ಯುಪಿಐ  ಪಿನ್  ನಮೂದಿಸಿ. ಈ ಬಳಿಕ ನಿಮ್ಮ ಯುಪಿಐ ಐಡಿಯನ್ನು ಸಕ್ರಿಯಗೊಳಿಸಲಾಗುತ್ತದೆ.

Tap to resize

Latest Videos

undefined

UPI123 ಬಳಸುವುದು ಹೇಗೆ?

1) ನಿಮ್ಮ ಫೋನ್‌ನಲ್ಲಿ IVR ಸಂಖ್ಯೆ 08045163666  ಡಯಲ್ ಮಾಡಿ.

2)IVR ಮೆನುವಿನಲ್ಲಿ, ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ.

3)ಈಗ, UPI ಜೊತೆಗೆ ಲಿಂಕ್ ಮಾಡಲಾದ ಬ್ಯಾಂಕನ್ನು ಆಯ್ಕೆಮಾಡಿ

4)ವಿವರಗಳನ್ನು ಖಚಿತಪಡಿಸಲು '1' ಒತ್ತಿರಿ.

5)ನಿಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಹಣವನ್ನು ಕಳುಹಿಸಲು '1' ಒತ್ತಿರಿ.

ಇದನ್ನೂ ಓದಿ: Nepal UPI Payments: ಡಿಜಿಟಲ್ ವಹಿವಾಟಿನಲ್ಲಿ ಮಹತ್ವದ ಹೆಜ್ಜೆ: ಇದೀಗ ನೇಪಾಳದಲ್ಲೂ ಭಾರತದ ಯುಪಿಐ ಎಂಟ್ರಿ!

6)ಸ್ವೀಕೃತದಾರರ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.

7)ವಿವರಗಳನ್ನು ದೃಢೀಕರಿಸಿ.

8)ಈಗ, ನೀವು ವರ್ಗಾಯಿಸಲು ಬಯಸುವ ಮೊತ್ತವನ್ನು ನಮೂದಿಸಿ.

9)ನಿಮ್ಮ UPI ಪಿನ್ ನಮೂದಿಸಿ ಮತ್ತು ಹಣ ವರ್ಗಾವಣೆಯನ್ನು ದೃಢೀಕರಿಸಿ.

UPI123 ‌ ಬಳಕೆದಾರರು ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ಪಾವತಿಗಳನ್ನು ಮಾಡಬಹುದು, ಯುಟಿಲಿಟಿ ಬಿಲ್‌ಗಳನ್ನು ಪಾವತಿಸಬಹುದು, ತಮ್ಮ ವಾಹನಗಳ ಫಾಸ್ಟ್ ಟ್ಯಾಗ್‌ಗಳನ್ನು ರೀಚಾರ್ಜ್ ಮಾಡಬಹುದು, ಮೊಬೈಲ್ ಬಿಲ್‌ಗಳನ್ನು ಪಾವತಿಸಬಹುದು ಮತ್ತು ಖಾತೆಯ ಬಾಕಿಗಳನ್ನು ಪರಿಶೀಲಿಸಬಹುದು. ಗ್ರಾಹಕರು ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡಲು, ಯುಪಿಐ ಪಿನ್‌ಗಳನ್ನು ಹೊಂದಿಸಲು ಅಥವಾ ಬದಲಾಯಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: UPI payment fraud ಹಣ ಪಾವತಿ ಸೇರಿ ಡಿಜಿಟಲ್ ವಹಿವಾಟು ಸುರಕ್ಷಿತವಾಗಿಸುವುದು ಹೇಗೆ? ಇಲ್ಲಿವೆ ಟಿಪ್ಸ್!

ಡಿಜಿಟಲ್‌ ಅನುಭವ: "UPI123Pay ಮತ್ತು DigiSaathi ಎಂಬ ಎರಡು ಹೆಗ್ಗುರುತು ಉಪಕ್ರಮಗಳನ್ನು ಇಂದು ಪ್ರಾರಂಭಿಸಲಾಗುತ್ತಿದೆ. ಇವೆರಡೂ ನಮ್ಮ ಪಾವತಿಗಳ ಪರಿಸರ ವ್ಯವಸ್ಥೆಯ ಎರಡು ವೈವಿಧ್ಯಮಯ ಆದರೆ ಮಹತ್ವದ ಆಯಾಮಗಳನ್ನು ಪ್ರತಿನಿಧಿಸುತ್ತವೆ. UPI123Pay ನಲ್ಲಿ, ವಹಿವಾಟುಗಳನ್ನು ಪೂರ್ಣಗೊಳಿಸಲು ಬಳಕೆದಾರರು ತೆಗೆದುಕೊಳ್ಳಬೇಕಾದ ಮೂರು ಹಂತಗಳಿವೆ. UPI123Pay ಫೀಚರ್ ಫೋನ್‌ಗಳ ಮೂಲಕ  ಡಿಜಿಟಲ್ ಅನುಭವವನ್ನು ಪಡೆಯಲು ಹೆಚ್ಚಿನ ಜನರಿಗೆ ಅವಕಾಶ ನೀಡುವ ಯೋಜನೆಯಾಗಿದೆ. ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯಲ್ಲಿ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಡಿಜಿಟಲ್‌ಸಾಥಿ ಇದೆ" ಎಂದು ಆರ್‌ಬಿಐ ಗವರ್ನರ್ ಶಕ್ತಿ  ಶಕ್ತಿಕಾಂತ ದಾಸ್ ಹೇಳಿದ್ದಾರೆ.

UPI123Pay ನಾಲ್ಕು ಆಯ್ಕೆಗಳನ್ನು ಒಳಗೊಂಡಿದೆ

ಅಪ್ಲಿಕೇಶನ್ ಆಧಾರಿತ ಸೇವೆ: ಫೀಚರ್‌ ಫೋನ್‌ನಲ್ಲಿ ಅಪ್ಲಿಕೇಶನನ್ನು ಸ್ಥಾಪಿಸಿ, ಅದರ ಮೂಲಕ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿರುವ ಹಲವಾರು ಯುಪಿಐ ಸೇವೆಗಳನ್ನು ಫೋನ್‌ಗಳಲ್ಲಿಯೂ ಬಳಸಬಹುದು. 

ಮಿಸ್ಡ್ ಕಾಲ್: ಇದು ಫೀಚರ್ ಫೋನ್ ಬಳಕೆದಾರರಿಗೆ ತಮ್ಮ ಬ್ಯಾಂಕ್ ಖಾತೆಯನ್ನು ಪ್ರವೇಶಿಸಲು ಅನುಮತಿಸುತ್ತದೆ ಮತ್ತು ವ್ಯಾಪಾರಿ ಔಟ್‌ಲೆಟ್‌ನಲ್ಲಿ ಪ್ರದರ್ಶಿಸಲಾದ ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಸ್ವೀಕರಿಸುವುದು, ಹಣವನ್ನು ವರ್ಗಾಯಿಸುವುದು, ನಿಯಮಿತ ಖರೀದಿಗಳು, ಬಿಲ್ ಪಾವತಿಗಳು ಇತ್ಯಾದಿಗಳಂತಹ ವಹಿವಾಟುಗಳನ್ನು ನಿರ್ವಹಿಸಲು ಅನುಮತಿಸುತ್ತದೆ.  ಯುಪಿಐ ಪಿನ್ ನಮೂದಿಸುವ ಮೂಲಕ ವಹಿವಾಟನ್ನು ದೃಢೀಕರಿಸಲು ಗ್ರಾಹಕರು ಕರೆಯನ್ನು ಸ್ವೀಕರಿಸುತ್ತಾರೆ.

ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್ (IVR): ಪೂರ್ವ-ನಿರ್ಧಾರಿತ ಐವಿಆರ್ ಸಂಖ್ಯೆಗಳ ಮೂಲಕ ಯುಪಿಐ ಪಾವತಿಯು ಮಾಡಲು ಬಳಕೆದಾರರು ತಮ್ಮ ಫೀಚರ್ ಫೋನ್‌ಗಳಿಂದ ಪೂರ್ವನಿರ್ಧರಿತ ಸಂಖ್ಯೆಗೆ ಕರೆ ಮಾಡುವ  ಅಗತ್ಯವಿದ್ದು ಇಂಟರ್ನೆಟ್ ಸಂಪರ್ಕವಿಲ್ಲದೆಯೇ ಹಣಕಾಸಿನ ವಹಿವಾಟುಗಳನ್ನು ಮಾಡಲು ಸಾಧ್ಯವಾಗುತ್ತದೆ.

ಪ್ರಾಕ್ಸಿಮಿಟಿ ಸೌಂಡ್‌ ಬೇಸ್ಡ್ ಪಾವತಿಗಳು: ಯಾವುದೇ ಸಾಧನದಲ್ಲಿ ಸಂಪರ್ಕರಹಿತ, ಆಫ್‌ಲೈನ್ ಮತ್ತು ಸಾಮೀಪ್ಯ ಡೇಟಾ ಸಂವಹನವನ್ನು ಸಕ್ರಿಯಗೊಳಿಸಲು ಇದು ಧ್ವನಿ ತರಂಗಗಳನ್ನು ಬಳಸುತ್ತದೆ.

click me!