BSNL New Plan: 329 ರೂ. ಭಾರತ ಫೈಬರ್ ಎಂಟ್ರಿ ಮಂತ್ಲಿ ಪ್ಲ್ಯಾನ್, ಇಂಟರ್ನೆಟ್ ವೇಗ ಎಷ್ಟು, ಏನೆಲ್ಲ ಸಿಗುತ್ತೆ?

By Suvarna News  |  First Published Mar 14, 2022, 10:05 AM IST

*ಗ್ರಾಹಕರನ್ನು ಸೆಳೆಯಲು ಬಿಎಸ್‌ಎನ್‌ಎಲ್‌ನಿಂದ ಕಡಿಮೆ ರೇಟಿನ ಹೊಸ ಪ್ಲ್ಯಾನ್
*ಈ ಪ್ಲ್ಯಾನ್‌ನಲ್ಲಿ ಗ್ರಾಹಕರಿಗೆ 20ಎಂಬಿಪಿಎಸ್ ಸ್ಪೀಡ್ ಇಂಟರ್ನೆಟ್ ಸಿಗುತ್ತದೆ.
* ಈ ಪ್ಲ್ಯಾನ್ ಆಯ್ದು ರಾಜ್ಯಗಳಲ್ಲಿ ಮಾತ್ರವೇ ಲಭ್ಯವಿದೆದ


 Tech Desk: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸೇವಾ ಪೂರೈಕೆದಾರ ಕಂಪನಿ ಭಾರತ ಸಂಚಾರ ನಿಗಮ ಲಿ.(BSNL) ಹೊಸ ಪ್ಲ್ಯಾನ್ ಪ್ರಕಟಿಸಿದ್ದು, ಅತ್ಯಾಕರ್ಷಕವಾಗಿದೆ. ಬಿಎಸ್ಸೆನ್ನೆಲ್, ತನ್ನ ಬ್ರಾಡ್ ಬಾಂಡ್ ಗ್ರಾಹಕರನ್ನು  ಸೆಳೆಯಲು ಈ ಪ್ಲ್ಯಾನ್ ಪರಿಚಯಿಸಿದೆ. ಕಂಪನಿಯ 329 ರೂಪಾಯಿ ಮೌಲ್ಯದ ಫೈಬರ್ ಎಂಟ್ರಿ ಮಂತ್ಲಿ ಬ್ರಾಡ್ ಬಾಂಡ್ ಪ್ಲ್ಯಾನ್ ಅನುಷ್ಠಾನ ಮಾಡಿದ್ದು, ಇದು ಬ್ರಾಡ್ ಬಾಂಡ್ ಬಳಕೆದಾರರಿಗೆ ಹೆಚ್ಚು ಲಾಭವನ್ನು ತಂದುಕೊಡಲಿದೆ.  ಬಿಎಸ್ಸೆನ್ನೆಲ್‌ ಭಾರತ್ ಫೈಬರ್‌ನ ಅತಿ ಅಗ್ಗದ ಪ್ಲ್ಯಾನ್ ಆಗಿದ್ದು, ಈ ಹೊಸ ಬ್ರಾಡ್ ಬಾಂಡ್ ಇಂಟರ್ನೆಟ್ ಪ್ಲ್ಯಾನ್ ಬಳಕೆದಾರರಿಗೆ 20 ಎಂಬಿಪಿಎಸ್ ಸ್ಪೀಡ್ ಅವರಿಗೆ ಇಂಟರ್ನೆಟ್ ನೀಡಲಿದೆ. ಆದರೆ, ಇಲ್ಲೊಂದು ಟ್ವಿಸ್ಟ್ ಇದೆ.

ಈ ಹೊಸ ಪ್ಲ್ಯಾನ್ ದೇಶದ ಎಲ್ಲ ರಾಜ್ಯಗಳಲ್ಲಿ ಲಭ್ಯವಿಲ್ಲ. ಬದಲಿಗೆ ಆಯ್ದ ರಾಜ್ಯಗಳಲ್ಲಿ ಮಾತ್ರವೇ ಇದು ಗ್ರಾಹಕರಿಗೆ ಸಿಗಲಿದೆ. ಈ ಪ್ಲ್ಯಾನ್ 1,000GB (1TB) ನ ಫೇರ್ ಯೂಸೇಜ್ ಪಾಲಿಸಿ (FUP) ಮಿತಿಯನ್ನು ಹೊಂದಿದೆ, ಅದರ ನಂತರ ಚಂದಾದಾರರು ಸೇವಾ ಪೂರೈಕೆದಾರರ ಪ್ರಕಾರ ಕಡಿಮೆ ವೇಗದಲ್ಲಿ ಬ್ರೌಸ್ ಮಾಡಲು ಸಾಧ್ಯವಾಗುತ್ತದೆ.

Latest Videos

undefined

ಬಳಕೆದಾರರು ಭಾರತದಲ್ಲಿನ ಯಾವುದೇ ನೆಟ್‌ವರ್ಕ್‌ಗೆ ಸ್ಥಳೀಯ ಮತ್ತು STD ಕರೆಗಳಿಗೆ ಪ್ರವೇಶವನ್ನು ಪಡೆಯಲು ಸಾಧ್ಯವಾಗುತ್ತದೆ. ಖಾಸಗಿ ಟೆಲಿಕಾಂ ಸೇವಾ ಪೂರೈಕೆದಾರ ಕಂಪನಿಗಳಿಂದ ಭಾರೀ ಸ್ಪರ್ಧೆಯನ್ನು ಎದುರಿಸುತ್ತಿರುವ ಭಾರತ ಸಂಚಾರ ನಿಗಮ ಗ್ರಾಹಕರನ್ನು ಆಕರ್ಷಿಸುವುದಕ್ಕೆ ಸಾಕಷ್ಟು ಆಕರ್ಷಕಾರಿ ಪ್ಲ್ಯಾನ್‌ಗಳನ್ನು ಪ್ರಕಟಿಸುತ್ತಲೇ ಇರುತ್ತದೆ. ಈ ಪ್ಲ್ಯಾನ್ ಕೂಡ ಅದೇ ರೀತಿಯಲ್ಲಿ ಗ್ರಾಹಕರನ್ನು ಸೆಳೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: Apple iPad Air Gen 5: ಆಪಲ್ ಐಪ್ಯಾಡ್ ಏರ್ ಜೆನ್ 5 ಬಿಡುಗಡೆ, ಏನೆಲ್ಲ ವಿಶೇಷ, ಬೆಲೆ ಎಷ್ಟಿದೆ?

ಆಯ್ದ ರಾಜ್ಯಗಳಲ್ಲಿ ಮಾತ್ರ ಲಭ್ಯ: 329 ರೂಪಾಯಿ ಮೌಲ್ಯದ ಫೈಬರ್ ಎಂಟ್ರಿ ಮಂತ್ಲಿ ಬ್ರಾಡ್ ಬಾಂಡ್ ಪ್ಲ್ಯಾನ್ ಅನ್ನು ಕಂಪನಿಯು ಬಿಎಸ್ಸೆನ್ನೆಲ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದದೆ. ಹಾಗೆಯೇ, ಸದ್ಯಕ್ಕೆ ಯಾವೆಲ್ಲ ರಾಜ್ಯಗಳಲ್ಲಿ ಈ ಪ್ಲ್ಯಾನ್ ಬಳಕೆದಾರರಿಗೆ ಸಿಗಲಿದೆ ಎಂಬ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ಅದರ ಮಾಹಿತಿಯ ಪ್ರಕಾರ,  BSNL ಭಾರತ್ ಫೈಬರ್ ಎಂಟ್ರಿ ಯೋಜನೆಯನ್ನು 20Mbps ನಲ್ಲಿ 1TB ಹೈ-ಸ್ಪೀಡ್ ಡೇಟಾವನ್ನು ನೀಡಲು ಪಟ್ಟಿಮಾಡಲಾಗಿದೆ. 1TB ಡೇಟಾ ಖಾಲಿಯಾದ ನಂತರ, ಇಂಟರ್ನೆಟ್  ವೇಗವು 2Mbps ಗೆ ಇಳಿಯುತ್ತದೆ ಎಂಬುದನ್ನು ಬಳಕೆದಾರರು ಮರೆಯಬಾರದು. 

ಟ್ಯಾಕ್ಸ್ ಸೇರಿದರೆ: ಫೈಬರ್ ಎಂಟ್ರಿ ಮಂತ್ಲಿ ಪ್ಲ್ಯಾನ್ ಮೌಲ್ಯವು 329 ರೂ.ನಿಂದ ಆರಂಭವಾಗುತ್ತದೆ. ಇದರಲ್ಲಿ ಟ್ಯಾಕ್ಸ್ ಸೇರಿಸಲ್ಲ. ಹಾಗಾಗಿ, ತೆರಿಗೆ ಎಲ್ಲವೂ ಸೇರಿ ಈ ಪ್ಲ್ಯಾನ್ ಮೌಲ್ಯವು 388 ರೂಪಾಯಿಯಾಗುತ್ತದೆ. ಇದರಲ್ಲಿ ಶೇ.18 ಜಿಎಸ್‌ಟಿ ಅಥವಾ 59 ರೂ. ಹೆಚ್ಚುವರಿಯಾಗಿ ನೀಡಬೇಕು). ಪ್ರತಿ ತಿಂಗಳು ಹೆಚ್ಚಿನ ಡೇಟಾ ಅಗತ್ಯವಿಲ್ಲದ ಚಂದಾದಾರರಿಗೆ ಅಗ್ಗದ ಪರ್ಯಾಯವನ್ನು ಈ ಪ್ಲ್ಯಾನ್ ನೀಡುತ್ತದೆ ಎಂದು ವಿಶ್ಲೇಷಿಸಬಹುದು.

ಇದನ್ನೂ ಓದಿ: iPhone 13, 13 Pro Green Version ಪ್ರೀ ಆರ್ಡರ್‌ ಆರಂಭ, ಬೆಲೆ ಎಷ್ಟು?

ಕೆಲವು ಗ್ರಾಹಕರಿಗೆ ಪ್ರತಿ ತಿಂಗಳು ತೀರಾ ಸಿಕ್ಕಾಪಟ್ಟೆ ಇಂಟರ್ನೆಟ್ ಏನೂ ಬೇಕಾಗುವುದಿಲ್ಲ. ಹಾಗಾಗಿ, ಕಡಿಮೆ ವೆಚ್ಚದಲ್ಲಿ ತಮ್ಮ ಅಗತ್ಯಗಳನ್ನು ಪೂರೈಸುವಷ್ಟು ಇಂಟರ್ನೆಟ್ ಸೇವೆಯನ್ನು ಈ ಪ್ಲ್ಯಾನ್ ಮೂಲಕ ಪಡೆದುಕೊಳ್ಳಬಹುದು ಎಂದು ಹೇಳಬಹುದು.

ಏನೆಲ್ಲ ಸಿಗುತ್ತದೆ?: ಬಿಎಸ್ಸೆನ್ನೆಲ್‌ನ  ಹೊಸ 3299 ರೂ. ಫೈಬರ್ ಎಂಟ್ರಿ ಮಾಸಿಕ ಯೋಜನೆಯು 449 ರೂ. ಮೌಲ್ಯದ ಫೈಬರ್ ಬೇಸಿಕ್ ಪ್ಲಾನ್‌ಗಿಂತ 120 ರೂ. ಕಡಿಮೆಯ ಪ್ಲ್ಯಾನ್ ಆಗಿದ್ದು, ಎರಡನೆಯದು, 30Mbps ನಲ್ಲಿ ಹೆಚ್ಚಿನ ವೇಗದ ಬ್ರೌಸಿಂಗ್ ಅನ್ನು ನೀಡುತ್ತದೆ. 3,300GB (3.3TB)ನ FUP ಮಿತಿಯೊಂದಿಗೆ ಬ್ರೌಸಿಂಗ್ ವೇಗವು 2Mbps ಗೆ ಇಳಿಯುತ್ತದೆ. ಮೊದಲೇ ಹೇಳಿದಂತೆ, ಬಿಎಸ್ಸೆನ್ನೆಲ್ ಫೈಬರ್ ಎಂಟ್ರಿ ಯೋಜನೆಯ ಭಾಗವಾಗಿ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಸ್ಥಳೀಯ ಮತ್ತು STD ಕರೆಗಳನ್ನು ಸಹ ನೀಡುತ್ತದೆ, ಜೊತೆಗೆ ಮೊದಲ ತಿಂಗಳ ಬಾಡಿಗೆಯಲ್ಲಿ 90 ಪ್ರತಿಶತ ರಿಯಾಯಿತಿಯನ್ನು ನೀಡುತ್ತದೆ.

click me!