ಸ್ವಾತಂತ್ರ್ಯ ದಿನಾಚರಣೆಗೆ ವಿಶೇಷ ಕೊಡುಗೆ ಘೋಷಿಸಿದ ವಿಐ, ಗ್ರಾಹಕರಿಗೆ ಅನ್‌ಲಿಮಿಟೆಡ್ ಡೇಟಾ!

By Suvarna News  |  First Published Aug 13, 2023, 4:48 PM IST

ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಹಿನ್ನಲೆಯಲ್ಲಿ ವಿಐ ತನ್ನ ಗ್ರಾಹಕರಿಗೆ ವಿಶೇಷ ಕೊಡುಗೆ ಘೋಷಿಸಿದೆ. ಅನ್‌ಲಿಮಿಟೆಡ್ ಡೇಟಾ, ಅತೀ ಕಡಿಮೆ ಬೆಲೆಯಲ್ಲಿ ರಿಚಾರ್ಜ್ ಸೇರಿದಂತೆ ಹಲವು ಆಫರ್ ಇಲ್ಲಿದೆ.
 


ಬೆಂಗಳೂರು(ಆ.13)  ದೇಶದಲ್ಲೀಗ  77ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಎಲ್ಲೆಡೆಗೆ ತಿರಂಗ ಹಾರಾಡುತ್ತಿದೆ. ಅಜಾದಿಕಾ ಅಮೃತ ಕಾಲದಲ್ಲಿರುವ ಭಾರತ ಈ ಬಾರಿಯೂ ಅದ್ಧೂರಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದೆ. ಈ ಸಂಭ್ರಮವನ್ನು ಇಮ್ಮಡಿಗೊಳಿಸಲು ಇದೀಗ ವಿಐ ತನ್ನ ಗ್ರಾಹಕರು ಅನ್‌ಲಿಮಿಟೆಡ್ ಆಫರ್ ಘೋಷಿಸಿದೆ.  ಆಗಸ್ಟ್ 12 ರಿಂದ 18 ರವರೆಗೆ ವಿಐ ಗ್ರಾಹಕರು ವ್ಯಾಪಕ ಶ್ರೇಣಿಯ ಅಚ್ಚರಿದಾಯಕ ಕೊಡುಗೆಗಳನ್ನು ಪಡೆಯಬಹುದು. ವಿಐ  ಅಪ್ಲಿಕೇಷನ್‌ನಲ್ಲಿ (Vi app) ಗಮನಾರ್ಹವಾದ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಸಹ ಪಡೆಯಬಹುದು.

ಗ್ರಾಹಕರು ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಭಾಗವಾಗಿ ಅಡೆತಡೆಯಿಲ್ಲದ ಆನ್‌ಲೈನ್ ಅನುಭವಗಳನ್ನು ಆನಂದಿಸುವುದನ್ನು ಖಚಿತಪಡಿಸಿಕೊಳ್ಳಲು, 199 ರೂಪಾಯಿಗಿಂತ ಹೆಚ್ಚಿನ ಎಲ್ಲಾ ಅನಿಯಮಿತ ಡೇಟಾ ರೀಚಾರ್ಜ್‌ಗಳಲ್ಲಿ 50ಜಿಬಿ ವರೆಗಿನ ಹೆಚ್ಚುವರಿ ಡೇಟಾ ಪ್ರಯೋಜನವನ್ನು ಹೆಚ್ಚುವರಿಯಾಗಿ ನೀಡುವ ಭರವಸೆಯನ್ನು ವಿಐ ನೀಡುತ್ತಿದೆ. ಹೆಚ್ಚುವರಿಯಾಗಿ, ವಿಐ  ಗ್ರಾಹಕರು ಕ್ರಮವಾಗಿ  1,449 ರೂ ಮತ್ತು 3099 ರೂ ರೀಚಾರ್ಜ್ ಪ್ಯಾಕ್‌ಗಳಲ್ಲಿ 50 ರೂ ಮತ್ತು 75 ರೂ ತಕ್ಷಣ ರಿಯಾಯ್ತಿಗಳನ್ನು ಪಡೆಯಬಹುದು.

Tap to resize

Latest Videos

24 ರೂಪಾಯಿಯಲ್ಲಿ ಅನ್‌ಲಿಮಿಟೆಡ್ ಡೇಟಾ ಪ್ಯಾಕ್ ಪರಿಚಯಿಸಿದ ವಿಐ!

ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಗೆ ಉತ್ಸಾಹದ ಹೆಚ್ಚುವರಿ ಪದರ ಸೇರಿಸುವ ಮೂಲಕ, ವಿಐ  ಆ್ಯಪ್‌ನಲ್ಲಿ ಪ್ರತ್ಯೇಕವಾಗಿ ‘ಸ್ಪಿನ್ ದಿ ವೀಲ್‘ (Spin the Wheel) ಸ್ಪರ್ಧೆಯನ್ನು ಸಹ ನಡೆಸಲಿದೆ. ಈ ಸ್ಪರ್ಧೆಯ ಭಾಗವಾಗಿ, ಪ್ರತಿ ಗಂಟೆಗೆ ಖಚಿತವಾದ ಅದೃಷ್ಟಶಾಲಿ ವಿಜೇತರು  ಒಂದು ವರ್ಷದವರೆಗೆ ಮಾನ್ಯವಾಗಿರುವ ₹ 3,099 ಮೌಲ್ಯದ ಪೂರಕ ರೀಚಾರ್ಜ್ ಪ್ಯಾಕ್ ಗೆಲ್ಲಲಿದ್ದಾರೆ. ಈ ಸ್ಪರ್ಧೆಯು ಹೆಚ್ಚುವರಿ ಪುರಸ್ಕಾರಗಳನ್ನು ಒಳಗೊಂಡಿರುತ್ತದೆ. ಸಮೃದ್ಧ ಸಂಪರ್ಕ ಅನುಭವಕ್ಕಾಗಿ 1ಜಿಬಿ ಅಥವಾ 2ಜಿಬಿ ಹೆಚ್ಚುವರಿ ಡೇಟಾ, ಸೋನಿಲಿವ್‌ (SonyLiv) ಗೆ ಚಂದಾದಾರಿಕೆ ಮುಂತಾದವು ಇರಲಿವೆ. ವಿಐ ನೊಂದಿಗೆ ಗೆಲ್ಲಲು ಬಹು ಅವಕಾಶಗಳನ್ನು ತೆರೆಯುತ್ತದೆ.

ಡೇಟಾ ಕೇಂದ್ರ ಹಾಗೂ ಕ್ಲೌಡ್‌ ಸೇವೆ: ಉದ್ಯಮಗಳು ಅಗಾಧ ಪ್ರಮಾಣದಲ್ಲಿ ಡಿಜಿಟಲ್ ಬದಲಾವಣೆಗೆ ಒಳಗಾಗುತ್ತಿವೆ. ಇದು ಕೆಲಸದ ಹೊರೆಗಳನ್ನು ಕ್ಲೌಡ್‌ಗೆ ಬದಲಾಯಿಸಲು ಕಾರಣವಾಗುತ್ತಿದೆ. ಈ ವೇಗವಾಗಿ ಬದಲಾಗುತ್ತಿರುವ ಡಿಜಿಟಲ್ ಯುಗದಲ್ಲಿ, ಉದ್ಯಮಗಳ ಅಗತ್ಯಗಳು ಭದ್ರತೆ, ಸಂಪರ್ಕ ಅಥವಾ ಕ್ಲೌಡ್ ಸೇರಿದಂತೆ ವಿವಿಧ ಸೇವೆಗಳು ಮತ್ತು ಪರಿಹಾರಗಳಿಗಾಗಿ ವಿಸ್ತರಣೆ ಆಗುತ್ತಿದೆ.  ಈ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸಲು ಮತ್ತು ಸದ್ಯಕ್ಕೆ ಜಾರಿಯಲ್ಲಿ ಇರುವ ಖಾತೆಗಳ ವಿಸ್ತರಣೆಯ ಭಾಗವಾಗಿ, ಪ್ರಮುಖ ದೂರಸಂಪರ್ಕ ಸೇವಾ ಸಂಸ್ಥೆಯಾಗಿರುವ ವೊಡಾಫೋನ್ ಐಡಿಯಾದ (ವಿಐ) ಉದ್ಯಮ ಅಂಗವಾದ ವಿಐ ಬಿಸಿನೆಸ್‌ (Vi Business)  ತನ್ನ ಡೇಟಾ ಸೆಂಟರ್ ಕೊಲೊಕೇಷನ್ ಮತ್ತು ಕ್ಲೌಡ್ ಸೇವೆಗಳ ಖಾತೆಗಳನ್ನು ಹೆಚ್ಚಿಸಲು ಯೋಟ್ಟಾ ಡೇಟಾ ಸರ್ವೀಸಸ್‌ (Yotta Data Services) ಜೊತೆ ಪಾಲುದಾರಿಕೆ ಹೊಂದಿದೆ.

ಕೇವಲ 17 ರೂಪಾಯಿಗೆ ರಾತ್ರಿಯಿಡಿ ಅನ್‌ಲಿಮಿಟೆಡ್ ಡೇಟಾ ಪ್ಯಾಕ್, ವಿಐ ಗ್ರಾಹಕರಿಗೆ ಬಂಪರ್ ಆಫರ್!

ಭಾರತದ ಉದ್ಯಮಗಳ ಡಿಜಿಟಲ್ ಪರಿವರ್ತನೆಯ ಪಯಣಕ್ಕೆ ವಿಐ ಬಿಸಿನೆಸ್ ಸಹಾಯ ಮಾಡಲಿದೆ. ಉನ್ನತ ಗುಣಮಟ್ಟದ ಡೇಟಾ ಕೇಂದ್ರಗಳು, ಕ್ಲೌಡ್ ಮೂಲಸೌಕರ್ಯ ಮತ್ತು ಸೇವಾ ವಿತರಣಾ ಸಾಮರ್ಥ್ಯಗಳಲ್ಲಿ ಯೋಟ್ಟಾದ ನಾಯಕತ್ವದೊಂದಿಗೆ ತನ್ನ ವ್ಯಾಪಕವಾದ ಮಾರುಕಟ್ಟೆ ಉಪಸ್ಥಿತಿಯನ್ನು ವಿಐ ಬಿಸಿನೆಸ್‌ ವೃದ್ಧಿಸಲಿದೆ. ತನ್ನ ಎಂಟರ್‌ಪ್ರೈಸ್ ಗ್ರಾಹಕರಿಗೆ ಸಮಗ್ರ ಸಂಪರ್ಕ ಸೌಲಭ್ಯ, ಕ್ಲೌಡ್ ಮತ್ತು ಸುರಕ್ಷತಾ ಪರಿಹಾರಗಳನ್ನು ನೀಡಲು ಯೋಟ್ಟಾ ಜೊತೆಗೆ ತನ್ನ ಸಹಯೋಗ ಹೆಚ್ಚಿಸುವ  ಗುರಿಯನ್ನು ವಿಐ ಬಿಸಿನೆಸ್‌  ಹೊಂದಿದೆ.

click me!