ಟ್ವಿಟರ್ ಹಾಗೂ ಕೇಂದ್ರ ಸರ್ಕಾರ ನಡುವಿನ ಯುದ್ಧಕ್ಕೆ ಅಂತ್ಯ ಹಾಡಲು ಟ್ವಿಟರ್ ಮುಂದಾಗಿದೆ. ಇತ್ತೀಚೆಗೆ ಟ್ವಿಟರ್ ಮಾಜಿ ಉದ್ಯೋಗಿ ಮಾಡಿದ ಆರೋಪಕ್ಕೆ ಇದೀಗ ಟ್ವಿಟರ್ ಉತ್ತರಿಸಿದೆ.
ನವದೆಹಲಿ(ಆ.26): ಹೊಸ ಐಟಿ ನಿಯಮಕ್ಕೆ ತೀವ್ರ ಪ್ರತಿರೋಧ ತೋರಿದ್ದ ಟ್ವಿಟರ್ ಇದೀಗ ಮತ್ತಗಾಗಿದೆ. ಇತ್ತೀಚೆಗೆ ಟ್ವಿಟರ್ ಮಾಜಿ ಉದ್ಯೋಗಿ ನೀಡಿದ ಹೇಳಿಕೆಯಿಂದ ಮತ್ತೆ ಕೇಂದ್ರ ಹಾಗೂ ಟ್ವಿಟರ್ ನಡುವೆ ಯುದ್ಧದ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಶಶಿ ತರೂರ್ ನೇೃತ್ವತ್ವದ ಸಂಸದೀಯ ಮಾಹಿತಿ ಮತ್ತು ತಂತ್ರಜ್ಞಾನದ ಸ್ಥಾಯಿ ಸಮಿತಿ ವಿಚಾರಣೆಯಲ್ಲಿ ಟ್ವಿಟರ್ ಸ್ಪಷ್ಟನೆ ನೀಡಿದೆ. ಎಜೆಂಟ್ ನೇಮಿಸಲು ಕೇಂದ್ರ ಸರ್ಕಾರ ಯಾವುದೇ ಒತ್ತಡ ಹೇರಿಲ್ಲ ಎಂದು ಟ್ವಿಟರ್ ಸ್ಪಷ್ಟನೆ ನೀಡಿದೆ. ಖಾಸಗಿ ನೀತಿ, ಬಳಕೆದಾರರ ಗೌಪ್ಯ ಮಾಹಿತಿ ಶೇಖರಣೆ ಹಾಗೂ ಮಾಜಿ ಉದ್ಯೋಗಿಯ ಆರೋಪಗಳ ಕುರಿತು ಇಂದು ಮಾಹಿತಿ ಮತ್ತು ತಂತ್ರಜ್ಞಾನದ ಸ್ಥಾಯಿ ಸಮಿತಿ ಟ್ವಿಟರ್ ವಿಚಾರಣೆ ನಡೆಸಿತ್ತು. ಪ್ರಮುಖವಾಗಿ ಟ್ವಿಟರ್ ಮಾಜಿ ಉದ್ಯೋಗಿ ಜಟ್ಕೋ ಗಂಭೀರ ಆರೋಪಗಳನ್ನು ಮಾಡಿದ್ದರು. ಟ್ವಿಟರ್ ಎಜೆಂಟ್ ನೇಮಕಕ್ಕೆ ಕೇಂದ್ರ ಸರ್ಕಾರ ಒತ್ತಾಯಿಸಿತ್ತು. ತೀವ್ರ ಒತ್ತಡದ ಮೇಲೆ ಟ್ವಿಟರ್ ಎಜೆಂಟ್ ನೇಮಕ ಮಾಡಬೇಕಾಯಿತು. ಕೇಂದ್ರ ಸರ್ಕಾರ ಅನಗತ್ಯ ಮಧ್ಯಪ್ರವೇಶಿಸಿದೆ ಎಂದು ಆರೋಪಿಸಿದ್ದರು. ಆದರೆ ಈ ಆರೋಪವನ್ನು ಟ್ವಿಟರ್ ತಳ್ಳಿ ಹಾಕಿದೆ. ಈ ಕುರಿತು ಕೇಂದ್ರ ಸರ್ಕಾರ ಟ್ವಿಟರ್ ಸಂಪರ್ಕಿಸಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಟ್ವಿಟರ್ ಡೀಲ್‌ನಿಂದ ಹಿಂದೆ ಸರಿದ ಎಲಾನ್ ಮಸ್ಕ್, ಕಾನೂನು ಕ್ರಮಕ್ಕೆ ನಿರ್ಧರಿಸಿದ ಕಂಪನಿ!
undefined
ಟ್ವಿಟರ್ ತನ್ನ ಬಳಕೆದಾರರ ಮಾಹಿತಿಯನ್ನು ಭಾರೀಯ ಐಟಿ ನೀತಿಗೆ ಅನುಗುಣವಾಗಿ ರಕ್ಷಿಸಲ್ಪಡುತ್ತದೆ. ಎಲ್ಲಾ ಭದ್ರತಾ ಮಾನದಂಡಗಳನ್ನು ಪಾಲಿಸುತ್ತದೆ. ಇದರಲ್ಲಿ ಯಾವುದೇ ಲೋಪವಾಗುವುದಿಲ್ಲ ಎಂದು ವಿಚಾರಣೆ ವೇಳೆ ಹೇಳಿದೆ. ಟ್ವಿಟರ್‌ನಲ್ಲಿರುವ ಹೆಚ್ಚಿನ ಉದ್ಯೋಗಿಗಳಿಗೆ ಬಳಕೆದಾರರ ಡೇಟಾ ಪರಿಶೀಲಿಸಲು ಅಥವಾ ಪ್ರವೇಶಕ್ಕೆ ಅವಕಾಶವಿಲ್ಲ. ಟ್ವಿಟರ್ ಕೇಂದ್ರ ಕಚೇರಿಯಲ್ಲಿರುವ ಕೆಲವೇ ಕೆಲವು ಉದ್ಯೋಗಿಗಳಿಗೆ ಮಾತ್ರ ಬಳಕೆದಾರರ ಡೇಟಾ ಪ್ರವೇಶಿಸುವ ಅವಕಾಶ ಹೊಂದಿದ್ದಾರೆ. ಇದು ಅವರ ಮಾಹಿತಿಗಳನ್ನು ಸೋರಿಕೆ ಮಾಡುವ ಉದ್ದೇಶದಿಂದ ಅಲ್ಲ ಕೆಲ ತಾಂತ್ರಿಕ ಕಾರಣಕ್ಕಾಗಿ ಮಾತ್ರ ಈ ಅವಕಾಶ ನೀಡಲಾಗಿದೆ ಎಂದು ಬಳಕೆದಾರರ ಭದ್ರತೆ ಕುರಿತು ಟ್ವಿಟರ್ ಮಾಹಿತಿ ನೀಡಿದೆ.
ಬಳಕೆದಾರರ ಡೇಟಾ ಸೋರಿಕೆ ಅತ್ಯಂತ ಗಂಭೀರ ವಿಷಯವಾಗಿದೆ. ಈ ಕುರಿತು ಟ್ವಿಟರ್‌ನಲ್ಲಿ ಬಳಕೆದಾರರ ಮಾಹಿತಿ ಶೇಖರಣೆ ಮಾಹಿತಿಯನ್ನು ಸಮಿತಿ ಕೇಳಿತ್ತು. ಟ್ವಿಟರ್ ಬಳಕೆದಾರರ ಮಾಹಿತಿಯನ್ನು ಇತರ ಕಾರಣಕ್ಕೆ ಉಪಯೋಗಿಸಲು ಅವಕಾಶವಿಲ್ಲ ಎಂದು ಟ್ವಿಟರ್ ಸ್ಪಷ್ಟಪಡಿಸಿದೆ. ಆದರೆ ಕೆಲ ಪ್ರಶ್ನೆಗಳಿಗೆ ಟ್ವಿಟರ್ ಹಾರಿಕೆಯ ಉತ್ತರ ನೀಡಿದೆ. ಭಾರತದ ಟ್ವಿಟರ್ ಕಚೇರಿಗಳಲ್ಲಿ ಎಷ್ಟು ಉದ್ಯೋಗಿಗಳಿದ್ದಾರೆ ಅನ್ನೋ ಪಶ್ನೆಗೆ ಸರಿಸುಮಾರು ಉತ್ತರವನ್ನು ನೀಡಿ ಜಾರಿಕೊಂಡಿದೆ. ಇನ್ನು ಐಟಿ ವಿಭಾಗ, ಡೇಟಾ ನಿರ್ವಹಣೆ, ಭದ್ರತಾ ವಿಭಾಗಗಳನ್ನು ಯಾವ ತಂಡಗಳು ನೋಡಿಕೊಳ್ಳುತ್ತದೆ. ಪ್ರತ್ಯೇಕ ವಿಭಾಗಗಳು ಇವೆಯಾ ಎಂಬ ಪ್ರಶ್ನೆಗೂ ಸಮರ್ಪಕ ಉತ್ತರ ನೀಡಿಲ್ಲ.
Facebook Hacked..? ಸೆಲೆಬ್ರಿಟಿ ಪೋಸ್ಟ್‌ಗಳನ್ನು ಮಾತ್ರ ತೋರಿಸುತ್ತಿದ್ದ ಮೆಟಾ..!
ಐಟಿ ನಿಯಮ ಪ್ರಕಾರ ಅಧಿಕಾರಿಗಳ ನೇಮಕ
ಹೊಸ ಐಟಿ ನಿಯಮಗಳ ಅನುಸಾರ ಟ್ವೀಟರ್ ಮುಖ್ಯ ಅನುಸರಣಾ ಅಧಿಕಾರಿ(ಸಿಸಿಒ), ಸ್ಥಾನಿಕ ದೂರು ಪರಿಹಾರ ಅಧಿಕಾರಿ(ಆರ್‌ಜಿಒ) ಹಾಗೂ ನೋಡಲ್ ಸಂಪರ್ಕಾಧಿಕಾರಿಯನ್ನು ನೇಮಿಸಿದೆ ಎಂದು ಕೇಂದ್ರ ಸರ್ಕಾರ ದಿಲ್ಲಿ ಹೈಕೋರ್ಟ್‌ಗೆ ತಿಳಿಸಿದೆ. ಶುಕ್ರವಾರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸಲ್ಲಿಸಿದ ಅಫಿಡವಿಟ್‌ನಲ್ಲಿ ಟ್ವೀಟರ್ ಈ ಅಧಿಕಾರಿಗಳನ್ನು ಕಂಪೆನಿಯ ಉದ್ಯೋಗಿಗಳಾಗಿ ನೇಮಿಸಿಕೊಂಡಿದೆ ಎಂದು ಮಾಹಿತಿ ನೀಡಿದೆ.