ಅಕ್ಚೋಬರ್ 12ಕ್ಕೆ ಭಾರತದಲ್ಲಿ 5G ಸೇವೆ ಆರಂಭ, ಟೆಲಿಕಾಂ ಸಚಿವ ಘೋಷಣೆ!

By Suvarna News  |  First Published Aug 25, 2022, 7:52 PM IST

ಭಾರತದಲ್ಲಿ ಅತೀ ವೇಗದ 5ಜಿ ಸೇವೆಗೆ ಇನ್ನು ಕೆಲ ದಿನಗಳು ಮಾತ್ರ. ಅಕ್ಟೋಬರ್ 12ಕ್ಕೆ ಭಾರತದಲ್ಲಿ 5ಜಿ ಸೇವೆ ಆರಂಭಗೊಳ್ಳಲಿದೆ ಎಂದು ಸಚಿವ ಅಶ್ವಿನ್ ವೈಷ್ಣವ್ ಹೇಳಿದ್ದಾರೆ. 


ನವದೆಹಲಿ(ಆ.25): ಭಾರತದಲ್ಲಿ ಡಿಜಿಲ್ ಕ್ರಾಂತಿ ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಅಕ್ಟೋಬರ್ 12 ರಂದು 5ಜಿ ಸೇವೆಯನ್ನು ದೇಶದಲ್ಲಿ ಆರಂಭಿಸುತ್ತಿದೆ. ಈ ಕುರಿತು ಟೆಲಿಕಾಂ ಸಚಿವ ಅಶ್ವಿನ್ ವೈಷ್ಣವ್ ಖಚಿತಪಡಿಸಿದೆ. ಟೆಲಿಕಾಂ ಸರ್ವೀಸ್ ಕಂಪನಿಗಳು ಈಗಾಗಲೇ 5ಜಿ ಸೇವೆಯನ್ನು ಗ್ರಾಹಕರಿಗೆ ನೀಡಲು ಸಜ್ಜಾಗಿದೆ. ಬಹುತೇಕ ಕೆಲಸ ಕಾರ್ಯಗಳು ಮುಕ್ತಾಯಗೊಂಡಿದೆ. ಅಕ್ಚೋಬರ್ 12ಕ್ಕೆ ದೇಶಾದ್ಯಂತ 5ಜಿ ಸೇವೆ ಆರಂಭಗೊಳ್ಳುತ್ತಿದೆ. ಆದರೆ ಎರಡರಿಂದ ಮೂರು ವರ್ಷಗಳಲ್ಲಿ 5ಜಿ ಸೇವೆ ದೇಶದ ಮೂಲೆ ಮೂಲೆಗೂ ತಲುಪಲಿದೆ ಎಂದು ಅಶ್ವಿನ್ ಹೇಳಿದ್ದಾರೆ. ಕೇಂದ್ರ ಟೆಲಿಕಾಂ ಸಚಿವಾಲಯ 5ಜಿ ತರಂಗಾತರ ಹಂಚಿಕೆಯಿಂದ 17,876 ಕೋಟಿ ರೂಪಾಯಿ ಹರಿದುಬಂದಿದೆ ಎಂದು ಅಶ್ವಿನ್ ವೈಷ್ಣವ್ ಹೇಳಿದ್ದಾರೆ.

ದಾಖಲೆ ಮೊತ್ತಕ್ಕೆ 5ಜಿ ತರಂಗಾಂತರ ಹರಾಜು
5ಜಿ ಸೇವೆ ನೀಡಲು ಅಗತ್ಯವಾದ ಸ್ಪೆಕ್ಟ್ರಂ ಹರಾಜು  ದಾಖಲೆಯ 1,50,173 ಕೋಟಿ ರು.ಮೊತ್ತಕ್ಕೆ ವಿವಿಧ ಕಂಪನಿಗಳು ಸ್ಪೆಕ್ಟ್ರಂ ಖರೀದಿ ಮಾಡಿವೆ. ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೋ ಅತ್ಯಧಿಕ ಪ್ರಮಾಣದ ತರಂಗಾಂತರ ಖರೀದಿ ಮೂಲಕ ಟಾಪ್‌ ಬಿಡ್ಡರ್‌ ಆಗಿ ಹೊರಹೊಮ್ಮಿದೆ. ಜಿಯೋ ನಂತರದಲ್ಲಿ ಏರ್‌ಟೆಲ್‌, ವೊಡಾಫೋನ್‌-ಐಡಿಯಾ ಕಂಪನಿಗಳು ಬಿಡ್‌ ಮಾಡಿವೆ. ಗೌತಮ್‌ ಅದಾನಿ ಒಡೆತನದ ಕಂಪನಿ ಕೇವಲ 26 ಗಿಗಾಹಟ್‌್ರ್ಜ ಸ್ಪೆಕ್ಟ್ರಂ ಮಾತ್ರ ಖರೀದಿ ಮಾಡಿದೆ.

Tap to resize

Latest Videos

undefined

ಯಾವ ಮೆಟ್ರೋ ನಗರಗಳಲ್ಲಿ ಮೊದಲ ಹಂತದಲ್ಲಿ 5G ಸೇವೆ ಸಿಗಲಿದೆ? ಇಲ್ಲಿದೆ ವಿವರ

ಕಂಪನಿ ಸ್ಪೆಕ್ಟ್ರಂ ಪ್ರಮಾಣ ಬಿಡ್ಡಿಂಗ್‌ ಮೊತ್ತ
ರಿಲಯನ್ಸ್‌ ಜಿಯೋ 24,740 ಮೆಗಾಹಟ್‌್ರ್ಜ 88,078 ಕೋಟಿ ರು.
ಭಾರ್ತಿ ಏರ್‌ಟೆಲ್‌ 19,867 ಮೆಗಾಹಟ್‌್ರ್ಜ 43,084 ಕೋಟಿ ರು.
ವೊಡಾಫೋನ್‌ 2,668 ಮೆಗಾಹಟ್‌್ರ್ಜ 18,784 ಕೋಟಿ ರು.
ಅದಾನಿ ಗ್ರೂಪ್‌ 400 ಮೆಗಾಹಟ್‌್ರ್ಜ 212 ಕೋಟಿ ರು.

ಅಕ್ಟೋಬರ್ ತಿಂಗಳಿನಿಂದಲೇ ದೇಶಾದ್ಯಂತ 5ಜಿ ಸೇವೆಗಳನ್ನು ಆರಂಭಿಸುವುದಾಗಿ ಏರ್ಟೆಲ್ ಹೇಳಿದೆ.  ಮಾರ್ಚ್ 2024ರ ಒಳಗಾಗಿ ದೇಶದ ಎಲ್ಲ ಪಟ್ಟಣಗಳು ಹಾಗೂ ಪ್ರಮುಖ ಹಳ್ಳಿಗಳಿಗೆ 5ಜಿ ಸೇವೆ ವಿಸ್ತರಿಸುವುದಾಗಿ ಭಾರ್ತಿ ಏರ್‌ಟೆಲ್‌ ಘೋಷಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಸಂಸ್ಥೆಯ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಗೋಪಾಲ್‌ ವಿಠ್ಠಲ್‌ ‘ಈ ತಿಂಗಳಲ್ಲೇ ನಾವು 5ಜಿ ಸೇವೆ ಆರಂಭಿಸಲಿದ್ದೇವೆ. ಶೀಘ್ರವೇ ದೇಶವ್ಯಾಪಿ ಸೇವೆ ವಿಸ್ತರಿಸಲಾಗುವುದು. ದೇಶದ 5000 ಪಟ್ಟಣಗಳಿಗೆ 5ಜಿ ನೆಟವರ್ಕ್ ಒದಗಿಸುವ ಯೋಜನೆ ಚಾಲ್ತಿಯಲ್ಲಿದೆ. ಇದು ಹೊಸ ಇತಿಹಾಸ ಸೃಷ್ಟಿಸಲಿದೆ’ ಎಂದು ಹೇಳಿದ್ದಾರೆ. ಭಾರ್ತಿ ಏರ್‌ಟೆಲ್‌ ಇತ್ತೀಚೆಗೆ ಕೇಂದ್ರ ಸರ್ಕಾರ ಇತ್ತೀಚೆಗೆ ನಡೆಸಿದ ತರಂಗಾಂತರ ಹರಾಜು ಪ್ರಕ್ರಿಯೆಯಲ್ಲಿ ವಿವಿಧ ಬ್ಯಾಂಡ್‌ನ ಸ್ಪೆಕ್ಟ್ರಂ ಅನ್ನು ಒಟ್ಟು 43,040 ಕೋಟಿ ರು.ಗೆ ಖರೀದಿಸಿತ್ತು. 

ಭಾರತದಲ್ಲಿ 5G ಭವಿಷ್ಯ, ಡಿಜಿಟಲ್ ರೂಪಾಂತರದ ಹೊಸ್ತಿಲಲ್ಲಿ ಹೊಸ ಅವಕಾಶ!

ಶೀಘ್ರ 5ಜಿ ಸೇವೆ ಆರಂಭ ಕುರಿತು ಸೂಚಿಸಿದ್ದ ಕೇಂದ್ರ ಸಚಿವ ಚೌಹಾಣ್‌
ದೇಶ ಕಾತುರದಿಂದ ಕಾಯುತ್ತಿರುವ ಹೈ ಸ್ಪೀಡ್‌ 5ಜಿ ಸೇವೆಗಳು ಇನ್ನೇನು ಒಂದು ತಿಂಗಳಲ್ಲಿ ಪ್ರಾರಂಭವಾಗುವ ಸಾಧ್ಯತೆಗಳಿವೆ ಎಂದು ದೂರ ಸಂಪರ್ಕ ಖಾತೆ ರಾಜ್ಯ ಸಚಿವ ದೇವುಸಿಂಗ್‌ ಚೌಹಾಣ್‌ ಆಗಸ್ಟ್ ತಿಂಗಳ ಆರಂಭದಲ್ಲೇ ಸೂಚಿಸಿದ್ದರು.  5ಜಿ ಸೇವೆ ಪ್ರಾರಂಭಿಸುವುದರಿಂದ ಉಳಿದೆಲ್ಲಾ ಕ್ಷೇತ್ರಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತವೆ. ಸ್ಥಳೀಯವಾಗಿ ಅಭಿವೃದ್ಧಿ ಪಡಿಸಿದ 5ಜಿ ತಂತ್ರಜ್ಞಾನ ಮತ್ತು ದೂರಸಂಪರ್ಕ ಸೇವೆಯನ್ನು ಅಭಿವೃದ್ಧಿ ಪಡಿಸುವ ಸಂಸ್ಥೆಗಳ ಪ್ರಚಾರ ಸೇವೆ ಸರ್ಕಾರ ಒದಗಿಸಲಿದೆ. ನಾವು ಸ್ಥಳೀಯವಾಗಿ ತಯಾರಿಸಿದ, ಅಭಿವೃದ್ಧಿ ಪಡಿಸಿದ 5ಜಿ ತಂತ್ರಜ್ಞಾನ ಸೇವೆಗೆ ಮೊದಲ ಆದ್ಯತೆ ನೀಡುತ್ತೇವೆ ಮತ್ತು ದೇಶದಲ್ಲಿ 5ಜಿ ಸೇವೆ ಒದಗಿಸುವ ಪ್ರಯತ್ನ ಮಾಡುತ್ತೇವೆ ಎಂದು ಚೌಹಾಣ್‌ ತಿಳಿಸಿದ್ದಾರೆ.

click me!