ಬೆಂಗಳೂರು(ಅ.29): ಭಾರತೀಯ ರೈಲ್ವೇ(Indian railway) ಮತ್ತಷ್ಟು ಡಿಜಲೀಟಕರಣವಾಗುತ್ತಿದೆ. ಇದರ ಜೊತೆಗೆ ಗ್ರಾಹಕರ ಸುರಕ್ಷತೆಗೆ ಹೆಚ್ಚಿನ ಮುತುವರ್ಜಿ ವಹಿಸುತ್ತಿದೆ. ಏಕೀಕೃತ ನ್ಯಾಷನಲ್ ರೈಲ್ವೇಸ್ ಹೆಲ್ಪ್‍ಲೈನ್ 139 ಸಂಖ್ಯೆಯನ್ನು ಲಕ್ಷಾಂತರ ಮಂದಿ ಭಾರತೀಯರು ಪ್ರತಿನಿತ್ಯ ಬಳಸುತ್ತಿದ್ದು ಈಗ ಟ್ರೂಕಾಲರ್ ಬ್ಯುಸಿನೆಸ್ ಐಡೆಂಟಿಟಿ ಪರಿಹಾರಗಳ ಭಾಗವಾಗಿದೆ. ಇದರೊಂದಿಗೆ ಪರಿಶೀಲಿಸಲಾದ ಎಸ್‍ಎಂಎಸ್(SMS) ಮೆಸೇಜ್ ಹೆಡರ್‌ಗಳು, ಗ್ರಾಹಕರಿಗೆ ಅವರ ಬುಕಿಂಗ್‍ಗಳು(Booking) ಮತ್ತು ಇತರೆ ಪ್ರಯಾಣದ ವಿವರಗಳು IRTCಯಿಂದ ಮಾತ್ರ ಪಡೆಯುತ್ತಿರುವುದನ್ನು ತಿಳಿಸುತ್ತವೆ. ಆದ್ದರಿಂದ ಪರಿಶೀಲಿಸಿದ ಗುರುತು ಭಾರತದ ರೈಲ್ವೆಯ ಬ್ರಾಂಡ್ ಹೆಸರನ್ನು ಲಾಕ್ ಮಾಡುತ್ತದೆ ಮತ್ತು ಟ್ರೂಕಾಲರ್ ಪ್ರೊಫೈಲ್ ಫೋಟೋದಲ್ಲಿ ಬರುವ ಮೂಲಕ ಸುರಕ್ಷಿತ ಗ್ರಾಹಕ ಅನುಭವ ನೀಡುತ್ತದೆ ಮತ್ತು ವಂಚನೆಗಳ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.
ಫೈಜಾಬಾದ್ ರೈಲು ನಿಲ್ದಾಣ ಇನ್ನು ಅಯೋಧ್ಯಾ ಕಂಟೋನ್ಮೆಂಟ್
undefined
ಈ ಹೊಸ ಉಪಕ್ರಮದಲ್ಲಿ ಟ್ರೂಕಾಲರ್‍ನೊಂದಿಗೆ ಕೆಲಸ ಮಾಡಲು ನಾವು ಬಹಳ ಸಂತೋಷ ಹೊಂದಿದ್ದೇವೆ. ಈ ಸಕ್ರಿಯತೆಯ ಮೂಲಕ ನಾವು ಐಆರ್‍ಸಿಟಿಸಿಯ ಸಂವಹನ ಮಾರ್ಗಗಳನ್ನು ಹೆಚ್ಚು ಸದೃಢ, ವಿಶ್ವಾಸಾರ್ಹ ಮತ್ತು ಸುರಕ್ಷಿತವಾಗಿಸುವುದಲ್ಲದೆ ಟ್ರೂಕಾಲರ್‍ನೊಂದಿಗೆ ತಾಂತ್ರಿಕ ಸಹಯೋಗವು ನಮ್ಮ ಗ್ರಾಹಕರಲ್ಲಿ ವಿಶ್ವಾಸ ನಿರ್ಮಿಸಲಿದೆ ಎಂದು ಟ್ರೂಕಾಲರ್ ಸಹಯೋಗದ ಕುರಿತು ಭಾರತೀಯ ರೈಲ್ವೇ ಅಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ ರಜನಿ ಹಸೀಜಾ ಹೇಳಿದರು.
ವಿಸ್ತಾರ ಶ್ರೇಣಿಯ ಉತ್ಪನ್ನಗಳು ಮತ್ತು ಸೇವೆಗಳಲ್ಲಿ TRTC ಇಂಟಿಗ್ರೇಟೆಡ್ ರೈಲ್ವೆ ಹೆಲ್ಪ್‍ಲೈನ್ 139 ಕೂಡಾ ನಿರ್ವಹಿಸುತ್ತಿದ್ದು ಅದನ್ನು ವಿವಿಧ ಬಗೆಯ ಪ್ರಯಾಣಿಕರ ರೈಲುಗಳಿಗೆ ಸಂಬಂಧಿಸಿದ ವಿಚಾರಣೆಗಳಿಗೆ ಲಕ್ಷಾಂತರ ಮಂದಿ ಬಳಸುತ್ತಾರೆ. ಐಆರ್‍ಸಿಟಿಸಿ 139 ವಿಚಾರಣೆ ಮತ್ತು ಹೆಲ್ಪ್‍ಲೈನ್ ಸೇವೆಗಳನ್ನು 2007ರಲ್ಲಿ ಭಾರತ್ ಬಿಪಿಒ ಸರ್ವೀಸ್ ಲಿಮಿಟೆಡ್ ತನ್ನ ತಾಂತ್ರಿಕ ಪಾಲುದಾರನಾಗಿ ಪ್ರಾರಂಭಿಸಿತು. ಈ ಹೆಲ್ಪ್‍ಲೈನ್ ರೈಲು ಕಾಯ್ದಿರಿಸುವಿಕೆ, ಆಗಮನ ಮತ್ತು ನಿರ್ಗಮನಕ್ಕೆ ಸಂಬಂಧಿಸಿದಂತೆ ಅಲ್ಲದೆ, ಭದ್ರತೆ, ವೈದ್ಯಕೀಯ ಮತ್ತಿತರೆ ವಿಶೇಷ ಅಗತ್ಯಗಳಿಗೆ ಕರೆ ಮಾಡುತ್ತಾರೆ.
ಚಲಿಸುತ್ತಿದ್ದ ರೈಲು ಹತ್ತಲು ಹೋದ ಮಹಿಳೆ, ಜಾರಿ ಬಿದ್ದಾಕೆಯನ್ನು ರಕ್ಷಿಸಿದ RPF ಸಿಬ್ಬಂದಿ
ಪ್ರಯಾಣಿಕರಲ್ಲಿ ವಿಶ್ವಾಸ ಮೂಡಿಸಲು ಭಾರತೀಯ ರೈಲ್ವೆ ಮತ್ತು ಟ್ರೂಕಾಲರ್ ಸಹಯೋಗ
• ದಿ ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್(ಐಆರ್‍ಸಿಟಿಸಿ) ಮತ್ತು ಟ್ರೂಕಾಲರ್ ಒಟ್ಟಿಗೆ ಸಂಚಹನಕ್ಕೆ ಹೆಚ್ಚಿನ ವಿಶ್ವಾಸ ಪೂರೈಸಲಿವೆ
• ಟ್ರೂಕಾಲರ್ ವೆರಿಫೈಡ್ ಗುರುತು ವಂಚನೆಯನ್ನು ಕಡಿಮೆ ಮಾಡಿ ಜನರಿಗೆ ಅವರ ಪ್ರಮುಖ ಸಂವಹನಗಳಾದ ನಿಮ್ಮ ಬುಕಿಂಗ್ ವಿವರಗಳು ಮತ್ತು PNR ಸ್ಟೇಟಸ್ ಅನ್ನು IRTC ಪೂರೈಸುತ್ತದೆಯೇ ಹೊರತು ಬೇರೆಯವರ ಮೂಲಕ ಅಲ್ಲ
ಭಾರತೀಯ ರೈಲ್ವೇ ಹಂತ ಹಂತದಲ್ಲಿ ಆಧುನೀಕರಣಗೊಳ್ಳುತ್ತಾ ಬಂದಿದೆ. 1837ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ರೈಲು ಸಾರಿಗೆ ಆರಂಭಗೊಂಡಿತು. 1845ರಲ್ಲಿ ಗೋದಾವರಿ ಅಣೆಕಟ್ಟ ನಿರ್ಮಾಣಕ್ಕೆ ದೋವಲೇಶ್ವರಿಂದ ರಾಜಮುಂದರಿಗೆ ರೈಲು ಸೇವೆ ಆರಂಭಗೊಂಡಿತು. ಕಲ್ಲು ಸಾಗಾಣಿಕೆಗೆ ರೈಲು ಸೇವೆ ಬಳಸಿಕೊಳ್ಳಲಾಯಿತು.
1853ರಲ್ಲಿ ಮೊದಲ ಪ್ರಯಾಣಿಕ ರೈಲು ಭಾರತದಲ್ಲಿ ಓಡಾಟ ಆರಂಭಿಸಿತು. ಮುಂಬೈನಿಂದ ಥಾಣೆಗೆ ಸಂಚಾರ ನಡೆಸಿತು. 34 ಕಿಲೋಮೀಟರ್ ದೂರದ ಪ್ರಯಾಣ ಇದಾಗಿತ್ತು. ಹೀಗೆ ಆರಂಭಗೊಂಡ ಭಾರತೀಯ ರೈಲ್ವೇ ವಿಶ್ವದ ನಾಲ್ಕನೇ ಅತೀ ದೊಡ್ಡ ರೈಲು ಸಂಪರ್ಕ ಅನ್ನೋ ಹೆಗ್ಗಳಿಕಗೆ ಪಾತ್ರವಾಗಿದೆ. ಬರೋಬ್ಬರಿ 67,956 ಕಿಲೋಮೀಟರ್ ದೂರ ಜಾಲ ಹೊಂದಿದೆ.
ಮಾರ್ಚ್ 2020ರವರೆಗೆ ಭಾರತೀಯ ರೈಲ್ವೇ 808.6 ಕೋಟಿ ಪ್ರಯಾಣಿಕರನ್ನು ಸಾಗಿಸಿದ ಹೆಗ್ಗಳಿಕೆಗೆ ಹೊಂದಿದೆ. ಸರಿಸುಮಾರು 1 ಲಕ್ಷ ಮಂದಿ ಪ್ರತಿ ದಿನ ರೈಲು ಸಂಚಾರ ಮಾಡುತ್ತಿದ್ದಾರೆ.
ಕೊರೋನಾ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ರೈಲು ಬೋಗಿಗಳನ್ನು ಆಸ್ಪತ್ರೆಗಳಾಗಿ ಪರಿವರ್ತಿಸಲಾಗಿತ್ತು. ಇನ್ನು ದೇಶದಲ್ಲಿ ಆಕ್ಸಿಜನ್ ಕೊರತೆ ಎದುರಾದಾಗ ಭಾರತೀಯ ರೈಲ್ವೇ ದೇಶದ ಮೂಲೆ ಮೂಲೆಗೆ ಆಮ್ಲಜನ ಪೂರೈಕೆ ಮಾಡಿ ಜನರ ಜೀವ ಉಳಿಸಿತ್ತು.