ಕನ್ನಡ, ಹಿಂದಿ ಬಳಿಕ ಬಂಗಾಳಿ, ಪಂಜಾಬಿ, ತೆಲುಗು ಭಾಷೆ ಸೇರಿಸಿದ ಸ್ನ್ಯಾಪ್‌ಚಾಟ್

By Suvarna NewsFirst Published Jun 9, 2021, 4:41 PM IST
Highlights

ಭಾರತೀಯ ಭಾಷೆಗಳ ಕಲಿಕೆ ಮತ್ತು ಅವುಗಳನ್ನು ಅರಿಯುವುದಕ್ಕಾಗಿ ಸ್ನ್ಯಾಪ್‌ಚಾಟ್ ಲರ್ನ್ ಲ್ಯಾಂಗ್ವೆಜ್ ಲೆನ್ಸ್‌ ಪರಿಚಯಿಸಿದೆ. ಈ ಮೊದಲು ಹಿಂದಿ, ಕನ್ನಡ, ಮರಾಠಿಗೆ ಮಾತ್ರವೇ ಸೀಮಿತವಾಗಿದ್ದ ಈ ಲೆನ್ಸ್‌ಗಳಿಗೆ ಇದೀಗ ಬೆಂಗಾಳಿ, ತೆಲುಗು ಮತ್ತು ಪಂಜಾಬಿ ಭಾಷೆಯನ್ನು ಸೇರ್ಪಡೆ ಮಾಡಲಾಗಿದೆ.

ಸ್ಥಳೀಯ ಭಾಷೆಗಳಲ್ಲಿ ಸೇವೆಯನ್ನು ನೀಡುವುದು ಫಲಕಾರಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಹಳಷ್ಟು ಬಹು ರಾಷ್ಟ್ರೀಯ ಕಂಪನಿಗಳು ಎಷ್ಟು ಸಾಧ್ಯವೋ ಅಷ್ಟು ಸ್ಥಳೀಯ ಭಾಷೆಗಳಲ್ಲಿ ತಮ್ಮ ಸೇವೆಯನ್ನು ಒದಗಿಸುವ ಪ್ರಯತ್ನ ಮಾಡುತ್ತವೆ. ಇದಕ್ಕೆ ಸೋಷಿಯಲ್ ಮೀಡಿಯಾಗಳು, ಇ ಕಾಮರ್ಸ್ ತಾಣಗಳು ಹೊರತಲ್ಲ. ಈಗಾಗಲೇ ಫೇಸ್‌ಬುಕ್, ಟ್ವಿಟರ್ ಸೇರಿದಂತೆ ಅನೇಕ ತಾಣಗಳು ಭಾರತೀಯ ಸ್ಥಳೀಯ ಭಾಷೆಗಳಲ್ಲಿ ಸೇವೆಯನ್ನು ಒದಗಿಸುತ್ತಿವೆ. ಆದರೆ, ಮಲ್ಟಿ ಮೀಡಿಯಾ ಮೆಸೆಜಿಂಗ್ ಆಪ್ ‘ಸ್ನ್ಯಾಪ್ ಚಾಟ್’ ಈ ವಿಷಯದಲ್ಲಿ ತುಸು ಭಿನ್ನವಾಗಿ ಆಲೋಚಿಸಿದೆ.

ಬಹು ಭಾಷೆಗಳ ತವರೂರಾಗಿರುವ ಭಾರತೀಯ ಭಾಷೆಗಳನ್ನು ಕಲಿಯುವ, ಅರಿಯುವ ಪ್ರಯತ್ನವನ್ನು ಈ ಅಮೆರಿಕ ಮೂಲದ ಸ್ನ್ಯಾಪ್‌ಚಾಟ್ ಆಪ್ ಮಾಡುತ್ತದೆ. ಇದಕ್ಕಾಗಿ ಅದು ಲರ್ನ್ ಲ್ಯಾಂಗ್ವೆಜ್ ಲೆನ್ಸ್ ಎಂಬ ಹೊಸ ಫೀಚರ್‌ ಅನ್ನು ಸೇರ್ಪಡೆ ಮಾಡಿರುವುದು ಗೊತ್ತಿರುವ ಸಂಗತಿಯಾಗಿದೆ.

6000mAh ಬ್ಯಾಟರಿಯ ರಿಯಲ್‌ಮಿ ಸಿ25ಎಸ್ ಫೋನ್ ಮಾರಾಟ ಶುರು
 
ಲರ್ನ್ ಲ್ಯಾಂಗ್ವೆಚ್ ಪ್ರೋಗ್ರಾಮ್‌ನಡಿ ಸ್ನ್ಯಾಪ್‌ಚಾಟ್ ಕಳೆದ ವರ್ಷವಷ್ಟೇ, ಹಿಂದಿ, ಕನ್ನಡ ಮತ್ತು ಮರಾಠಿ ಭಾಷೆಯನ್ನು ಪರಿಚಯಿಸಿತ್ತು. ಇದೀಗ ಈ ಪಟ್ಟಿಯನ್ನು ಮತ್ತಷ್ಟು ಬೆಳೆಸಿರುವ ಸ್ನ್ಯಾಪ್‌ಚಾಟ್, ಬಂಗಾಳಿ,  ಪಂಜಾಬಿ ಮತ್ತು ತೆಲಗು ಭಾಷೆಗಳನ್ನು ಸೇರ್ಪಡೆ ಮಾಡಿದೆ. ಈ ಮೂಲಕ ನಿಧಾನವಾಗಿ ಭಾರತೀಯ ಭಾಷೆಗಳನ್ನು ತನ್ನ ಲರ್ನ್ ಲ್ಯಾಂಗ್ವೆಜ್‌ ಲೆನ್ಸ್‌ಗಳಿಗೆ ಸೇರಿಸುತ್ತಿದೆ. ಮುಂಬರುವ ದಿನಗಳಲ್ಲಿ ಇನ್ನು ಭಾಷೆಗಳ ಸೇರ್ಪಡೆಯನ್ನು ನಿರೀಕ್ಷಿಸಹುದುದಾಗಿದೆ.

ಸ್ನ್ಯಾಪ್‌ಚಾಟ್ ಲರ್ನ್ ಲ್ಯಾಂಗ್ವೆಜ್ ಲೆನ್ಸ್‌ಗಳನ್ನು ಪರಿಚಯಿಸುವ ಮೂಲಕ ಭಾರತೀಯ ಭಾಷೆಗಳ ಕಲಿಕೆಯನ್ನು ಸರಾಗಗೊಳಿಸಿದೆ. ಈ ಲರ್ನ್ ಲ್ಯಾಂಗ್ವೆಜ್ ಲೆನ್ಸ್‌ಗಳು ಆಗ್ಯುಮೆಂಟೆಡ್ ರಿಯಾಲ್ಟಿ(ಎಆರ್) ಮತ್ತು ಮಷಿನ್ ಲರ್ನಿಂಗ್(ಎಂಎಲ್)ಗಳ ಸಂಯೋಜನೆಯಾಗಿದ್ದು, ರಿಯಲ್ ಟೈಮ್‌ನಲ್ಲಿ ಸಾವಿರಕ್ಕೂ ಅಧಿಕ ವಸ್ತುಗಳನ್ನು ಗುರುತಿಸಿ ಅವುಗಳ ಹೆಸರನ್ನು ಅನುವಾದಿಸುವ ಸಾಮರ್ಥ್ಯವನ್ನು ಹೊಂದಿವೆ. 

ಕಳೆದ ವರ್ಷವಷ್ಟೇ ಸ್ನ್ಯಾಪ್‌ಚಾಟ್ ಹಿಂದಿ, ಕನ್ನಡ ಮತ್ತು ಮರಾಠಿ ಭಾಷೆಗಳನ್ನು ಸೇರ್ಪಡೆ ಮಾಡಿತ್ತು. ಇದೀಗ ಹೊಸದಾಗಿ ಲರ್ನ್ ಲ್ಯಾಂಗ್ವೆಜ್ ಲೆನ್ಸ್‌ಗಳಿಗೆ ಬಂಗಾಳಿ, ಪಂಜಾಬಿ ಮತ್ತು ತೆಲುಗು ಭಾಷೆಗಳನ್ನು ಸೇರಿಸಿದೆ. ಇವುಗಳ ಜತೆಗೆ ಪರಿಸರ ದಿನದ ಮಹತ್ವ ಸಾರುವ ನಿಟ್ಟಿನಲ್ಲಿ ಒಂಬತ್ತು ಬಿಟ್ಮೋಜಿಗಳನ್ನು ಸೇಪರ್ಡೆ ಮಾಡಿದೆ.

ಮನುಷ್ಯ ಮುಖದ ಭಾವನೆ ಅಭಿವ್ಯಕ್ತಿಸುವ ಎಐ ಆಧರಿತ ರೊಬೋಟ್ ಅಭಿವೃದ್ಧಿ

ಸ್ನ್ಯಾಪ್‌ಚಾಟ್ ಲೆನ್ಸ್ ನೆಟ್ವರ್ಕ್‌ನ ಸದಸ್ಯ ಅತಿತ್ ಖರೆಲ್ ಅವರು ಈ ಹೊಸ ಲರ್ನ್ ಲ್ಯಾಂಗ್ವೆಜ್ ಲೆನ್ಸ್‌ಗಳನ್ನು ಸೃಷ್ಟಿಸಿದ್ದಾರೆ. ಬಂಗಾಳಿ, ಹಿಂದಿ, ಕನ್ನಡ, ಮರಾಠಿ ಮತ್ತು ತೆಲುಗು ಭಾಷೆಗಳಲ್ಲಿ ಈ ಹೊಸ ಲರ್ನ್ ಲ್ಯಾಂಗ್ವೆಜ್ ಲೆನ್ಸ್‌ಗಳು ಲಭ್ಯವಿದ್ದು, ಪರ್ಯಾಯವಾಗಿ ಬಳಕೆದಾರರು ಈ ಲೆನ್ಸ್‌ಗಳನ್ನು ಬಳಸಿಕೊಂಡು ಹಿಂದಿ ಕಲಿಯಿರಿ, ಕನ್ನಡ ಕಲಿಯಿರಿ, ಬಂಗಾಳಿ ಕಲಿಯಿರಿ ಎಂದು ಸರ್ಚ್ ಮಾಡಬಹುದು.

ಭಾರತದಲ್ಲಿನ ಸಾಂಸ್ಕೃತಿ ವೈವಿಧ್ಯತೆ ಹಾಗೂ ಇಲ್ಲಿ ಮಾತನಾಡುವ ನಾನಾ ಭಾಷೆಗಳ ಬಗ್ಗೆ ನಾನು ಮಾರುಹೋಗಿದ್ದೇನೆ. ಭಾರತೀಯ ಭಾಷೆಗಳನ್ನು ಕಲಿಯುವುದನ್ನು ಸರಳಗೊಳಿಸುವುದು ಈ  ಲೆನ್ಸ್‌ಗಳ ಸೃಷ್ಟಿಯ ಹಿಂದಿರುವ ಉದ್ದೇಶವಾಗಿದೆ. ವಿಶೇಷವಾಗಿ ಹೊಸಬರಿಗೆ ಇದರಿಂದ ಹೆಚ್ಚು ಅನುಕೂಲವಾಗಿದೆ. ಎಆರ್ ಅಂತೂ ನಿಜವಾಗಲೂ ಮಜೇದಾರ್ ಆಗಿದ್ದು, ಕಲಿಕೆಯನ್ನು ಇದು ಹೆಚ್ಚು ಸಂವಾದಿಯಾಗಿ ಮತ್ತು ಸಿಗುವ ಹಾಗಿಯೇ ಮಾಡುತ್ತದೆ ಎಂದು ಸ್ನ್ಯಾಪ್‌ಚಾಟ್‌ಗಳಿಗೆ ಲರ್ನ್ ಲ್ಯಾಂಗ್ವೆಜ್ ಲೆನ್ಸ್ ರೂಪಿಸಿರುವ ಅತಿತ್ ಖರೆಲ್ ಹೇಳಿದ್ದಾರೆ.

ಲರ್ನ್ ಲ್ಯಾಂಗ್ವೆಜ್ ಹೇಗೆ ಕೆಲಸ ಮಾಡುತ್ತದೆ?
ಈ ಹೊಸ ಲರ್ನ್ ಲ್ಯಾಂಗ್ವೆಜ್‌ ಲೆನ್ಸ್‌ಗಳು ಸಾವಿರಕ್ಕೂ ಅಧಿಕ ವಸ್ತುಗಳನ್ನು ಗುರುತಿಸಬಲ್ಲವು ಮತ್ತು ಅವುಗಳ ಹೆಸರನ್ನು ರಿಯಲ್ ಟೈಮ್‌ನಲ್ಲಿ ಅನುವಾದಿಸಬಲ್ಲವು. ಈ ಲೆನ್ಸ್‌ಗಳನ್ನು ಎಆರ್ ಮತ್ತು ಎಂಎಲ್‌ನಲ್ಲಿ ಬಳಸಲಾಗುತ್ತದೆ. ಈ ಲೆನ್ಸ್‌ಗಳನ್ನು ಬಳಸಿಕೊಂಡು ಬಳಕೆದಾರರು ಒಮ್ಮೆ ವಸ್ತಗಳನ್ನು ಸ್ಕ್ಯಾನ್ ಮಾಡಿದರೆ, ಆ ವಸ್ತುಗಳನ್ನು ಅದು ಅನುವಾದದೊಂದಿಗೆ ತೋರಿಸುತ್ತದೆ ಮತ್ತು ಅದರ ಹೆಸರ ಉಚ್ಛಾರಣೆಗಾಗಿ ಫೋನೆಟಿಕ್ ಟ್ರಾನ್ಸ್‌ಕ್ರಿಪ್ಷನ್ ಕೂಡ ದೊರೆಯುತ್ತದೆ.

ಐಫೋನ್ ಗ್ರಾಹಕರು ತಮ್ಮ ನಿಷ್ಠೆ ಬದಲಿಸಿದ್ರಾ? ಆಂಡ್ರಾಯ್ಡ್‌ನತ್ತ ಲಗ್ಗೆ ಇಟ್ಟ ಬಳಕೆದಾರರು!

click me!