ಮಾಸ್ಕ್, ಲಸಿಕೆ ಮಹತ್ವ ಸಾರುವ ವೆಬ್ ಗೇಮ್ ಅಭಿವೃದ್ಧಿಪಡಿಸಿದ ಬೆಂಗಳೂರಿನ ಬಾಲಕ

By Suvarna NewsFirst Published Jun 7, 2021, 7:10 PM IST
Highlights
  • 14 ವರ್ಷದ ಬಾಲಕನಿಂದ ಗೋ ಕೊರೋನಾ ಗೋ ವೆಬ್ ಗೇಮ್ ಅಭಿವೃದ್ಧಿ
  • ಮಾಸ್ಕ್, ಲಸಿಕೆ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುವ ವಿಶೇಷ ಗೇಮ್
  • ಅನಿಮೇಷನ್, ಉತ್ಸಾಹಭರಿತ ಸಂಗೀತ ಮತ್ತು ಆಸಕ್ತಿದಾಯಕ ಗೇಮ್

ಬೆಂಗಳೂರು(ಜೂ.07): ಕೊರೋನಾ ವೈರಸ್ 2ನೇ ಅಲೆ ವಿರುದ್ಧ ಭಾರತ ಹೋರಾಟ ಮುಂದುವರಿದಿದೆ. ಇದರ ನಡುವೆ ಕೊರೋನಾದಿಂದ ಸುರಕ್ಷಿತವಾಗಿರಲು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲಿಸುವುದು ಹಾಗೂ ಅತೀ ಮುಖ್ಯವಾಗಿ ಲಸಿಕೆ ಪಡೆಯುವುದು. ಇದೀಗ ಮಾಸ್ಕ್ ಧಾರಣೆ, ಲಸಿಕೆ ಮಹತ್ವ ಸಾರುವ ವೆಬ್ ಗೇಮ್ ಒಂದನ್ನು ಅಭಿವೃದ್ಧಿಪಡಿಸಲಾಗಿದೆ. ಗೋ ಕೊರೋನಾ ಗೋ ಅನ್ನೋ ಈ ಗೇಮ್ ಅಭಿವೃದ್ಧಿಪಡಿಸಿರವುದು ಬೆಂಗಳೂರಿನ 14 ವರ್ಷದ ಬಾಲಕ ಅಭಿನವ್ ರಂಜಿತ್ ದಾಸ್. 

ಸ್ಟೋರ್‌ ರೂಂನಲ್ಲಿದ್ದು ಗೇಮ್ ಆಡುತ್ತಾ ತಿಂಗಳಿಗೆ 36 ಲಕ್ಷ ರೂ. ಸಂಪಾದನೆ!.

ವೈಟ್‍ಹ್ಯಾಟ್ ಜೂನಿಯರ್  ಅಭಿನವ್, ಆಟದ ಅದ್ಭುತ ಅನಿಮೇಷನ್, ಉತ್ಸಾಹಭರಿತ ಸಂಗೀತ ಮತ್ತು ಆಸಕ್ತಿದಾಯಕ ಕಾರ್ಯಗಳೊಂದಿಗೆ ನೂತನ ಗೇಮ್ ಅಭಿವೃದ್ಧಪಡಿಸಿದ್ದಾನೆ.  ವೈರಸ್ ವಿರುದ್ಧದ ಹೋರಾಟದಲ್ಲಿ ತೆಗೆದುಕೊಳ್ಳಬೇಕಾದ ಎಲ್ಲಾ ಮುನ್ನೆಚ್ಚರಿಕೆಗಳ ಬಗ್ಗೆ ಆಟಗಾರರಿಗೆ ತಿಳಿಸುತ್ತದೆ. ವೈರಸ್ ಸೋಲಿಸಲು ಮಾಸ್ಕ್ ಮತ್ತು ಪಿಪಿಇ ಕಿಟ್‍ಗಳಂತಹ ಸುರಕ್ಷತಾ ಸಾಧನಗಳಿಗೆ ಪ್ರವೇಶ ಪಡೆಯುವ ಹಾಗೂ  ಆಟಗಾರನು ವೈರಸ್ ಸೇರಿದಂತೆ ಹರ್ಡಲ್ (ಅಡೆತಡೆ)ಗಳನ್ನು ದಾಟುವ ಮೂರು ಹಂತಗಳನ್ನು ಹೊಂದಿದೆ. ಕೋವಿಡ್ -19 ಲಸಿಕೆಯನ್ನು ಆಟಗಾರನಿಗೆ ಪುರಸ್ಕರವಾಗಿ ನೀಡುವ ಮೂರನೇ ಮತ್ತು ಅಂತಿಮ ಹಂತವನ್ನು ತಲುಪುವುದೇ ಆಟದ ಗುರಿಯಾಗಿದೆ.

ಪ್ರಸ್ತುತ ಪರಿಸ್ಥಿತಿ ಆಟವನ್ನು ಅಭಿವೃದ್ಧಿಪಡಿಸಲು ನನ್ನನ್ನು ಪ್ರೇರೇಪಿಸಿತು. ಅಂತಿಮ ಹಂತ ತಲುಪಲು ಆಟಗಾರನು ಅಡೆತಡೆಗಳನ್ನು ನಿವಾರಿಸಬೇಕಾಗಿರುವುದರಿಂದ, ಜನರು ತಮ್ಮನ್ನು ವೈರಸ್‍ನಿಂದ ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದನ್ನು ಮೋಜಿನ ರೀತಿಯಲ್ಲಿ ಅವರಿಗೆ ತಿಳಿಸಲು ಆಟವು ಪ್ರಯತ್ನಿಸುತ್ತದೆ. ಇದು ಸುರಕ್ಷತೆಯನ್ನು ಕುರಿತ ಸಂದೇಶದೊಂದಿಗೆ ಕೊನೆಗೊಳ್ಳುತ್ತದೆ. ಈ ಆಟವನ್ನು ಆಡುವ ಪ್ರತಿಯೊಬ್ಬರೂ ಇದತಿಂದ ಸ್ಫೂರ್ತಿ ಪಡೆಯಬೇಕು ಮತ್ತು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ನಾನು ಬಯಸುತ್ತೇನೆ ಹಾಗೂ ಇದರಿಂದ ನಾವು ಈ ವೈರಸ್ ಅನ್ನು ಸೋಲಿಸಬಹುದು ಎಂದು ಅಭಿನವ್ ಹೇಳಿದ್ದಾನೆ.

ಮೊಬೈಲ್‌ ಕಸಿದು ಮಕ್ಕಳಿಗೆ ಸಾಧಕರ ಜೀವನ ಪರಿಚಯ... ಮೋದಿಯ ಒಂದು ಗೊಂಬೆಯ ಕತೆ!.

ಅಭಿನವ್ ಅವರು ಸುಮಾರು 8 ತಿಂಗಳಿನಿಂದ ವೈಟ್‍ಹ್ಯಾಟ್ ಜೂನಿಯರ್ ನೊಂದಿಗೆ ಅಧ್ಯಯನ ಮಾಡುತ್ತಿದ್ದಾರೆ ಮತ್ತು 84 ಕೋಡಿಂಗ್ ತರಗತಿಗಳನ್ನು ಪೂರ್ಣಗೊಳಿಸಿದ್ದಾರೆ. ಅವರು ಕೋಡಿಂಗ್ ಅನ್ನು ತುಂಬಾ ಇಷ್ಟಪಡುತ್ತಾರೆ.

ನಮಗೆ ಇದು ಬಹಳ ಹೆಮ್ಮೆಯ ಕ್ಷಣವಾಗಿದೆ. ಇದೊಂದು ಮೋಜಿನ ಆಟವಾಗಿರುತ್ತದೆ ಆದರೆ ಜೊತೆಗೆ, ಇದು ಒಂದು ಪ್ರಮುಖ ಸಂದೇಶವನ್ನು ಸಹ ನೀಡುತ್ತದೆ. ಅಭಿನವ್ ಪ್ರತಿದಿನ ಕಲಿಯುತ್ತಿರುವ ವಿಧಾನದ ಬಗ್ಗೆ ನಾವು ಉತ್ಸುಕರಾಗಿದ್ದೇವೆ ಮತ್ತು ಈಗ ಹೆಚ್ಚಿನ ಆಟಗಳನ್ನು ಸೃಷ್ಟಿಸಲು ಯೋಜಿಸುತ್ತಿದ್ದೇವೆ ಎಂದು ಅಭಿನವ್  ತಾಯಿ ಸೀಮಾ ರಂಜಿತ್ ಹೇಳಿದರು.

click me!