ಫೇಸ್‌ಬುಕ್, ಗೂಗಲ್ ಸೇರಿ MNCಗೆ ಮತ್ತೊಂದು ಬರೆ; ಶೇ.20ರಷ್ಟು ತೆರಿಗೆ ವಿಧಿಸಲು ಮುಂದಾದ ಕೇಂದ್ರ!

By Suvarna News  |  First Published Jun 7, 2021, 3:00 PM IST
  • IT ನಿಯಮ ಹಗ್ಗ ಜಗ್ಗಾಟ ನಡೆಯುತ್ತಿರುವ ಬೆನ್ನಲ್ಲೇ ಮತ್ತೊಂದು ಶಾಕ್
  • ಭಾರತದಲ್ಲಿರುವ ಟೆಕ್ ದಿಗ್ಗಜ ಬಹುರಾಷ್ಟ್ರೀಯ ಕಂಪನಿಗಳಿಗೆ ಶೇ.20 ರಷ್ಟು ತೆರಿಗೆ
  • ನಿವ್ವಳ ಲಾಭದ ಮೇಲೆ ತೆರಿಗೆ ವಿಧಿಸಲು ಜಿ7 ಶೃಂಗ ಸಭೆಯಲ್ಲಿ ನಿರ್ಧಾರ

ನವದೆಹಲಿ(ಜೂ.07): ಭಾರತದಲ್ಲಿ ಸಾಮಾಜಿಕ ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ಹೊಸ ಐಟಿ ನಿಯಮ ಪಾಲಿಸಲು ಖಡಕ್ ವಾರ್ನಿಂಗ್ ನೀಡಿದೆ. ನಿಯಮ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿ ಜಟಾಪಟಿ ನಡೆಯುತ್ತಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಇದೀಗ ಫೇಸ್‌ಬುಕ್, ಗೂಗಲ್, ಆ್ಯಪಲ್ ಸೇರಿದಂತೆ ಬಹುರಾಷ್ಟ್ರೀಯ ಟೆಕ್ ಕಂಪನಿಗಳಿಗೆ ಶೇಕಡಾ 20 ರಷ್ಟು ತೆರಿಗೆ ವಿಧಿಸಲು ಭಾರತ ಮುಂದಾಗಿದೆ.

ಬ್ಲೂ ಟಿಕ್ ಮಾರ್ಕ್ ತೆಗೆಯುವಲ್ಲೂ ರಾಜಕೀಯ ಮಾಡಿದ ಟ್ವಿಟರ್!...

Latest Videos

undefined

G7 ಒಕ್ಕೂಟ ಸಭೆಯಲ್ಲಿ 7 ರಾಷ್ಟ್ರಗಳು ಬಹುರಾಷ್ಟ್ರೀಯ ಕಂಪನಿಗಳ ಮೇಲೆ ಶೇಕಡಾ 15 ರಷ್ಟು ತೆರಿಗೆ ವಿಧಿಸಲು ಒಮ್ಮತದ ತೀರ್ಮಾನ ಮಾಡಿವೆ.  ತಂತ್ರಜ್ಞಾನದ ಕ್ಷೇತ್ರದ ದಿಗ್ಗಜ ಕಂಪನಿಗಳು ಭೌತಿಕವಾಗಿ ಉಪಸ್ಥಿತಿ ಇಲ್ಲದ ದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಕಂಪನಿಯ ನಿವ್ವಳ ಲಾಭದಲ್ಲಿ ಶೇಕಡಾ 15 ರಷ್ಟು ತೆರಿಗೆಯನ್ನು ಆಯಾ ದೇಶಕ್ಕೆ ನೀಡಬೇಕು ಎಂಬ ನಿರ್ಧಾರವನ್ನು ಜಿ7 ಒಕ್ಕೂಟ ರಾಷ್ಟ್ರಗಳು ತೆಗೆದುಕೊಂಡಿದೆ.

ಭಾರತ, ಬ್ರಿಟನ್, ಅಮೆರಿಕ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ ಹಾಗೂ ಜಪಾನ್ ದೇಶಗಳ ಒಕ್ಕೂಟ ಜಿ7 ಈ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಕನಿಷ್ಠ ಶೇ.15 ರಷ್ಟು ತೆರಿಗೆ ವಿಧಿಸುವ ಕುರಿತು ಸಭೆಯ ಅಂತಿಮ ದಿನ ಎಲ್ಲಾ ದೇಶಗಳು ಸಹಿ ಹಾಕಲಿದೆ. 

ಉಪರಾಷ್ಟ್ರಪತಿ ಬಳಿಕ RSS ಮುಖ್ಯಸ್ಥರ ಬ್ಲೂ ಬ್ಯಾಡ್ಜ್ ರದ್ದು ಮಾಡಿ ಪೇಚಿಗೆ ಸಿಲುಕಿದ ಟ್ವಿಟರ್!

ಶೇಕಡಾ 15 ರಷ್ಟು ತೆರಿಗೆಯನ್ನು ಭಾರತ ಶೇಕಡಾ 20ಕ್ಕೆ ಏರಿಸಿ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುರಾಷ್ಟ್ರೀಯ ಟೆಕ್ ಕಂಪನಿಗಳ ಮೇಲೆ ವಿಧಿಸಲು ಮುಂದಾಗಿದೆ.  ಜಾಗತಿಕೆ ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಜಿ7 ಒಕ್ಕೂಟ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 

click me!