ಅನ್‌ಲಿಮಿಟೆಡ್ ಕಾಲ್ ಜೊತೆ ಸನ್‌ NXT, ಸೋನಿ ಲಿವ್ ಸಬ್‌ಸ್ಕ್ರಿಪ್ಶನ್ ಉಚಿತ, ವಿ ಹೊಸ ಆಫರ್!

By Suvarna News  |  First Published Apr 26, 2023, 3:57 PM IST

ಅನಿಯಮಿತ ಕರೆಗಳು, ಪ್ರತಿದಿನ 100 ಎಸ್‌ಎಂಎಸ್‌, ಒಟಿಟಿ ಪ್ರಯೋಜನ ಮತ್ತು  ದೈನಂದಿನ 2ಜಿಬಿ ಡೇಟಾ ಸೇರಿದಂತೆ ಹಲವು ಪ್ರಯೋಜನದ ವಿಶೇಷ ಆಫರ್ ವಿ ಘೋಷಿಸಿದೆ. ನೂತನ ಆಫರ್ ಕುರಿತ ವಿವರ ಇಲ್ಲಿದೆ.


ನವದೆಹಲಿ(ಏ.26): ಟೆಲಿಕಾಂ ಕ್ಷೇತ್ರದಲ್ಲಿ ಪೈಪೋಟಿ ಹೆಚ್ಚಾಗಿದೆ. ಒಂದೆಡೆ ಐಪಿಎಲ್ ಮತ್ತೊಂದೆಡೆ ಚನಾವಣೆಗಳಿಂದ ಇದೀಗ ಡೇಟಾ ಹೆಚ್ಚು ಬಳಕೆಯಾಗುತ್ತಿದೆ. ಇದಕ್ಕೆ ತಕ್ಕಂತೆ ಟೆಲಿಕಾಂ ಕಂಪನಿಗಳು ಹೊಸ ಹೊಸ ಯೋಜನೆ ಘೋಷಿಸುತ್ತಿದೆ. ಇದೀಗ ವೋಡಾಫೋನ್ ಐಡಿಯಾ(ವಿ) ಸ್ಮಾರ್ಟ್ ರಿಚಾರ್ಜ್ ಯೋಜನೆ ಘೋಷಿಸಿದೆ.   ಭರಪೂರ ಮನರಂಜನೆ ಒಳಗೊಂಡಿರುವ ಎರಡು ಮಾಸಿಕ ರೀಚಾರ್ಜ್‌ ಯೋಜನೆಗಳನ್ನು  ದೇಶದಾದ್ಯಂತ   ಪ್ರೀಪೇಯ್ಡ್‌ ಬಳಕೆದಾರರಿಗಾಗಿ ವಿ ಪರಿಚಯಿಸಿದೆ. ಈ ಯೋಜನೆಗಳು 1 ತಿಂಗಳ ಮಾನ್ಯತೆಯೊಂದಿಗೆ ಅನಿಯಮಿತ ಕರೆಗಳು, ಪ್ರತಿದಿನ 100 ಎಸ್‌ಎಂಎಸ್‌, ಒಟಿಟಿ ಪ್ರಯೋಜನ ಮತ್ತು  ದೈನಂದಿನ 2ಜಿಬಿ ಡೇಟಾ  ಒದಗಿಸುತ್ತವೆ. 

368 ರೂಪಾಯಿ ಮೊತ್ತದ ಪ್ರಿಪೇಯ್ಡ್ ರೀಚಾರ್ಜ್ ಮಾಡಿದರೆ ಬಳಕೆದಾರರಿಗೆ ಟಿವಿ ಮತ್ತು ಮೊಬೈಲ್‌ನಲ್ಲಿ ಸನ್ ಎನ್‌ಎಕ್ಸ್‌ಟಿ (Sun NXT) ಚಂದಾದಾರಿಕೆ ನೀಡುತ್ತದೆ. ಇದು ಕನ್ನಡ, ತಮಿಳು, ಮಲಯಾಳಂ, ತೆಲುಗು, ಮರಾಠಿ ಮತ್ತು ಬಾಂಗ್ಲಾ ಭಾಷೆಗಳಲ್ಲಿ ಕೆಲವು ಅತ್ಯುತ್ತಮ ಮತ್ತು ವ್ಯಾಪಕವಾದ ಪ್ರಾದೇಶಿಕ ಚಲನಚಿತ್ರಗಳು, ಟಿವಿ ಷೋಗಳು, ಸಂಗೀತ ವಿಡಿಯೊಗಳನ್ನು ವೀಕ್ಷಿಸುವುದಕ್ಕೆ ಅನುವು ಮಾಡಿಕೊಡುತ್ತದೆ. ಸನ್‌ ಎನ್‌ಎಕ್ಸ್‌ಟಿ ಚಂದಾದಾರಿಕೆಯು ದೈನಂದಿನ 2ಜಿಬಿ ಡೇಟಾ + ಅನಿಯಮಿತ ಕರೆಗಳು + ಪ್ರತಿ ದಿನವೂ 100 ಎಸ್‌ಎಂಎಸ್‌ ಗಳಿಗೆ ಹೆಚ್ಚುವರಿಯಾಗಿರುತ್ತದೆ.  ದೂರಸಂಪರ್ಕ ಮತ್ತು ದೂರಸಂಪರ್ಕಯೇತರ ಪ್ರಯೋಜನಗಳ ಮಾನ್ಯತೆ 30 ದಿನಗಳವರೆಗೆ ಇರಲಿದೆ.

Tap to resize

Latest Videos

undefined

 

ಕರ್ನಾಟಕದ ವಿ ಬಳಕೆದಾರರಿಗೆ ಬಂಪರ್ ಕೊಡುಗೆ, ಉಚಿತ ವಾಯ್ಸ್ ಓವರ್ ವೈಫೈ ಕಾಲ್ ಸೌಲಭ್ಯ!

‘ಸನ್‌ ಎನ್‌ಎಕ್ಸ್‌ಟಿ’ಯು, 4000ಕ್ಕೂ ಹೆಚ್ಚು ಚಲನಚಿತ್ರಗಳು 10,000ಕ್ಕೂ ಹೆಚ್ಚು ಗಂಟೆಗಳ ವಿಡಿಯೊ ಆನ್ ಡಿಮ್ಯಾಂಡ್ ವಿಷಯ ಮತ್ತು 33 ಲೈವ್‌ ಟಿವಿ ಚಾನೆಲ್‌ಗಳು, ಪ್ರಾದೇಶಿಕ ಮನರಂಜನೆಯ ಹುಡುಕಾಟದಲ್ಲಿ ಇರುವವರಿಗೆ ‌ಸುಲಭವಾಗಿ ದೊರೆಯುವ ಅಪ್ಲಿಕೇಷನ್ ಆಗಿದೆ. ದಕ್ಷಿಣ ಭಾರತದ ಮಾಹಿತಿ / ವಿಷಯ ಇಷ್ಟಪಡುವವರು ಸನ್ ಎನ್‌ಎಕ್ಸ್‌ಟಿ–ಯ ಇತ್ತೀಚಿನ ಬಹು ಜನಪ್ರಿಯ ರಾಂಗಿ, ಲಾಠಿ ಚಾರ್ಜ್, ಬಘೀರಾ, ಮಹಾವೀರ್ಯಾರ್, ತಿರುಚಿತ್ರಂಬಲಂ, ಅಬ್ಬರ, ಅನ್ನಾತ್ತೆ, ಬೀಸ್ಟ್, ಡಾಕ್ಟರ್‌ ಹಾಗೂ ಜನಪ್ರಿಯ ಟಿವಿ ಕಾರ್ಯಕ್ರಮಗಳಾದ ಎಥಿರ್ ನೀಚಲ್, ಸುಂದರಿ, ಪ್ರೇಮಾಸ್‌ ರಂಗ್ ಯಾವೆ, ವೊಂತರಿ ಗುಲಾಬಿ, ಕಲಿವೀಡು, ಕನಲ್ಪೂವು, ರಾಧಿಕಾ ಮುಂತಾದವುಗಳನ್ನು ಆಯ್ಕೆಮಾಡಿಕೊಳ್ಳಬಹುದು.

ಇನ್ನೊಂದೆಡೆ, ವಿಐ (Vi) 369 ರೂಪಾಯಿ ರೀಚಾರ್ಜ್ ಮಾಡಿದರೆ  ಗ್ರಾಹಕರಿಗೆ ಸೋನಿ ಲಿವ್‌ ನ (Sony LIV) ವೀಕ್ಷಿಸಬಹುದಾದ ಅತಿದೊಡ್ಡ ಕಾರ್ಯಕ್ರಮಗಳ ಸಂಗ್ರಹವನ್ನೇ ಒದಗಿಸಲಿದೆ. ಜೊತೆಗೆ ಮೊಬೈಲ್‌ ಮೂಲಕ ಕ್ರೀಡೆಗಳ ನೇರ ಪ್ರಸಾರ ವೀಕ್ಷಿಸಬಹುದು. ಇದಕ್ಕೆ ಹೆಚ್ಚುವರಿಯಾಗಿ ದೈನಂದಿನ 2GB ಡೇಟಾ + ಅನಿಯಮಿತ ಕರೆಗಳು + ದಿನಕ್ಕೆ 100 ಎಸ್‌ಎಂಎಸ್‌ಗಳೂ ಇರಲಿವೆ. ಈ ರೀಚಾರ್ಜ್‌ನೊಂದಿಗೆ, ವಿಐ (Vi) ಬಳಕೆದಾರರು ಸೋನಿ ಲೈವ್‌ನ ಜನಪ್ರಿಯ ಮಾಹಿತಿ, ಚಲನಚಿತ್ರಗಳು, ಪ್ರದರ್ಶನಗಳು, ಕ್ರೀಡೆಗಳ ನೇರ ಪ್ರಸಾರ, ಸೋನಿ ಲಿವ್‌ನ ಗ್ರಾಹಕರಿಗಾಗಿಯೇ ಸಿದ್ಧಪಡಿಸಿರುವ ವಿಶೇಷ ಮಾಹಿತಿ ಮುಂತಾದವುಗಳನ್ನು ಮೊಬೈಲ್‌ನಲ್ಲಿ ವೀಕ್ಷಿಸಬಹುದು. ಪ್ರಮುಖ ಕ್ರೀಡೆಗಳ ಪಂದ್ಯಾವಳಿಗಳಾದ ಯುಇಎಫ್‌ಎ ಚಾಂಪಿಯನ್‌ ಲೀಗ್‌, ಡಬ್ಲ್ಯುಡಬ್ಲ್ಯುಇ, ಬಂಡೆಸ್ಲಿಗಾ, ಜೊತೆಗೆ, ಸ್ಕ್ಯಾಮ್‌ 1992 – ದಿ ಹರ್ಷದ್‌ ಮೆಹ್ತಾ ಸ್ಟೋರಿ, ಮಹಾರಾಣಿ, ರಾಕೆಟ್‌ ಬಾಯ್ಸ್‌, ಗುಲ್ಲಕ್‌, ಪ್ರಾದೇಶಿಕ ಜನಪ್ರಿಯ ಗರ್ಗಿ ಸಾಲ್ಯುಟ್‌, ಕಾಣೆಕ್ಕಾಣೆ, ಶಾಂತಿ ಕ್ರಾಂತಿ, ಜೇಮ್ಸ್‌, ಇದಲ್ಲದೆ ಅಂತರರಾಷ್ಟ್ರೀಯ ಜನಪ್ರಿಯ ಷೋಗಳಾದ  ದಿ ಗುಡ್‌ ಡಾಕ್ಟರ್, ಅಕ್ಯೂಸ್ಡ್‌, ಲಕಿ ಹ್ಯಾಂಕ್‌, ಎ ಡಿಸ್ಕವರಿ ಆಫ್‌ ವಿಚಸ್‌ ಮತ್ತು ಆಸ್ಕರ್‌ ಪ್ರಶಸ್ತಿ ಪುರಸ್ಕೃತ ಚಲನಚಿತ್ರಗಳಾದ ಎವೆರಿಥಿಂಗ್ ಎವೆರಿವೇರ್ ಆಲ್ ಆ್ಯಟ್ ಒನ್ಸ್, ದಿ ವ್ಹೇಲ್‌ ವೀಕ್ಷಿಸಬಹುದು. ವಿವಿಧ ವಯೋಮಾನದವರು ಮತ್ತು ಗ್ರಾಹಕರ ವಿಭಿನ್ನ ಆಸಕ್ತಿಗಳಿಗೆ ತಕ್ಕಂತೆ ಬಳಕೆದಾರರಿಗಾಗಿ ಆಕರ್ಷಕ ಮಾಹಿತಿ ಕೊಡುಗೆಗಳ ದೊಡ್ಡ ಸಂಗ್ರಹವನ್ನೇ ಸೋನಿ ಲಿವ್‌ ಒಳಗೊಂಡಿದೆ.

Viನಿಂದ ಬಂಪರ್ ಆಫರ್, ಕೇವಲ 99 ರೂಪಾಯಿಗೆ ಕಾಲ್ ಹಾಗೂ ಡೇಟಾ ಪ್ಲಾನ್!

ನಿಜವಾಗಿಯೂ ಅನಿಯಮಿತ ಡೇಟಾ ಅನುಭವ ಒದಗಿಸುವ, ವಿಐ ನ (Vi) ಹೊಸ ₹ 368 ಮತ್ತು ₹ 369 ರೀಚಾರ್ಜ್‌ ಕೊಡುಗೆಗಳು 200ಜಿಬಿ ವರೆಗಿನ ವಾರಾಂತ್ಯದ ಡೇಟಾವನ್ನು ಮುಂಬರುವ ದಿನಗಳಿಗೆ ಮುಂದುವರೆಸಿಕೊಂಡು ಹೋಗುವ ಮತ್ತು ರಾತ್ರಿ 12 ರಿಂದ 6 ಗಂಟೆಯವರೆಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಅನಿಯಮಿತ ಡೇಟಾ ಬಳಕೆಯಂತಹ ಇತರ ಅನನ್ಯ ಪ್ರಯೋಜನಗಳನ್ನು ಒಳಗೊಂಡಿದೆ.

ಈ ರೀಚಾರ್ಜ್ ಯೋಜನೆಗಳು ಹೆಚ್ಚುವರಿಯಾಗಿ ವಿಐ ಎಂಟಿವಿ ಆ್ಯಪ್‌ನ ಪ್ರಮುಖ ಗ್ರಾಹಕರ (ವಿಐಪಿ) ಚಂದಾದಾರಿಕೆ ಒದಗಿಸಲಿವೆ. ಬಳಕೆದಾರರು ವಿಐ ಚಲನಚಿತ್ರಗಳು, ಟಿವಿ ಆ್ಯಪ್‌ (ವಿಐ ಎಂಟಿವಿ) ಮತ್ತು ವಿಐ ಆ್ಯಪ್‌ ನೆರವಿನಿಂದ ಮಾಹಿತಿಯ  ಸಮೃದ್ಧ ಬಂಢಾರವನ್ನೇ ಬಳಸಬಹುದು.  ವಿಐ ಎಂಟಿವಿ –  450ಕ್ಕೂ ಹೆಚ್ಚು ಟಿವಿ ಚಾನೆಲ್‌ಗಳು, ಜನಪ್ರಿಯ ಸುದ್ದಿ ವಾಹಿನಿಗಳು ಮತ್ತು ಪ್ರೀಮಿಯಂ ಒಟಿಟಿ ವೇದಿಕೆಗಳಾದ ಷೇಮರೂ, ಲಯನ್ಸ್‌ಗೇಟ್‌, ಝೀ5 ಅತ್ರಂಗಿ, ಹಂಗಾಮಾ ಪ್ಲೇ, ಡಿಸ್ಕವರಿ ಮುಂತಾದವುಗಳನ್ನು ಕೊಡುಗೆ ನೀಡಲಿದೆ.
 

click me!