ವಾಟ್ಸಾಪ್‌ನಿಂದ ಹೊಸ ಫೀಚರ್‌ ರಿಲೀಸ್‌: ಇನ್ಮುಂದೆ ಒಂದೇ ವಾಟ್ಸಾಪ್‌ ಖಾತೆ ಮೂಲಕ 4 ಫೋನ್‌ಗಳಲ್ಲಿ ಬಳಕೆ!

By Kannadaprabha News  |  First Published Apr 26, 2023, 9:17 AM IST

ನೀವು ಒಂದು ವಾಟ್ಸಾಪ್‌ ಖಾತೆ ಮತ್ತು ಒಂದಕ್ಕಿಂತ ಹೆಚ್ಚು ಫೋನ್‌ಗಳನ್ನು ಹೊಂದಿರುವ ಬಗ್ಗೆ ಚಿಂತಿಸಬೇಕಾಗಿಲ್ಲ. ಏಕೆಂದರೆ ಈಗ ನೀವು ಒಂದೇ ಖಾತೆಯನ್ನು ಒಂದೇ ಸಮಯದಲ್ಲಿ ನಾಲ್ಕು ಫೋನ್‌ಗಳಲ್ಲಿ ಬಳಸಬಹುದು.


ಕ್ಯಾಲಿಫೋರ್ನಿಯಾ (ಏಪ್ರಿಲ್ 26, 2023): ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೆಸೆಜಿಂಗ್‌ ಅ್ಯಪ್‌ ಇದೀಗ ಹೊಸ ಫೀಚರ್‌ವೊಂದನ್ನು ಬಿಡುಗಡೆ ಮಾಡಿದ್ದು, ಈಗ ಒಂದೇ ವಾಟ್ಸಾಪ್‌ ಖಾತೆಯನ್ನು 4 ಮೊಬೈಲ್‌ಗಳಲ್ಲಿ ಬಳಸಲು ಅವಕಾಶ ಒದಗಿಸಲಾಗಿದೆ. ಈ ಮೊದಲು ಕೇವಲ ಒಂದೇ ಮೊಬೈಲ್‌ನಲ್ಲಿ ಬಳಕೆ ಅವಕಾಶ ನೀಡಲಾಗಿತ್ತು.

ಹೌದು, ನೀವು ಒಂದು ವಾಟ್ಸಾಪ್‌ (WhatsApp) ಖಾತೆ ಮತ್ತು ಒಂದಕ್ಕಿಂತ ಹೆಚ್ಚು ಫೋನ್‌ಗಳನ್ನು (Phones) ಹೊಂದಿರುವ ಬಗ್ಗೆ ಚಿಂತಿಸಬೇಕಾಗಿಲ್ಲ. ಏಕೆಂದರೆ ಈಗ ನೀವು ಒಂದೇ ಖಾತೆಯನ್ನು ಒಂದೇ ಸಮಯದಲ್ಲಿ ನಾಲ್ಕು ಫೋನ್‌ಗಳಲ್ಲಿ ಬಳಸಬಹುದು. "ಇಂದಿನಿಂದ, ನೀವು ನಾಲ್ಕು ಫೋನ್‌ಗಳಲ್ಲಿ ಒಂದೇ ವಾಟ್ಸಾಪ್ ಖಾತೆಗೆ ಲಾಗ್ ಇನ್ ಮಾಡಬಹುದು" ಎಂದು ಮಾರ್ಕ್ ಜುಕರ್‌ಬರ್ಗ್ ಈ ವೈಶಿಷ್ಟ್ಯವನ್ನು ಪ್ರಕಟಿಸಿದ್ದಾರೆ. 

Tap to resize

Latest Videos

undefined

ಇದನ್ನು ಓದಿ: ಇನ್ಮುಂದೆ ನಿಮ್ಮ ವಾಟ್ಸ್‌ಆ್ಯಪ್ ಬೇರೆಯವ್ರು ಕದ್ದು ನೋಡೋಕಾಗಲ್ಲ: ಶೀಘ್ರದಲ್ಲೇ ಚಾಟ್‌ ಲಾಕ್‌ ಸೌಲಭ್ಯ

ಬಹು-ಸಾಧನ ಎಂದು ಕರೆಯಲ್ಪಡುವ ವೈಶಿಷ್ಟ್ಯವು ದೀರ್ಘಕಾಲದವರೆಗೆ ಲಭ್ಯವಿದ್ದರೂ, ಬಳಕೆದಾರರು ತಮ್ಮ ಪ್ರಾಥಮಿಕ ಫೋನ್‌ನ ಜೊತೆಗೆ ಬ್ರೌಸರ್‌ಗಳು, ಕಂಪ್ಯೂಟರ್‌ಗಳು ಅಥವಾ  ಆಂಡ್ರಾಯ್ಡ್‌ (Android) ಟ್ಯಾಬ್ಲೆಟ್‌ಗಳಿಂದ ವಾಟ್ಸಾಪ್‌ ಅನ್ನು ಪ್ರವೇಶಿಸಲು ಮಾತ್ರ ಅವಕಾಶ ಇತ್ತು. ಆದರೆ, ಈಗ ಬಳಕೆದಾರರು ಇತರ ಫೋನ್‌ಗಳಿಗೆ ಲಾಗ್ ಇನ್ ಮಾಡಲು ಈ ಫೀಚರ್‌ ಅನ್ನು ಬಳಸಬಹುದು. ಆದರೆ ನಾಲ್ಕಕ್ಕಿಂತ ಹೆಚ್ಚು ಫೋನ್‌ಗಳ ಬಳಕೆಗೆ ಅವಕಾಶವಿಲ್ಲ.

ವಾಟ್ಸಾಪ್‌ ಈ ವೈಶಿಷ್ಟ್ಯವನ್ನು "ಒಂದು ವಾಟ್ಸಾಪ್‌ ಖಾತೆ, ಈಗ ಬಹು ಫೋನ್‌ಗಳಲ್ಲಿ" ಎಂದು ವಿವರಿಸುತ್ತದೆ. ಇದು ಈಗಾಗಲೇ ಪ್ರಪಂಚದಾದ್ಯಂತದ ಬಳಕೆದಾರರಿಗೆ ಹೊರತರುತ್ತಿದೆ ಮತ್ತು ಮುಂಬರುವ ವಾರಗಳಲ್ಲಿ ಎಲ್ಲರಿಗೂ ಲಭ್ಯವಿರುತ್ತದೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಗೌಪ್ಯತಾ ನೀತಿ ಒಪ್ಪದವರಿಗೂ ವಾಟ್ಸಾಪ್‌ ನಿರ್ಬಂಧಿಸಲ್ಲ ಎಂದು ಘೋಷಿಸಿ: ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ

ಮೂಲ ಫೋನ್‌ನಲ್ಲಿ ಲಾಗ್‌ಔಟ್‌ ಆಗದೇ ಡೆಸ್ಕ್‌ಟಾಪ್‌ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಬಳಕೆ ಮಾಡುವ ರೀತಿ ಇನ್ನು ಮುಂದೆ ಹಲವು ಮೊಬೈಲ್‌ಗಳಲ್ಲಿ ಬಳಕೆ ಮಾಡಬಹುದಾಗಿದೆ. ಪ್ರಪಂಚದ ಯಾವ ಭಾಗದಿಂದಾದರೂ ವಾಟ್ಸಾಪ್‌ ಮೂಲಕ ಸಂದೇಶ ಕಳುಹಿಸಿರುವ ವ್ಯವಸ್ಥೆಯನ್ನು ನಾವು ರೂಪಿಸಿದ್ದೆವು. ಇದೀಗ ಅದನ್ನು ಮತ್ತಷ್ಟು ವಿಸ್ತರಿಸಿ ಹಲವು ಮೊಬೈಲ್‌ಗಳಲ್ಲಿ ಒಂದೇ ಖಾತೆ ಬಳಕೆಗೆ ಅವಕಾಶ ನೀಡಲಾಗಿದೆ ಎಂದು ಕಂಪನಿ ಹೇಳಿದೆ.

ವಿಭಿನ್ನ ಫೋನ್‌ಗಳನ್ನು ಬಳಸುವವರಿಗೆ ಮತ್ತು ಎಲ್ಲದಕ್ಕೂ ಒಂದೇ ವಾಟ್ಸಾಪ್‌ ಖಾತೆಯನ್ನು ಬಯಸುವವರಿಗೆ ಇದು ಸಹಾಯಕವಾಗಿದ್ದರೂ,  ವಾಟ್ಸಾಪ್‌ ಇದನ್ನು ಸಣ್ಣ ವ್ಯಾಪಾರಗಳಿಗೆ ಅಮೂಲ್ಯವಾದ ವೈಶಿಷ್ಟ್ಯವಾಗಿ ನೋಡುತ್ತದೆ. ವಿವಿಧ ಫೋನ್‌ಗಳಲ್ಲಿ ಒಂದೇ ವ್ಯಾಪಾರ ಸಂಖ್ಯೆಯಿಂದ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಬಹು ಉದ್ಯೋಗಿಗಳಿಗೆ ಅವಕಾಶ ನೀಡುತ್ತದೆ.

ಇದನ್ನೂ ಓದಿ: WhatsAppನಲ್ಲಿಇನ್ಮುಂದೆ ಸಿಕ್ಕ ಸಿಕ್ಕ ಸ್ಟೇಟಸ್‌ ಅಪ್ಡೇಟ್‌ ಮಾಡೋ ಹಾಗಿಲ್ಲ..!

ಈ ಅಪ್‌ಡೇಟ್‌ನೊಂದಿಗೆ, ಒಂದು ವರ್ಷದವರೆಗೆ ಸಂದೇಶಗಳನ್ನು ವಿವಿಧ ಫೋನ್‌ಗಳಲ್ಲಿ ಸಿಂಕ್ ಮಾಡಲಾಗುತ್ತದೆ. ಆದ್ದರಿಂದ, ನಿಮ್ಮ ಒಂದು ಫೋನ್ ಸ್ವಿಚ್ ಆಫ್ ಆಗಿದ್ದರೂ ಸಹ, ಪ್ರತಿ ಫೋನ್ ಪ್ರತ್ಯೇಕವಾಗಿ ಸಂಪರ್ಕಿಸುವುದರಿಂದ ನೀವು ಇತರ ಫೋನ್‌ಗಳಲ್ಲಿ ನಿಮ್ಮ ಸಂದೇಶಗಳನ್ನು ಪ್ರವೇಶಿಸಬಹುದು. ನಿಮ್ಮ ಎಲ್ಲಾ ಚಾಟ್‌ಗಳು, ಮಾಧ್ಯಮಗಳು ಮತ್ತು ಕರೆಗಳನ್ನು ಪ್ರತಿ ಫೋನ್‌ನಲ್ಲಿ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಲಾಗುತ್ತದೆ. ನಿಮ್ಮ ಪ್ರಾಥಮಿಕ ಸಾಧನವು ದೀರ್ಘಕಾಲದವರೆಗೆ ನಿಷ್ಕ್ರಿಯವಾಗಿದ್ದರೆ, ನಮ್ಮ ವಾಟ್ಸಾಪ್‌ ಸ್ವಯಂಚಾಲಿತವಾಗಿ ಎಲ್ಲಾ ಕಂಪ್ಯಾನಿಯನ್ ಫೋನ್‌ಗಳಿಂದ ನಿಮ್ಮನ್ನು ಲಾಗ್ ಔಟ್ ಮಾಡುತ್ತದೆ.

ಒಂದೇ ಖಾತೆಯೊಂದಿಗೆ ನಾಲ್ಕು ಸಾಧನಗಳನ್ನು ಲಿಂಕ್ ಮಾಡುವುದು ಹೇಗೆ..?

ವಾಟ್ಸಾಪ್‌ ಸೆಟ್ಟಿಂಗ್‌ನಲ್ಲಿರುವ ಮೋರ್‌ ಆಪ್ಷನ್‌ ತೆರೆಯಬೇಕು. ಅಲ್ಲಿ ಲಿಂಕ್ಡ್‌ ಡಿವೈಸ್‌ ಆಯ್ಕೆ ಮಾಡಿಕೊಳ್ಳಬೇಕು. ಬಳಿಕ ಲಿಂಕ್‌ ಎ ಡಿವೈಸ್‌ ಆಯ್ಕೆ ಬಳಸಿಕೊಂಡು ಹೊಸ ಫೋನ್‌ನ ಕ್ಯೂಆರ್‌ ಕೋಡ್‌ ಅನ್ನು ಮೂಲ ಫೋನ್‌ನಲ್ಲಿ ಸ್ಕ್ಯಾನ್‌ ಮಾಡುವ ಮೂಲಕ ವಾಟ್ಸಾಪ್‌ ಖಾತೆಯನ್ನು ಲಿಂಕ್‌ ಮಾಡಬಹುದು.

ಇದನ್ನೂ ಓದಿ: WhatsApp ನಲ್ಲಿ ಜಾಬ್‌ ಆಫರ್‌ ಸಿಕ್ಕಿದೆಯೇ..? ನೀವು ರಿಪ್ಲೈ ಮಾಡುವ ಮೊದಲು ಚೆನ್ನಾಗಿ ಯೋಚಿಸಿ..!

ಈ ವೈಶಿಷ್ಟ್ಯವು Android ಮತ್ತು iOS ಎರಡರಲ್ಲೂ ಲಭ್ಯವಿರುತ್ತದೆ.

ಇದನ್ನೂ ಓದಿ: WhatsAppನಲ್ಲಿ ಶೀಘ್ರದಲ್ಲೇ ಈ 7 ಬದಲಾವಣೆ: ಅತ್ಯಾಕರ್ಷಕ ವೈಶಿಷ್ಟ್ಯಗಳು ಹೀಗಿವೆ..

click me!