ಸಬ್‌ಸ್ಕ್ರೈಬ್, ಲೈಕ್ ಮಾಡಿ ಮನೆಯಲ್ಲೇ ಕುಳಿತು ಹಣ ಗಳಿಸಿ, ನಿಮಗೂ ಈ ಮೆಸೇಜ್ ಬಂದಿದೆಯಾ?

By Suvarna News  |  First Published Apr 24, 2023, 6:22 PM IST

ನೀವು ಮಾಡಬೇಕಾಗಿರುವುದು ಇಷ್ಟೆ, ಸೂಚಿಸುವ ಯೂಟ್ಯೂಬ್, ಇನ್‌ಸ್ಟಾ, ಫೇಸ್‌ಬುಕ್ ಖಾತೆಗಳನ್ನು ಸಬ್‌ಸ್ಕ್ರೈಬ್, ಫಾಲೋ ಮಾಡಬೇಕು. ಬಳಿಕ ಲೈಕ್ಸ್, ಕಮೆಂಟ್ ಮಾಡಿದರೆ ಸಾಕು ಪ್ರತಿ ಲೈಕ್ಸ್ ಕಮೆಂಟ್‌ಗೆ 150 ರಿಂದ 200 ರೂಪಾಯಿ, ಪ್ರತಿ ದಿನ 1,500 ರೂಪಾಯಿಂದ 3,000 ರೂಪಾಯಿವರೆಗೆ ಆದಾಯಗಳಿಸುವ ಸುವರ್ಣ ಅವಕಾಶ. ಈ ಸಂದೇಶ ನಿಮಗೂ ಬಂದಿದೆಯಾ? 
 


ನವದೆಹಲಿ(ಏ.24): ಮನೆಯಲ್ಲಿ ಕುಳಿತು ತಿಂಗಳಿಗೆ 30,000 ರೂಪಾಯಿ ಗಳಿಸಿ. ನೀವು ಯಾವುದೇ ಕೆಲಸದಲ್ಲಿದ್ದರೂ ನಿಮ್ಮ ಬಿಡುವಿನ ಸಮಯದಲ್ಲಿ ಒಂದೈದು ನಿಮಿಷ ಗಮನಕೊಡಿ ದುಡ್ಡು ಎಣಿಸಿ. ಈ ಜಾಹೀರಾತುಗಳು ಎಲ್ಲೆಡೆ ನೋಡಿರುತ್ತೀರಿ. ಇದೀಗ ಡಿಜಿಟಲ್ ಜಮಾನ. ಯೂಟ್ಯೂಬ್, ಫೇಸ್‌ಬುಕ್ ಲೈಕ್ಸ್, ವೀವ್ಸ್ ಮೂಲಕವೇ ಆದಾಯಗಳಿಸುವ ಅವಕಾವಶವೂ ಇದೆ. ಇದರ ನಡುವೆ ಬಹುತೇಕರ ವ್ಯಾಟ್ಸ್‌ಆ್ಯಪ್‌ಗೆ ಒಂದು ಸಂದೇಶ ಬರುತ್ತಿದೆ. ಮನೆಯಿಂದಲೇ ಕೆಲಸ ಮಾಡುವ ಅವಕಾಶ. ನೀವು ಸಾಮಾಜಿಕ ಮಾಧ್ಯಮ ಬಳಕೆ ಮಾಡುತ್ತಲೇ ಹಣ ಗಳಿಸುವ ಸುವರ್ಣ ಅವಕಾಶವಿದೆ. ನಾವು ಹೇಳುವ ಯ್ಯೂಟೂಬ್ ಚಾನೆಲ್ ಸಬ್‌ಸ್ಕ್ರೈಬ್ ಮಾಡಿ, ವಿಡಿಯೋಗಳನ್ನು ನೋಡಿ ಲೈಕ್ಸ್ ಕೊಡಿ. ನಿಮ್ಮ ಕೆಲಸಕ್ಕೆ ಯಾವುದೇ ಸಮಸ್ಯೆಯಾಗದಂತೆ ಬಿಡುವಿನ ವೇಳೆಯಲ್ಲಿ ಈ ಕೆಲಸ ಮಾಡಿದರೆ ಸಾಕು, ಪ್ರತಿ ದಿನ 1,500 ರೂಪಾಯಿಂದ 3,000 ರೂಪಾಯಿ ಗಳಿಸಲು ಸಾಧ್ಯ. ಈ ಸಂದೇಶ ವ್ಯಾಟ್ಸ್ಆ್ಯಪ್ ಮೂಲಕ ಬರುತ್ತಿದೆ. ಇದು ಮತ್ತೊಂದು ಮೋಸದ ದಂಧೆಯಾಗಿದೆ. ಈ ಕುರಿತು ಎಚ್ಚರಿಕೆ ವಹಿಸುವುದು ಅತ್ಯಂತ ಅಗತ್ಯ.

ಈ ಕುರಿತು ಕ್ಲೌಡ್ ಸೆಕ್ ಸೈಬರ್ ಥ್ರೆಟ್ ಸಿಇಒ ರಾಹುಲ್ ಸಸಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಆದಾಯ ಗಳಿಸುವ ಅವಕಾಶವಿದೆ ಅನ್ನೋ ಕಾರಣವನ್ನೇ ನೆಪವಾಗಿಟ್ಟುಕೊಂಡು ಅಮಾಯಕರನ್ನು ಮೋಸದ ಬಲೆಗೆ ಬೀಳಿಸುವ ದಂಧೆಯೊಂದು ಶುರುವಾಗಿದೆ. ಈ ಕುರಿತು ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ಸೂಚಿಸಿದ್ದಾರೆ.

Tap to resize

Latest Videos

undefined

 

ಆನ್ ಲೈನ್ ವಂಚನೆಗಿದೆ ಬಹುಮುಖ; ವಂಚಕರು ನಿಮ್ಮನ್ನು ಹೇಗೆಲ್ಲ ವಂಚಿಸ್ಬಹುದು ಗೊತ್ತಾ?

ಈ ಮೋಸಾದಾಟಕ್ಕೆ ಅಮಾಯಕರನ್ನು ಬೀಳಿಸಲು ನಿಮ್ಮ ಮೊಬೈಲ್‌ಗೆ ಹೆಚ್ಆರ್ ಹೆಸರಿನಲ್ಲಿ ಸಂದೇಶ ಕಳುಹಿಸಲಾಗುತ್ತದೆ. ಯೂಟ್ಯೂಬ್ ಚಾಲನೆ ಸಬ್‌ಸ್ಕ್ರೈಬ್ ಮಾಡಲು ಹೇಳುತ್ತಾರೆ, ವಿಡಿಯೋ ಲೈಕ್ ಮಾಡಿದರೆ ಸಾಕು ಹಣ ಕೈಸರಲಿದೆ ಎಂದು ಹೇಳಿ ಮೋಸದ ಬಲೆಗೆ ಬೀಳಿಸುತ್ತಾರೆ. ಒಂದೊಮ್ಮೆ ನೀವು ಒಕೆ ಎಂದರೆ, ಫಾರ್ಮ್ ಕಳುಹಿಸಿ ನಿಮ್ಮ ಯುಪಿಐ ಐಡಿ ಸೇರಿದಂತೆ ಎಲ್ಲಾ ಮಾಹಿತಿ ಕೇಳುತ್ತಾರೆ. ಯುಪಿಐ ಅಥವಾ ಬ್ಯಾಂಕ್ ಟ್ರಾನ್ಸ್‌ಫರ್ ಮೂಲಕ ಹಣ ಪಾವತಿಸುವುದಾಗಿ ಈ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಬಳಿಕ ನಿಮ್ಮ ಖಾತೆಗೆ ಕನ್ನ ಹಾಕುತ್ತಾರೆ ಎಂದು ರಾಹುಲ್ ಸಸಿ ಎಚ್ಚರಿಕೆ ನೀಡಿದ್ದಾರೆ.

ರಾಹುಲ್ ತಮಗೆ ಬಂದಿರುವ ಇದೇ ರೀತಿಯ ಸಂದೇಶವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ನಾನು ರಾಹುಲ್ ಸಸಿ ಜೊತೆ ಮಾತನಾಡಬಹುದೇ ಎಂಬ ಸಂದೇಶದೊಂದಿಗೆ ಈ ಮೋಸ ಆರಂಭಗೊಳ್ಳುತ್ತದೆ. ನಿಮ್ಮ ಪ್ರತಿಕ್ರಿಯೆ ಬಂದ ತಕ್ಷಣ ನಾನು ಹೆಚ್ಆರ್, ನಿಮಗೆ ಮನೆಯಲ್ಲಿ ಕುಳಿತು ಆದಾಯಗಳಿಸುವ ಅವಕಾಶವೊಂದಿದೆ. ನೀವು ಎಲ್ಲೇ ಇದ್ದರೂ ಈ ಕೆಲಸ ಮಾಡಬಹುದು. ಸೋಶಿಯಲ್ ಮಿಡಿಯಾದ ಮೂಲಕ ಹಣಗಳಿಕೆ ಸಾಧ್ಯ. ಪ್ರತಿ ದಿನ ಕನಿಷ್ಠ 1,500 ರೂಪಾಯಿಯಿಂದ ಗರಿಷ್ಠ 3,000 ರೂಪಾಯಿವರೆಗೆ ಆದಾಯಗಳಿಸಲು ಸಾಧ್ಯವಿದೆ. 

ಇನ್‌ಸ್ಟಾಗ್ರಾಂನಲ್ಲಿ ಸಾಲಕ್ಕೆ ಅರ್ಜಿ, 61 ಸಾವಿರ ರೂ ಕಳೆದುಕೊಂಡ ಮಹಿಳೆ!

ನೀವು ಮಾಡಬೇಕಾಗಿರುವುದು ಇಷ್ಟೆ. ಕೆಲ ಯೂಟ್ಯೂಬ್ ಚಾನೆಲ್ ಸಬ್‌ಸ್ಕ್ರೈಬ್ ಮಾಡಬೇಕು. ನಾವು ಸೂಚಿಸುವ ಕೆಲ ವಿಡಿಯೋಗಳನ್ನ ಲೈಕ್ಸ್ ಮಾಡಿದರೆ ಸಾಕು. ನಿಮ್ಮ ಖಾತೆಗೆ ಹಣ ಜಮೆ ಆಗಲಿದೆ ಅನ್ನೋ ಸಂದೇಶವನ್ನು ರಾಹುಲ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ತಮಗೂ ಇದೇ ರೀತಿಯ ಸಂದೇಶ ಬಂದಿದೆ. ಮೊದಲು 100 ರೂಪಾಯಿ ಖಾತೆಗೆ ಹಾಕಿದ್ದಾರೆ. ಬಳಿಕ ನೋಂದಣಿ, ಹೆಚ್ಚಿನ ಮೊತ್ತ ಪಾವತಿ ಮಾಡಲು ಇರುವುದರಿಂದ ಪ್ರಕ್ರಿಯೆಗಾಗಿ ಇಂತಿಷ್ಟು ಹಣ ನಮ್ಮಿಂದ ಕೇಳುತ್ತಾರೆ. ಹೀಗಾಗಿ ನಾನು ಬ್ಲಾಕ್ ಮಾಡಿದ್ದೇನೆ ಎಂದು ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಇದು ವ್ಯವಸ್ಥಿತವಾಗಿ ನಡೆಯುತ್ತಿರುವ ಮೋಸದ ಜಾಲವಾಗಿದೆ. ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದು ಹಲವರು ಕಮೆಂಟ್ ಮಾಡಿದ್ದಾರೆ. 
 

click me!