ಹಲವರಿಗೆ ದಿಢೀರ್‌ ಬ್ಲೂಟಿಕ್‌ ಮಾರ್ಕ್‌ ಮರಳಿಸಿದ ಟ್ವಿಟ್ಟರ್‌: ಇವರಿಗೆ ಮಾತ್ರ ಉಚಿತ ವೆರಿಫೈಡ್‌ ಖಾತೆ!

By Kannadaprabha News  |  First Published Apr 24, 2023, 2:08 PM IST

ಬ್ಲೂಟಿಕ್‌ ಕಳೆದುಕೊಂಡಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ , ಹಿರಿಯ ನಟ ಅಮಿತಾಭ್‌ ಬಚ್ಚನ್‌, ಖ್ಯಾತ ಕ್ರಿಕೆಟರ್‌ಗಳಾದ ಸಚಿನ್‌ ತೆಂಡೂಲ್ಕರ್‌, ವಿರಾಟ್‌ ಕೊಹ್ಲಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌, ನಟ ಸಲ್ಮಾನ್‌ ಖಾನ್‌, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿ ಅನೇಕರ ಖಾತೆಗಳಿಗೆ ಬ್ಲೂಟಿಕ್‌ ನೀಡಲಾಗಿದೆ.


ನವದೆಹಲಿ (ಏಪ್ರಿಲ್ 24, 2023): ಟ್ವಿಟ್ಟರ್‌ನಲ್ಲಿ ಬ್ಲೂಟಿಕ್‌ ಪಡೆದುಕೊಳ್ಳಲು ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ಇತ್ತೀಚೆಗೆ ಭಾರತ ಸೇರಿದಂತೆ ವಿಶ್ವದಾದ್ಯಂತ ಗಣ್ಯರ ಬ್ಲೂಟಿಕ್‌ ತೆಗೆದು ಹಾಕಿದ್ದ ಟ್ವಿಟ್ಟರ್‌, ಭಾನುವಾರ ಹಲವು ಸೆಲೆಬ್ರೆಟಿಗಳಿಗೆ ದಿಢೀರನೆ ಬ್ಲೂಟಿಕ್‌ ಮರಳಿಸಿದೆ. ಹೀಗೆ ಬ್ಲೂಟಿಕ್‌ ಮರಳಿಸಲು ಕಾರಣವೇನು ಎಂಬುದರ ಬಗ್ಗೆ ಟ್ವಿಟ್ಟರ್‌ ಸ್ಪಷ್ಟನೆ ನೀಡಿಲ್ಲವಾದರೂ, 10 ಲಕ್ಷಕ್ಕಿಂತ ಹೆಚ್ಚು ಹಿಂಬಾಲಕರನ್ನು ಹೊಂದಿರುವವರಿಗೆ ಮಾತ್ರವೇ ಬ್ಲೂಟಿಕ್‌ ಮರಳಿಸಿರುವುದು ಕಂಡುಬಂದಿದೆ.

ಬ್ಲೂಟಿಕ್‌ (Blue Tick) ಕಳೆದುಕೊಂಡಿದ್ದ ಕಾಂಗ್ರೆಸ್‌ (Congress) ನಾಯಕ ರಾಹುಲ್‌ ಗಾಂಧಿ (Rahul Gandhi) , ಹಿರಿಯ ನಟ ಅಮಿತಾಭ್‌ ಬಚ್ಚನ್‌ (Amitabh Bachchan), ಖ್ಯಾತ ಕ್ರಿಕೆಟರ್‌ಗಳಾದ ಸಚಿನ್‌ ತೆಂಡೊಲ್ಕರ್‌ (Sachin Tendulkar), ವಿರಾಟ್‌ ಕೊಹ್ಲಿ (Virat Kohli), ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ (Yogi Adityanath), ನಟ ಸಲ್ಮಾನ್‌ ಖಾನ್‌ (Salman Khan), ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಸೇರಿ ಅನೇಕರ ಖಾತೆಗಳಿಗೆ ಬ್ಲೂಟಿಕ್‌ (ವೆರಿಫೈಡ್‌, ಅಧಿಕೃತ ಸೂಚಕ) ನೀಡಲಾಗಿದೆ. ಆದರೆ ಈ ಕುರಿತು ಟ್ವಿಟ್ಟರ್‌ (Twitter) ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Tap to resize

Latest Videos

undefined

ಬ್ಲೂಟಿಕ್‌ ತೆಗೆದ ಬಳಿಕ ಟ್ವೀಟ್‌ ಮಾಡಿದ್ದ ಅಮಿತಾಭ್‌ ಬಚ್ಚನ್‌ ‘ನಾನು ಈಗಾಗಲೇ ಹಣ ಪಾವತಿಸಿದ್ದೇನೆ. ಹೆಸರಿನ ಮುಂದೆ ನೀಲಿ ಕಮಲವನ್ನು ಈಗಲಾದರೂ ನೀಡಿ. ಆಗ ನಾನೇ ಅಮಿತಾಭ್‌ ಎಂಬುದು ಜನರಿಗೆ ಗೊತ್ತಾಗಲಿದೆ’ ಎಂಬುದು ಭಾರಿ ವೈರಲ್‌ ಆಗಿತ್ತು.

ಮೊಬೈಲ್‌ ಆಪ್‌ಗಳಲ್ಲಿ (Mobile App) ಬಳಸುವ ಟ್ವಿಟ್ಟರ್‌ ಖಾತೆಗಳ ಬ್ಲೂಟಿಕ್‌ಗೆ ಮಾಸಿಕ (Monthly) 900 ರೂ. ಹಾಗೂ ವೆಬ್‌ಗಳಲ್ಲಿ (Web) ಮಾಸಿಕ 650 ರೂ. ಶುಲ್ಕವನ್ನು ಟ್ವಿಟ್ಟರ್ ನಿಗದಿ ಮಾಡಿದೆ. 

click me!