ಕರ್ನಾಟಕದ ವಿ ಬಳಕೆದಾರರಿಗೆ ಬಂಪರ್ ಕೊಡುಗೆ, ಉಚಿತ ವಾಯ್ಸ್ ಓವರ್ ವೈಫೈ ಕಾಲ್ ಸೌಲಭ್ಯ!

By Suvarna News  |  First Published Apr 22, 2023, 8:37 PM IST

ವಿ ಬಳಕೆದಾರರಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ವಾಯ್ಸ್ ಓವರ್ ವೈಫೈ ಕಾಲ್ ಸೌಲಭ್ಯ ನೀಡಲಾಗಿದೆ. ಮನೆ, ಕೆಲಸದ ಸ್ಥಳ, ಕೆಫೆ ಅಥವಾ ಇತರ ಸ್ಥಳಗಳಲ್ಲಿದ್ದಾಗ ವೈ-ಫೈ ಸಂಪರ್ಕದ ಮೂಲಕ ವಾಯ್ಸ್ ಕಾಲ ಮಾಡಲು ಸಾಧ್ಯವಿದೆ.   


ಬೆಂಗಳೂರು(ಏ.22)  ಭಾರತದ ಪ್ರಮುಖ ಟೆಲಿಕಾಂ ಸೇವಾ ಪೂರೈಕೆದಾರರಾದ ವಿ ಕರ್ನಾಟಕ ವೃತ್ತದಲ್ಲಿ ಪ್ರೀ-ಪೇಯ್ಡ್ ಮತ್ತು ಪೋಸ್ಟ್-ಪೇಯ್ಡ್ ಗ್ರಾಹಕರಿಗೆ ವಾಯ್ಸ್ ಓವರ್ ವೈಫೈ (ವಿಓವೈಫೈ) ಕರೆ ಸೇವೆಯನ್ನು ಆರಂಭಿಸಿದೆ. ಈ ಸೇವೆಯು ಈಗ ರಾಜ್ಯಾದ್ಯಂತ ವಿ ಗ್ರಾಹಕರಿಗೆ ಲಭ್ಯವಿದೆ.ವಿ ವೋವೈಫೈ ಕರೆ ಸೇವೆಯು ಎಲ್ಲ ಬ್ರಾಡ್‍ಬ್ಯಾಂಡ್ ನೆಟ್‍ವರ್ಕ್‍ಗಳಲ್ಲಿ ತಡೆರಹಿತ ಮತ್ತು ವಿಸ್ತೃತ ಒಳಾಂಗಣ ವ್ಯಾಪ್ತಿಯನ್ನು ಒದಗಿಸುತ್ತದೆ. ವೈಫೈಗೆ ಸಂಪರ್ಕಗೊಂಡಿರುವಾಗ ಬಳಕೆದಾರರು ಮನೆ ಅಥವಾ ಕಚೇರಿಯಲ್ಲಿ ಯಾವುದೇ ಕರೆ ಕಡಿತಗಳಿಲ್ಲದೆ ಉತ್ತಮ ಕರೆ ಗುಣಮಟ್ಟವನ್ನು ಪಡೆಯಬಹುದು.

ಕರ್ನಾಟಕದ ವಿ ಪ್ರಿ-ಪೇಯ್ಡ್ ಮತ್ತು ಪೋಸ್ಟ್-ಪೇಯ್ಡ್ ಗ್ರಾಹಕರು ಈಗ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ವಿಓ ವೈಫೈ ಕರೆಯನ್ನು ಮಾಡಬಹುದಾಗಿದೆ. ವಿ ಗ್ರಾಹಕರು ಈ ಸರಳ ಹಂತಗಳನ್ನು ಅನುಸರಿಸುವ ಮೂಲಕ ಸ್ಮಾರ್ಟ್‍ಫೋನ್‍ನಲ್ಲಿ ವಿಓ ವೈಫೈ ಕರೆ ಸೇವೆಯನ್ನು ಸಂಪೂರ್ಣವಾಗಿ ಉಚಿತವಾಗಿ ಸಕ್ರಿಯಗೊಳಿಸಬಹುದು: 

Latest Videos

undefined

Viನಿಂದ ಬಂಪರ್ ಆಫರ್, ಕೇವಲ 99 ರೂಪಾಯಿಗೆ ಕಾಲ್ ಹಾಗೂ ಡೇಟಾ ಪ್ಲಾನ್!

* ಸ್ಮಾರ್ಟ್‍ಫೋನ್ ವೈ-ಫೈ ಕರೆಯನ್ನು ಬೆಂಬಲಿಸುತ್ತದೆಯೇ ಎಂದು ಪರಿಶೀಲಿಸಿ 
* ಸಕ್ರಿಯ ವಿಓಎಲ್‍ಟಿಇ, ಕರೆ ಮಾಡುವ ಸೇವೆಯೊಂದಿಗೆ ವಿ ಸಿಮ್ ಅಪ್‌ಡೇಟ್ ಮಾಡಿಕೊಳ್ಳಿ
* ವೈ- ಫೈ ನೆಟ್‍ವರ್ಕ್‍ ಮೂಲಕ ಮೊಬೈಲ್‌ನಲ್ಲಿ ವೈ-ಫೈ ಕರೆಯನ್ನು ಆನ್ ಮಾಡಿ

ಸ್ವಯಂ-ಕೆವೈಸಿ ಪರಿಚಯಿಸಿದ ವಿಐ;ಮೊಬೈಲ್ ಉದ್ಯಮದಲ್ಲಿಯೇ ವೊಡಾಫೋನ್ ಐಡಿಯಾ (ವಿಐ–Vi) ಮೊದಲ ಬಾರಿಗೆ, ‘ಸ್ವಯಂ–ಕೆವೈಸಿ (Self-KYC)  ಸೌಲಭ್ಯ ಪರಿಚಯಿಸಿದ್ದು,  ಹೊಸ ಮೊಬೈಲ್ ಸಂಪರ್ಕ ಪಡೆಯುವುದು ಈಗ ಹೆಚ್ಚು ಸರಳ, ತ್ವರಿತ, ಸುರಕ್ಷಿತ ಮತ್ತು ಅನುಕೂಲಕರವಾಗಿ ಪರಿಣಮಿಸಿದೆ. ಹೊಸ ಪ್ರಿಪೇಯ್ಡ್ ಅಥವಾ ಪೋಸ್ಟ್ಪೇಯ್ಡ್ ಮೊಬೈಲ್ ಸಿಮ್  ಪಡೆದುಕೊಳ್ಳಲು ಬಯಸುವವರು ಇನ್ನು ಮುಂದೆ ರಿಟೇಲ್ ಮಳಿಗೆಗಳಿಗೆ ಭೇಟಿ ನೀಡುವ ಮತ್ತು ಭೌತಿಕ ಸ್ವರೂಪದ ‘ಕೆವೈಸಿ’ (ತಿಳಿಯಿರಿ ನಿಮ್ಮ ಗ್ರಾಹಕರನ್ನು) ಪ್ರಕ್ರಿಯೆಗೆ ಒಳಗಾಗುವ ಅಗತ್ಯ ಇರುವುದಿಲ್ಲ. ‘ಗ್ರಾಹಕ-ಮೊದಲು’ ನೀತಿಗೆ ಅನುಗುಣವಾಗಿ, ‘ವಿಐ’ನ ‘ಸ್ವಯಂ ಕೆವೈಸಿ’  ಪ್ರಕ್ರಿಯೆಯು ದೂರಸಂಪರ್ಕ ಇಲಾಖೆಯ (ಡಿಒಟಿ) ಕಡ್ಡಾಯ ಮಾರ್ಗಸೂಚಿಗಳನ್ನು ಆಧರಿಸಿದೆ. ಮನೆ ಬಾಗಿಲಿಗೆ ಮೊಬೈಲ್ ಸಿಮ್ (SIM) ವಿತರಣೆಯ ಹೆಚ್ಚುವರಿ ಪ್ರಯೋಜನದೊಂದಿಗೆ ಎಲ್ಲಿಂದಲಾದರೂ ಮೊಬೈಲ್ನ ಹೊಸ ಸಂಪರ್ಕ ಪಡೆಯಲು ಗ್ರಾಹಕರಿಗೆ ಅನುವು ಮಾಡಿಕೊಡಲಿದೆ.

ವಿಶ್ವದ ಮೊದಲ SMS ಯಾವ್ದು? ಅದ್ರ ಇತಿಹಾಸ ಏನು?

ವಿಐ ಪರಿಚಯಿಸಿರುವ ‘ಸ್ವಯಂ – ಕೆವೈಸಿ’ ಸೌಲಭ್ಯವನ್ನು ಆರಂಭದಲ್ಲಿ ಕರ್ನಾಟಕ ಮತ್ತು ಕೋಲ್ಕತ್ತಾ ವೃತ್ತಗಳ ಸೇವಾ ಪ್ರದೇಶಗಳಲ್ಲಿ ಎಲ್ಲಾ ಪೋಸ್ಟ್ಪೇಯ್ಡ್ ಗ್ರಾಹಕರಿಗೆ ಅನ್ವಯಿಸಲಾಗಿದೆ. ಮೊಬೈಲ್ ಸಿಮ್ ಖರೀದಿ ಪ್ರಕ್ರಿಯೆ ಸರಳಗೊಳಿಸುವ ಉದ್ದೇಶದಿಂದ, ಈ ಸೇವೆಯು ಕ್ರಮೇಣ ದೇಶದಾದ್ಯಂತ  ಪ್ರೀಪೇಯ್ಡ್ ಮತ್ತು ಪೋಸ್ಟ್ಪೇಯ್ಡ್ ಗ್ರಾಹಕರಿಗೂ ಅನ್ವಯವಾಗಲಿದೆ. ವಿಐ ‘ಸ್ವಯಂ– ಕೆವೈಸಿ’ ಬಳಕೆದಾರರು ತಮ್ಮ ಮನೆಯಲ್ಲಿಯೇ ಆರಾಮವಾಗಿ ಕುಳಿತುಕೊಂಡು  ಆನ್ಲೈನ್ನಲ್ಲಿಯೇ ಮೊಬೈಲ್ನ ಹೊಸ ಸಿಮ್ ಕಾರ್ಡ್ಗೆ ಬೇಡಿಕೆ ಸಲ್ಲಿಸಬಹುದು, ಗ್ರಾಹಕರು ಬಯಸಿದ ಮೊಬೈಲ್–ಪ್ಲ್ಯಾನ್ ಆಯ್ಕೆ ಮಾಡಿಕೊಳ್ಳಬಹುದು. ಮನೆಯಲ್ಲಿಯೇ ಸಿಮ್ ಸ್ವೀಕರಿಸಲು ‘ಸ್ವಯಂ-ಕೆವೈಸಿ’ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಈ ಡಿಜಿಟಲ್ ಪರಿಶೀಲನೆಯ ಸಂಪೂರ್ಣ ಪ್ರಕ್ರಿಯೆಯು ಸರಳ, ಖಚಿತ, ಅನುಕೂಲಕರ, ವೇಗ, ಸುರಕ್ಷಿತ ಮತ್ತು ಸುಭದ್ರವಾಗಿರುವ  ಉದ್ದೇಶ ಹೊಂದಿದೆ.

click me!