2025ರ ಹೊತ್ತಿಗೆ Air Taxi ಸೇವೆ ಆರಂಭಿಸಲಿರುವ ದಕ್ಷಿಣ ಕೊರಿಯಾ!

By Suvarna News  |  First Published Nov 11, 2021, 6:51 PM IST

*ದಕ್ಷಿಣ ಕೊರಿಯಾದಲ್ಲಿ Air Taxi ನಿಯಂತ್ರಿಸುವ ವ್ಯವಸ್ಥೆ ಪ್ರದರ್ಶನ! 
*ಪ್ರಯಾಣದ ಸಮಯ ಮೂರನೇ ಎರಡರಷ್ಟು  ಕಡಿತ : 2025ರ ಹೊತ್ತಿಗೆ ಆರಂಭ!
*ಕಳೆದ ವರ್ಷ ಮಾರ್ಗಸೂಚಿಯನ್ನು ಘೋಷಿಸಿದ್ದ ದಕ್ಷಿಣ ಕೊರಿಯಾ


ದಕ್ಷಿಣ ಕೊರಿಯಾ(ನ.11):  ದಕ್ಷಿಣ ಕೊರಿಯಾ (South Korea)  ಗುರುವಾರ ಏರ್  ಟ್ಯಾಕ್ಸಿ (Air Taxi)‌, ಅರ್ಬನ್‌ ಏರ್‌ ಮೋಬಿಲಿಟಿ ವೆಹಿಕಲ್ (urban air mobility vehicles (UAM)) ನಿಯಂತ್ರಿಸುವ ವ್ಯವಸ್ಥೆಯನ್ನು ಪ್ರದರ್ಶಿಸಿದೆ, ಇದು 2025 ರ ಹೊತ್ತಿಗೆ ಪ್ರಮುಖ ವಿಮಾನ ನಿಲ್ದಾಣಗಳು ಮತ್ತು ಡೌನ್‌ಟೌನ್ ಸಿಯೋಲ್ ನಡುವೆ ಟ್ಯಾಕ್ಸಿಗಳಾಗಿ ಕಾರ್ಯನಿರ್ವಹಿಲಿದೆ ಎಂದು ಹೇಳಲಾಗಿದೆ. ಈ ಸೇವೆಯ ಮೂಲಕ ಪ್ರಯಾಣದ ಸಮಯವನ್ನು ಮೂರನೇ ಎರಡರಷ್ಟು ಕಡಿತಗೊಳಿಸಬಹುದಾಗಿದೆ.

ಕಳೆದ ವರ್ಷ, ದಕ್ಷಿಣ ಕೊರಿಯಾವು 2025 ರ ವೇಳೆಗೆ  ಏರ್ ಟ್ಯಾಕ್ಸಿ ಪ್ರಾರಂಭಿಸಲು ಮಾರ್ಗಸೂಚಿಯನ್ನು ಘೋಷಿಸಿತ್ತು. ಕಾರಿನಲ್ಲಿ ಒಂದು ಗಂಟೆ (30-50km - 19-31 ಮೈಲುಗಳು) ತೆಗೆದುಕೊಳ್ಳುವ ಪ್ರಯಾಣವು ಈ ಸೇವೆಗಳ ಮೂಲಕ ಅಂದಾಜು ಕೇವಲ 20 ನಿಮಿಷ ತೆಗೆದುಕೊಳ್ಳಲಿದೆ. ಈ  ಮೂಲಕ ದೂರದ ಪ್ರಯಾಣದ ಸಮಯವನ್ನು  ಗಾಳಿಯಲ್ಲಿ ಪ್ರಯಾಣಿಸುವ ಮೂಲಕ ಕಡಿತಗೊಳಿಸಬಹುದು ಎಂದು  ಸಾರಿಗೆ ಸಚಿವಾಲಯವು (Transport Ministry) ಅಂದಾಜಿಸಿದೆ.

Tap to resize

Latest Videos

undefined

ಜರ್ಮನಿಯ ವೊಲೊಕಾಪ್ಟರ್‌ನ ಮಾದರಿಯ ಪ್ರದರ್ಶನ!

"ನಾಗರಿಕರು ದೈನಂದಿನ ಜೀವನದಲ್ಲಿ ಬಳಸುವ ಸಾರಿಗೆಯ ವ್ಯವಸ್ಥೆಯಲ್ಲಿ UAM ಕೂಡ ಒಂದಾಗುವ ನಿರೀಕ್ಷೆಯಿದೆ, ನಾವು ವಿವಿಧ ವಾತಾವರಣಗಳಲ್ಲು UAM ಸೇವೆಗಳನ್ನು ಪರೀಕ್ಷಿಸಲು ಮತ್ತು ಪ್ರಯತ್ನಿಸಲು ಇದು ಸಂಪೂರ್ಣವಾಗಿ ಅವಶ್ಯಕವಾಗಿದೆ" ಎಂದು ಪ್ರದರ್ಶನದಲ್ಲಿ ಭಾಗವಹಿಸಿದ ಸಾರಿಗೆ ಸಚಿವ ನೊಹ್ ಹಿಯೊಂಗ್-ಔಕ್ (Noh Hyeong-ouk) ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Flying Carಗಳ ಕನಸು ನನಸಾಗುವತ್ತ : ಸರ್ಕಾರದಿಂದ ಹಾರುವ ಕಾರಿಗೆ ಗ್ರೀನ್ ಸಿಗ್ನಲ್!

ಅದರ ನಿಯಂತ್ರಣವನ್ನು ಪರೀಕ್ಷಿಸಲು ಮತ್ತು ಪ್ರದರ್ಶಿಸಲು ಸಿಯೋಲ್‌ನ ಗಿಂಪೊ ವಿಮಾನ ನಿಲ್ದಾಣದಲ್ಲಿ (Seoul's Gimpo Airport)  ಜರ್ಮನಿಯ ವೊಲೊಕಾಪ್ಟರ್ (Germany's Volocopter) ತಯಾರಿಸಿದ ಎರಡು ಆಸನಗಳ (two Seater) ಮಾದರಿಯನ್ನು ಹಾರಿಸಿದ್ದಾರೆ. ಲಂಬವಾದ ಟೇಕ್-ಆಫ್‌ಗಳು ಮತ್ತು ಲ್ಯಾಂಡಿಂಗ್‌ಗಳಿಗಾಗಿ (Take off and landing) ಹೆಲಿಕಾಪ್ಟರ್‌ನಂತಹ ರೋಟರ್‌ಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಈ ವಾಹನವನ್ನು ಒಬ್ಬರೇ ಚಲಾಯಿಸಬಹುದಾಗಿದೆ. ಆದರೆ ಪ್ರಯಾಣಿಕರು UAM ಗಳಲ್ಲಿ ಇರುವಾಗ, ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪೈಲಟ್ ಮಾತ್ರ  ಕ್ರಾಫ್ಟ್ ಅನ್ನು ನಿರ್ವಹಿಸಬೇಕು ಎಂದು ಸಾರಿಗೆ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ದಕ್ಷಿಣ ಕೊರಿಯಾದ ವಿನ್ಯಾಸಕರು ತಮ್ಮದೇ ಆದ ಡ್ರೋನ್ (Drone) ವಿಮಾನದ ಮಾದರಿಯನ್ನು ಸಹ ಪ್ರದರ್ಶಿಸಿದರು. ಸಾರಿಗೆ ಸಚಿವಾಲಯದ ಪ್ರಕಾರ, ಪೂರ್ಣ-ಗಾತ್ರದ ಮೂಲಮಾದರಿಯು ಮುಂದಿನ ವರ್ಷದ ವೇಳೆಗೆ ಪರೀಕ್ಷಾರ್ಥ ಹಾರಾಟವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ ಜತೆಗೆ ಐದು-ಆಸನಗಳ ಆವೃತ್ತಿಯನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.

ವಿಮಾನ ನಿಲ್ದಾಣದಿಂದ ಸೆಂಟ್ರಲ್ ಸಿಯೋಲ್‌ಗೆ ಸುಮಾರು ರೂ. 7,000 ವೆಚ್ಚ!

ಈವೆಂಟ್‌ನಲ್ಲಿ ಪ್ರದರ್ಶಿಸಲಾದ ಇತರ ತಂತ್ರಜ್ಞಾನವು ವಿಮಾನವನ್ನು ಪತ್ತೆಹಚ್ಚಲು ಮತ್ತು ಟ್ರ್ಯಾಕ್ ಮಾಡಲು ಇಮೇಜಿಂಗ್ (Imaging) ಉಪಕರಣಗಳನ್ನು ಹೊಂದಿದೆ. ಜತೆಗೆ ಡ್ರೋನ್‌ಗಳು ಇಳಿಯುವ ಮತ್ತು ಟೇಕ್ ಆಫ್ ಆಗುವ "ವರ್ಟಿಪೋರ್ಟ್‌ಗಳಿಗೆ" ಪೇಟೆಂಟ್ ( patented) ಮಾಡಿದ ಬೆಳಕಿನ ವ್ಯವಸ್ಥೆಗಳನ್ನು (lighting) ಒಳಗೊಂಡಿವೆ.

ಪ್ರಧಾನಿ ಮೋದಿ ಆತ್ಮನಿರ್ಭರ್ ಭಾರತ್‌ ಪರಿಕಲ್ಪನೆಗೆ ಕೈಜೋಡಿಸಿದ ಫ್ಲಿಪ್‌ಕಾರ್ಟ್!

ಇಂಚಿಯಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Incheon International Airport) ಸೆಂಟ್ರಲ್ ಸಿಯೋಲ್‌ಗೆ (central Seoul) ಪ್ರಯಾಣಿಸಲು, ವಾಣಿಜ್ಯ ಪ್ರಯಾಣಗಳು 2025 ರಲ್ಲಿ ಪ್ರಾರಂಭವಾದಾಗ ಸುಮಾರು KRW 110,000 (ಸುಮಾರು ರೂ. 7,000) ವೆಚ್ಚವಾಗಬಹುದು. ಇದು ಪ್ರೀಮಿಯಂ ಟ್ಯಾಕ್ಸಿಗಳಿಗಿಂತ ಹೆಚ್ಚು ದುಬಾರಿಯಾಗಿದ್ದರೂ 2035ರ ವೇಳೆಗೆ ಇದರ ವೆಚ್ಚ ಆದರೆ ಪ್ರತಿ KRW 20,000 (ಸುಮಾರು ರೂ. 1,260) ಗೆ ಇಳಿಯುತ್ತದೆ ಪ್ರವಾಸ ಸಚಿವಾಲಯ ಹೇಳಿದೆ

click me!