ಜಿಯೋ ಹಲವು ಫ್ರೀ ಆಫರ್ ಕೊಟ್ಟಿದೆ. ಗ್ರಾಹಕರು ಪೋರ್ಟ್ ಆಗುತ್ತಿರುವ ಕಾರಣ ಇತ್ತೀಚೆಗೆ ಕೆಲ ವಿಶೇಷ ಆಫರ್ ಕೂಡ ನೀಡಲಾಗಿದೆ. ಆದರೆ ಕಳೆದ ಮೂರು ತಿಂಗಳಲ್ಲಿ ಜಿಯೋ ಮತ್ತಷ್ಟು ಗ್ರಾಹಕರನ್ನು ಕಳೆದುಕೊಂಡಿದೆ.
ನವದೆಹಲಿ(ಡಿ.24) ಭಾರತದ ಟೆಲಿಕಾಂನಲ್ಲಿನ ಕೆಲ ಬದಲಾವಣೆ, ಹೊಸ ನೀತಿಗಳಿಂದ ಖಾಸಗಿ ಸರ್ವೀಸ್ ದುಬಾರಿಯಾಗಿದೆ. ಈ ಪೈಕಿ ಜಿಯೋ, ಎರ್ಟೆಲ್, ವೋಡಾಫೋನ್ ಐಡಿಯಾ ನೆಟ್‌ವರ್ಕ್ ರೀಚಾರ್ಜ್ ಬೆಲೆ ಏರಿಕೆ ಮಾಡಿ ಕೈಸುಟ್ಟುಕೊಂಡಿದೆ. ಕಳೆದ ಕೆಲ ತಿಂಗಳುಗಳಿಂದ ಖಸಗಿ ಟೆಲಿಕಾಂ ಗ್ರಾಹಕರು ಬೇರೆ ಬೇರೆ ನೆಟ್‌ವರ್ಕ್‌ಗೆ ಪೋರ್ಟ್ ಆಗುತ್ತಿದ್ದಾರೆ. ಈ ಪೈಕಿ ಅತೀ ಹೆಚ್ಚು ಹೊಡೆತ ತಿಂದಿದ್ದು ರಿಲಯನ್ಸ್ ಜಿಯೋ. ಹಂತ ಹಂತವಾಗಿ ಜಿಯೋ ಗ್ರಾಹಕರ ಕಳೆದುಕೊಳ್ಳುತ್ತಿದೆ. ಕಳೆದ 3 ತಿಂಗಳಲ್ಲಿ ಜಿಯೋ ಬರೋಬ್ಬರಿ 37.6 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ.
ಟ್ರಾಯ್ ಅಕ್ಟೋಬರ್ ತಿಂಗಳ ವರದಿ ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ರಿಲಯನ್ಸ್ ಜಿಯೋ 37.6 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಇನ್ನು ವೋಡಾಫೋನ್ ಐಡಿಯಾ 1.98 ಮಿಲಿಯನ್ ಗ್ರಾಹಕರನ್ನು ಕಳೆದುಕೊಂಡಿದೆ. ಆದರೆ ಏರ್ಟೆಲ್ ಲಖ್ ಖುಲಾಯಿಸಿದೆ. ಏರ್ಟೆಲ್ ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಂಡಿದೆ. ಇತ್ತ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್ಎಲ್ ಕೂಡ ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಂಡಿದೆ. ಸತತ 4 ತಿಂಗಳಿಂದ ಬಿಎಸ್‌ಎನ್ಎಲ್ ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಅಕ್ಟೋಬರ್ ತಿಂಗಳಲ್ಲಿ 501,994 ಗ್ರಾಹಕರು ಬಿಎಸ್‌ಎನ್ಎಲ್ ಸೇರಿಕೊಂಡಿದ್ದಾರೆ.
undefined
ಬಿಎಸ್‌ಎನ್‌ಎಲ್ ಬಜೆಟ್ ಫ್ರೆಂಡ್ಲಿ ರೀಚಾರ್ಜ್ ಪ್ಲಾನ್, ಕೇವಲ 147 ರೂ.ನಿಂದ ಆರಂಭ!
ಅಕ್ಟೋಬರ್ ತಿಂಗಳಲ್ಲಿ 19.28 ಲಕ್ಷ ವೈಯರ್‌ಲೆಸ್ ಗ್ರಾಹಕರು ಭಾರ್ತಿ ಏರ್ಟೆಲ್ ಸೇರಿಕೊಂಡಿದ್ದಾರೆ. ಈ ಮೂಲಕ ಅಕ್ಟೋಬರ್‌ನಲ್ಲಿ ಸಕ್ರಿಯ ಸಬ್‌ಸ್ಕ್ರೈಬರ್ ಸಂಖ್ಯೆ 27.23 ಲಕ್ಷಕ್ಕೆ ಏರಿಕೆಯಾಗಿದೆ. 46.37 ಕೋಟಿ ಗ್ರಾಹಕರನ್ನು ಹೊಂದಿದ್ದ ಜಿಯೋ ಅಕ್ಟೋಬರ್ ತಿಂಗಳಲ್ಲಿ ಈ ಸಂಖ್ಯೆ 46 ಕೋಟಿಗೆ ಇಳಿಕೆಯಾಗಿದೆ. ಜಿಯೋ ಸತತವಾಗಿ ಗ್ರಾಹಕರನ್ನು ಕಳೆದುಕೊಳ್ಳುತ್ತಿದೆ. ಇದು ಜಿಯೋ ಆತಂಕ ಹೆಚ್ಚಿಸಿದೆ.
ಆರಂಭದಲ್ಲಿ ಎಲ್ಲವನ್ನೂ ಉಚಿತವಾಗಿ ನೀಡಿ ಬಳಿಕ ಹಂತ ಹಂತವಾಗಿ ಬೆಲೆ ಏರಿಕೆ ಮಾಡುತ್ತಿರುವ ಜಿಯೋದಿಂದ ಇದೀಗ ಗ್ರಾಹಕರು ಹೊರಹೋಗುತ್ತಿದ್ದಾರೆ. ಇದರ ನಡುವೆ ಗ್ರಾಹಕರ ಹಿಡಿದಿಟ್ಟುಕೊಳ್ಳಲು ಜಿಯೋ ಹಲವು ಕಡಿಮೆ ಬೆಲೆಯ ಆಫರ್ ಘೋಷಿಸಿದೆ. ಬೆಲೆ ಏರಿಕೆಯಿಂದ ಮುನಿಸಿಕೊಂಡಿರುವ ಗ್ರಾಹಕರು ಜಿಯೋ ತೊರೆಯುತ್ತಿದ್ದಾರೆ. ಇಷ್ಟೇ ಅಲ್ಲ, ಜಿಯೋ ಡೇಟಾ ಸ್ಪೀಡ್ ಕುರಿತು ಕೆಲ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಎಸ್‌ಎನ್ಎಲ್ ಅತೀ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್‌ಗಳಿಂದ ಗ್ರಾಹಕರನ್ನು ಆಕರ್ಷಿಸುತ್ತಿದೆ. ಬಿಎಸ್‌ಎನ್ಎಲ್ ತನ್ನ ರೀಚಾರ್ಜ್ ಬೆಲೆಯಲ್ಲಿ ಏರಿಕೆ ಮಾಡಿಲ್ಲ. ಬದಲಾಗಿದೆ, ಗ್ರಾಹಕರಿಗೆ ಅತೀ ಕಡಿಮೆ ಬೆಲೆಯಲ್ಲಿ 4ಜಿ ಡೇಟಾ ಸೇರಿದಂತೆ ಹಲವು ಸೇವೆಗಳನ್ನು ನೀಡುತ್ತಿದೆ. ಇಷ್ಟೇ ಅಲ್ಲ ದೇಶಾದ್ಯಂತ ನೆಟ್‌ವರ್ಕ್ ಬಲಪಡಿಸುತ್ತಿದೆ. 2025ರ ಆರಂಭದಲ್ಲೇ ಬಿಎಸ್‌ಎನ್ಎಲ್ 5ಜಿ ಸೇವೆ ಆರಂಭಿಸುತ್ತಿದೆ. ಹೀಗಾಗಿ ಗ್ರಾಹಕರು ಇದೀಗ ಬಿಎಸ್‌ಎನ್ಎಲ್‌ನತ್ತ ಮುಖಮಾಡಿದ್ದಾರೆ.
ವೋಡಾಫೋನ್ ಐಡಿಯಾ ಅತೀ ದೊಡ್ಡ ಕೊಡುಗೆ, ಗ್ರಾಹಕರ ಕಾಯುವಿಕೆ ಅಂತ್ಯ!
ಕಳೆದ ಕೆಲ ತಿಂಗಳಲ್ಲಿ ಏರ್ಟೆಲ್ ಕೂಡ ಪೋರ್ಟ್ ಬಿಸಿ ಅನುಭವಿಸಿತ್ತು. ಆದರೆ ಅಕ್ಟೋಬರ್ ತಿಂಗಳಲ್ಲಿ ಏರ್ಟೆಲ್ ತನ್ನ ಗ್ರಾಹಕರನ್ನು ಹಿಡಿದಿಟ್ಟುಕೊಂಡು ಇತರರ ನೆಟ್‌ರ್ಕ್ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.