ಇದು ಎಐ ಜಮಾನ. ಎಲ್ಲವನ್ನೂ ಎಐ ಮೂಲಕ ಮಾಡಲಾಗುತ್ತಿದೆ. ಇದೀಗ ನಿಮಗೆ ಸ್ನಾನ ಮಾಡಬೇಕು ಎಂದರೂ ಎಐನಲ್ಲಿ ಪರಿಹಾರವಿದೆ. ನೀವು ಸುಮ್ಮನೆ ಮಲಗಿದರೆ ಅಥವಾ ಕುಳಿತರೆ ಸಾಕು. ಎಐ ಮಶೀನ್ ಶುಚಿಯಾಗಿ ಸ್ನಾನ ಮಾಡಿಸಿ ನೀರು ಒರೆಸಿ ಕೊಡುತ್ತೆ.
ಟೊಕಿಯೋ(ಡಿ.08) ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಇದೀಗ ಎಲ್ಲಾ ಕ್ಷೇತ್ರದಲ್ಲೂ ಇದೆ. ಎಲ್ಲವೂ ಕೂಡ ಎಐ ನಿಯಂತ್ರಿಸುತ್ತೆ, ನಿರ್ವಹಣೆ ಮಾಡುತ್ತೆ. ಎಐನಿಂದ ಮನುಷ್ಯನ ಹಲವು ತೆಲೆನೋವಿನ ಕೆಲಸಗಳು ಸುಗಮಗೊಂಡಿದೆ. ಇತ್ತೀಚೆಗೆ ಎಐ ತಾಯಿ ಕೂಡ ಭಾರತದಲ್ಲಿ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಎಐ ಆವಿಷ್ಕಾರ ಭಾರಿ ಸಂಚಲನ ಸೃಷ್ಟಿಸಿದೆ. ಸ್ನಾನ ಮಾಡಬೇಕು ಅನ್ನೋ ಟೆನ್ಶನ್ ಇನ್ನಿಲ್ಲ. ನೀರು ಸುರಿದು ಸೋಪ್ ಹಾಕಬೇಕು, ಉಜ್ಜಬೇಕು ಅನ್ನೋ ಚಿಂತೆ ಇಲ್ಲ. ಇವೆಲ್ಲವನ್ನೂ ಎಐ ಮಾಡಲಿದೆ. ನೀವು ಸುಮ್ಮನೆ ಮಲಗಿದರೆ ಅಥವಾ ಕುಳಿತರೆ ಸಾಕು. ತಾಯಿ ಮಕ್ಕಳನ್ನು ಸ್ನಾನ ಮಾಡಿಸುವ ರೀತಿ ಎಐ ಮಶಿನ್ ಸ್ನಾನ ಮಾಡಿಸಲಿದೆ. ಬಳಿಕ ನೀರು ಡ್ರೈ ಮಾಡಿ ಕೊಡಲಿದೆ.
ಈ ಹೊಸ ತಂತ್ರಜ್ಞಾನವನ್ನು ಜಪಾನ್ ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ. ಕೇವಲ 15 ನಿಮಿಷದಲ್ಲಿ ಎಐ ಮಶಿನ್ ಸ್ನಾನ ಮಾಡಿಸಿ ಡ್ರೈ ಮಾಡಿ ಕೊಡಲಿದೆ ಎಂದು ಸಂಶೋಧಕರು ಹೇಳಿದ್ದಾರೆ. ಓಸಾಕಾ ಮೂಲದ ಸೈನ್ಸ್ ಕೋ ಕಂಪನಿ ಈ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಬಾತ್ ಮಶೀನ್ ಅಭಿವೃದ್ಧಿಪಡಿಸಿದೆ. ನೋಡಲು ಫೈಟರ್ ಜೆಟ್‌ನ ಕಾಪ್‌ಪಿಟ್ ಅಥವಾ ಪಾಡ್ ರೀತಿಯಲ್ಲಿ ಕಾಣುವ ಈ ಮಶೀನ್ ಸಂಪೂರ್ಣ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನದಿಂದ ಮಿಳಿತಗೊಡಿದೆ.
ಪೋಷಕರಿಗಿಲ್ಲ ಇನ್ನು ಮಕ್ಕಳ ಪಾಲನೆ ತಲೆನೋವು, ಭಾರತಕ್ಕೆ ಮೊದಲ ಎಐ ತಾಯಿ ಎಂಟ್ರಿ!
ಓಸಾಕಾ ಕಾನ್ಸೈ ಎಕ್ಸ್‌ಪೋ 2024ರಲ್ಲಿ ಈ ಎಐ ಬಾತ್ ಮಶಿನ್ ಪ್ರದರ್ಶನಕ್ಕೆ ಇಡಲಾಗಿದೆ. ಇಷ್ಟೇ ಅಲ್ಲ ಈ ಪ್ರದರ್ಶನದ ವೇಳೆ 1,000 ಮಂದಿ ಎಐ ಬಾತ್ ಮಶಿನ್‌ನಲ್ಲಿ ಸ್ನಾನ ಮಾಡಿದ್ದರೆ. ಕೆವಲ 15 ನಿಮಿಷದಲ್ಲಿ ಎಐ ಮಶಿನ್ ಉತ್ತಮವಾಗಿ ಸ್ನಾನ ಮಾಡಿಸಲಿದೆ. ವಿಶೇಷ ಅಂದರೆ ಸ್ನಾಕ್ಕೂ ಮೊದಲು ಬಿಸಿ ನೀರು ಬೇಕೋ, ಅಥವಾ ತಣ್ಣೀರೋ ಅನ್ನೋದು ಸೂಚಿಸಿದರೆ ಸಾಕು. ಇನ್ನು ಸ್ನಾನದ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಕಾರಣ ಹಲವು ಹಂತದಲ್ಲಿ ಇದು ಮನುಷ್ಯದ ದೇಹವನ್ನು ಶುಚಿಗೊಳಿಸಲಿದೆ. ಮೊದಲು ಶವರ್ ಮೂಲಕ ನೀರು ಸುರಿಯಲಿದೆ. ಬಳಿಕ ಸ್ಪೀಡ್ ವಾಟರ್, ಏರ್ ಬಬಲ್ ಜೊತೆಗೆ ಪ್ರಶರ್ ಮೂಲಕ ದೇಹದ ಚರ್ಮದಲ್ಲಿ ಅಂಟಿರುವ ಕೊಳೆಯನ್ನು ತೆಗೆಯಲಿದೆ.
ಮಶಿನ್ ಒಳಗಿನ ಕುರ್ಚಿಯಲ್ಲಿ ಕುಳಿತುಕೊಂಡರೆ ಸಾಕು. ನಿಮ್ಮ ದೇಹದ ಉಷ್ಣಾಂಶ ಸೇರಿದಂತೆ ಎಲ್ಲವನ್ನೂ ಎಐ ಬಾತ್ ಮಶೀನ್ ಗ್ರಹಿಸಲಿದೆ. ಬಳಿಕ ಎಷ್ಟು ಬೆಚ್ಚಿನ ನೀರು, ಯಾವ ಪ್ರಮಾಣದಲ್ಲಿ ಸ್ನಾನ ಮಾಡಿಸಬೇಕು ಅನ್ನೋದು ನಿರ್ಧರಿಸಲಿದೆ. ಮತ್ತೊಂದು ವಿಶೇಷತೆ ಇದೆ. ಹೊಸ ಎಐ ಬಾತ್ ಮಶೀನ್‌ನಲ್ಲಿ ಸ್ನಾನ ಮಾಡಿದರೆ ದೇಹದ ಕೊಳೆ ಮಾತ್ರವಲ್ಲ , ಮನಸ್ಸು ಕೂಡ ಶುಭ್ರವಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ. ಹೊಸ ತಂತ್ರಜ್ಞಾನದ ಮೂಲಕ ಮನಸ್ಸಿಗೂ ಆಹ್ಲಾದ ನೀಡಲಿದೆ. ಇದರಿಂದ ಎಐ ಬಾತ್ ಮೂಲಕ ಸ್ನಾನ ಮಾಡಿ ಬಂದರೆ ಟೆನ್ಶನ್ ಕೂಡ ಕಡಿಮೆಯಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ. ಎಐ ಬಯೋಲಾಜಿಕಲ್ ಮಾಹಿತಿ ಗ್ರಹಸಿ ಬೇಕಾದಂತೆ ಸ್ನಾನ ಮಾಡಿಸಲಿದೆ ಎಂದಿದ್ದಾರೆ.
1970ರಲ್ಲಿ ಮನುಷ್ಯನ ಸ್ನಾನ ಮಾಡಿಸುವ ಯಂತ್ರಗಳ ಆವಿಷ್ಕಾರ ನಡೆದಿದೆ. ಆದರೆ ಕೆಲ ಪ್ರಯೋಗಗಳ ಬಳಿಕ ನೆನೆಗುದಿಗೆ ಬಿದ್ದಿತ್ತು. ಆದರೆ ಇದೀಗ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನದ ಮೂಲಕ ಪ್ರವೃತ್ತಿಸುವ ಮಶಿನ್ ಅಭಿವೃದ್ಧಿಪಡಿಸಲಾಗಿದೆ. ಇದು ಮತ್ತಷ್ಟು ನಿಖರ ಹಾಗೂ ಸ್ಪಷ್ಟತೆ ಹೊಂದಿದೆ. ಸದ್ಯ ಅಭಿವೃದ್ಧಿಪಿಡಿಸಿವು ಎಐ ಬಾತ್ ಮಶಿನ್‌ನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇಲ್ಲಿ ಬರವು ಸಲಹೆ ಸೂಚನೆ ಆಧರಿಸಿ ಬಳಿಕ ವಾಣಿಜ್ಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಂಶೋಧಕರು ಹಾಗೂ ವಿಜ್ಞಾನಿಗಳು ತಯಾರಾಗಿದ್ದಾರೆ.
ಬರುತ್ತಿದೆ OpenAI ಬ್ರೌಸರ್, ಗೂಗಲ್ ಕ್ರೋಮ್ ಪ್ರಾಬಲ್ಯ ಮುಗಿಸುತ್ತಾ ಆರ್ಟಿಫೀಶಿಯಲ್ ಇಂಟಲಿಜೆನ್ಸ್?