ಇನ್ನು 5 ತಿಂಗಳಲ್ಲಿ ಈ ಐಫೋನ್‌ಗಳಲ್ಲಿ ವ್ಯಾಟ್ಸಾಪ್ ವರ್ಕ್ ಆಗಲ್ಲ, ನಿಮ್ಮ ಫೋನ್ ಇದೆಯಾ?

By Chethan Kumar  |  First Published Dec 3, 2024, 9:16 PM IST

ವ್ಯಾಟ್ಸ್ಆ್ಯಪ್ ಮಹತ್ವದ ಸೂಚನೆ ನೀಡಿದೆ. ಕೆಲ ಐಫೋನ್‌ಗಳಲ್ಲಿ ಮೇ 5, 2025ರಿಂದ ಅಂದರೆ ಇನ್ನು 5 ತಿಂಗಳಲ್ಲಿ ಕಾರ್ಯನಿರ್ವಹಿಸುದಿಲ್ಲ. ವ್ಯಾಟ್ಸ್ಆ್ಯಪ್ ಸೂಚಿಸಿದ ಫೋನ್ ಪೈಕಿ ನಿಮ್ಮ ಸ್ಮಾರ್ಟ್‌ಫೋನ್ ಇದೆಯಾ, ಚೆಕ್ ಮಾಡಿ.


ನವದೆಹಲಿ(ಡಿ.03) ವ್ಯಾಟ್ಸ್ಆ್ಯಪ್ ಪ್ರತಿಯೊಬ್ಬರ ಜೀವನದಲ್ಲಿ ಹಾಸುಹೊಕ್ಕಿದೆ. ಒಂದು ದಿನ ವ್ಯಾಟ್ಸಾಪ್ ಇಲ್ಲ ಎಂದರೆ ದಿನ ಮುಂದೆ ಸಾಗಲ್ಲ. ಆದರೆ ವ್ಯಾಟ್ಸ್ಆ್ಯಪ್ ಇದೀಗ ಮಹತ್ವದ ಅಪ್‌ಡೇಟ್ ನೀಡಿದೆ. ಕೆಲ ಫೋನ್‌ಗಳಲ್ಲಿ ವ್ಯಾಟ್ಸ್ಆ್ಯಪ್ ವರ್ಕ್ ಆಗುವುದಿಲ್ಲ ಎಂದಿದೆ. ವ್ಯಾಟ್ಸ್ಆ್ಯಪ್ ಅಪ್‌ಗ್ರೇಡ್ ಆಗುತ್ತಿದೆ. ಇದರಿಂದ ಕೆಲ ಐಫೋನ್‌ಗಳಲ್ಲಿ ವ್ಯಾಟ್ಸ್ಆ್ಯಪ್ ಸ್ಥಗಿತಗೊಳ್ಳಲಿದೆ ಎಂದಿದೆ. ಯಾವೆಲ್ಲಾ ಫೋನ್‌ಗಳಲ್ಲಿ ವ್ಯಾಟ್ಸ್ಆ್ಯಪ್ ಸ್ಥಗಿತಗೊಳ್ಳಲಿದೆ?

ಮೇ 05, 2025ರಿಂದ ಅಂದರೆ ಇನ್ನು ಕೇವಲ 5 ರಿಂದ 6 ತಿಂಗಳಲ್ಲಿ ಕೆಲ ಐಫೋನ್‌ಗಳಲ್ಲಿ ವ್ಯಾಟ್ಸ್ಆ್ಯಪ್ ಕಾರ್ಯನಿರ್ವಹಣೆ ಸ್ಥಗಿತಗೊಳ್ಳಲಿದೆ. ಬಳಕೆದಾರರಿಗೆ ಹೆಚ್ಚಿನ ಸುರಕ್ಷತೆ, ಹಾಗೂ ಬಳಕೆ ಅನುಭವ ಹೆಚ್ಚಿಸಲು ವ್ಯಾಟ್ಸ್ಆ್ಯಪ್ ಅಪ್‌ಗ್ರೇಡ್ ಆಗುತ್ತಿದೆ. ಇದೇ ವೇಳೆ ಕೆಲ ಫೋನ್‌ಗಳಿಗೆ ವ್ಯಾಟ್ಸ್ಆ್ಯಪ್ ಸಪೋರ್ಟ್ ನಿಲ್ಲಿಸಲಿದೆ. ಪ್ರಮುಖವಾಗಿ ಐಫೋನ್ 5s, ಐಫೋನ್ 6 ಹಾಗೂ ಐಫೋನ್ 6 ಪ್ಲಸ್ ಫೋನ್‌ಗಳಲ್ಲಿ ಮುಂದಿನ ವರ್ಷದ ಮೇ ತಿಂಗಳಿನಿಂದ ವ್ಯಾಟ್ಸ್ಆ್ಯಪ್ ಸ್ಥಗಿತಗೊಳ್ಳಲಿದೆ. ಇದು ಹಳೇ ಐಫೋನ್‌ಗಳಾಗಿದ್ದು, ಇದಕ್ಕೆ ವ್ಯಾಟ್ಸ್ಆ್ಯಪ್ ಅಪ್‌ಗ್ರೇಡ್ ಸಪೋರ್ಟ್ ಮಾಡುವುದಿಲ್ಲ ಎಂದಿದೆ. ಆ್ಯಪಲ್ ಐಫೋನ್ ಐಒಎಸ್ 15.1ಕ್ಕಿಂತ ಹಳೇ ವರ್ಶನ್ ಫೋನ್‌ಗಳಲ್ಲಿ ವ್ಯಾಟ್ಸ್ಆ್ಯಪ್ ಸ್ಥಗಿತಗೊಳ್ಳಲಿದೆ. ಐಫೋನ್ 15ಎಸ್, 16 ಹಾಗೂ 16 ಪ್ಲಸ್ ಫೋನ್ ಕೇವಲ iOS 12.5.7 ವರ್ಶನ್ ಹೊಂದಿದೆ.

Tap to resize

Latest Videos

 ವ್ಯಾಟ್ಸಾಪ್ ಮೂಲಕ ಮದುವೆ ಆಮಂತ್ರಣ ಬಂದಿದೆಯಾ? ಹೊಸ ವೆಡ್ಡಿಂಗ್ ಸೈಬರ್ ಸ್ಕ್ಯಾಮ್ ಪತ್ತೆ!

WAbetainfo ಈ ಕುರಿತು ಮಾಹಿತಿ ನೀಡಿದೆ. ವ್ಯಾಟ್ಸ್ಆ್ಯಪ್ ಬಳಕೆದಾರರ ಬಳಕೆ ಅನುಭವ ಹೆಚ್ಚಿಸಲು ವ್ಯಾಟ್ಸ್ಆ್ಯಪ್ ಕಾಲಕ್ಕೆ ತಕ್ಕಂತೆ ಅಪ್‌ಗ್ರೇಡ್ ಮಾಡುತ್ತಿದೆ. ಹೊಸ ಹೊಸ ಫೀಚರ್ಸ್ ನೀಡುತ್ತಿದೆ. ಸದ್ಯ ವ್ಯಾಟ್ಸ್ಆ್ಯಪ್ iOS 12 ವರ್ಶನ್ ಸಪೋರ್ಟ್ ಮಾಡುತ್ತದೆ. ಆದರೆ ಹೊಸ ಅಪ್‌ಗ್ರೇಡ್‌ನಿಂದ ಕನಿಷ್ಠ 15.1 ವರ್ಶನ್ ಐಒಎಸ್ ಹಾಗೂ ಆಧುನಿಕ ವರ್ಶನ್ ಐಒಎಸ್ ಸಪೋರ್ಟ್ ಮಾಡಲಿದೆ ಎಂದು WAbetainfo ಹೇಳುತ್ತಿದೆ.

ಬಳಕೆದಾರರು ತಮ್ಮ ವ್ಯಾಟ್ಸ್ಆ್ಯಪ್ ಬಳಕೆ ಮುಂದುವರಿಸಲು ವ್ಯಾಟ್ಸ್ಆ್ಯಪ್ 5 ತಿಂಗಳ ಕಾಲಾವಾಕಾಶ ನೀಡಿದೆ. 5 ತಿಂಗಳ ಮೊದಲೇ ಸೂಚನೆ ನೀಡುವ ಮೂಲಕ ವ್ಯಾಟ್ಸ್ಆ್ಯಪ್ ಬಳಕೆದಾರರು ತಮ್ಮ ಫೋನ್ ಡಿವೈಸ್ ಅಪ್‌ಗ್ರೇಡ್ ಮಾಡಲು ಅಥವಾ ಬದಲಾಯಿಸಲು ಅವಕಾಶ ನೀಡಿದೆ. ಹಾರ್ಡ್‌ವೇರ್ ಸಪೋರ್ಟ್ ಮಾಡದಿದ್ದರೆ ಹೊಸ ಫೋನ್‌ಗೆ ಬದಲಾಯಿಸಲು ಅವಕಾಶವಿದೆ ಎಂದಿದೆ. ಐಫೋನ್ 5s, ಐಫೋನ್ 6 ಹಾಗೂ ಐಫೋನ್ 6 ಪ್ಲಸ್ ಫೋನ್‌ಗಳು ಬಿಡುಗಡೆಯಾಗಿ 10 ವರ್ಷ ಕಳೆದಿದೆ. ಈ ಹಳೇ ಐಫೋನ್‌ ಬಳಕೆದಾರರು ತಮ್ಮ ಫೋನ್ ಬದಲಾಯಿಸುವುದು ಉತ್ತಮ ಆಯ್ಕೆಯಾಗಿದೆ.

 

WhatsApp to drop support for older iOS versions and iPhone models starting May 2025!

WhatsApp will stop supporting versions older than iOS 15.1 affecting users with iPhone 5s, iPhone 6, and iPhone 6 Plus.https://t.co/rp77DJ7h27 pic.twitter.com/isliFb4mo8

— WABetaInfo (@WABetaInfo)

 

ವ್ಯಾಟ್ಸ್ಆ್ಯಪ್ ಅಪ್‌ಗ್ರೇಡ್ ಪ್ರಕ್ರಿಯೆ ಆರಂಭಗೊಂಡಿದೆ. ಜೊತೆಗೆ ಮತ್ತಷ್ಟು ಹೊಸ ಫೀಚರ್ಸ್ ಕೂಡ ಬಿಡುಗಡೆಯಾಗುತ್ತಿದೆ. ಬಳಕೆದಾರರ ಬೇಡಿಕೆಗೆ ಅನುಗುಣವಾಗಿ ಹೊಸ ಹೊಸ ಫೀಚರ್ಸ ನೀಡಲು ವ್ಯಾಟ್ಸ್ಆ್ಯಪ್ ಮುಂದಾಗಿದೆ. ಮುಖ್ಯವಾಗಿ ಬಳಕೆದಾರನ ಸುರಕ್ಷತೆಗೆ ಆದ್ಯತೆ ನೀಡಿ ಹೊಸ ಫೀಚರ್ಸ್ ಜಾರಿಗೊಳಿಸಲಾಗುತ್ತದೆ. ಈಗಾಗಲೇ ಚಾಟ್ ಲಾಕ್, ವಿಡಿಯೋ ಮೆಸೇಜ್ ಸೇರಿದಂತೆ ಹಲವು ಫೀಚರ್ಸ್ ವ್ಯಾಟ್ಸ್ಆ್ಯಪ್ ಬಳಕೆದಾರರಿಗೆ ನೀಡಿದೆ.

ವ್ಯಾಟ್ಸಾಪ್ ಬಳಕೆದಾರರಿಗೆ ಹೊಸ ಡ್ರಾಫ್ಟ್ ಫೀಚರ್, ಇದರ ಉಪಯೋಗವೇನು?

ವ್ಯಾಟ್ಸ್ಆ್ಯಪ್‌ಗೆ ದಂಡ
ಇತ್ತೀಚೆಗೆ ಭಾರತೀಯ ಸ್ಪರ್ಧಾ ಆಯೋಗ ವ್ಯಾಟ್ಸ್ಆ್ಯಪ್‌ಗೆ ದಂಡ ವಿಧಿಸಿತ್ತು. ಪ್ರೈವೈಸಿ ನೀತಿ ಅಪ್‌ಡೇಟ್‌ನಲ್ಲಿ ವ್ಯಾಟ್ಸ್ಆ್ಯಪ್ ನಿಯಮ ಉಲ್ಲಂಘಿಸಿದೆ ಅನ್ನೋ ಕಾರಣಕ್ಕೆ 213 ಕೋಟಿ ರೂಪಾಯಿ ದಂಡ ವಿಧಿಸಿತ್ತು. ಇದು ವ್ಯಾಟ್ಸ್ಆ್ಯಪ್ ಕೆರಳಿಸಿತ್ತು.  ಭಾರತೀಯ ಸ್ಪರ್ಧಾ ಆಯೋಗದ ಆದೇಶಕ್ಕೆ ಗರಂ ಆಗಿರುವ ಮೆಟಾ ಕಂಪನಿ, ಮೇಲ್ಮನವಿ ಸಲ್ಲಿಸಲು ಮುಂದಾಗಿದೆ. ಜಾಹೀರಾತಿಗಾಗಿ ಮೆಟಾ ಒಡೆತನದ ಇತರ ಆ್ಯಪ್ ಹಾಗೂ ಕಂಪನಿಗಳಿಗೆ ವ್ಯಾಟ್ಸ್ಆ್ಯಪ್ ಬಳಕೆದಾರರ ಮಾಹಿತಿ ಹಂಚಿಕೊಂಡಿದೆ ಅನ್ನೋ ಕಾರಣಕ್ಕೆ ದಂಡ ವಿಧಿಸಲಾಗಿದೆ. ಆದರೆ ವ್ಯಾಟ್ಸ್ಆ್ಯಪ್ ಬೇರೆ ಕಾರಣ ನೀಡಿದೆ. ಇದು ಜನರ ಆಯ್ಕೆಗೆ ನೀಡಲಾಗಿತ್ತು. ವೈಯುಕ್ತಿಕ ಗೌಪ್ಯತೆ ನಿಮಯದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದಿದೆ.

click me!