ಆ್ಯಪಲ್ ಐಫೋನ್ ಬಳಕೆದಾರರಿಗೆ ಇನ್ಮುಂದೆ ಜಿಯೋ ಟ್ರು5ಜಿ ಸೇವೆ ಲಭ್ಯವಾಗಿದೆ. ಸೆಟ್ಟಿಂಗ್ಸ್‌ನಲ್ಲಿ ಸಣ್ಣ ಬದಲಾವಣೆ ಮಾಡಿಕೊಂಡರೆ ಸಾಕು, ಸುಲಭವಾಗಿ 5ಜಿ ಸೇವೆ ಲಭ್ಯವಾಗಲಿದೆ.
ಮುಂಬೈ(ಡಿ.15): ಆ್ಯಪಲ್ ಐಫೋನ್ ಬಳಕೆದಾರರಿಗೆ ಸಿಹಿ ಸುದ್ದಿಯಿದೆ. ಇದೀಗ ರಿಲಯನ್ಸ್ ಜಿಯೋ ತನ್ನ 5ಜಿ ಸೇವೆಯನ್ನು ಐಫೋನ್‌ಗೆ ವಿಸ್ತರಿಸಿದೆ. ಇಂದಿನಿಂದ ಫೋನ್‌ಗಳಿಗೆ ಟ್ರೂ 5G ಸೇವೆಗಳನ್ನು ಒದಗಿಸುತ್ತಿದೆ. ಆಪಲ್ ಐಫೋನ್ 12 ಮತ್ತು ಅದಕ್ಕಿಂತ ಮೇಲ್ಪಟ್ಟ ಸರಣಿಯಲ್ಲಿ ರಿಲಯನ್ಸ್ ಟ್ರೂ 5G ಸೇವೆಗಳು ಲಭ್ಯವಿದೆ. ಬಳಕೆದಾರರಿಗೆ ಅನಿಯಮಿತ ಡೇಟಾ ದೊರೆಯಲಿದೆ. ಜಿಯೋ ಟ್ರೂ 5G ಸೇವೆಗಳನ್ನು ಪಡೆಯಬೇಕು ಅಂದರೆ ಆಪಲ್ ಐಫೋನ್ ಬಳಕೆದಾರರು ಹೊಸ ಐಒಎಸ್ (ಆಪರೇಟಿಂಗ್ ಸಿಸ್ಟಮ್)ಗೆ ಅಪ್‌ಡೇಟ್ ಆಗಬೇಕು ಹಾಗೂ ಕ್ಯಾರಿಯರ್ ಸೆಟ್ಟಿಂಗ್ಸ್‌ನಲ್ಲಿ ಅಗತ್ಯ ಇರುವ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇದರ ಜೊತಗೆ ಅನ್‌ಲಿಮಿಟೆಡ್ ಡೇಟಾ ಸೇವೆಯನ್ನು ನೀಡುತ್ತಿದೆ.
ಅನಿಯಮಿತವಾದ 5G ಬಳಕೆಯನ್ನು ಸಕ್ರಿಯಗೊಳಿಸುವುದಕ್ಕೆ ವೆಲ್‌ಕಮ್ ಆಫರ್ ಅನ್ನು ನೀಡಿದೆ. ಐಫೋನ್ 12 ಮಿನಿ, ಐಫೋನ್ 12, ಐಫೋನ್ 12 ಪ್ರೊ, ಐಫೋನ್ 12 ಪ್ರೊ ಮ್ಯಾಕ್ಸ್, ಐಫೋನ್ 13 ಮಿನಿ, ಐಫೋನ್ 13, ಐಫೋನ್ 13 ಪ್ರೊ, ಐಫೋನ್ 13 ಪ್ರೊ ಮ್ಯಾಕ್ಸ್, ಐಫೋನ್ SE 2022 (ಮೂರನೇ ತಲೆಮಾರು), ಐಫೋನ್ 14, ಐಫೋನ್ 14 ಪ್ಲಸ್, ಐಫೋನ್ 14 ಪ್ರೊ, ಐಫೋನ್ 14 ಪ್ರೊ ಮ್ಯಾಕ್ಸ್ ಬಳಕೆದಾರರು ಗುರುವಾರದಿಂದ ಅನ್ವಯ ಆಗುವಂತೆ ಜಿಯೋ 5G ಸೇವೆಗಳ ಸಂಪರ್ಕವನ್ನು ಪಡೆಯಬಹುದು.
undefined
ಮಹಾಕಾಳೇಶ್ವರ ಜ್ಯೋತಿರ್ಲಿಂಗ, ಮಹಾಕಾಲ್ ಭಕ್ತರಿಗೆ ಮತ್ತೊಂದು ಕೊಡುಗೆ, ಜಿಯೋ ಟ್ರು 5ಜಿ ಸೇವೆ!
ನವೆಂಬರ್ ಮೊದಲನೇ ವಾರದಲ್ಲಿ ಆಪಲ್‌ನಿಂದ ಅಪ್‌ಡೇಟ್ ಮಾಡುವುದಕ್ಕೆ ಆರಂಭಿಸಲಾಯಿತು. ಈ ಮೂಲಕ ಭಾರತದಲ್ಲಿ 5G ಸೇವೆಗಳನ್ನು ಪಡೆಯುವುದಕ್ಕೆ ಆಪಲ್ ಬಳಕೆದಾರರಿಗೆ ಅನುಕೂಲ ಆಯಿತು. ಐಒಎಸ್ 16 ಬೀಟಾ ಸಾಫ್ಟ್ ವೇರ್ ಪ್ರೋಗ್ರಾಂ ಜಾರಿ ಆರಂಭಿಸಿರುವುದಾಗಿ ನವೆಂಬರ್ 11ನೇ ತಾರೀಕು ಆಪಲ್ ಕಂಪನಿಯು ಖಾತ್ರಿ ಪಡಿಸಿತು.
ಆಪಲ್ ಐಫೋನ್ ಬಳಕೆದಾರರು ಮೊದಲಿಗೆ ತಮ್ಮ ಸಾಧನದಲ್ಲಿ (ಡಿವೈಸ್) ಸಾಫ್ಟ್‌ವೇರ್ ಅನ್ನು 16.2 ಅಥವಾ ಆ ನಂತರದಕ್ಕೆ ಅಪ್‌ಡೇಟ್ ಮಾಡಿಕೊಳ್ಳಬೇಕು. ಆ ನಂತರ ಸೆಟ್ಟಿಂಗ್‌ನಲ್ಲಿ 5G ಆನ್ ಮಾಡಿಕೊಳ್ಳಬೇಕು ಮತ್ತು ಅಂತಿಮವಾಗಿ 5G ಸ್ಟ್ಯಾಂಡ್ ಅಲೋನ್ ಆನ್ ಮಾಡಿಕೊಳ್ಳಬೇಕು. ಆಪಲ್‌ನಿಂದ ಈಚೆಗೆ ಐಒಎಸ್ 16.2 ಅಪ್‌ಡೇಟ್ ಬಿಡುಗಡೆ ಮಾಡಲಾಗಿದೆ. ಇದರಿಂದ ಭಾರತದಲ್ಲಿ ಐಫೋನ್ ಬಳಕೆದಾರರು 5G ಸೇವೆ ಪಡೆಯುವುದಕ್ಕೆ ಅನುಕೂಲ ಆಗಲಿದೆ.
ಜಿಯೋ ಹಾಗೂ ಒನ್‌ಪ್ಲಸ್ ಒಪ್ಪಂದ, ಎಲ್ಲಾ ಫೋನ್‌ಗಳಲ್ಲಿ ಟ್ರೂ 5G ತಂತ್ರಜ್ಞಾನ ಲಭ್ಯ!
ಆರೋಗ್ಯ ಕ್ಷೇತ್ರದ ಆಧುನಿಕ ಪ್ರಗತಿಗಾಗಿ ಜಿಯೋ ಟ್ರೂ 5G- ಐಎಲ್‌ಬಿಎಸ್ ಪಾಲುದಾರಿಕೆ
ಆರೋಗ್ಯ ಕ್ಷೇತ್ರದಲ್ಲಿ ಆಧುನಿಕ ಪ್ರಗತಿಗಾಗಿ ಅತ್ಯಾಧುನಿಕ ಆರೋಗ್ಯ ತಂತ್ರಜ್ಞಾನಗಳನ್ನು ಅನ್ವಯ ಮಾಡಲು ಜಿಯೋ ಟ್ರೂ (Jio True) 5G ಮತ್ತು ಐಎಲ್‌ಬಿಎಸ್ ಕಾರ್ಯತಂತ್ರ ಪಾಲುದಾರಿಕೆ ಹೊಂದಿವೆ. ಪ್ರತಿ ಭಾರತೀಯರಿಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದಕ್ಕೆ ನೆರವಾಗುವುದು ಜಿಯೋ ಟ್ರೂ 5Gಯ ಉದ್ದೇಶವಾಗಿದೆ. ಜಿಯೋ ಟ್ರೂ 5G ಮತ್ತು ಐಎಲ್‌ಬಿಎಸ್ (ILBS) ಮಧ್ಯದ ಈ ಕಾರ್ಯತಂತ್ರದ ಪಾಲುದಾರಿಕೆಯು ಹೆಲ್ತ್‌ಕೇರ್ ಕ್ಷೇತ್ರದಲ್ಲಿ ಆಧುನಿಕ ಪ್ರಗತಿಗಾಗಿ ಅತ್ಯಾಧುನಿಕ ಆರೋಗ್ಯ ತಂತ್ರಜ್ಞಾನಗಳನ್ನು ಸಕ್ರಿಯಗೊಳಿಸುತ್ತದೆ.
ಕಡಿಮೆ-ಲೇಟೆನ್ಸಿಯೊಂದಿಗೆ ಟ್ರೂ 5G ತಂತ್ರಜ್ಞಾನದ ಶಕ್ತಿಯು ಅಸ್ತಿತ್ವದಲ್ಲಿರುವ ತಂತ್ರಜ್ಞಾನಗಳನ್ನು ವರ್ಧಿಸುತ್ತದೆ. ಆದರೆ ಆರೋಗ್ಯ ಕ್ಷೇತ್ರದಲ್ಲಿ ಹೊಸ ಬಳಕೆ-ಪ್ರಕರಣಗಳಿಗೆ ಜೀವ ತುಂಬುತ್ತದೆ. ಅವು ಹೀಗಿವೆ:
1) ರೊಬೊಟಿಕ್ಸ್-ಆಧಾರಿತ ಚಿಕಿತ್ಸೆ / ಶಸ್ತ್ರಚಿಕಿತ್ಸೆ
2) ರಿಮೋಟ್ - ಐಸಿಯು
3) ಐಸಿಯು - ಆಂಬ್ಯುಲೆನ್ಸ್
4) ಸಮುದಾಯ ಚಿಕಿತ್ಸಾಲಯಗಳು ಮತ್ತು ಇನ್ನೂ ಅನೇಕ